ಆದಾಯ ತೆರಿಗೆ ಪಾವತಿಸಲು ಈ ತಿಂಗಳು ಕೊನೆ!
– ಐಟಿ ಮಾಡದಿದ್ರೆ ಲೋನ್ ಸಿಗಲ್ಲ.. ಐಟಿ ಕಟ್ಟಿದ್ರೆ ಬಿಪಿಎಲ್ ಕಾರ್ಡ್ ಡಮಾರ್
– ಸರ್ಕಾರಗಳ ತೊಘಲಕ್ ನೀತಿಗೆ ಜನರ ಪರದಾಟ
– ದಿನೇ ದಿನೇ ಬದುಕು ಕಷ್ಟ ಕಷ್ಟ: ಹೇಳೋದು ಯಾರಿಗೆ..?
ನವದೆಹಲಿ: ಆದಾಯ ತೆರಿಗೆ ಇಲಾಖೆಯು 2024 -25 ನೇ ಸಾಲಿನ ತೆರಿಗೆ ಪಾವತಿಯ ಅವಧಿಯನ್ನು ಮತ್ತೆ ಒಂದು ತಿಂಗಳವರೆಗೆ ವಿಸ್ತರಿಸಿದೆ. ದೇಶದ ವಿವಿಧ ಭಾಗಗಳಲ್ಲಿ ಆರ್ಥಿಕ ಸಮಸ್ಯೆ ಮತ್ತು ಪ್ರಾಕೃತಿಕ ವಿಕೋಪಗಳಿಂದ ಅಡೆಚಣೆಯುಂಟಾಗಿದ್ದು, ತೆರಿಗೆದಾರರಿಗೆ ಇಲಾಖೆಯು ನೀಡಿದ ಸಮಯಕ್ಕೆ ಅನುಗುಣವಾಗಿ, ತೆರಿಗೆಯನ್ನು ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪರಿಸ್ಥಿತಿಯನ್ನು ಅರಿತುಕೊಂಡ ತೆರಿಗೆ ಇಲಾಖೆಯು ಈ ನಿರ್ಧಾರವನ್ನು ಕೈಗೊಂಡಿದೆ. ಅಲ್ಲದೆ ತೆರಿಗೆ ಪಾವತಿಗೆ ಸಂಬಂಧಿಸಿದಂತ ಕೆಲವು ವಿಚಾರಗಳು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ಎಲ್ಲಾ ಕಾರಣಗಳಿಂದಾಗಿ ತೆರಿಗೆ ಕಡತವನ್ನು ಮರುಪಾವತಿಸಲು ಅಕ್ಟೋಬರ್ 31ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ಐಟಿ ಮಾಡದಿದ್ರೆ ಲೋನ್ ಸಿಗಲ್ಲ.. ಐಟಿ ಕಟ್ಟಿದ್ರೆ ಬಿಪಿಎಲ್ ಕಾರ್ಡ್ ಡಮಾರ್
ಇತ್ತೀಚಿಗೆ ಇಲ್ಲೇ ಸಾಲ ತಗೊಳ್ಳಬೇಕಾದ್ರೆ ಐಟಿ ಕಟ್ಟಿರಬೇಕು ಎಂಬ ನಿಯಮ ಬ್ಯಾಂಕ್ ಮಾಡಿವೆ. ದಾಖಲಾತಿ ಪಟ್ಟಿಯಲ್ಲಿ ಅದನ್ನು ಕೇಳುತ್ತಿವೆ. ಆದರೆ ಐಟಿ ಕಟ್ಟಿ ಫೈಲ್ ಮಾಡಿದರೆ ಬಿ ಪಿ ಎಲ್ ಕಾರ್ಡ್ ರದ್ದುಗೊಳಿಸಲಾಗುತ್ತಿದೆ. ಸರ್ಕಾರಗಳ ತುಘಲಕ್ ನಿಯಮ ಇದೀಗ ಜನರ ಬದುಕನ್ನು ತೆಗೆಯುತ್ತಿದೆ.
ದಿನೇ ದಿನೇ ಬದುಕು ಕಷ್ಟ ಕಷ್ಟ: ಹೇಳೋದು ಯಾರಿಗೆ..?
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನಿಯಮಗಳಿಂದ ಜನರ ಬದುಕು ದಿನೇದಿನೇ ದುಸ್ತರ ಆಗುತ್ತಿದೆ. ಯಾರನ್ನು ಕೇಳೋದು ಯಾರಿಗೆ ಹೇಳೋದು ಎಂಬುದು ಸಾಮಾನ್ಯಜನರ ಪ್ರಶ್ನೆ ಆಗಿದೆ.