Categories
ಬೆಂಗಳೂರು

ರಾಜಧಾನಿಯಲ್ಲಿ ಕರಾವಳಿ ಸಂಸ್ಕೃತಿ ವೈಭವ!

ರಾಜಧಾನಿಯಲ್ಲಿ ಕರಾವಳಿ ಸಂಸ್ಕೃತಿ ವೈಭವ!
– ಕರಾವಳಿ ಜನರ ಸಮಾಗಮ: ಕೋಣಗಳ ನೋಡಲು ಜನ ಸಾಗರ
– ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಶಾಲ ವೇದಿಕೆ

NAMMUR EXPRESS NEWS
ಬೆಂಗಳೂರು: ಐತಿಹಾಸಿಕ ಕಂಬಳಕ್ಕೆ ರಾಜಧಾನಿಯಲ್ಲಿ ಭಾರೀ ಜನ ಬೆಂಬಲ ವ್ಯಕ್ತವಾಗಿದೆ. ವಿಶಾಲ ಮೈದಾನದಲ್ಲಿ ಕೋಣಗಳ ಓಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೈದಾನದ ಮತ್ತೊಂದೆಡೆ ಸಾಂಸ್ಕೃತಿಕ ವೈಭವಕ್ಕೆ ಸಜ್ಜಾಗಿರುವ ವಿಶಾಲ ವೇದಿಕೆ, ಸಿದ್ದವಾದ ಬೆಂಗಳೂರು ರಾಜ ಮಹಾರಾಜಾ ಜೋಡುಕೆರೆ ಕಂಬಳ ಗಮನ ಸೆಳೆದಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶಾಲ ಪ್ರದೇಶದಲ್ಲಿ ಇದೆ ಮೊದಲ ಬಾರಿಗೆ ಕಂಬಳ ಆಯೋಜಿಸಲು ಬೆಂಗಳೂರು ಕಂಬಳ ಸಮಿತಿ ಮಾಡುತ್ತಿದೆ. ಕರಾವಳಿ ಮಣ್ಣಿನ ಸೊಗಡಿನ ಕಂಪನ್ನು ರಾಜಧಾನಿ ಬೆಂಗಳೂರಿಗೆ ಪಸರಿಸಲು ಸಿದ್ಧತೆ ನಡೆಸಲಾಗಿದೆ
ಕಂಬಳ ಕರೆಯ ಪಕ್ಕದಲ್ಲಿರುವ ವಿಶಾಲ ಜಾಗದಲ್ಲಿ ಆಹಾರ ಮೇಳಕ್ಕೆ ಅವಕಾಶ ಕಲ್ಪಿಸಲಾಗಿದೆ. ಕರಾವಳಿಯ ಆಹಾರ ಪದ್ದತಿಯ ಅನಾವರಣ ನಡೆಯಲಿದೆ. ಪ್ರಮುಖವಾಗಿ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಆಹಾರ ಮಳಿಗೆಗಳು ಇಲ್ಲಿವೆ.

ಕರಾವಳಿ ಪ್ರತಿಕೃತಿ ನಿರ್ಮಾಣ!

ಮೈದಾನದಲ್ಲಿ ತುಳುನಾಡು ಮತ್ತು ಕರಾವಳಿಯನ್ನು ಪ್ರತಿನಿಧಿಸುವ ಹಲವು ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ. ಯಕ್ಷಗಾನದ ವೇಷಧಾರಿ, ಯಕ್ಷಗಾನದ ಬೃಹತ್ ಕಿರೀಟ, ಬತ್ತದ ಕಣಜ, ಸಿರಿ ತುಪ್ಪೆ, ಕಂಬಳ ಕೋಣಗಳು, ಎತ್ತಿನಗಾಡಿ, ಗೋಮಟೇಶ್ವರ ಪ್ರತಿಮೆ, ಕೋಟಿ  ಚೆನ್ನಯರ ಮೂರ್ತಿಗಳನ್ನು ಇಲ್ಲಿ ಇರಿಸಲಾಗಿದೆ.
ತುಳುನಾಡ ಮೂಲ ನಂಬಿಕೆಯಾದ  ನಾಗಾರಾಧನೆಯ ನಾಗಬನ, ದೈವಾರಾಧನೆಯ ದೈವದ ಮನೆಯ ಮಾದರಿಯನ್ನು ಮಾಡಿ ಬೆಂಗಳೂರಿಗರಿಗೆ ತುಳುನಾಡ ಸಂಸ್ಕೃತಿಯ ಪರಿಚಯ ಮಾಡುವ ಪ್ರಯತ್ನ ನಡೆಯುತ್ತಿದೆ. ಕಂಬಳ ಆರಂಭಕ್ಕೆ ಒಂದು ದಿನ ಮೊದಲೇ ಬಂದಿರುವ ಜನರು ಇದರ ಬಳಿ ಫೋಟೋ, ಸೆಲ್ಫಿ ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.