ಇನ್ನು ಮುಂದೆ ಪ್ಲಾಸ್ಟಿಕ್ ರಹಿತ ಹಾಲಿನ ಪ್ಯಾಕೆಟ್!
– ಮೆಕ್ಕೆ ಜೋಳದಲ್ಲಿ ತಯಾರಾಗಲಿದೆ ನಂದಿನಿ ಪ್ಯಾಕೆಟ್
– ಏನಿದು ಪ್ಯಾಕೆಟ್..ಹೇಗಿರುತ್ತೆ…ಇಲ್ಲಿದೆ ವಿಶೇಷ ಸ್ಟೋರಿ
NAMMUR EXPRESS NEWS
ಬೆಂಗಳೂರು: ಕರ್ನಾಟಕದ ಹೆಮ್ಮೆಯಾದ ನಂದಿನಿ ಹಾಲು ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿಯಾಗಿ ಗ್ರಾಹಕರ ಕೈ ಸೇರಲಿದೆ. ಇದರಿಂದ ನಂದಿನಿ ಹಾಲಿನ ಮಹತ್ವ ಮತ್ತಷ್ಟು ಅಧಿಕವಾಗಲಿದೆ.
ಕನಕಪುರದ ಶಿವನಹಳ್ಳಿಯಲ್ಲಿ ಬಮೂಲ್ ಸಂಸ್ಥೆ ಪಾಲಿಥೀನ್ ಕವರ್ ಗೆ ಬದಲಾಗಿ, ಮೆಕ್ಕೆಜೋಳದಿಂದ ತಯಾರಿಸಿದ ಪ್ಯಾಕೆಟ್ ಗಳಲ್ಲಿ ನಂದಿನಿ ಹಾಲನ್ನು ವಿತರಿಸಲು ಚಿಂತನೆ ನಡೆಸಿದೆ. ದೇಶದಲ್ಲೇ ಮೊದಲ ಬಾರಿಗೆ ಈ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದರಿಂದ ಅನೇಕ ಪ್ರಯೋಜನಗಳಿವೆ. ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಅಷ್ಟೇ ಅಲ್ಲದೆ, ಈ ಪ್ಯಾಕೆಟ್ ಆರು ತಿಂಗಳೊಳಗಾಗಿ ಮಣ್ಣಿನಲ್ಲಿ ಕರಗುವುದರಿಂದ ಪರಿಸರಕ್ಕೂ ಪೂರಕವಾಗಿದೆ ಮತ್ತು ಇದನ್ನು ರೈತರು ತಮ್ಮ ಗದ್ದೆ ತೋಟಗಳಿಗೂ ಸಹ ಗೊಬ್ಬರವನ್ನಾಗಿ ಬಳಸಬಹುದಾಗಿದೆ.