ಆರ್.ಎಂ.ಎಂ ಅಭಿಮಾನಿಗಳ ಸಂತಸ: ದೇವರ ಹರಕೆ ಫಲಿಸಿತು..!
– ಡಾ.ಆರ್ ಎಂ ಗೆ 83 ದಿನಗಳ ಬಳಿಕ ಜಾಮೀನು ಮಂಜೂರು
– ಮಂಜುನಾಥ ಗೌಡ ಬೆನ್ನಿಗೆ ನಿಂತ ಶ್ರೀಕಾಂತ ಮತ್ತು ಆಪ್ತರು
NAMMUR EXPRESS NEWS
ಶಿವಮೊಗ್ಗ/ ಬೆಂಗಳೂರು: ಡಿಸಿಸಿ ಬ್ಯಾಂಕ್ ಅವ್ಯವಹಾರದ ಕೇಸಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ.ಆರ್.ಎಂ ಮಂಜುನಾಥ ಗೌಡರಿಗೆ 83 ದಿನಗಳ ಬಳಿಕ ಬೇಲ್ ಸಿಕ್ಕಿದ್ದು, ಇದೀಗ ಅವರು ಬೆಂಗಳೂರಲ್ಲಿ ತಮ್ಮ ಕಣ್ಣಿನ ಚಿಕಿತ್ಸೆಗಾಗಿ ವಿಶ್ರಾಂತಿಯಲ್ಲಿದ್ದಾರೆ.
ಜಾಮೀನು ಮಂಜೂರಾದ ಸುದ್ದಿ ಕೇಳಿ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಕಾಂಗ್ರೆಸ್ ನಾಯಕ ಶ್ರೀಕಾಂತ್ ಸೇರಿ ಅವರ ಆಪ್ತರು ನಾಗಮಂಗಲ ಸೇರಿ ಅನೇಕ ಕಡೆ 2-3 ದಿನದ ಹಿಂದಷ್ಟೇ ವಿಶೇಷ ಪೂಜೆ ಮಾಡಿಸಿದ್ದು ಇದೀಗ ದೇವರು ಫಲ ನೀಡಿದ್ದಾನೆ.
ಕಾನೂನು ಸಮರದಲ್ಲಿ ಶೀಘ್ರ ನ್ಯಾಯಸಿಗಲಿ. ಈ ಆರೋಪದಿಂದ ಶೀಘ್ರವಾಗಿ ನಮ್ಮ ನಾಯಕರು ಬಿಡುಗಡೆಯಾಗಲಿ ಎಂದು ಮಂಜುನಾಥ್ ಗೌಡರ ಶಿಷ್ಯಂದಿರು ಕಾಂಗ್ರೆಸ್ ನಾಯಕ ಶ್ರೀಕಾಂತ್ ಇವರ ನೇತೃತ್ವದಲ್ಲಿ ನಾಗಮಂಗಲ ಕಾಲ ಭೈರವನಿಗೆ ವಿಶೇಷ ಪ್ರಾರ್ಥನೆ ಮಾಡಿದ್ದರು.ಮಂಜುನಾಥ ಗೌಡರ ಶಿಷ್ಯರಾದ ನಾಗರಾಜ್ ಕುರುವಳ್ಳಿ, ಕಾರ್ತಿಕ್ ಸೇರಿ ಪ್ರಮುಖರು ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇವರದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು. ಮಂಜುನಾಥ ಗೌಡರು ಬೆಂಗಳೂರಲ್ಲಿ ವಿಚಾರಣೆಗೆ ಹಾಜರಾದ ದಿನದಿಂದ ಇಲ್ಲಿವರೆಗೂ ಅವರ ಆಪ್ತರು ಅವರ ಜತೆಯಲ್ಲೇ ಇದ್ದದ್ದು ವಿಶೇಷ. ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಇಡಿ ದಾಳಿ ಬಳಿಕ ಗೌಡರು ಹೊರ ಬರುವವರೆಗೂ ತಮ್ಮ ಸೇವೆ ಸಲ್ಲಿಸಿದ್ದು ಸ್ನೇಹಿತರ ಬಾಂಧವ್ಯಕ್ಕೆ ಸಾಕ್ಷಿಯಾಯಿತು.
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಕೂಡ ಒಂದು ಸಾಮಾನ್ಯ ಪ್ರಕರಣ. 20 ವರ್ಷದ ಹಿಂದೆ ಶಿವಮೊಗ್ಗ ಹಾಗೂ ಇತರ ಕಡೆ ಖರೀದಿ ಮಾಡಿದ ಜಾಗದ ಬೆಲೆ 10 ಪಟ್ಟು ಹೆಚ್ಚಾಗಿದೆ. ಅದರೆ ಇಡಿ ಪ್ರಕರಣ ದಾಖಲು ಮಾಡಿದೆ ಎಂದು ಅವರ ಅಭಿಮಾನಿಗಳು ಹೇಳಿದ್ದಾರೆ.
