Categories
ಬೆಂಗಳೂರು

ಗ್ರಾಪಂ ನೌಕರರಿಗೆ ಗುಡ್ ನ್ಯೂಸ್..!

ಗ್ರಾಪಂ ನೌಕರರಿಗೆ ಗುಡ್ ನ್ಯೂಸ್..!
– ಗ್ರಾಪಂ ಅಧಿಕಾರಿಗಳ ವರ್ಗಾವಣೆ ನಿಯಮ ತಿದ್ದುಪಡಿ
– ಬಯೋಮೆಟ್ರಿಕ್ ಹಾಜರಾತಿಯಿಂದ ವಿನಾಯಿತಿ

NAMMUR EXPRESS NEWS
ಬೆಂಗಳೂರು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಸಹಾಯಕರು ಸತತ 7 ವರ್ಷ ಸೇವೆಯ ನಂತರ ತಾಲೂಕು, ಜಿಲ್ಲೆ ತೊರೆಯುವ ನಿಯಮವನ್ನು ವರ್ಗಾವಣೆ ಪ್ರಕ್ರಿಯೆಯಿಂದ ಸರ್ಕಾರ ಕೈಬಿಟ್ಟಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ವರ್ಗಾವಣಾ ನಿಯಮ ತಿದ್ದುಪಡಿ ಮಾಡಲಾಗಿದ್ದು, ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಗ್ರಾಪಂ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ 1 ಮತ್ತು ಗ್ರೇಡ್ 2 ಹಾಗೂ ದ್ವಿತೀಯ ದರ್ಜೆ ಲೆಕ್ಕೆ ಸಹಾಯಕರ ವರ್ಗಾವಣೆ ನಿಯಂತ್ರಣ ನಿಯಮಗಳಲ್ಲಿ ತಿದ್ದುಪಡಿ ಮಾಡಿ ಒಂದೇ ತಾಲೂಕಿನಲ್ಲಿ ನಿರಂತರವಾಗಿ 7 ವರ್ಷ ಸೇವೆ ಸಲ್ಲಿಸಿರುವ ವರ್ಗ-1ರ ನೌಕರರನ್ನು ಅದೇ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಸ್ಥಳ ನಿಯುಕ್ತಿಗೊಳಿಸತಕ್ಕದ್ದಲ್ಲ ಎಂಬ ನಿಯಮದ ಬದಲಾಗಿ ಒಂದೇ ಗ್ರಾಮ ಪಂಚಾಯಿತಿಯಲ್ಲಿ 5 ವರ್ಷ ಸೇವೆ ಸಲ್ಲಿಸಿರುವ ವರ್ಗ-1ರ ನೌಕರರನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿಗೆ ಸ್ಥಳ ನಿಯುಕ್ತಿಗೊಳಿಸಲಾಗುವುದಿಲ್ಲ ಎಂದು ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೌಕರರ ಬಹು ವರ್ಷಗಳ ಬೇಡಿಕೆಯಾಗಿತ್ತು.

ಗ್ರಾಮ ಪಂಚಾಯಿತಿ ಕರವಸೂಲಿಗಾರರು, ಸ್ವಚ್ಛತಾಗಾರರು, ನೀರಗಂಟಿಗಳಿಗೆ ಪಂಚತಂತ್ರ 2.0 ಮೊಬೈಲ್ ಆಪ್ ಮೂಲಕ ಇ-ಹಾಜರಾತಿ ದಾಖಲಿಸಲು ಅವಕಾಶ ಕಲ್ಪಿಸಿ ಪಂಚಾಯತ್ ರಾಜ್ ಆಯುಕ್ತಾಲಯ ಸುತ್ತೋಲೆ ಹೊರಡಿಸಿದೆ. ಗ್ರಾಪಂ ಸಿಬ್ಬಂದಿ (ಕರವಸೂಲಿ ಗಾರರು, ಕ್ಲರ್ಕ್ ಕಂ ಡೇಟಾ ಎಂಟ್ರಿ ಅಪರೇಟರ್/ಡೇಟಾ ಎಂಟ್ರಿ ಅಪರೇಟರ್, ಸ್ವಚ್ಛತಾಗಾರರು, ನೀರಗಂಟಿ)ಗಳು ಪ್ರತಿದಿನ ತಂತ್ರಾಂಶದಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ದಾಖಲಿಸುವಂತೆ ಹಾಗೂ ಪ್ರತಿ ತಿಂಗಳ ವೇತನವನ್ನು ಬಯೋಮೆಟ್ರಿಕ್ ಹಾಜರಾತಿ ಆಧಾರದ ಮೇಲೆ ಪಾವತಿಸುವಂತೆ ಈ ಹಿಂದೆ ತಿಳಿಸಲಾಗಿತ್ತು. ಆದರೆ ಕರ್ತವ್ಯ ಕ್ಷೇತ್ರದಲ್ಲಿರುವುದರಿಂದ ಇವರುಗಳು ನಿಗದಿತ ಸಮಯದಲ್ಲಿ ಕಚೇರಿಗೆ ಬಂದು ಹಾಜರಾತಿ ದಾಖಲಿಸುವುದು ಸಾಧ್ಯವಾಗದೇ ಇರುವುದರಿಂದ ಬಯೋಮೆಟ್ರಿಕ್ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಸುತ್ತೋಲೆ ತಿಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.