ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ನಿಮಗೆಷ್ಟು ಗೊತ್ತು ?
– ವನ್ಯಜೀವಿಗಳ ಸಂರಕ್ಷಣೆ ಇರುವ ಕಾಯ್ದೆಯಾವುದು
– ಹುಲಿ ಉಗುರು ಅಷ್ಟೇ ಅಲ್ಲ ನವಿಲು ಗರಿ ಇಟ್ಟುಕೊಂಡ್ರು ಕೇಸ್ ಅಗುತ್ತೆ ಹುಷಾರ್!
NAMMUR EXPRESS NEWS
ಬೆಂಗಳೂರು: ಅರಣ್ಯ ಇಲಾಖೆ ಕಾನೂನಿನ ಬಗ್ಗೆ ಮಾಹಿತಿ ಕೊರತೆ ಇರುವ ಕಾರಣ, ಕಾಯ್ದೆ ಸೇರಿದಂತೆ ಇತರೆ ಕಾನೂನಿನ ಉಲ್ಲಂಘನೆ ಸಾರ್ವಜನಿಕ ವಲಯದಲ್ಲಿ ಕಂಡುಬರುತ್ತಿದೆ. ವರ್ತೂರು ಸಂತೋಷ್ ಹುಲಿ ಉಗುರುಳ್ಳ ಚಿನ್ನದ ಸರ ಧರಿಸಿದ್ದ ಕಾರಣ ವನ್ಯಜೀವಿ ಕಾಯ್ದೆಯಡಿ ಆತನನ್ನು ಬಂಧಿಸಿದ ಬಳಿಕ ಹುಲಿ ಉಗುರು ಸೇರಿ ವನ್ಯಜೀವಿಗಳ ಅಂಗಾಂಗ ಹೊಂದುವುದು ಅಪರಾಧ ಎಂಬುದು ಗೊತ್ತಾಗುತ್ತಿದೆ. ಆದರೆ ಈ ಕಾಯ್ದೆ ಮೊದಲೇ ಜಾರಿಯಲ್ಲಿದೆ.
ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972 ಏನು ಹೇಳುತ್ತದೆ?
-ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ವನ್ಯಜೀವಿಗಳ ಅಂಗಾಂಗ, ಅವಶೇಷಗಳ ಮಾರಾಟ ಅಥವಾ ಬಳಕೆಗೆ ಸಂಪೂರ್ಣ ನಿಷೇಧವಿದೆ. ಯಾವುದೇ ಜೀವಿಯನ್ನು ಜೀವಂತವಾಗಿ ಅಥವಾ ಮೃತಪಟ್ಟ ಬಳಿಕ ಮಾರಾಟ ಮಾಡುವಂತಿಲ್ಲ.
-ಕಾಡು ಪ್ರಾಣಿಗಳ ಚರ್ಮವನ್ನು ಹದ ಮಾಡಿ ಅಲಂಕಾರಿಕ ವಸ್ತುಗಳಾಗಿ ಬಳಸುವಂತಿಲ್ಲ.
-ವನ್ಯಜೀವಿಗಳ ಮಾಂಸ ಮಾರಾಟ ಹಾಗೂ ಭಕ್ಷಣೆ ಸಹ ಅಪರಾಧ.
-ಹಾವಿನ ವಿಷವನ್ನೂ ಸಂಗ್ರಹ ಮಾಡುವಂತಿಲ್ಲ. ನವಿಲು ಗರಿಗಳನ್ನೂ ಸಂಗ್ರಹಿಸುವಂತಿಲ್ಲ.
-ವನ್ಯಜೀವಿಗಳ ಕೂದಲು, ಚರ್ಮ, ಉಗುರು, ಗೊರಸು, ಹಲ್ಲು, ಆನೆ ದಂತ ಸೇರಿದಂತೆ ದೇಹದ ಯಾವುದೇ ಭಾಗವನ್ನು ಸಂಗ್ರಹಿಸುವುದು, ಸಾಗಿಸುವುದು, ಮಾರಾಟ ಮಾಡುವುದು ಹಾಗೂ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.