Categories
ಬೆಂಗಳೂರು

ನಾಯಿ, ಬೆಕ್ಕು ಸಾಕ್ತೀರಾ..?, 10 ಸಾವಿರ ಕಟ್ಟಬೇಕು!

ನಾಯಿ, ಬೆಕ್ಕು ಸಾಕ್ತೀರಾ..?, 10 ಸಾವಿರ ಕಟ್ಟಬೇಕು!
– ಬೆಂಗಳೂರಿನ ಅಪಾರ್ಟ್ಮೆಂಟ್ ಅಲ್ಲಿ ನಿಯಮ
– ಏನಿದು… ಯಾಕೆ ಶುಲ್ಕ ಕಟ್ಟಬೇಕು… ನೋಡಿ…!

NAMMUR EXPRESS NEWS
ಬೆಂಗಳೂರು: ಸಾಕು ಪ್ರಾಣಿಗಳನ್ನು ಹೊಂದಿರುವ ಎಲ್ಲರೂ 10,000 ರೂ. ಶುಲ್ಕ ಪಾವತಿಸಬೇಕು. ಈ ಸುದ್ದಿ ನೋಡಿ ಗಾಬರಿಯಾಗಬೇಡಿ…! ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಅಪಾರ್ಟ್ಮೆಂಟ್ ಒಂದು ಇಂತಹ ಪ್ರಕಟಣೆ ಹೊರಡಿಸಿದೆ. ಈ ಪ್ರಕಟಣೆಯಿಂದ ಸಾಕು ಪ್ರಾಣಿ ಪ್ರಿಯರಿಗೆ ಶಾಕ್ ಆಗಿದೆ. ಇತ್ತೀಚಿಗೆ ಬೆಂಗಳೂರಿನ ಬಿಬಿಎಂಪಿ ಸಾಕು ನಾಯಿಗಳ ನೋಂದಣಿ ಕಡ್ಡಾಯ ಮತ್ತು ನೋಂದಣಿ ಶುಲ್ಕ ನಿಗದಿಪಡಿಸಿದ ಬೆನ್ನಲ್ಲೇ ಈ ಸುದ್ದಿ ಭಾರೀ ಚರ್ಚೆ ಮಾಡಿದೆ. 1,000ಕ್ಕೂ ಹೆಚ್ಚು ನಿವಾಸಿಗಳು ವಾಸಿಸುವ ಎಲೆಕ್ಟ್ರಾನಿಕ್ಸ್ ಸಿಟಿಯ ಮಹಾವೀರ್ ಅಪಾರ್ಟ್ಮೆಂಟ್ ಸಂಕೀರ್ಣವು ಕಳೆದ ವಾರ ಆಂತರಿಕ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು, ನವೆಂಬರ್ 15ರೊಳಗೆ 10,000 ರೂ.ಶುಲ್ಕ ಪಾವತಿಸಬೇಕು. ಒಂದು ಶುಲ್ಕ ಪಾವತಿಸುವಲ್ಲಿ ವಿಫಲವಾದರೆ ದಿನಕ್ಕೆ 100ರೂ ರಂತೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೇ ಮುಂಜಾನೆ 6-7, ಮಧ್ಯಾಹ್ನ 1-2 ಮತ್ತು ರಾತ್ರಿ 10-11 ಈ ಸಮಯಗಳಲ್ಲಿ ಮಾತ್ರ ತಮ್ಮ ತಮ್ಮ ಶ್ವಾನಗಳನ್ನು ಹೊರಗಡೆ ಕರೆದುಕೊಂಡು ಹೋಗಬಹುದು ಎಂದು ನಿರ್ಬಂಧ ವಿಧಿಸಿದೆ.

ಸಾಕು ಪ್ರಾಣಿ ಪ್ರಿಯರು ಖಂಡಿತವಾಗಿ ಪರವಾನಗಿ ಪಡೆಯಬೇಕು ಹಾಗೂ ತಮ್ಮ ಸಾಕುಪ್ರಾಣಿಗಳನ್ನು ನೋಂದಾಯಿಸಿಕೊಳ್ಳಬೇಕು. ಇತರ ನಿವಾಸಿಗಳಿಗೆ ಸುರಕ್ಷತೆ ನೀಡುವ ಉದ್ದೇಶದಿಂದ ಈ ನಿಯಮ ಮಾಡಲಾಗಿದೆ ಎಂದು ಇಟ್ಟಿನ ಮಹಾವೀರ್ ಅಪಾರ್ಟೆಂಟ್ ಮಾಲೀಕರ ಸಂಘದ ಅಧ್ಯಕ್ಷ ಅಭಿಷೇಕ್ ಅಗರ್ವಾಲ್ ಹೇಳಿದ್ದಾರೆ.
ಅಪಾರ್ಟ್ಮೆಂಟ್ ನ ಈ ನೂತನ ಪ್ರಕಟಣೆ ವೈರಲ್ ಆಗಿದ್ದು, ಅಲ್ಲಿನ್ ನಿವಾಸಿಗಳು ಹಾಗೂ ಅನೇಕ ಪೆಟ್ ಲವರ್ಸ್ ಗಳ ಅಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ ಪ್ರಾಣಿ ದಯಾ ಸಂಘಟನೆಗಳು ಹಾಗೂ ಬಿಬಿಎಂಪಿ ಇದು ಕಾನೂನು ಬಾಹಿರ ನಿಯಮ ಎಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.