Categories
ಬೆಂಗಳೂರು

ವಾಹನ ಸವಾರರಿಗೆ ಪೆಟ್ರೋಲ್ ಡಿಸೇಲ್ ಶಾಕ್

ವಾಹನ ಸವಾರರಿಗೆ ಪೆಟ್ರೋಲ್ ಡಿಸೇಲ್ ಶಾಕ್
– ಡಿಸೇಲ್ ದರ 20 ರೂ. ಹೆಚ್ಚಳ..!
– ಕಚ್ಚಾ ತೈಲ ಬೆಲೆಯಲ್ಲಿ 3 ಡಾಲರ್ ಇಳಿಕೆ

NAMMUR EXPRESS NEWS
ಬೆಂಗಳೂರು : ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಬಾರಿ ಏರಿಕೆ ಕಂಡಿದೆ. ಅದ್ರಲ್ಲೂ ಡಿಸೇಲ್ ಬೆಲೆಯಲ್ಲಿ ಒಂದು ವಾರದ ಅವಧಿಯಲ್ಲಿ ಬರೋಬ್ಬರಿ 20 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ ಡಿಸೇಲ್ ವಾಹನ ಮಾಲೀಕರಿಗೆ ಶಾಕ್ ಕೊಟ್ಟಿದೆ. ಕೇವಲ ಒಂದೇ ವಾರದ ಅವಧಿಯಲ್ಲಿ ಡಿಸೇಲ್ ಬೆಲೆಯಲ್ಲಿ 20 ರೂಪಾಯಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪ್ರತೀ ಲೀಟರ್ ಡೀಸೆಲ್ ಬೆಲೆ ರೂ.122ಕ್ಕೆ ಏರಿಕೆ ಕಂಡಿದ್ದರೆ, ಮುಂಬೈನಲ್ಲಿ ರೂ.130 ಹಾಗೂ ಚೆನ್ನೈನಲ್ಲಿ ರೂ.129ಕ್ಕೆ ತಲುಪಿದೆ. ಆದರೆ ಡಿಸೇಲ್ ಬೆಲೆ ಏರಿಕೆ ಆಗಿರುವುದು ಸರಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ ಅಲ್ಲ ಬದಲಾಗಿ, ಖಾಸಗಿ ಶೆಲ್ ಬಂಕ್‌ಗಳಲ್ಲಿ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 90 ಡಾಲರ್ ಗೆ ಏರಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಖಾಸಗಿ ವಲಯದ ಶೆಲ್ ಬಂಕ್ ನಲ್ಲಿ ಡೀಸೆಲ್, ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ಖಾಸಗಿ ಸ್ವಾಮ್ಯದ ಶೇಲ್ ಬಂಕ್‌ಗಳಲ್ಲಿ ಪ್ರತೀ ಲೀಟರ್ ಡಿಸೇಲ್ ಬೆಲೆಯಲ್ಲಿ ಏರಿಕೆ ಆಗಿದೆ. ಆದರೆ ಸತತ 18 ತಿಂಗಳಿನಿಂದಲೂ ಸರಕಾರಿ ಬಂಕ್ ಗಳಲ್ಲಿ ಡಿಸೇಲ್ ದರ ಏರಿಕೆಯಾಗಿಲ್ಲ. ಹೀಗಾಗಿ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. ಬೆಂಗಳೂರಿನ ಸರಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ 87.99 ರೂ. ಇದೆ.

ಕಚ್ಚಾ ತೈಲ ಬೆಲೆಯಲ್ಲಿ 3 ಡಾಲರ್ ಇಳಿಕೆ:

ಒಂದೆಡೆ ಖಾಸಗಿ ಕಂಪೆನಿಗಳು ತೈಲ ಬೆಲೆಯಲ್ಲಿ ಬಾರಿ ಏರಿಕೆ ಮಾಡಿದ್ದರೂ ಕೂಡ ಜಾಗತಿಕ ಆರ್ಥಿಕ ಕುಸಿತದ ಭೀತಿಯ ನಡುವೆ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 3 ಡಾಲರ್‌ಗಿಂತ ಹೆಚ್ಚು ಕುಸಿದಿದೆ. ಈ ಮೂಲಕ ಅಕ್ಟೋಬರ್ 5 ರಂದು ಪ್ರತಿ ಬ್ಯಾರೆಲ್ ಬೆಲೆ 86 ಡಾಲರ್‌ಗೆ ಇಳಿದಿದೆ. ಡಿಸೆಂಬರ್ ವರೆಗೆ ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಸೌದಿ ಅರೇಬಿಯಾ ಮತ್ತು ರಷ್ಯಾ ಘೋಷಣೆ ಮಾಡಿದೆ. ಇದರ ನಡುವಲ್ಲೇ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ ಕಂಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.