ಇನ್ಮುಂದೆ ಬೆಂಗಳೂರು- ಮಂಗಳೂರು ನೋ ಟ್ರೈನ್?
– ರೈಲ್ವೇ ಪ್ರಯಾಣಿಕರಿಗೆ ಬೇಸರದ ಸಂಗತಿ!
– ನಾಲ್ಕು ತಿಂಗಳು ಕಾಮಗಾರಿಗಾಗಿ ಸಂಚಾರ ಮಾಡುತ್ತಿರುವ ರೈಲು ರದ್ದು
NAMMUR EXPRESS NEWS
ಬೆಂಗಳೂರು: ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಪ್ರಯಾಣಿಸುವ ರೈಲ್ವೇ ಪ್ರಯಾಣಿಕರಿಗೆ ಬೇಸರದ ಸುದ್ದಿಯೊಂದು ಕೇಳಿಬಂದಿದೆ. ಸಿಲಿಕಾನ್ ಸಿಟಿ ಯಶವಂತಪುರದಿಂದ ಮಂಗಳೂರು, ಕಾರವಾರ ನಡುವೆ ಸಂಚಾರ ಮಾಡುವ ಕೆಲವು ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ.
ಹಾಸನದ ಸಕಲೇಶಪುರ-ಸುಬ್ರಹ್ಮಣ್ಯ ಸಂಚಾರ ಮಾರ್ಗದಲ್ಲಿ ಕಾಮಗಾರಿ ನಡೆಯುವುದರಿಂದ ಈ ರೈಲು ಸಂಚಾರ ಸ್ಥಗಿತಗೊಂಡಿದೆ. ಜೂನ್ ಆರಂಭದಿಂದ ನವೆಂಬರ್ ನಾಲ್ಕು ತಿಂಗಳ ಕಾಲ ಕಾಮಗಾರಿ ನಡೆಯಲಿದೆ.
ಒಟ್ಟು ಆರು ತಿಂಗಳ ಕಾಲ ರೈಲು ಸಂಚಾರ ಇರುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಮೇ 31ರಿಂದ ನವೆಂಬರ್ ವರೆಗೆ ಪ್ರತೀ ಶನಿವಾರದಂದು ಬೆಂಗಳೂರಿನ ಯಶವಂತಪುರದಿಂದ ಮಂಗಳೂರು ಜಂಕ್ಷನ್ ಗೆ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಕೂಡ ರದ್ದಾಗಲಿದೆ.