Categories
ಬೆಂಗಳೂರು

ಲೇಡೀಸ್ ಸೀಟ್‌ನಲ್ಲಿ ಕುಳಿತ ಗಂಡಸರಿಗೆ ಲಕ್ಷ ಲಕ್ಷ ದಂಡ!

ಲೇಡೀಸ್ ಸೀಟ್‌ನಲ್ಲಿ ಕುಳಿತ ಗಂಡಸರಿಗೆ ಲಕ್ಷ ಲಕ್ಷ ದಂಡ!
– 7 ಲಕ್ಷ ದಂಡ ಸಂಗ್ರಹ: ಸೀಟಲ್ಲಿ ಕೂರುವ ಮುನ್ನ ಹುಷಾರ್
– ಗಂಡಸರಿಗೆ ಸೀಟೆ ಸಿಗುತ್ತಿಲ್ಲ: ದೂರು!

NAMMUR EXPRESS NEWS
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನಿಖಾ ತಂಡಗಳು ಡಿಸೆಂಬರ್-2023 ರಲ್ಲಿ 16,785 ಟ್ರಿಪ್‌ ಗಳನ್ನು ತಪಾಸಣೆ ನಡೆಸಿದ್ದು, ತಪಾಸಣೆ ವೇಳೆ ಟಿಕೆಟ್ ರಹಿತ ಪ್ರಯಾಣಿಸುತ್ತಿದ್ದ 3,502 ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು 7,02,340 ರೂ.ದಂಡ ವಸೂಲಿ ಮಾಡಿದ್ದಾರೆ. ಇನ್ನು ಸಂಸ್ಥೆಯ ನಿರ್ವಾಹಕರ ವಿರುದ್ಧ 1,085 ಪ್ರಕರಣಗಳು ದಾಖಲಾಗಿವೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ 347 ಪುರುಷ ಪ್ರಯಾಣಿಕರಿಂದ ಒಟ್ಟು 34,700 ರೂ. ಅನ್ನು ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94 ರ ಪ್ರಕಾರ ದಂಡ ವಸೂಲಿ ಮಾಡಲಾಗಿದೆ. ಒಟ್ಟಾರೆಯಾಗಿ ಡಿಸೆಂಬರ್-2023 ರ ತಿಂಗಳಲ್ಲಿ 3849 ಪ್ರಯಾಣಿಕರಿಂದ ಒಟ್ಟು 7,37,040 ರೂ. ದಂಡ ವಸೂಲಿ ಮಾಡಲಾಗಿದೆ.

ಗಂಡಸರಿಗೆ ಸೀಟು ಸಿಗುತ್ತಿಲ್ಲ: ದೂರು

ಮಹಿಳೆಯರಿಗೆ ಸರ್ಕಾರಿ ಬಸ್ಸಲ್ಲಿ ಉಚಿತ ಪ್ರಯಾಣ ಘೋಷಣೆಯಾದ ಬಳಿಕ ಕೆ ಎಸ್ ಆರ್ ಟಿ ಸಿ ಬಸ್ಸಲ್ಲಿ ಪುರುಷರಿಗೆ ಸೀಟು ಸಿಗುತ್ತಿಲ್ಲ ಎಂಬ ದೂರು ಎಲ್ಲೆಡೆ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.