Categories
ಬೆಂಗಳೂರು

ಎಂ.ಎಲ್.ಸಿಯಾಗಿ ಮಲೆನಾಡ ನಾಯಕಿ ಡಾ.ಆರತಿ ಕೃಷ್ಣ

ಎಂ.ಎಲ್.ಸಿಯಾಗಿ ಮಲೆನಾಡ ನಾಯಕಿ ಡಾ.ಆರತಿ ಕೃಷ್ಣ
– ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಆರತಿ ಕೃಷ್ಣ ಅವರಿಗೆ ಮಹತ್ವದ ಹುದ್ದೆ
– ಮಲೆನಾಡು ಅಭಿವೃದ್ಧಿಗೆ ಮತ್ತಷ್ಟು ಕೆಲಸದ ಭರವಸೆ

NAMMUR EXPRESS NEWS
ಬೆಂಗಳೂರು/ ಶೃಂಗೇರಿ: ರಾಜ್ಯದ ಎಂಎಲ್ ಸಿ ನಾಲ್ಕು ಸ್ಥಾನಗಳ ನಾಮ ನಿರ್ದೇಶನದ ಪಟ್ಟಿ ಬಗ್ಗೆ ಮುಖ್ಯಮಂತ್ರಿಗಳ ಕಛೇರಿಯಿಂದ ರಾಜಭವನಕ್ಕೆ ನಾಮ ನಿರ್ದೇಶನದ ಪಟ್ಟಿ ರವಾನೆಯಾಗಿದ್ದು ಈ ನಾಲ್ಕು ಸ್ಥಾನದಲ್ಲಿ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಆರತಿ ಕೃಷ್ಣ ಅವರು ಕೂಡ ಆಯ್ಕೆಯಾಗಿದ್ದಾರೆ.
ಡಾ. ಆರತಿ ಕೃಷ್ಣ ಅವರು ಮೂಲತಃ ಶೃಂಗೇರಿಯವರಾಗಿದ್ದು, ಹುಟ್ಟಿದ್ದು ಉಡುಪಿಯಲ್ಲಿ. ಹಿರಿಯ ಕಾಂಗ್ರೆಸ್ ನಾಯಕರಾದ ಬೇಗಾನೆ ರಾಮಯ್ಯ ಅವರ ಪುತ್ರಿ ಇವರಾಗಿದ್ದಾರೆ. ಇತ್ತೀಚಿಗೆ ರಾಮಯ್ಯ ಅವರು ವಿಧಿವಶರಾಗಿದ್ದರು.
ಡಾ.ಆರತಿ ಕೃಷ್ಣ ಅವರು ಶಿಕ್ಷಣವನ್ನು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನಲ್ಲಿ ಪೂರೈಸಿದ್ದು, ಮೈಸೂರು ವಿಶ್ವವಿದ್ಯಾನಿಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಹಾಗೂ ವಾಶಿಂಗ್ಟನ್ ಜಾರ್ಜ್ ಮೇಸನ್ ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ನೀತಿ ಮತ್ತು ಅಂತರರಾಷ್ಟ್ರೀಯ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ಡಾ.ಆರತಿ ಕೃಷ್ಣ ಅವರು ದೀರ್ಘಕಾಲದಿಂದ ಕಾಂಗ್ರೆಸ್ ಹಾಗೂ ಅನಿವಾಸಿ ಭಾರತೀಯರೊಂದಿಗೆ ಸಂಬಂಧ ಹೊಂದಿದ್ದು, ವಾಶಿಂಗ್ಟನ್ ಡಿಸಿಯಲ್ಲಿ ಭಾರತೀಯ ರಾಯಭಾರ ಕಛೇರಿಯಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ, ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವಾಲಯದ ಭಾರತ ಅಭಿವೃದ್ಧಿ ಪ್ರತಿಷ್ಠಾನದಲ್ಲಿ ಸಲಹೆಗಾರರಾಗಿ, ಕರ್ನಾಟಕದ ಎನ್.ಆರ್.ಐ ವೇದಿಕೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ), ಎನ್.ಆರ್.ಐ ಸೆಲ್ ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕೆಲಸದ ಒತ್ತಡಗಳ ನಡುವೆಯೂ ಶೃಂಗೇರಿಯಲ್ಲಿ ಕೃಷ್ಣಾ ಫೌಂಡೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸಮಾಜಮುಖಿ ಕಾರ್ಯಗಳಲ್ಲೂ ನಿರತರಾಗಿದ್ದಾರೆ.ಇದೀಗ ಕರ್ನಾಟದ ಎಂಎಲ್ ಸಿ ಆಗಿ ನಾಮ ನಿರ್ದೇಶಿತರಾಗುವ ಮೂಲಕ ಮತ್ತೊಂದು ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ‘ಮಲೆನಾಡು ಇಂದಿರಾ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಆರತಿ ಕೃಷ್ಣ ಅವರು ಎಂಎಲ್ ಸಿ ಆಗಿರುವುದು ಮಲೆನಾಡಿಗರಲ್ಲಿ ಸಂತಸ ಉಂಟು ಮಾಡಿದೆ. ನಮ್ಮೂರ್ ಎಕ್ಸ್ ಪ್ರೆಸ್ ಕೂಡ ಅವರಿಗೆ ಶುಭಾಶಯ ಸಲ್ಲಿಸುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.