ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ದ.ಕ ಜಿಲ್ಲೆ ಪ್ರಥಮ, ಕಲಬುರಗಿ ಕೊನೆ ಸ್ಥಾನ!
– ಈ ಬಾರಿಯೂ ಬಾಲಕಿಯರೇ ಮೇಲುಗೈ
– ವಿದ್ಯಾರ್ಥಿಗಳು ರಿಸಲ್ಟ್ ಪಡೆಯೋದು ಹೇಗೆ?
– ಇಲ್ಲಿದೆ ಸಂಪೂರ್ಣ ಮಾಹಿತಿ
NAMMUR EXPRESS NEWS
ಬೆಂಗಳೂರು: 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇ.66.1 ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ 8% ಫಲಿತಾಂಶ ಹೆಚ್ಚಳವಾಗಿದ್ದು, ಬಾಲಕಿಯರೇ ಈ ಬಾರಿ ಮೇಲುಗೈ ಸಾಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಶೇ.66.14 ರಷ್ಟು ಫಲಿತಾಂಶ ಬಂದಿದೆ. 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 625 ಕ್ಕೆ 625 ಅಂಕಗಳನ್ನು ಇವರು ಪಡೆದಿದ್ದಾರೆ.
12:30ರಿಂದ karresults.nic.in ಫಲಿತಾಂಶ ವೀಕ್ಷಿಸಬಹುದಾಗಿದೆ.
ವಿದ್ಯಾರ್ಥಿಗಳು ಕರ್ನಾಟಕ SSLC ಪರೀಕ್ಷೆ-1ರ ಫಲಿತಾಂಶ ಈ ರೀತಿ ಚೆಕ್ ಮಾಡಿ
https://karresults.nic.in ಗೆ ಭೇಟಿ ನೀಡಿ.
ತೆರೆದ ವೆಬ್ ಪೇಜಿನಲ್ಲಿ ‘SSLC 2024-25 Exam-ination -1 Result Sheet’ ಎಂಬುವುದಕ್ಕೆ ಕ್ಲಿಕ್ ಮಾಡಿ. ವೆಬ್ ಪೇಜ್ ಓಪನ್ ಆಗುತ್ತದೆ.
ಇಲ್ಲಿ ರಿಜಿಸ್ಟರ್ ನಂಬರ್ ನಮೂದಿಸಿ. ‘View’ ಎಂದಿರುವಲ್ಲಿ ಕ್ಲಿಕ್ ಮಾಡಿ. ಫಲಿತಾಂಶ ಪ್ರದರ್ಶಿತವಾಗುತ್ತದೆ. ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ