Categories
ಬೆಂಗಳೂರು

ಕರ್ನಾಟಕದಲ್ಲಿ 4 ವರ್ಷದ ಪದವಿ ಶಿಕ್ಷಣಕ್ಕೆ ತಕರಾರು!

ಕರ್ನಾಟಕದಲ್ಲಿ 4 ವರ್ಷದ ಪದವಿ ಶಿಕ್ಷಣಕ್ಕೆ ತಕರಾರು! 
– 3 ವರ್ಷ ಸಾಕು ಎಂದ ರಾಜ್ಯ ಶಿಕ್ಷಣ ನೀತಿ ಆಯೋಗ
– ರಾಜ್ಯದಲ್ಲಿ ಮೊದಲಿನಂತೆ ಪದವಿ ಶಿಕ್ಷಣ ಮುಂದುವರಿಕೆಗೆ ನಿರ್ಧಾರ

NAMMUR EXPRESS NEWS
ಬೆಂಗಳೂರು: ಪ್ರೊ. ಸುಖ್‌ದೇವ್‌ ಥೋರಟ್‌ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗ ಎನ್‌ಇಪಿಯ 4 ವರ್ಷಗಳ ಪದವಿಗೆ ಕೊಕ್‌ ಕೊಟ್ಟಿದೆ. ಈ ಹಿಂದಿನಂತೆ ಮೂರು ವರ್ಷಗಳ ಪದವಿ, ಎರಡು ವರ್ಷಗಳ ಸ್ನಾತಕೋತ್ತರ ಪದವಿ ಹಾಗೂ 4 ವರ್ಷಗಳ ಪಿಎಚ್‌ಡಿ ಕೋರ್ಸ್‌ಗೆ ಶಿಫಾರಸು ಮಾಡಿದೆ. ಬಿಜೆಪಿ ಸರಕಾರದ ಅಧಿವಯಲ್ಲಿ ರಾಜ್ಯದಲ್ಲಿಎನ್‌ಇಪಿ ಶಿಫಾರಸಿನಂತೆ 4 ವರ್ಷಗಳ ಪದವಿ ಕೋರ್ಸ್‌ ಆರಂಭಿಸಲಾಗಿತ್ತು. ಇದೀಗ ಎಸ್‌ಇಪಿ ಮೂರು ವರ್ಷಗಳ ಪದವಿಗೆ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೊದಲಿನಂತೆ ಪದವಿ ಶಿಕ್ಷಣ ಮುಂದುವರಿಯಲಿದೆ. ಅಲ್ಲದೆ, ಬೇಕಾಬಿಟ್ಟಿ ವಿವಿಗಳನ್ನು ತೆರೆಯುವ ಬದಲು ಸಾಧ್ಯತೆಗಳ ಅಧ್ಯಯನದ ನಂತರವೇ ಹೊಸ ವಿವಿ/ ಕಾಲೇಜುಗಳನ್ನು ತೆರೆಯಲು ಆಯೋಗ ತನ್ನ ಅಂತಿಮ ವರದಿಯಲ್ಲಿ ಶಿಫಾರಸು ಮಾಡಿದೆ. ಎಲ್ಲ ವಿಭಾಗಗಳಲ್ಲಿ ಉನ್ನತ ಶಿಕ್ಷಣ ಶಿಕ್ಷಕರ ಅಕಾಡೆಮಿ ಕೇಂದ್ರ ಸ್ಥಾಪಿಸಿ, ಶಿಕ್ಷಕರಿಗೆ ಕಾಲಕಾಲಕ್ಕೆ ತರಬೇತಿ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ, ಉನ್ನತ ಶಿಕ್ಷಣ ಅಕಾಡೆಮಿಯಲ್ಲಿ ಭಾಷಾ ಬೋಧನೆ ಮತ್ತು ತರಬೇತಿಗಾಗಿ ಮುಕ್ತ ಕೇಂದ್ರ ತೆರೆಯಲು ಶಿಫಾರಸು ಮಾಡಲಾಗಿದೆ. ದ್ವಿಭಾಷಾ ನೀತಿ ಬೋಧನೆಯನ್ನು ಉತ್ತೇಜಿಸಿ, ಪ್ರಮುಖ ಪಠ್ಯ ಪುಸ್ತಕಗಳ ದ್ವಿಭಾಷಾ ಆವೃತ್ತಿಗಳನ್ನು ಒದಗಿಸಬೇಕು. ಕನ್ನಡ ಮತ್ತು ಜಾಗತಿಕ ಭಾಷೆಗಳ ನಡುವಿನ ಜ್ಞಾನ ಅನುವಾದಕ್ಕಾಗಿ ಪ್ರತ್ಯೇಕ ಕೇಂದ್ರ ಸ್ಥಾಪಿಸಲು ಶಿಫಾರಸು ಮಾಡಲಾಗಿದೆ. ಖಾಸಗಿ ಸಂಸ್ಥೆಗಳಲ್ಲಿ ಶುಲ್ಕ ನಿಯಂತ್ರಿಸಲು ಶಾಶ್ವತ ನಿಯಂತ್ರಣ ವ್ಯವಸ್ಥೆ ರೂಪಿಸಲು ಸಲಹೆ ಮಾಡಲಾಗಿದೆ.

ಕೆಇಎ ಮೂಲಕ ಪರೀಕ್ಷೆ , ವಿವಿಯಲ್ಲಿ ಸಂದರ್ಶನ
ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಕೆಇಎ ಮೂಲಕ ಲಿಖಿತ ಪರೀಕ್ಷೆ ನಡೆಸಿ, ವಿಶ್ವವಿದ್ಯಾಲಯದಲ್ಲಿ ಸಂದರ್ಶನ ನಡೆಸಲು ಶಿಫಾರಸು ಮಾಡಲಾಗಿದೆ. ಸರಕಾರಿ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗಳನ್ನು ಕಾಲೇಜು ಶಿಕ್ಷಣ ಆಯ್ಕೆ ಸಮಿತಿ ಮೂಲಕ ಮಾಡಬೇಕು. ಸರಕಾರಿ ಕಾಲೇಜುಗಳ ಅರ್ಹ ಯುಜಿಸಿ ಶಿಕ್ಷಕರಿಂದ ಅರ್ಜಿ ಸ್ವೀಕರಿಸಬೇಕು. 500 ಕೋಟಿ ರೂ. ಯೊಂದಿಗೆ ರಾಜ್ಯ ಸಂಶೋಧನಾ ಪ್ರತಿಷ್ಠಾನ ರಚಿಸಲು ಸಲಹೆ ಮಾಡಲಾಗಿದೆ.
ಮೆರಿಟ್‌ ಆಧಾರದ ಮೇಲೆ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ಎಲ್ಲ ಕಡಿಮೆ ಆದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸಿ, ಅವರಿಂದ ವಿದ್ಯಾರ್ಥಿವೇತನ ಹಿಂಪಡೆಯಲು ಒತ್ತಾಯಿಸಬಾರದು ಎಂದು ಆಯೋಗ ಶಿಫಾರಸು ಮಾಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.