ವನ್ಯಜೀವಿ ಉತ್ಪನ್ನ ಇಟ್ಟುಕೊಂಡೋರಿಗೆ ವಿನಾಯ್ತಿ!?
– ಶೀಘ್ರವೇ ವಾಪಸಾತಿಗೆ ರಾಜ್ಯ ಸರ್ಕಾರದಿಂದ 3 ತಿಂಗಳ ಗಡುವು
– ಅರಣ್ಯ ಸಚಿವರು ಹೇಳಿದ್ದೇನು…?
NAMMUR EXPRESS NEWS
ಬೆಂಗಳೂರು: ವನ್ಯಜೀವಿ ಉತ್ಪನ್ನ ಹೊಂದಿದ್ದಾರೋ ಅವುಗಳನ್ನು ತಾವಾಗಿಯೇ ಸರ್ಕಾರಕ್ಕೆ ಹಿಂದಿರುಗಿಸೋದಕ್ಕೆ ಮೂರು ತಿಂಗಳ ಗಡುವು ನೀಡಲಾಗುತ್ತಿದೆ. ಬೀದರ್ ಅಲ್ಲಿ ಈ ಕುರಿತಂತೆ ಮಾಹಿತಿ ನೀಡಿದಂತ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು, ವನ್ಯ ಜೀವಿ ಅಂಗಾಂಗಗಳು, ಹಲ್ಲು, ಚರ್ಮ, ಕೊಂಬು ಮತ್ತಿತರ ವನ್ಯಜೀವುಗಳಿಗೆ ಸಂಬಂಧಿಸಿದ ವಸ್ತುಗಳು ಅರಿವಿಲ್ಲದೇ ಉಪಯೋಗಿಸುತ್ತಿದ್ದಾರೆ. ಅವುಗಳನ್ನು ಅರಣ್ಯ ಇಲಾಖೆ ಸುಪರ್ದಿಗೆ ವಾಪಾಸ್ ನೀಡಲು ಮೂರು ತಿಂಗಳ ಗಡುವು ನೀಡಲು ಕಾನೂನು ರೂಪಿಸಿ ಜಾರಿಗೆ ತರಲಾಗುತ್ತಿದೆ ಎಂದಿದ್ದಾರೆ. ನವೆಂಬರ್.9ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಆ ಸಭೆಯಲ್ಲಿ ವನ್ಯಜೀವಿ ಉತ್ಪನ್ನ ಇಟ್ಟಿಕೊಂಡಿರೋರು ವಾಪಾಸಾತಿಗೆ ಗಡುವು ನೀಡುವ ಬಗ್ಗೆ ಚರ್ಚಿಸಲಾಗುತ್ತದೆ. ಅಂತಿಮವಾಗಿ ಕರಡು ಆದೇಶವನ್ನು ಪ್ರಕಟಿಸಲಾಗುತ್ತದೆ ಎಂದರು.
ಈ ಸಂಬಂಧ ಸಿಎಂ ಜೊತೆಗೆ ಚರ್ಚಿಸಲಾಗಿದೆ. ಹಿರಿಯ ಅರಣ್ಯಾಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸಿ, ಕರಡು ನಿಯಮಗಳನ್ನು ತಯಾರಿಸಲಾಗುತ್ತಿದ್ದು, ಕಾನೂನು ಇಲಾಖೆಗೆ ಕಳುಹಿಸಿದ ನಂತ್ರ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಬೇಟೆ ಅಪರಾಧವನ್ನು ತಮ್ಮ ಇಲಾಖೆಯವರು ತಡೆಯಲೇ ಬೇಕು. ತಡೆಯುತ್ತಾರೆ. ಅರಿವಿಲ್ಲದೇ ವನ್ಯಜೀವಿ ಉತ್ಪನ್ನಗಳನ್ನು ಬಳಸುವವರು ಅನುಕೂಲಕ್ಕಾಗಿ ಕಾನೂನು ಜಾರಿ ತರಲು ಮುಂದಾಗಲಿದ್ದೇವೆ ಎಂದರು.