Categories
ಬೆಂಗಳೂರು ರಾಜ್ಯ

60 ವರ್ಷದ ಮನೆ ಕೆಲಸದವಳ ಮೇಲೆ ಪ್ರಜ್ವಲ್ ರೇಪ್!

ಕರ್ನಾಟಕ ಟಾಪ್ ನ್ಯೂಸ್

60 ವರ್ಷದ ಮನೆ ಕೆಲಸದವಳ ಮೇಲೆ ಪ್ರಜ್ವಲ್ ರೇಪ್!
– ಕೃತ್ಯ ಎಸಗುವಾಗ ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್

ಬಳ್ಳಾರಿ ಜೈಲಿಗೆ ದರ್ಶನ್ ಪತ್ನಿ, ತಾಯಿ!
-ನಾಳೆ ಬೇಲ್ ಸಿಗುತ್ತಾ..?

ಕನ್ನಡತಿ ಸೀರಿಯಲ್ ನಟನ ಕಾರು ಅಪಘಾತ!
– ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿರಣ್ ರಾಜ್: ಅಪಾಯದಿಂದ ಪಾರು

– ಹಾಸನದಲ್ಲಿ 20 ಕಾಡಾನೆ ಹಿಂಡು: ಜನರಿಗೆ ಜೀವ ಭಯ!

NAMMUR EXPRESS NEWS
ಬೆಂಗಳೂರು: ಬಂಧಿತನಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು 60 ವರ್ಷ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವಿಶೇಷ ತನಿಖಾ ತಂಡ ಅಧಿಕಾರಿಗಳು ಎರಡನೇ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ಕರಣದ ತನಿಖ ನಡೆಸಿದ ಎಸ್‌ಐಟಿ 113 ಸಾಕ್ಷಿಗಳನ್ನು ಒಳಗೊಂಡ 1632 ಪುಟಗಳ ಚಾರ್ಜ್‌ಶೀಟ್ ಅನ್ನು ಸೋಮವಾರ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಹೊಳೆನರಸೀಪುರದಲ್ಲಿ 60 ವರ್ಷದ ಮನೆಕೆಲಸದಾಕೆಯ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಎಸ್‌ಐಟಿ ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ. ಸಂತ್ರಸ್ತೆಯನ್ನ ಹೆದರಿಸಿ ಹಲವು ಬಾರಿ ದೌರ್ಜನ್ಯ ಎಸಗಿರುವುದು ತನಿಖೆಯಲ್ಲಿ ಧೃಡವಾಗಿದೆ.
ಕೃತ್ಯ ಎಸಗುವಾಗ ಮೊಬೈಲ್ ಮೂಲಕ ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ ವಿಡಿಯೋ ಚಿತ್ರಿಕರಿಸಿದ್ದರು. ಸಂತ್ರಸ್ತೆ ಕೈಮುಗಿದು ನಿಮ್ಮ ತಾತ ಹಾಗೂ ತಂದೆಗೆ ಊಟ ಬಡಿಸಿದ್ದೇನೆ, ನನ್ನ ಬಿಟ್ಟು ಬಿಡು ಎಂದು ಸಂತ್ರಸ್ತೆ ಅಂಗಲಾಚಿದರೂ ಬಿಡದ ಪ್ರಜ್ವಲ್ ರೇವಣ್ಣ ದೌರ್ಜನ್ಯ ಎಸಗಿದ್ದಾರೆ ಎಂದು ಎಸ್‌ಐಟಿ ಉಲ್ಲೇಖಿಸಿದೆ.ಚಾರ್ಜ್‌ಶೀಟ್‌ನಲ್ಲಿ ಸಿಆರ್‌ಪಿಸಿ 164 ಅಡಿ ಸಂತ್ರಸ್ತೆ ಹಾಗೂ ಪ್ರಮುಖ ಸಾಕ್ಷಿಗಳ ಹೇಳಿಕೆ ದಾಖಲು ಮಾಡಲಾಗಿದೆ. 113 ಮಂದಿ ಸಾಕ್ಷಿದಾರರ ಹೇಳಿಕೆ, ಡಿಜಿಟಲ್ ಸಾಕ್ಷಿದಾರರ, ಎಫ್‌ಎಸ್‌ಎಲ್ ವರದಿ ಸಲ್ಲಿಕೆ ಮಾಡಲಾಗಿದೆ. ಪ್ರಜ್ವಲ್ ರೇವಣ್ಣ ಒಟ್ಟು ನಾಲ್ವರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಕನ್ನಡತಿ ಸೀರಿಯಲ್ ನಟನ ಕಾರು ಅಪಘಾತ!

ಕನ್ನಡತಿ ಸೀರಿಯಲ್ ಮೂಲಕವೇ ಮನೆಮತಾಗಿದ್ದ ನಟ ಕಿರಣ್ ರಾಜ್ ಅವರು ಸಂಚರಿಸುತ್ತಿದ್ದ ಕಾರು ಅಪಘಾತವಾಗಿದೆ. ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಕಿರಣ್ ರಾಜ್ ಅವರ ಎದೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿದ್ದು, ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನ್ನಡತಿ ಸೀರಿಯಲ್ ನ ಬಳಿಕ ಬೆಳ್ಳಿತೆರೆಗೆ ಕಾಲಿಟ್ಟಿದ್ದ ನಟ ಸದ್ಯ ರಾನಿ ಚಿತ್ರದ ಪ್ರಚಾರದಲ್ಲಿ ಬಿಜಿಯಾಗಿದ್ದರು. ಕಿರಣ್ ರಾಜ್ ‘ರಾನಿ’ ಚಿತ್ರದಲ್ಲಿ ನಟಿಸಿದ್ದು ಈ ಸಿನಿಮಾ ನಾಳೆ ರಿಲೀಸ್ ಆಗಲಿದೆ. ಸಿನಿ ಪರದೆಯಲ್ಲಿ ಹರ್ಷನನ್ನು ನೋಡಲು ಬಯಸಿದ ಅಭಿಮಾನಿಗಳಿಗೆ ಈ ಸುದ್ದಿಯು ಶಾಕ್ ಕೊಟ್ಟಿದೆ.
ು್ಟಯ್ಯನ ಪಾಳ್ದ ಸಿದ್ದೇಶ್ವರ ನಿರಾಶ್ರಿತರ ಕೇಂದ್ರಕ್ಕೆ ಕಿರಣ್ ರಾಜ್ ತೆರಳುತ್ತಿದ್ದರು. ಪ್ರತಿವಾರ ಈ ಕೇಂದ್ರಕ್ಕೆ ತೆರಳಿ ಅನಾಥ ಮಕಳಿಗೆ ಊಟ ನೀಡುತ್ತಿದ್ದರು. ಈ ಸಲುವಾಗಿ ನಿರಾಶ್ರಿತರ ಕೇಂದ್ರಕ್ಕೆ ತೆರಳುತ್ತಿದ್ದ ಅಪಘಾತ ಸಂಭವಿಸಿದೆ.
ಕಾರಿನಲ್ಲಿ ಕಿರಣ್ ರಾಜ್ ಜತೆ ರಾನಿ ಸಿನಿಮಾದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಕೂಡ ಇದ್ದರು. ಅವರು ಸೀಟ್ ಬೆಲ್ಟ್ ಧರಿಸಿದ್ದರಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದರೆ ಕಿರಣ್ ರಾಜ್ ಅವರ ಎದೆಯ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಅವರನ್ನು ಕೆಂಗೇರಿ ಹತ್ತಿರದ ಬೆಂಗಳೂರು ಹಾಸ್ಪಿಟಲ್ ನ ತೀವ್ರ ನಿಘಾ ಘಟಕದಲ್ಲಿ ಇರಿಸಲಾಗಿದೆ. ಗಿರೀಶ್ಅವರು ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ರಸ್ತೆಗೆ ಅಡ್ಡಲ ಬಂದ ಮುಂಗುಸಿಯನ್ನು ತಪ್ಪಿಸಲು ಹೋಗಿ, ಕಾರು ಅಪಘಾತಕ್ಕೀಡಾಗಿದೆ. ಗುದ್ದಿದ ರಭಸಕ್ಕೆ ಕಾರಿನಿಂದ ಚಕ್ರ ಬೇರ್ಪಟ್ಟಿದೆ.

ಹಾಸನದಲ್ಲಿ 20 ಕಾಡಾನೆ!

ಹಾಸನದಲ್ಲಿ ತಾವರಕೆರೆಯಲ್ಲಿ 20ಕ್ಕೂ ಹೆಚ್ಚು ಆನೆಗಳು ಕಾಣಿಸಿಕೊಂಡಿವೆ. ಆನೆ ದಾಳಿಗೆ ಶಾಶ್ವತ ಪರಿಹಾರಕ್ಕೆ ಪಟ್ಟು ಹಿಡಿದಿದ್ದಾರೆ. ಹಾಸನ ಜಿಲ್ಲೆಯಲ್ಲಿ ಮಾನವ ಮತ್ತು ಕಾಡಾನೆ ಸಂಘರ್ಷ ಮುಂದುವರಿದಿದ್ದು, ಅನೇಕರ ಬಲಿ ಕೂಡ ಆಗಿದೆ.

ಬಳ್ಳಾರಿ ಜೈಲಿಗೆ ದರ್ಶನ್ ಪತ್ನಿ, ತಾಯಿ!

ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು, ಬುಧವಾರ ಜೈಲಿಗೆ ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ಜೈಲಿಗೆ ಭೇಟಿ ನೀಡಲಿದ್ದಾರೆ. ನಾಳೆಗೆ ಕಸ್ಟಡಿ ಮುಗಿಯಲಿದ್ದು ಮತ್ತಷ್ಟು ಮುಂದಿನ ಮುಂದೆ ಹೋಗುವ ಸಾಧ್ಯತೆ ಇದೆ.
ಈ ಬಗ್ಗೆ ದರ್ಶನ್ ಕೂಡ ವಕೀಲರ ಜತೆ ಕೂಡ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.