ಬಿಯರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!
– ಚಳಿಗಾಲ ಶುರು: ಬಿಯರ್ ಮೊರೆ ಹೋದ ಮದ್ಯ ಪ್ರಿಯರು
– ಪ್ರತಿ ದಿನ ಮಾರಾಟ ಹೆಚ್ಚಳ: ಸರ್ಕಾರಕ್ಕೆ ಖುಷಿ
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಬಿಯರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಶುರುವಾಗಿದೆ. ಇದರ ಜೊತೆಗೆ ಲಿಕ್ಕರ್ ಸೇಲ್ ಫುಲ್ ಸಹ ಜೋರಿದೆ. ನವೆಂಬರ್ನಲ್ಲಿ ಬಿಯರ್ ಮಾರಾಟ ಪ್ರಮಾಣ ಹೆಚ್ಚಾಗಿದೆ. ಈ ಮೂಲಕ ಗ್ಯಾರಂಟಿಗಳನ್ನು ಜಾರಿಗೊಳಿಸಿದ ಸರ್ಕಾರಕ್ಕೆ ಮದ್ಯಪ್ರಿಯರು ಆರ್ಥಿಕವಾಗಿ ಕೈ ಜೋಡಿಸಿದ್ದಾರೆ. ರಾಜ್ಯದಲ್ಲಿ ವರ್ಷಾಂತ್ಯದ ವೇಳೆ ಬಿಯರ್, ಲಿಕ್ಕರ್ ಸೇಲ್ ಹೆಚ್ಚಿದೆ. ಮದ್ಯ ಪ್ರಿಯರು ಹೊಸ ವರುಷ ಬರುವ ಮುನ್ನವೇ ಬಿಯರ್, ಹಾಟ್ ಡ್ರಿಂಕ್ಸ್ ಸೇಲ್ ಹೆಚ್ಚಾಗಿದೆ. ಚಳಿಗಾಲ ಶುರುವಾಗ್ತಿದ್ದಂತೆ ರಾಜ್ಯದಲ್ಲಿ ಬಿಯರ್ ಗೆ ಭಾರೀ ಬೇಡಿಕೆ ಬಂದಿದೆ.