Categories
ಬೆಂಗಳೂರು

ಹಬ್ಬದ ಬಳಿಕ ಮತ್ತೆ ಹೊರಟ ಲಕ್ಷ ಲಕ್ಷ ಜನ!

ಹಬ್ಬದ ಬಳಿಕ ಮತ್ತೆ ಹೊರಟ ಲಕ್ಷ ಲಕ್ಷ ಜನ!
– ಬೆಂಗಳೂರಿಗೆ ಹೆಚ್ಚು ವಾಹನ: ಎಲ್ಲೆಲ್ಲೂ ಟ್ರಾಫಿಕ್
– ಬಸ್, ರೈಲು ವಾಹನಗಳ ಬುಕಿಂಗ್ ಜೋರು
– ಇಂದು ಕೆಲವೆಡೆ ವರ್ಷ ತೊಡಕು ಸಂಭ್ರಮ

NAMMUR EXPRESS NEWS
ಬೆಂಗಳೂರು: ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮುಗಿದಿದ್ದು, ಹಬ್ಬಕ್ಕೆಂದು ಮನೆಗೆ ಬಂದಿದ್ದ ಜನ ಮತ್ತೆ ಬೆಂಗಳೂರಿಗೆ ಹೊರಟಿದ್ದಾರೆ. ಹಬ್ಬದ ರಜೆ ಮುಗಿದ ಬಳಿಕ ಜನರು ಮತ್ತೆ ಬೆಂಗಳೂರಿನತ್ತ ಪಯಣ ಬೆಳೆಸುತ್ತಿರುವುದರಿಂದ ಬಸ್ ಗಳ ಟಿಕೆಟ್ ದರ ಕೂಡ ಹೆಚ್ಚಾಗಿದೆ. ಎಲ್ಲಾ ಕಡೆ ಜನರು ತಮ್ಮ ತಮ್ಮ ಊರುಗಳಿಂದ ಬೆಂಗಳೂರಿಗೆ ಹೋಗುತ್ತಿರುವುದರಿಂದ ವಾಹನಗಳ ಸಂಖ್ಯೆ ಕೂಡ ರಸ್ತೆಯಲ್ಲಿ ಹೆಚ್ಚಾಗಿದೆ. ಬೆಂಗಳೂರಿಗೆ ಹೋಗುವ ಸಲುವಾಗಿ ಮಂಗಳವಾರದಿಂದಲೇ ಬಸ್ ಬುಕಿಂಗ್ ಕೂಡ ಮಾಡಿದ್ದು, ಬೆಂಗಳೂರಿಗೆ ಹೆಚ್ಚು ವಾಹನಗಳು ಆಗಮಿಸುವ ಸಾಧ್ಯತೆ ಇದೆ. ಎಲ್ಲಾ ಬಸ್ ಹಾಗೂ ರೈಲುಗಳು ಜನರಿಂದ ತುಂಬಿ ತುಳುಕುತ್ತಿರುವಂತ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿವೆ.

ಸರ್ಕಾರಿ ಬಸ್ ರಶ್ ರಶ್!

ಕೆ.ಎಸ್.ಆರ್.ಟಿ.ಸಿ ಬಸ್ ಮಹಿಳೆಯರಿಗೆ ಉಚಿತ ಹಿನ್ನೆಲೆ ಎಲ್ಲಾ ಬಸ್ ತುಂಬಿ ತುಳುಕುತ್ತಿದ್ದವು. ಎಲ್ಲರೂ ಬೆಂಗಳೂರು ಸೇರಿ ವಿವಿಧ ತಮ್ಮ ಕೆಲಸದ ಸ್ಥಳಗಳಿಗೆ ತೆರಳುತ್ತಿದ್ದರಿಂದ ಎಲ್ಲ ಕಡೆ ಜನ ಕಂಡು ಬಂದರು. ಇನ್ನು ತಮ್ಮ ಸ್ವಂತ ವಾಹನದಲ್ಲಿ ಬಂದವರು ವಾಪಾಸ್ ಹೊರಟಿದ್ದರಿಂದ ಎಲ್ಲೆಡೆ ವಾಹನ ಕಂಡು ಬಂದವು.

ಇಂದು ವರ್ಷ ತೊಡಕು ಸಂಭ್ರಮ

ಈ ದೀಪಾವಳಿ ಎರಡು ದಿನ ಬಂದಿದೆ. ಸೋಮವಾರ ಹಾಗೂ ಮಂಗಳವಾರ ಎರಡು ದಿನ ಜನ ಆಚರಣೆ ಮಾಡಿದ್ದಾರೆ. ಹೀಗಾಗಿ ಇಂದು ಕೂಡ ಕೆಲವೆಡೆ ವರ್ಷ ತೊಡಕು ಸಂಭ್ರಮ ಮನೆ ಮಾಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.