ಯಜಮಾನಿಯರ ಅಕೌಂಟ್ ಸರಿ ಇಲ್ದಿದ್ರೆ ಗಂಡನಿಗೆ ಗೃಹ ಲಕ್ಷ್ಮಿ ಹಣ!
– ಇನ್ಮುಂದೆ ಗಂಡನ ಖಾತೆಗೆ ಜಮಾ: ಏನಿದು ಯೋಜನೆ
– ಮನೆಗೆ ಬಂದು ಮಾಹಿತಿ ಪಡೆದು ಹಣ ವರ್ಗಾವಣೆ
NAMMUR EXPRESS NEWS
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಹಣವನ್ನು ಬಿಡುಗಡೆ ಮನೆ ಯಜಮಾನಿಯರ ಹೆಸರಿಗೆ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಕೆಲವು ಮಹಿಳೆಯರ ಅಕೌಂಟ್ ತಾಂತ್ರಿಕ ಸಮಸ್ಯೆ ಇರುವುದರಿಂದ ಕೆಲವು ಮಂದಿಗೆ ಹಣ ಇನ್ನೂ ಬಿಡುಗಡೆಯಾಗಿಲ್ಲ.ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಇನ್ಮುಂದೆ ಮಹಿಳೆಯರ ಖಾತೆಗೆ ಮಾತ್ರವಲ್ಲದೇ ಮನೆ ಯಜಮಾನನ ಖಾತೆಗೆ ಕೂಡ ಹಣ ಬರಲಿದೆ.
ಯಜಮಾನಿಯ ಖಾತೆಯಲ್ಲಿ ಸಮಸ್ಯೆ ಇದ್ದರೆ ಎರಡನೇ ಸದಸ್ಯ ಅಥವಾ ಎರಡನೇ ಹಿರಿಯ ಸದಸ್ಯರಿಗೆ ಹಣ ವರ್ಗಾವಣೆ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮನೆ ಮನೆಗೆ ಬಂದು ಮಹಿಳೆಯರ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಬಗೆ ಹರಿಸಿಲಿದ್ದಾರೆ. ಯೋಜನೆಗೆ ಸಂಬಂಧಪಟ್ಟಂತೆ, ಆಧಾರ್ ಲಿಂಕ್ ಆಗದಿರುವುದು ಮೊದಲಾದ ಕಾರಣಗಳಿಂದ ಹಣ ವರ್ಗಾವಣೆಯಾಗಿಲ್ಲ, ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಫಲಾನುಭವಿಗಳನ್ನು ಬ್ಯಾಂಕಿಗೇ ಕರೆದೊಯ್ದು ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಮುಂದಾಗಿದ್ದಾರೆ.