ಆಭರಣ ಪ್ರಿಯರಿಗೆ ಬಿಗ್ ಶಾಕ್..!!
– 1 ವಾರದಿಂದ ಸತತ ಚಿನ್ನದ ಬೆಲೆ ಏರಿಕೆ
– ಎಷ್ಟಾಯ್ತು ಗೊತ್ತಾ 10 ಗ್ರಾಂ ಚಿನ್ನದ ಬೆಲೆ?
NAMMUR EXPRESS NEWS
ಬೆಂಗಳೂರು: ಅಂತರಾಷ್ಟ್ರೀಯ ವ್ಯಾಪಾರ ವಹಿವಾಟು, ಅಮೆರಿಕ ಸುಂಕ ನೀತಿಯಿಂದಾಗಿ ಚಿನ್ನದ ಬೆಲೆ ಅಲ್ಲೋಲ ಕಲ್ಲೋಲವಾಗಿದೆ, ಲಕ್ಷದ ಗಡಿ ದಾಟಿ ಪ್ರತಿದಿನ ಸಾವಿರ ರೂಪಾಯಿ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 10,233 ರೂಪಾಯಿ ಆಗಿದ್ದು, ಇಂದು 104 ರುಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ ಕೂಡಾ 95 ರೂಪಾಯಿ ಏರಿಕೆ ಆಗಿ, ಇಂದಿನ ಬೆಲೆ 9380 ರೂಪಾಯಿಗೆ ಏರಿಕೆ ಆಗಿದೆ.
10 ಗ್ರಾಂ ಬೆಲೆ ಎಷ್ಟು?
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ 1040 ರೂ ಹೆಚ್ಚಳ ಆಗಿದೆ. ಇಂದಿನ ಬೆಲೆ 1,02,330 ರೂ ಆಗಿದೆ. 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 950 ರೂ ಏರಿಕೆ ಆಗಿ, ಇಂದಿನ ಬೆಲೆ 93,800 ರೂ ಆಗಿದೆ.
ಬೆಂಗಳೂರಿನ ಚಿನ್ನದ ಬೆಲೆ
ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 10,233 ರೂ ಇದೆ. ಬೆಳ್ಳಿಯ ಬೆಲೆ 1 ರೂ ಹೆಚ್ಚಳ ಆಗಿ 119 ರೂ ಗೆ ಏರಿದೆ.ಕೆಜಿ ಬೆಲೆ 1,19,000 ರೂ ಆಗಿದೆ.
ಜಿಗಿತಕ್ಕೆ ಕಾರಣ?
ಪ್ರತಿಸುಂಕ ವಿಧಿಸಲು ಆಗಸ್ಟ್ 1ರ ತನಕ ಅಮೆರಿಕ ಎರಡನೇ ಬಾರಿ ವಿರಾಮ ಘೋಷಿಸಿತ್ತು. ಆದರೆ ಜುಲೈ ಅಂತ್ಯ ಸಮೀಪಿಸುತ್ತಿದ್ದರೂ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದರಿಂದ ಹೂಡಿಕೆದಾರರಿಗೆ ಚಿನ್ನ ಹೆಚ್ಚು ಸುರಕ್ಷಿತ ಮತ್ತು ಲಾಭದಾಯಕ ಎಂದೆನಿಸಿದೆ. ವಿದೇಶಿ ಚಿನ್ನದ ಮಾರುಕಟ್ಟೆಗಳಲ್ಲಿ ಸ್ಪಾಟ್ ಗೋಲ್ಡ್ ಬೆಲೆ ಶೇ. 1.3ರಷ್ಟು ಏರಿಕೆ ಕಂಡಿದೆ. ಅಮೆರಿಕದ ಫೆಡರಲ್ ರಿಸರ್ಚ್ ಬಡ್ಡಿ ದರವನ್ನು ಇಳಿಸುವ ಸಾಧ್ಯತೆ ಹೆಚ್ಚಿದೆ. ಇದು ಸೆಪ್ಟೆಂಬರ್ನಲ್ಲಿ ಕೈಗೊಳ್ಳುವ ನಿರ್ಣಯವಾದರೂ ಷೇರುಪೇಟೆ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.