ಕಾಟೇರ ಹವಾ ಜೋರು!
– 196 ಥಿಯೇಟರ್, 63 ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲಿ ಸಿನಿಮಾ
– ದರ್ಶನ್ ನಟನೆಗೆ ಜನ ಫಿದಾ: ಎಲ್ಲೆಡೆ ಫುಲ್ ಫುಲ್
– ಯಶ್ ಫ್ಯಾನ್ಸ್ ದುರಂತ: ಪರಿಹಾರ ಕೊಟ್ಟ ಯಶ್!
NAMMUR EXPRESS NEWS
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. 2023ರ ಡಿಸೆಂಬರ್‌ನಲ್ಲಿ ರಿಲೀಸ್ ಆದರೂ ಜನವರಿಯಲ್ಲಿ ಭಾರೀ ಕಲೆಕ್ಷನ್ ಮಾಡಿದೆ. ಇನ್ನು ತನ್ನ ಓಟ ಕಾಯ್ದುಕೊಂಡಿದೆ. ಸಿನಿಮಾ ಹೆಚ್ಚು ಕಡಿಮೆ ಇದೀಗ 36 ದಿನಗಳನ್ನ ಕಳೆದಿದೆ. ಅಂದ್ರೆ 6 ವಾರಕ್ಕೆ ಕಾಲಿಟ್ಟಿರೋ ಕಾಟೇರ ಸಿನಿಮಾ, ಸಿಂಗಲ್ ಥೀಯೇಟರ್ ನಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಲ್ಟಿಪ್ಲೆಕ್ಸ್ ಥಿಯೇಟರ್ ನಲ್ಲೂ ಓಡುತ್ತಿದೆ. 100 ಕೋಟಿ ಕ್ಲಬ್ ಸೇರಿ ಎರಡನೂರು ಕೋಟಿ ದಾಟಿ ದಾಖಲೆ ಮಾಡಿದೆ. ಟಿಕೆಟ್ ವಿಚಾರದಲ್ಲಿ ಹೊಸ ದಾಖಲೆಗಳನ್ನೆ ಮಾಡಿದೆ. ದರ್ಶನ್ ಚಿತ್ರ ಜೀವನದಲ್ಲಿ ಕಾಟೇರ ಸಿನಿಮಾ ವಿಶೇಷವಾಗಿಯೇ ಇದೆ. ಈ ಚಿತ್ರ ಓಟಕ್ಕೆ ಪರ ಭಾಷೆಯ ಸಿನಿಮಾಗಳು ಪಕ್ಕಕ್ಕೆ ಸರಿದಿದ್ದವು. ಕರ್ನಾಟಕದಲ್ಲಿ ಅಷ್ಟು ಕ್ರೇಜ್ ಹುಟ್ಟುಹಾಕಿದ್ದ ಕನ್ನಡದ ಕಾಟೇರ ಸಾಕಷ್ಟು ಗಳಿಕೆ ಮಾಡಿದೆ. ದಾಖಲೆ ಮೇಲೆ ದಾಖಲೆಯನ್ನೂಮಾಡಿದೆ. ಈ ಮೂಲಕ ಕಾಟೇರ ಇದೀಗ 6 ನೇ ವಾರಕ್ಕೆ ಕಾಲಿಟ್ಟಿದೆ.
ಯಶ್ ಫ್ಯಾನ್ಸ್ ದುರಂತ: ಗಾಯಾಳುಗಳಿಗೆ ಒಂದು ಲಕ್ಷ ರೂ. ಪರಿಹಾರ ಕೊಟ್ಟ ಯಶ್!
ಗದಗ: ಜಿಲ್ಲೆಯ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದ ಕೆಲವು ಯುವಕರು ಸೇರಿ ಬೃಹತ್ ಗಾತ್ರದ ಕಟೌಟ್ ರೂಪಿಸಿ ಅದನ್ನು ಕಟ್ಟುವ ಹಂತದಲ್ಲಿ ಅದು ವಿದ್ಯುತ್ ತಂತಿಗೆ ಸ್ಪರ್ಶಿಸಿತ್ತು. ಇದರಿಂದ ಹನುಮಂತ ಹರಿಜನ (21), ಮುರಳಿ ನಡುವಿನಮನಿ (20) ಮತ್ತು ನವೀನ್ ಗಾಜಿ (19) ಎಂಬ ಮೂವರು ಯುವಕರು ಮೃತಪಟ್ಟರೆ, ಮಂಜುನಾಥ್ ಹರಿಜನ, ದೀಪಕ್ ಹರಿಜನ, ಪ್ರಕಾಶ್ ಮ್ಯಾಗೇರಿ ಎಂಬುವವರು ಗಾಯಗೊಂಡಿದ್ದರು. ಯಶ್ ಆಪ್ತರು ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ತೆರಳಿ ಮೃತ ಯುವಕನ ಕುಟುಂಬಕ್ಕೆ ಪರಿಹಾರದ ಚೆಕ್ ನೀಡಿದ್ದರು.
ಅದೇ ವೇಳೆ ಗಾಯಾಳುಗಳ ಬ್ಯಾಂಕ್ ಮಾಹಿತಿ ಪಡೆದು ಪರಿಹಾರದ ಭರವಸೆ ನೀಡಿ ಹೋಗಿದ್ದರು. ಇದೀಗ ನಾಲ್ಕು ಜನ ಗಾಯಾಳುಗಳ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ. ಬ್ಯಾಂಕ್ ಖಾತೆಗೆ ನೇರವಾಗಿ ಹಾಕಿದ್ದಾರೆ. ಯಶ್ ಅವರು ಮೃತಪಟ್ಟ ಮೂವರು ಅಭಿಮಾನಿಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಅಭಿಮಾನಿಗಳು ಹುಟ್ಟು ಹಬ್ಬದ ಸಂದರ್ಭದಲ್ಲಿ ತಮ್ಮ ಅಭಿಮಾನವನ್ನು ಬ್ಯಾನರ್, ಕಟೌಟ್‌ಗಳ ಮೂಲಕ ತೋರಿಸುವ ಬದಲು ಒಳ್ಳೆಯ ಕೆಲಸದ ಮೂಲಕ, ಒಳ್ಳೆಯ ಬದುಕಿನ ಮೂಲಕ ತೋರಿಸಬೇಕು ಎಂದು ಯಶ್ ಈ ಹಿಂದೆ ಮನವಿ ಮಾಡಿದ್ದರು.