ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮಳೆ ಕಿರಿಕಿರಿ!
– ದಿನವೂ ಮಳೆ… ಹಬ್ಬಕ್ಕೆ ಅಡ್ಡಿ… ಇನ್ನು ಎರಡು ದಿನ ಮಳೆ
– ಅಡಿಕೆ ಕೊಯ್ಲು , ಕೃಷಿ ಹೇಗೆ ಎಂಬ ತಲೆ ಬಿಸಿ
NAMMUR EXPRESS NEWS
ಈ ಭಾರೀ ದೀಪಾವಳಿ ಹಬ್ಬ ಸಂಭ್ರಮದಿಂದ ನಡೆಯಬೇಕಾಗಿತ್ತು ಆದರೆ ಭಾರೀ ಮಳೆಯಿಂದಾಗಿ ದೀಪಾವಳಿ ಹಬ್ಬಕ್ಕೆ ಸಾಕಷ್ಟು ರೀತಿಯ ತೊಂದರೆಯನ್ನು ಉಂಟುಮಾಡಿದೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕೂಡ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದರು. ಆದರೆ ಮಳೆಯಿಂದಾಗಿ ಎಲ್ಲಡೆ ಸಾಕಷ್ಟು ರೀತಿಯ ಅಡಚಣೆ ಉಂಟಾಗಿದೆ. ಬೆಳಗ್ಗೆಯಿಂದ ಸಂಜೆವರೆಗೂ ಕೂಡ ಸಾಕಷ್ಟು ಮಳೆ ಇರುವುದರಿಂದ ಹಬ್ಬಕ್ಕೆ ಅಡ್ಡಿಯನ್ನು ಉಂಟುಮಾಡಿದೆ. ಈ ಬಾರಿ ಚಳಿಗಾಲ ಆರಂಭವಾಗಬೇಕಾಗಿತ್ತು ಆದರೆ ಮಳೆಗಾಲವೇ ಮುಂದುವರಿಯುತ್ತಾ ಇದೆ. ಇದರಿಂದಾಗಿ ದೀಪಾವಳಿ ಹಬ್ಬವನ್ನು ಎಲ್ಲರೂ ಸಂಭ್ರಮದಿಂದ ಆಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿತ್ತು. ಮುಂದಿನ ದಿನಗಳಲ್ಲಿ ಕೂಡ ಬಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
– ರೈತರಿಗೆ ಅಡಿಕೆ ಕೊಯ್ಲು ಮಾಡೋದು ಹೇಗೆ ಎಂಬ ತಲೆ ಬಿಸಿ
ಈ ಬಾರಿ ಹಿಂಗಾರು ಮಳೆ ಆರಂಭವಾಗಿರುವುದರಿಂದ ರೈತರಿಗೆ ಸಾಕಷ್ಟು ರೀತಿಯ ತೊಂದರೆ ಎದುರಾಗುತ್ತಾ ಇದೆ. ಇದರಿಂದಾಗಿ ರೈತರಿಗೆ ಅಡಿಕೆ ಕೊಯ್ಲು ಭತ್ತದ ಕಟಾವು ಮಾಡಲು ಸಾಕಷ್ಟು ರೀತಿಯ ಸಮಸ್ಯೆಗಳನ್ನು ರೈತರು ಎದುರಿಸಬೇಕಾಗುತ್ತದೆ. ತಾವು ಬೆಳೆದಂಥ ಬೆಳೆಯನ್ನು ಉಳಿಸಿಕೊಳ್ಳಲು ಸಾಕಷ್ಟು ರೀತಿಯ ಹರಸಾಹಸವನ್ನು ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ರೈತರಿಗೆ ಈ ಭಾರೀ ಸಂಕಷ್ಟ ಎದುರಾಗುತ್ತದೆ ಏಕೆಂದರೆ ರೈತರು ತಾವು ಬೆಳೆದಂಥ ಬೆಳೆಯನ್ನು ಉಳಿಸಿಕೊಳ್ಳುವಂತ ಪರಿಸ್ಥಿತಿ ರೈತರಿಗೆ ಸಾಕಷ್ಟು ರೀತಿಯ ಸಂಕಷ್ಟವನ್ನೇ ಉಂಟು ಮಾಡುತ್ತದೆ. ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾಗಿ ರೈತರು ಅಡಿಕೆ ಕೊಯ್ಲು ಭತ್ತದ ಕಟಾವನ್ನು ಮಾಡಲಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಾಕಷ್ಟು ರೀತಿಯ ತೊಂದರೆ ರೈತರ ಜೊತೆಗೆ ಜನಸಾಮಾನ್ಯರು ಕೂಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕರಾವಳಿ, ಬಯಲು ಸೀಮೆ, ಉತ್ತರ ಕರ್ನಾಟಕ ಸೇರಿ ಎಲ್ಲೆಡೆ ಮಳೆ ಜನರ ಬದುಕನ್ನು ತೆಗೆಯುವ ಸಾಧ್ಯತೆ ಇದೆ