ಕಿಮ್ಮನೆ ರತ್ನಾಕರ್‌ಗೆ ವಿಶ್ವ ಮಟ್ಟದಲ್ಲಿ ಗೌರವ!
– ವಿಶ್ವವಾಣಿ ‘ಅಂತರಾಷ್ಟ್ರೀಯ ಗ್ಲೋಬಲ್ ಅಚೀವರ್ಸ್ ಅವಾರ್ಡ್’
– ವಿಯೆಟ್ನಾಂನ ಹನಾಯ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಹ್ವಾನ
NAMMUR EXPRESS NEWS
ಬೆಂಗಳೂರು: ಹಿರಿಯ ಪತ್ರಿಕೋದ್ಯಮಿ ವಿಶ್ವೇಶ್ವರ ಭಟ್ ಅವರ ವಿಶ್ವವಾಣ ಪತ್ರಿಕೆ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ ವಿಶ್ವದ ನಾನಾ ಭಾಗಗಳ ಸಾಧಕರನ್ನು ಗುರುತಿಸಿ’ ಅಂತರಾಷ್ಟ್ರೀಯ ಗ್ಲೋಬಲ್ ಅಚೀವರ್ಸ್ ಅವಾರ್ಡ್’ ಪ್ರಧಾನ ಮಾಡುತ್ತದೆ. 2024ರ ವಿಶ್ವವಾಣಿ ‘ಅಂತರಾಷ್ಟ್ರೀಯ ಗ್ಲೋಬಲ್ ಅಚೀವರ್ಸ್ ಅವಾರ್ಡ್’ ಚಿಂತಕ, ಅಧ್ಯಯನಶೀಲ ರಾಜಕಾರಣಿ ಕಿಮ್ಮನೆ ರತ್ನಾಕರ್‌ಗೆ ಲಭಿಸಿದೆ. ಫೆ.2ರಿಂದ 7ರವರೆಗೆ ವಿಯೆಟ್ನಾಂನ ಹನಾಯ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕಳೆದ ವರ್ಷ ಕಾಂಬೋಡಿಯಾ ದೇಶದ ಸೀಮ್ ರೀಪ್‌ನಲ್ಲಿ ನಡೆದ ಸಮಾರಂಭದಲ್ಲಿ ವಿಶ್ವದ 11 ಸಾಧಕರನ್ನು ಗೌರವಿಸಲಾಗಿತ್ತು. ಕಾಂಬೋಡಿಯಾ ಕಾನ್ಸುಲೇಟಿನ ಸಹಕಾರದಲ್ಲಿ ಸಮಾರಂಭ ಜರುಗಿತ್ತು. ಜಗದ್ಗುರು ಶ್ರೀ ಶ್ರೀ ನಿರ್ಮಲಾನಂದ ನಾಥರು ಪ್ರಶಸ್ತಿ ಪ್ರಧಾನ ಮಾಡಿದ್ದರು. ಈ ಬಾರಿ ವಿಯೆಟ್ನಾಂ ದೇಶದ ಪನಾಯ್‌ಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಆ ದೇಶದ ಕಾನ್ಸುಲೇಟ್ ಸಹಕಾರದೊಂದಿಗೆ ಜರುಗುತ್ತಿದೆ. ತೀರ್ಥಹಳ್ಳಿಯ ಮಾಜಿ ಶಾಸಕರೂ, ಮಾಜಿ ಶಿಕ್ಷಣ ಸಚಿವರೂ, ಚಿಂತಕರೂ, ಅಧ್ಯಯನಶೀಲ ರಾಜಕಾರಣಗಳೂ ಆಗಿರುವ ಕಿಮ್ಮನೆ ರತ್ನಾಕರ್ ಈ ಬಾರಿ ‘ಗ್ಲೋಬಲ್ ಅಚೀವರ್ಸ್ ಅವಾರ್ಡ್’ ಗೌರವಕ್ಕೆ ಆಯ್ಕೆಯಾಗಿದ್ದು ಅವರನ್ನು ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ವಿಶ್ವವಾಣಿ ಬಳಗ ಕೋರಿದೆ.
