Categories
ಬೆಂಗಳೂರು

ಬೆಂಗಳೂರು ಆಗುತ್ತಿದೆಯಾ ಡ್ರಗ್ಸ್ ರಾಜಧಾನಿ!?

ಬೆಂಗಳೂರು ಆಗುತ್ತಿದೆಯಾ ಡ್ರಗ್ಸ್ ರಾಜಧಾನಿ!?
– ವಿದೇಶಿ ಮಾದಕ ವಸ್ತು ಸಾಗಣೆ ನಿಲ್ಲಲಿಲ್ಲ
– ಡ್ರಗ್ಸ್ ಸೇಯಲು ಇ ಸಿಗರೇಟ್‌ ಸಾಧನ
– ಕರಾವಳಿ, ಮಲೆನಾಡು ಸೇರಿ ಎಲ್ಲೆಡೆ ಈ ಜಾಲ!

NAMMUR EXPRESS NEWS
ಬೆಂಗಳೂರು: ಬೆಂಗಳೂರಿನ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಯಶಸ್ವಿ ಕಾರ್ಯಾಚರಣೆ ನಡೆಸಿ ಓರ್ವ ವಿದೇಶಿ ಪ್ರಜೆ ಸೇರಿದಂತೆ ಮೂವರನ್ನು ಬಂಧಿಸಿ 5.5 ಕೆಜಿ ಗಾಂಜಾ ಮತ್ತು ವಿದೇಶಿ ಸಿಗರೇಟ್ ಗಳನ್ನು ವಶಪಡಿಸಿಕೊಂಡಿದೆ. ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಡ್ರಗ್‌ ಪೆಡ್ಲರ್ ನನ್ನು ಬಂಧಿಸಿ ಆತನಿಂದ 10 ಲಕ್ಷ ರೂ. ಮೌಲ್ಯದ 5.5 ಕೆಜಿ ಗಾಂಜಾ ವಶಪಡಿಸಿಕೊಂಡಿದೆ. ಈ ಮೂಲಕ ರಾಜ್ಯದ ರಾಜಧಾನಿ ಡ್ರಗ್ಸ್ ರಾಜಧಾನಿ ಆಗುವ ಎಲ್ಲಾ ಆತಂಕವನ್ನು ಹುಟ್ಟು ಹಾಕಿದೆ.
ಇ ಸಿಗರೇಟ್ ವಶ: 22 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ ಇ-ಸಿಗರೇಟ್, ವಿದೇಶಿ ಸಿಗರೇಟ್ ಗಳು, ಹುಕ್ಕಾ ಪ್ಲೇವರ್‌ಗಳು ಮತ್ತು ಹುಕ್ಕಾ ಪಾಟ್‌ಗಳನ್ನು ವಶಪಡಿಸಿಕೊಂಡಿದೆ.
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಲಭ್ಯವಾಗುತ್ತದೆ. ಈತನ ಮನೆಯ ಮೇಲೆ ದಾಳಿ ನಡೆಸಿದಾಗ 10 ಲಕ್ಷ ರೂ. ಮೌಲ್ಯದ 5.5 ಕೆಜಿ ಗಾಂಜಾ ಸಿಕ್ಕಿದೆ.

ಈತ ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದು, ಬೇಗೂರಿನಲ್ಲಿರುವ ಸ್ಪೋರ್ಟ್ಸ್ ಕ್ಲಬ್‌ವೊಂದರಲ್ಲಿ ಸ್ವಿಮ್ಮಿಂಗ್‌ ಕೋಚ್‌ ಆಗಿ ಕೆಲಸ ಮಾಡುತ್ತಿದ್ದ ಐಶಾರಾಮಿ ಜೀವನ ನಡೆಸುವ ಉದ್ದೇಶದಿಂದ ಸ್ಥಳೀಯ ಪೆಡ್ಲರ್‌ಗಳಿಂದ ಗಾಂಜಾವನ್ನು ಖರೀದಿಸಿ ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದ್ದಾನೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

22.35 ಲಕ್ಷ ರೂ ಮೌಲ್ಯದ ಇ-ಸಿಗರೇಟ್ ವಶ!

ಮತ್ತೊಂದು ಪ್ರಕರಣದಲ್ಲಿ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬನ ಮನೆಯ ಮೇಲೆ ದಾಳಿ ನಡೆಸಿದಾಗ 22.35 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ 291 ಇ-ಸಿಗರೇಟ್, 240 ವಿದೇಶಿ ಸಿಗರೇಟ್ ಪ್ಯಾಕ್‌ಗಳು, 360 ವಿವಿಧ ಬಗೆಯ ಹುಕ್ಕಾ ಪ್ಲೇವರ್‌ಗಳು ಮತ್ತು 100 ಹುಕ್ಕಾ ಪಾಟ್‌ಗಳನ್ನು ಸಿಸಿಬಿ ವಶಪಡಿಸಿಕೊಂಡಿದೆ.

ಕೊಕೇನ್‌ ಮಾರುತ್ತಿದ್ದ ವ್ಯಕ್ತಿ ಬಂಧನ!

ಮೂರನೇ ಪ್ರಕರಣದಲ್ಲಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ಕತ್ರಿಗುಪ್ಪೆಯ ಆಟದ ಮೈದಾನದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಿಷೇದಿತ ಮಾದಕ ವಸ್ತು ಕೊಕೇನ್‌ನನ್ನು ಯುವಕರಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ರೀತಿ ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತನಿಂದ ರೂ. 1,75,000 ಮೌಲ್ಯದ 24 ಗ್ರಾಂ ತೂಕದ ಮಾದಕ ವಸ್ತು ಕೊಕೇನ್ ಹಾಗೂ 1,000 ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಈ ನಿಷೇಧಿತ ವಸ್ತುಗಳನ್ನು ಸಂಗ್ರಹಿಸಿದ್ದ ಇಬ್ಬರು ಮಾಲೀಕರು ಹಾಗೂ ಮತ್ತೋರ್ವ ಕೆಲಸಗಾರನ ತಲೆಮರೆಸಿಕೊಂಡಿದ್ದಾರೆ. ಇವರ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ರಾಜ್ಯದ ವಿವಿಧ ಕಡೆ ಗ್ಯಾಂಗ್!

ಡ್ರಗ್ಸ್, ಗಾಂಜಾ, ಆಫೀಮು ಇಂತಹ ದಂಧೆ ರಾಜ್ಯದ ತಾಲೂಕು ಮಟ್ಟದಲ್ಲೂ ಹಬ್ಬಿದೆ. ಆದರೆ ಪೊಲೀಸ್ ಇಲಾಖೆ ಯಾವುದೊ ಒತ್ತಡಕ್ಕೆ ಮಣಿದು ಈ ದಂಧೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ. ಈ ಬಗ್ಗೆ ಸರ್ಕಾರ, ಅಧಿಕಾರಿಗಳು ಗಮನ ವಹಿಸದಿದ್ರೆ ಎಂತಹ ಕ್ರೂರ ಕೆಲಸ ಕೂಡ ಇಂತಹ ವ್ಯಸನಿಗಳಿಂದ ಆಗಬಹುದು ಎಚ್ಚರ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.