Categories
ಬೆಂಗಳೂರು

ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ ಫಿಕ್ಸ್?

ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ ಫಿಕ್ಸ್?
– ಕಂಪ್ಯೂಟರ್‌ಗೆ ಫಲಿತಾಂಶವನ್ನು ದಾಖಲು ಮಾಡುವ ಪ್ರಕ್ರಿಯೆ
– ಏಪ್ರಿಲ್ ತಿಂಗಳ 11 ರಿಂದ ಎಸ್ಸೆಸ್ಸೆಲ್ಸಿ ಮೌಲ್ಯ ಮಾಪನ

NAMMUR EXPRESS NEWS
ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಬಹುತೇಕ ಪೂರ್ಣಗೊಳ್ಳುವ ಹಂತ ತಲುಪಿದೆ. ಏಪ್ರಿಲ್ ಎರಡನೇ ವಾರ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಮಾ.1 ರಿಂದ 20 ರವರೆಗೆ 1,771 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಮುಗಿದ ಮರುದಿನದಿಂದಲೇ ರಾಜ್ಯಾದ್ಯಂತ 76 ಕೇಂದ್ರಗಳಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮೌಲ್ಯಮಾಪಕರು ಮೌಲ್ಯಮಾಪನ ನಡೆಸಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಬಾಕಿ ವಿಷಯಗಳ ಮೌಲ್ಯ ಮಾಪನ ಮುಕ್ತಾಯಗೊಳ್ಳಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮೂಲಗಳು ಮಾಹಿತಿ ನೀಡಿವೆ. ಏ.3ರ ವೇಳೆಗೆ ಮೌಲ್ಯ ಮಾಪನ ಪೂರ್ಣಗೊಳ್ಳಲಿದೆ. ನಂತರ ಎಂಟರಿಂದ ಹತ್ತು ದಿನಗಳಲ್ಲಿ ಫಲಿತಾಂಶದ ಕಂಪ್ಯೂಟರೀಕರಣ ಕಾರ್ಯ ನಡೆಯಲಿದೆ. ಲೆಕ್ಕಾಚಾರದಂತೆ ಕಾರ್ಯ ಪೂರ್ಣಗೊಂಡರೆ ಏಪ್ರಿಲ್ ಎರಡನೇ ವಾರದ ಆರಂಭದ ದಿನಗಳಲ್ಲೇ ಫಲಿತಾಂಶ ಪ್ರಕಟಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

– ಏಪ್ರಿಲ್ 11 ರಿಂದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ:

ಮಾ.21ರಿಂದ ಆರಂಭಗೊಂಡಿರುವ ಎಸ್ಸೆ ಸ್ಸೆಲ್ಸಿ ಪರೀಕ್ಷೆಗಳು ಏ.4ರಂದು ಮಕ್ತಾಯಗೊಳ್ಳಲಿವೆ. ಏ.11 ರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಆರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಕೆಎಸ್‌ಇಎಬಿ ಅಧಿಕಾರಿಗಳು ಹೇಳಿದ್ದಾರೆ.

2 replies on “ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ ಫಿಕ್ಸ್?”

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.