Categories
ಬೆಂಗಳೂರು

ನಾಯಿ ಕಚ್ಚಿದ್ದಕ್ಕೆ ಠಾಣೆಗೆ ಬಂದ ದರ್ಶನ್!

ನಾಯಿ ಕಚ್ಚಿದ್ದಕ್ಕೆ ಠಾಣೆಗೆ ಬಂದ ದರ್ಶನ್!
– ಮಹಿಳೆ ಮೇಲೆ ಎರಗಿದ್ದ ನಟ ದರ್ಶನ್ ನಾಯಿ
– ಮತ್ತೆ ಹೀಗೆ ಆಗದಂತೆ ಎಚ್ಚರ ವಹಿಸುತ್ತೇನೆ.. ಏನಿದು ಪ್ರಕರಣ?

NAMMUR EXPRESS NEWS
ಬೆಂಗಳೂರು: ನಟ ದರ್ಶನ್ ಅವರ ನಾಯಿ ಕಚ್ಚಿದ ವಿವಾದಕ್ಕೆ ಇದೀಗ ತೆರೆ ಬಿದ್ದಿದೆ. ಶೂಟಿಂಗ್ ಇದ್ದ ಕಾರಣ ನಾನು ಗುಜರಾತ್‌ಗೆ ಹೋಗಿದ್ದೆ. ನಾಯಿಯನ್ನು ನೋಡಿಕೊಳ್ಳುವಂತೆ ಕೆಲಸದ ಹುಡುಗರಿಗೆ ಹೇಳಿದ್ದೆ. ನಮ್ಮ ಹುಡುಗರಿಂದ ತಪ್ಪಾಗಿದೆ. ಮಹಿಳೆಗೆ ಚಿಕಿತ್ಸೆ ಕೊಡಿಸುವಂತೆಯೂ ನಮ್ಮ ಹುಡುಗರಿಗೆ ಹೇಳಿದ್ದೇನೆ. ಮತ್ತೆ ಹೀಗೆ ಆಗದಂತೆ ಎಚ್ಚರವಹಿಸುತ್ತೇನೆ’ ಎಂದು ಪೊಲೀಸರ ಎದುರು ದರ್ಶನ್ ಹೇಳಿಕೆ ನೀಡಿದ್ದಾರೆ.

ಏನಿದು ಘಟನೆ?

ಅಮಿತಾ ಜಿಂದಾಲ್ ಎಂಬ ಮಹಿಳೆಗೆ ದರ್ಶನ್ ಮನೆಯ ನಾಯಿ ಕಚ್ಚಿದ ಪ್ರಕರಣದಲ್ಲಿ ಆರ್‌ಆ‌ ನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ನವೆಂಬರ್ 15 ರಂದು ನಟ ದರ್ಶನ್ ಅವರು ಪೊಲೀಸ್ ಠಾಣೆಗೆ ಬಂದು ತಮ್ಮ ಹೇಳಿಕೆ ನೀಡಿದ್ದಾರೆ. ಕೇವಲ 15 ನಿಮಿಷ ಮಾತ್ರ ಅವರು ಠಾಣೆಯಲ್ಲಿ ಇದ್ದರು. ಈ ವೇಳೆ ಅವರು ನೀಡಿದ ಹೇಳಿಕೆ ಇಲ್ಲಿದೆ. ‘ಶೂಟಿಂಗ್ ಇದ್ದ ಕಾರಣದಿಂದ ನಾನು ಗುಜರಾತ್‌ಗೆ ಹೋಗಿದ್ದೆ. ನಾಯಿಯನ್ನು ನೋಡಿಕೊಳ್ಳುವಂತೆ ಕೆಲಸದ ಹುಡುಗರಿಗೆ ಹೇಳಿದ್ದೆ. ನಮ್ಮ ಹುಡುಗರಿಂದ ತಪ್ಪಾಗಿದೆ. ಮಹಿಳೆಗೆ ಚಿಕಿತ್ಸೆ ಕೊಡಿಸುವಂತೆಯೂ ನಮ್ಮ ಹುಡುಗರಿಗೆ ಹೇಳಿದ್ದೇನೆ. ಮತ್ತೆ ಹೀಗೆ ಆಗದಂತೆ ಎಚ್ಚರ ವಹಿಸುತ್ತೇನೆ. ನಾವು ಹೆಚ್ಚಾಗಿ ಈ ಮನೆಯಲ್ಲಿ ವಾಸ ಮಾಡುತ್ತಿಲ್ಲ. ಮನೆಯಲ್ಲಿನ ಸಿಸಿ ಕ್ಯಾಮೆರಾಗಳ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಈ ಘಟನೆ ಬಳಿಕ ಹೊಸ ಸಿಸಿಟಿವಿ ಹಾಕಿಸಿದ್ದೇನೆ’ ಎಂದು ದರ್ಶನ್ ಹೇಳಿದ್ದಾರೆ. ಹಾಗಿದ್ದರೂ ಕೂಡ ಸಿಸಿಟಿವಿ ದೃಶ್ಯ ನೀಡುವಂತೆ ಪೊಲೀಸರು ದರ್ಶನ್‌ಗೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.