ಅಕ್ಟೋಬರ್ 2ಕ್ಕೆ ಕಾಂತಾರ 1 ರಿಲೀಸ್!!
– ಸಿನಿಮಾ ನಿಗದಿತ ದಿನಾಂಕದಂದೇ ಬಿಡುಗಡೆ
– ಯಾವುದೇ ವದಂತಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ನೀಡಿದ ಚಿತ್ರತಂಡ
NAMMUR EXPRESS NEWS
ಬೆಂಗಳೂರು: ರಿಷಭ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಬಹುನಿರೀಕ್ಷಿತ ಕಾಂತಾರ 1 ಸಿನೆಮಾ ಇದೇ ವರ್ಷ ಅಕ್ಟೋಬರ್ 2ರಂದು ಬಿಡುಗಡೆಗೊಳ್ಳುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ ಈ ನಡುವೆ ಚಿತ್ರತಂಡಕ್ಕೆ ಎದುರಾದ ಕೆಲವು ಸಮಸ್ಯೆಗಳಿಂದ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಲಿದೆ ಎಂಬ ವದಂತಿಗಳು ಹರಡಿದ್ದವು.
ಅದಕ್ಕೆ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ಕಾಂತಾರ 1 ಚಿತ್ರದ ಕೆಲಸಗಳೆಲ್ಲವೂ ಅಂದುಕೊಂಡಂತೆ ನಡೆಯುತ್ತಿವೆ. ನಮ್ಮ ಮೇಲೆ ಭರವಸೆ ಇಡಿ. ಯಾವುದೇ ವದಂತಿಗೆ ಕಿವಿಗೊಡಬೇಡಿ. ಸಿನೆಮಾವು ನಿಗದಿತ ದಿನಾಂಕದಂದೇ ಬಿಡುಗಡೆ ಆಗಲಿದೆ ಎಂದು ಟ್ವಿಟ್ ಮೂಲಕ ತಿಳಿಸಿದೆ.
ಇತ್ತೀಚೆಗೆ ಕಾಂತಾರ 1 ಚಿತ್ರದಲ್ಲಿ ನಟಿಸಿದ್ದ ನಟರಾದ ರಾಕೇಶ್ ಪೂಜಾರಿ ಹಾಗೂ ಎಂ.ಎಫ್. ಕಪಿಲ್ ನಿಧನ ಹೊಂದಿದ್ದರು. ಅದಕ್ಕೂ ಮೊದಲು ಚಿತ್ರದ ಸಹ ಕಲಾವಿದರು ಪ್ರಯಾಣಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿತ್ತು. ಜತೆಗೆ ಈ ವಿಘ್ನಗಳ ನಿವಾರಣೆಗೆ ರಿಷಭ್ ಶೆಟ್ಟಿ ದೈವದ ಮೊರೆ ಹೋಗಿ, ವಿಶೇಷ ಪೂಜೆಯನ್ನೂ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆ ವಿಳಂಬವಾಗಬಹುದೆಂಬ ವದಂತಿ ಹರಡಿದ್ದು, ಸದ್ಯ ಅದಕ್ಕೀಗ ಚಿತ್ರತಂಡ ತೆರೆ ಎಳೆದಿದೆ.
