ಬೆಂಗಳೂರಲ್ಲಿ 2.5 ಕೋಟಿ ಹಣದಿಂದ ಮೂಡಿದ ಗಣೇಶ!
– ಮೈಸೂರಿನಲ್ಲಿ ಮೂಡಿದ ಚಂದ್ರಯಾನ 3 ಗಣಪ
– ಕರಾವಳಿಯಲ್ಲಿ ಮಂಗಳವಾರ ಗಣೇಶ ಹಬ್ಬ..!
NAMMUR EXPRESS NEWS
ಬೆಂಗಳೂರು: ಗೌರಿ ಗಣೇಶ ಹಬ್ಬದ ಸಂಭ್ರಮ ಸಡಗರ ಎಲ್ಲೆಡೆ ಮನೆ ಮಾಡಿದ್ದು, ಎಲ್ಲೆಡೆ ಹಬ್ಬವನ್ನು ಆಚರಣೆ ಮಾಡಲಾಯಿತು. ಮುಂಜಾನೆಯಿಂದಲೇ ಹಬ್ಬವನ್ನು ಆಚರಿಸಿದ್ದು, ಗಣಪತಿ ಪ್ರತಿಷ್ಠಾಪನೆ ಮಾಡಲಾಯಿತು. ಗೌರಿ ಪೂಜೆ ಮಾಡಲಾಯಿತು. ಮೈಸೂರಿನಲ್ಲಿ ಮೂಡಿದ ಚಂದ್ರಯಾನ 3 ಗಣಪ ಗಮನ ಸೆಳೆದರೆ ಹಲವೆಡೆ ವಿವಿಧ ಗಣಪತಿ ಗಮನ ಸೆಳೆದವು. ಗಣೇಶ ಪ್ರತಿಷ್ಠಾಪನೆ ಮಾಡಿ ಎಲ್ಲರಿಗೂ ಪ್ರಸಾದ ಹಂಚಲಾಯಿತು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕೆಲವು ಕಡೆ ಒಂದೇ ದಿನಕ್ಕೆ ಗಣೇಶ ವಿಸರ್ಜನೆ ಇದೆ.
ಮೈಸೂರಿನಲ್ಲಿ ಮೂಡಿದ ಚಂದ್ರಯಾನ 3 ಗಣಪ..!
ನಾಡಿನೆಲ್ಲೆಡೆ ಗಣಪತಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ. ವಿವಿಧ ಊರುಗಳಲ್ಲಿ ವಿವಿಧ ರೂಪಗಳಲ್ಲಿ ವಿಘ್ನನಿವಾರಕ ರಾರಾಜಿಸುತ್ತಿದ್ದಾನೆ. ಕಾಂತಾರಾ ಗಣಪ ಹೀಗೆ ಹಲವು ರೂಪದಲ್ಲಿ ಗಣೇಶ ವಿಗ್ರಹಗಳನ್ನು ತಯಾರಿಸಲಾಗಿದೆ. ಇದೇರೀತಿಯಾಗಿ ಮೈಸೂರಿನ ಕಲಾವಿದನ ಕೈ ಚಳಕದಲ್ಲಿ ಚಂದ್ರಯಾನ 3 ಗಣಪ ಮೂಡಿದ್ದಾನೆ. ಹೌದು ಕುಂಬಾರಗೇರಿ ಕಲಾವಿದ ಯಶವಂತ ಅವರು ತ್ರಿವರ್ಣ ಧ್ವಜ ಹಿಡಿದು ಭೂಮಂಡಲದ ಮೇಲೆ ಗಣಪ ಕುಳಿತಿದ್ದಾನೆ. ಪಕ್ಕದಲ್ಲೇ ಚಂದ್ರಯಾನ 3ರ ರಾಕೆಟ್, ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಮತ್ತು ಗಣೇಶನ ವಾಹನ ಮೂಷಿಕ ಚಂದ್ರ ಗ್ರಹದಲ್ಲಿ ಇಳಿದ ವಿಗ್ರಹಗಳನ್ನು ಯಶವಂತ ತಯಾರಿಸಿದ್ದಾರೆ.

2.5 ಕೋಟಿ ಮೌಲ್ಯದ ಹಣದಿಂದ ಗಣೇಶ
ಬೆಂಗಳೂರಿನ ಪುಟ್ಟೇನಹಳ್ಳಿಯ ಜೆ.ಪಿ. ನಗರದ ಸತ್ಯಸಾಯಿ ಗಣಪತಿ ದೇಗುಲವನ್ನು ನೋಟು, ನಾಣ್ಯಗಳಿಂದ ಅಲಂಕಾರ ಮಾಡಲಾಗಿದೆ.58 ಲಕ್ಷ ಮೌಲ್ಯದ 5, 10, 20 ನಾಣ್ಯಗಳಿಂದ, 10, 20, 50, 100, 200, 500, 2000 ರೂ ಹೂವಿನ ಸರಮಾಲೆ ಮಾಡಿ ವಿಶೇಷ ಬಗೆಯಲ್ಲಿ ಶೃಂಗರಿಸಲಾಗಿದೆ.ಅಲಂಕಾರ ನೋಡುವ ಭಕ್ತರ ಮೇಲೆ ಸಿಸಿಟಿವಿ ಕಣ್ಣಾವಲು ಇದ್ದು, ಬ್ಯಾರಿಕೇಡ್ ಹಾಕಿ ಅಲಂಕಾರ ಹಣವನ್ನ ಮುಟ್ಟದಂತೆ ವ್ಯವಸ್ಥೆ ಮಾಡಲಾಗಿದೆ.22 ಸಿಸಿಟಿವಿ ಅಳವಡಿಕೆ, ಗನ್ ಮ್ಯಾನ್, ಸೆಕ್ಯುರಟಿ, ಟ್ರಸ್ಟ್ ಸದಸ್ಯರು ಭಕ್ತರು ನಿರಂತರವಾಗಿ ಪರಿಶೀಲನೆ ಮಾಡುತ್ತಾರೆ.ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರ ಮತ್ತು 150 ಕ್ಕೂ ಜನರ ಈ ಅಲಂಕಾರವನ್ನು ಮಾಡಿದ್ದು, ಇವರ ಕೈ ಚಳಕ್ಕೆ ಜನರು ಫಿದಾ ಆಗಿದ್ದಾರೆ.
ಕರಾವಳಿಯಲ್ಲಿ ಮಂಗಳವಾರ ಗಣೇಶ ಹಬ್ಬ
ಕರಾವಳಿಯಲ್ಲಿ ಸೋಮವಾರ ಗೌರಿ ಹಬ್ಬ ಆಚರಣೆ ಮಾಡಲಾಗಿದ್ದು, ಮಂಗಳವಾರ ಗಣೇಶ ಹಬ್ಬ ಆಚರಣೆ ಮಾಡಲಾಗುತ್ತದೆ.

