Categories
ಬೆಂಗಳೂರು

ಈಗ ಚಾಕಲೇಟ್ ಗಾಂಜಾ ಮಾಫಿಯಾ!

ಈಗ ಚಾಕಲೇಟ್ ಗಾಂಜಾ ಮಾಫಿಯಾ!
– ಮಂಗಳೂರು ಬಳಿಕ ಬೆಂಗಳೂರಿನಲ್ಲೂ ಗಾಂಜಾ ಚಾಕಲೇಟ್ ದಂಧೆ
– 3 ಕ್ವಿಂಟಾಲ್ ಗಾಂಜಾ ಚಾಕಲೇಟ್ ಜಪ್ತಿ: ಎಷ್ಟು ಬೆಲೆ ಗೊತ್ತಾ?

NAMMUR EXPRESS NEWS
ಬೆಂಗಳೂರು: ಈಗ ಎಲ್ಲೆಡೆ ಗಾಂಜಾ ಮಾಫಿಯಾ ಯುವ ಸಮುದಾಯದ ಬದುಕನ್ನು ಬೀದಿಗೆ ತಳ್ಳುತ್ತಿದೆ. ಇನ್ನೊಂದೆಡೆ ಅಪರಾಧ ಕೃತ್ಯಗಳಿಗೆ ಪ್ರೇರಣೆ ನೀಡುತ್ತಿದೆ. ಈ ದಂಧೆ ವಿರುದ್ಧ ಇದೀಗ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಕರಾವಳಿ ಭಾಗದಲ್ಲಿ ಹೆಚ್ಚಿದ್ದ ಈ ಮಾಫಿಯಾದ ಬೇರು ಈಗ ರಾಜ್ಯದ ಉದ್ದಗಲಕ್ಕೂ ಹಬ್ಬಿದೆ. ಮಲೆನಾಡು, ಬೆಂಗಳೂರು, ಉತ್ತರ ಕರ್ನಾಟಕದಲ್ಲಿ ದಿನಕ್ಕೆ ಒಂದು ಪ್ರಕರಣ ಬಯಲಿಗೆ ಬರುತ್ತಿದೆ. ಈ ನಡುವೆ ಗಾಂಜಾ ಸಾಗಣೆ ಮಾರ್ಗ ಬದಲಿಸಿದ ಮಾಫಿಯಾ ಚಾಕಲೇಟ್ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದು ಮಂಗಳೂರಲ್ಲಿ ಇದರ ದೊಡ್ಡ ಜಾಲ ಸಿಕ್ಕಿ ಬಿದ್ದಿತ್ತು. ಇದೀಗ ರಾಜಧಾನಿ ಬೆಂಗಳೂರಲ್ಲಿ ಕೂಡ ದೊಡ್ಡ ಜಾಲ ಪತ್ತೆಯಾಗಿದೆ.
ಮಂಗಳೂರು ಬಳಿಕ ಬೆಂಗಳೂರಿನಲ್ಲೂ ಗಾಂಜಾ ಚಾಕಲೇಟ್ ದಂಧೆ ಮೇಲೆ ಪೊಲೀಸರು ದಾಳಿ ಮಾಡಿದ್ದು 3 ಕ್ವಿಂಟಾಲ್ ಗಾಂಜಾ ಚಾಕಲೇಟ್ ಜಪ್ತಿ ಮಾಡಿದ್ದಾರೆ. ಕೇವಲ 15ರಿಂದ ರೂ 20 ರೂ. ಗೆ ಚಾಕಲೆಟ್ ಮಾರಾಟ
ಮಾಡುತ್ತಿದ್ದು ಮಂಗಳೂರು, ಬೆಂಗೂರಿಗೆ ಒಬ್ಬರಿಂದಲೇ ಪೂರೈಕೆ ಆಗುತ್ತಿತ್ತು ಎಂಬ ಅಂಶ ಬಯಲಾಗಿದೆ.

ರಾಜಧಾನಿಯಲ್ಲಿ ಗಾಂಜಾ ಆಪರೇಷನ್

ರಾಜಧಾನಿಯಲ್ಲಿ ‘ ‘ಗಾಂಜಾ ಚಾಕಲೆಟ್’ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಸೀರೆ ವ್ಯಾಪಾರಿಯೊಬ್ಬನನ್ನು ಹಿಡಿದು ಮೂರು ಕ್ವಿಂಟಾಲ್ ಗಾಂಜಾವನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಜಪ್ತಿ ಮಾಡಿದ್ದಾರೆ. ಹಳೇಗುಡ್ಡಹಳ್ಳಿ ನಿವಾಸಿ ಶಮೀಮ್ ಅರ್‌ಬಂಧಿತನಾಗಿದ್ದು, ಆರೋಪಿಯಿಂದ 300 ಕೇಜಿ ಗಾಂಜಾ ಜಪ್ತಿ ಮಾಡಲಾಗಿದೆ. ಗಾಂಜಾ ಚಾಕಲೆಟ್ ಮಾರಾಟ ದಂಧೆಯಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ಪಿ.ಸುರೇಶ್ ನೇತೃತ್ವದ ತಂಡವು, ತನ್ನ ಗ್ರಾಹಕರಿಗೆ ಪೂರೈಸಲು ಬುಧವಾರ ಸಂಜೆ ಆಟೋದಲ್ಲಿ ಗಾಂಜಾ ಸಾಗಿಸುವಾಗ ಅಖರ್ ನನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೀರೆ ವ್ಯಾಪಾರಕ್ಕೆ ಬಂದು ಗಾಂಜಾ ದಂಧೆ!

ಉತ್ತರಪ್ರದೇಶ ರಾಜ್ಯದ ಕಾಶಿ ಮೂಲದ ಅಖರ್ ಕೆಲ ದಿನಗಳ ಹಿಂದೆ ಬನಾರಸ್ ಸೀರೆ ಮಾರಾಟದ ಸಲುವಾಗಿ ನಗರಕ್ಕೆ ಬಂದಿದ್ದ. ಹಳೇಗುಡ್ಡದಹಳ್ಳಿಯಲ್ಲಿ ನೆಲೆಸಿದ್ದ ಆತ, ಬೀದಿ ಬೀದಿ ತಿರುಗಿ ಸೀರೆ ಮಾರಾಟ ಮಾಡುತ್ತಿದ್ದ. ಆದರೆ ಸುಲಭವಾಗಿ ಹಣ ಸಂಪಾದನೆಗೆ ಅಗಲು ಗಾಂಜಾ ದಂಧೆ ಶುರು ಮಾಡಿದ್ದಾನೆ. ತನ್ನ ಸ್ನೇಹಿತನ ಮೂಲಕ ರೈಲಿನಲ್ಲಿ ಚಾಕೋಲೆಟ್ ಎಂದು ಹೇಳಿ ಗಾಂಜಾ ಮಿಶ್ರಿತ ಚಾಕೋಲೆಟ್ ತರಿಸಿಕೊಂಡು ನಗರದಲ್ಲಿ ಅದನ್ನು ಮಾರಾಟ ಮಾಡುತ್ತಿದ್ದ. ಈ ದಂಧೆ ಬಗ್ಗೆ ಆ‌ಎಂಸಿ ಯಾರ್ಡ್ ಠಾಣೆ ಇನ್‌ಸ್ಪೆಕ್ಟರ್ ಸುರೇಶ್ ಅವರಿಗೆ ಸುಳಿವು ಸಿಕ್ಕಿತು. ಪೊಲೀಸರು, ತನ್ನ ಮನೆಯಿಂದ ಆಟೋದಲ್ಲಿ ಬೇರೆಡೆಗೆ ಗಾಂಜಾ ಸಾಗಿಸಲು ತೆರಳುವಾಗ ಬಲೆಗೆ ಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೂ 15ರಿಂದ ರೂ 20ಕ್ಕೆ ಚಾಕೋಲೆಟ್ ಮಾರಾಟ:

ಗಾಂಜಾ ಮಿಶ್ರಿತ ಚಾಕೋಲೆಟ್ ಅನ್ನು ತಲಾ ಒಂದಕ್ಕೆ ರೂ 15 ರಿಂದ 20ಕ್ಕೆ ಅಖರ್ ಮಾರುತ್ತಿದ್ದ. ಕೆಲವು ಬಾರಿ ದುಬಾರಿ ಬೆಲೆಗೂ ಗಾಂಜಾ ಚಾಕೋಲೆಟ್ ಮಾರಾಟವಾಗುತ್ತಿದ್ದವು. ಬೇಡಿಕೆಗೆ ಅನುಗುಣವಾಗಿ ಚಾಕೋಲೆಟ್ ದರವನ್ನು ಅಖರ್ ನಿರ್ಧಾರ ಮಾಡುತ್ತಿದ್ದ. ಈ ದಂಧೆಯನ್ನು ಕಳೆದ ಹದಿನೈದು ದಿನಗಳಿಂದ ಆತ ನಡೆಸಿದ್ದು, ದೊಡ್ಡ ಮಟ್ಟದಲ್ಲಿ ಮಾರಾಟಕ್ಕೆ ಆತ ಸಜ್ಜಾಗಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲೇ ಗಾಂಜಾ ಚಾಕೋಲೆಟ್‌ಗಳು ತಯಾರಿಸಿ ದೇಶದ ವಿವಿಧೆಡೆಗೆ ದಂಧೆಕೋರರು ಹಂಚಿಕೆ ಮಾಡುತ್ತಿರುವ ಮಾಹಿತಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.