ರಾಜಧಾನಿಗೆ ನುಗ್ಗಿದ ಚಿರತೆ ಸೆರೆ!
– ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಾರ್ಯಚರಣೆ
– ದರ್ಶನ್ ನಾಯಿ ಅವಾಂತರ!
– ದರ್ಶನ್ ಮೇಲೆ ಅವರ ನಾಯಿ ಕಚ್ಚಿದ ಕೇಸ್!
NAMMUR EXPRESS NEWS
ಬೆಂಗಳೂರು: ಬೆಂಗಳೂರಿನ ರಾಜಧಾನಿಯಲ್ಲಿ ಚಿರತೆ ಕಂಡಿದ್ದು ಅಪಾರ್ಟ್ಮೆಂಟ್ ಮೇಲೆ ಚಿರತೆ ಪತ್ತೆಯಾಗಿದೆ. ಕಳೆದ ಎರಡು ದಿನಗಳಿಂದ ಚಿರತೆ ರಾಜಧಾನಿ ಜನರ ನಿದ್ದೆಗೆಡಿಸಿದ್ದು ಇದೀಗ ಚಿರತೆ ಸೆರೆ ಹಿಡಿಯಲಾಗಿದೆ. ಬೆಂಗಳೂರಿನ ಕೂಡ್ಲು ಗೇಟ್ ಬಳಿಯಲ್ಲಿ ಚಿರತೆ ಕಾಣಿಸಿಕೊಂಡಿತ್ತು, ಆದರೆ ಇಂದು ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಮಾಹಿತಿ ಬಂದಿತ್ತು.
ದರ್ಶನ್ ಮೇಲೆ ಅವರ ನಾಯಿ ಕಚ್ಚಿದ ಕೇಸ್!
ಆಸ್ಪತ್ರೆಗೆ ಬಂದಿದ್ದ ವಕೀಲೆಗೆ ನಟ ದರ್ಶನ್ ಅವರ ಸಾಕು ನಾಯಿ ಕಚ್ಚಿರುವ ಬಗ್ಗೆ ಇದೀಗ ದೂರು ದಾಖಲಾಗಿದೆ. ಮಹಿಳೆಯೊಬ್ಬಳು ಆಸ್ಪತ್ರೆಗೆ ಬಂದಿದ್ದಾಗ ದರ್ಶನ್ ಅವರು ಸಾಕಿದ್ದ ನಾಯಿ ಕಾರಿಂದ ಇಳಿದು ಕಚ್ಚಿದೆ. ಈ ಬಗ್ಗೆ ದರ್ಶನ್ ವಿರುದ್ಧ ದೂರು ದಾಖಲಿಸಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯಲ್ಲಿ ಸಾಕಿದ್ದ ನಾಯಿ, ಮಹಿಳೆಯೊಬ್ಬರಿಗೆ ಕಚ್ಚಿದೆ. ಈ ಹಿನ್ನೆಲೆಯಲ್ಲಿ ನಾಯಿಯಿಂದ ಕಚ್ಚಿಸಿಕೊಂಡು ಗಾಯಗಳಾದ ಮಹಿಳೆ ಆರ್‌ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಂದಹಾಗೆ, ಆರ್‌ಆರ್ ನಗರದಲ್ಲಿನ ಸ್ಪರ್ಶ ಆಸ್ಪತ್ರೆಗೆ ಕಾರ್ಯಕ್ರಮವೊಂದರ ನಿಮಿತ್ತ ಬಂದಿದ್ದಾಗ, ದರ್ಶನ್ ಅವರ ಮನೆ ಬಳಿಯಲ್ಲಿಯೇ ವೈದ್ಯೆ ಅಮಿತಾ ತಮ್ಮ ಕಾರನ್ನು ನಿಲ್ಲಿಸಿದ್ದರು. ತಮ್ಮ ಕೆಲಸ ಮುಗಿದ ಬಳಿಕ ಕಾರ್ ಏರಿ ಹೋಗಬೇಕು ಎನ್ನುವಷ್ಟರಲ್ಲಿ ಕಾರ್ ಬಳಿ ದರ್ಶನ್ ಅವರಿಗೆ ಸೇರಿದ ನಾಯಿಗಳಿದ್ದವು. ಅವುಗಳನ್ನು ಕರೆದೊಯ್ಯಿರಿ ಎಂದು ದರ್ಶನ್ ಮನೆ ಕೆಲಸದವರಿಗೆ ಹೇಳಿದ್ದಾರೆ.
ಹೀಗಿರುವಾಗಲೇ ಮನೆಯ ಕೆಲಸಗಾರರಿಗೂ ಮತ್ತು ಮಹಿಳೆ ನಡುವೆ ಮಾತಿಗೆ ಮಾತು ಜೋರಾಗಿದೆ. ನೀವು ಅಲ್ಲಿ ಕಾರ್ ನಿಲ್ಲಿಸುವಂತಿಲ್ಲ ಎಂದೂ ಕೆಲಸಗಾರರು ಮಹಿಳೆಗೆ ತಿಳಿಸಿದ್ದಾರೆ. ಹೀಗಿರುವಾಗಲೇ ಅಲ್ಲೇ ಇದ್ದ ನಾಯಿ ಮಹಿಳೆ ಮೇಲೆ ದಾಳಿ ಮಾಡಿ, ಗಾಯಗೊಳಿಸಿವೆ. ಇದರಿಂದ ರೋಸಿಹೋದ ಮಹಿಳೆ ನೇರವಾಗಿ ಆರ್‌ಆರ್ ನಗರ ಪೊಲೀಸ್ ಠಾಣೆಗೆ ತೆರಳಿ ದರ್ಶನ್ ಮನೆಯ ಕೆಲಸಗಾರರು ಮತ್ತು ದರ್ಶನ್ ಮೇಲೆ ದೂರು ನೀಡಿದ್ದಾರೆ. ದೂರು ಪಡೆದ ಪೊಲೀಸರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ಘಟನೆ ನಡೆದ ವೇಳೆ ದರ್ಶನ್ ಮನೆಯಲ್ಲಿ ಇರಲಿಲ್ಲ ಎಂಬುದು ತಿಳಿದುಬಂದಿದೆ.