Categories
ಬೆಂಗಳೂರು

ರಾಜ್ಯಧ್ಯಕ್ಷ ಆಯ್ತು, ವಿಪಕ್ಷ ನಾಯಕನ ಸ್ಥಾನಕ್ಕೆ ಇದೀಗ ಸ್ಪರ್ಧೆ!

ರಾಜ್ಯಧ್ಯಕ್ಷ ಆಯ್ತು, ವಿಪಕ್ಷ ನಾಯಕನ ಸ್ಥಾನಕ್ಕೆ ಇದೀಗ ಸ್ಪರ್ಧೆ!
– ಬಿಜೆಪಿಯಲ್ಲಿ ಅರಕ್ಕೂ ಹೆಚ್ಚು ಮಂದಿ ರೇಸ್ ನಲ್ಲಿ
– ಕಣದಲ್ಲಿ ಅಶೋಕ್, ಅಶ್ವಥ್ ನಾರಾಯಣ, ಆರಗ, ಸುನೀಲ್ ಕುಮಾರ್, ಸಿಟಿ ರವಿ, ಪಾಟೀಲ್: ಯಾರಿಗೆ ಸಿಗುತ್ತೆ ಕುರ್ಚಿ?

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ವಿಜಯೇಂದ್ರ ಆಯ್ಕೆಯಾಗಿದ್ದು ಅವರ ಪಟ್ಟಾಭಿಷೇಕ ನಡೆದಿದೆ ಬಿಜೆಪಿ ಸಂಘಟನೆಗೆ ಹೊಸ ಪರ್ವ ಶುರುವಾಗಿದೆ. ಈ ನಡುವೆ ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಸ್ಥಾನಕ್ಕೆ ಇದೀಗ ನಾಳೆ ಅಥವಾ ನಾಡಿದ್ದು ಮುಹೂರ್ತ ಫಿಕ್ಸ್ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಪ್ರಮುಖ ನಾಯಕರ ಒಂದು ಸಭೆಯನ್ನು ಅಥವಾ ಅವರ ಸೂಚನೆಯನ್ನು ದೆಹಲಿ ಮಟ್ಟದಲ್ಲಿ ಚರ್ಚೆ ಮಾಡಲಾಗುತ್ತಿದೆ.

ಶುಕ್ರವಾರ ಅಥವಾ ಶನಿವಾರ ವಿಧಾನ ಸಭೆಯ ಪ್ರತಿಪಕ್ಷ ನಾಯಕನ ಆಯ್ಕೆ ಸೂಚಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮಾಜಿ ಡಿಸಿಎಂ ಡಾ. ಅಶ್ವತ ನಾರಾಯಣ, ಅಶೋಕ್, ಶಾಸಕ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಹಾಗೂ ಬಿಜೆಪಿ ಪ್ರಮುಖ ನಾಯಕರಾದ ಬಸನಗೌಡ ಪಾಟೀಲ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಪ್ರಮುಖ ನಾಯಕರಾದ ಸಿಟಿ ರವಿ ಹೆಸರು ಮುನ್ನೆಲೆಯಲ್ಲಿದೆ. ಆದರೆ ಯಾರಿಗೆ ಸ್ಥಾನ ಕೊಡುತ್ತೆ ಎಂಬುದು ಇದೀಗ ಕುತೂಹಲ ಮೂಡಿಸಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಶುರುವಾಗಿದೆ.

ವಿಜಯೇಂದ್ರ ಮಾಸ್ಟರ್ ಪ್ಲಾನ್!

ರಾಜ್ಯಾಧ್ಯಕ್ಷ ಸ್ಥಾನವನ್ನು ಪಡೆದಿರುವ ಯಡಿಯೂರಪ್ಪ ಪುತ್ರ ವಿಜೇಂದ್ರ ಅವರು ಭರ್ಜರಿಯಾಗಿ ತಮ್ಮ ಅಧಿಕಾರ ಸ್ವೀಕಾರ ಮಾಡಿದ್ದು, ರಾಜ್ಯದ ಮೂಲೆ ಮೂಲೆಯಲ್ಲೂ ಸಂಚಲನ ಮೂಡಿಸಿದ್ದಾರೆ. ಇನ್ನು ಜೆಡಿಎಸ್ ದೋಸ್ತಿ ನಡುವೆ ಲೋಕಸಭೆ ಚುನಾವಣೆಗೆ ಹೋಗುವ ಬಿಜೆಪಿ ಈಗಾಗಲೇ ಎಲ್ಲಾ ಕಡೆ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭಾ ಪ್ರತಿಪಕ್ಷ ನಾಯಕನ ಸ್ಥಾನ ಕೂಡ ಮಹತ್ವದ್ದಾಗಿದೆ. ಹೀಗಾಗಿ ರಾಜ್ಯದಲ್ಲಿ ಯಾರಿಗೆ ಸ್ಥಾನ ಸಿಗುತ್ತೆ ಎಂಬ ಕುತೂಹಲ ಮೂಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.