ಉಡುಪಿ ಸೇರಿದಂತೆ 10 ಜಿಲ್ಲೆಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ
NAMMUR EXPRESS NEWS
ಬೆಂಗಳೂರು: ಉಡುಪಿ ಸೇರಿದಂತೆ ಉಳಿದಿರುವ 10 ಸಂಘಟನಾತ್ಮಕ ಜಿಲ್ಲೆಗಳಿಗೆ ಬಿಜೆಪಿ ಪಕ್ಷ ಹೊಸ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ್ದು, ಜೂನ್ 11ರಂದು ಈ ಬಗ್ಗೆ ಅಧಿಕೃತ ಆದೇಶವನ್ನು ರಾಜ್ಯ ಬಿಜೆಪಿ ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಬಿಡುಗಡೆ ಮಾಡಿದ್ದಾರೆ.
ಪಕ್ಷದ ಸಂಘಟನೆಯನ್ನು ಇನ್ನಷ್ಟು ಶಕ್ತಿಶಾಲಿಯಾಗಿಸಲು ಮತ್ತು ಮುಂದಿನRajಕೀಯ ಸವಾಲುಗಳಿಗೆ ತಕ್ಕಂತೆ ಪಕ್ಷವನ್ನು ತಯಾರಿಸುವ ಉದ್ದೇಶದಿಂದ ಈ ನೇಮಕಾತಿ ಮಾಡಲಾಗಿದೆ. ನೂತನ ಅಧ್ಯಕ್ಷರಿಗೆ ಶುಭ ಕೋರಿದ ಗಣೇಶ್ ಕಾರ್ಣಿಕ್, “ಪಕ್ಷದ ಗೌರವವನ್ನು ಹೆಚ್ಚಿಸಿ, ಸಂಘಟನೆಯ ಬಲವರ್ಧನೆಗೆ ನಿಮ್ಮ ಕೊಡುಗೆ ನಿರೀಕ್ಷಿಸುತ್ತೇವೆ,” ಎಂದು ತಿಳಿಸಿದ್ದಾರೆ.
ಈ ಹಿಂದೆ 23 ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಇದೀಗ ದೇಶದಾದ್ಯಂತ ನಡೆಯುತ್ತಿರುವ ಸಂಘಟನಾ ಪರ್ವ 2024-25 ಅಭಿಯಾನದ ಭಾಗವಾಗಿ ರಾಜ್ಯದಲ್ಲಿ ಉಳಿದ 10 ಜಿಲ್ಲೆಗಳ ಅಧ್ಯಕ್ಷರ ನೇಮಕಾತಿಯ ಪ್ರಕ್ರಿಯೆ ಪೂರ್ಣಗೊಂಡಿದೆ.
ಹೊಸ ಅಧ್ಯಕ್ಷರ ಪಟ್ಟಿ ಈಂತಿದೆ:
ಮೈಸೂರು ಗ್ರಾಮಾಂತರ: ಕೆ.ಎನ್. ಸುಬ್ಬಣ್ಣ
ಹಾಸನ: ಸಿದ್ದೇಶ್ ನಾಗೇಂದ್ರ
ಕೊಡಗು: ರವಿ ಕಾಳಪ್ಪ
ಉಡುಪಿ: ಕುತ್ಯಾರು ನವೀನ್ ಶೆಟ್ಟಿ
ದಾವಣಗೆರೆ: ಎನ್. ರಾಜಶೇಖರ
ಹಾವೇರಿ: ವಿರೂಪಾಕ್ಷಪ್ಪ ಬಳ್ಳಾರಿ
ಚಿತ್ರದುರ್ಗ: ಕೆ.ಟಿ. ಕುಮಾರಸ್ವಾಮಿ
ತುಮಕೂರು: ಎಚ್.ಎಸ್. ರವಿಕುಮಾರ್
ಮಧುಗಿರಿ: ಚಿದಾನಂದ ಗೌಡ
ಚಿಕ್ಕಬಳ್ಳಾಪುರ: ಎಸ್.ವಿ. ರಾಮಚಂದ್ರ ಗೌಡ (ಸೀಕಲ್)
