Categories
ಬೆಂಗಳೂರು

ಸಹ್ಯಾದ್ರಿ ಸಂಘದಿಂದ ಅಗಲಿದ ಗಣ್ಯರಿಗೆ ನಮನ

ಸಹ್ಯಾದ್ರಿ ಸಂಘದಿಂದ ಅಗಲಿದ ಗಣ್ಯರಿಗೆ ನಮನ
– ಡಿ.16ರಂದು ಬಿ. ಎಸ್.ವಿಶ್ವನಾಥ್, ಡಿಬಿಸಿ ನುಡಿ ನಮನ
– ಬೆಂಗಳೂರಲ್ಲಿ ಕಾರ್ಯಕ್ರಮ: ಸಮಸ್ತ ಜನತೆಗೆ ಆಹ್ವಾನ

NAMMUR EXPRESS NEWS
ಬೆಂಗಳೂರು: ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆ ಸಹ್ಯಾದ್ರಿ ಸಂಘದಿಂದ ಇತ್ತೀಚಿಗೆ ಅಗಲಿದ ಮಲೆನಾಡಿನ ಸಾಧಕರಾದ ಸಹಕಾರಿ ನಾಯಕ ಡಾ. ಬಿ. ಎಸ್ ವಿಶ್ವನಾಥ್ ಹಾಗೂ ರಾಜಕೀಯ ನಾಯಕ ಡಿ. ಬಿ. ಚಂದ್ರೆಗೌಡ ಅವರಿಗೆ ನುಡಿ ನಮನ ಕಾರ್ಯಕ್ರಮ ಡಿ.16ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಅರಮನೆ ರಸ್ತೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಹ್ಯಾದ್ರಿ ಸಂಘದ ಸಮಸ್ತ ಜನತೆಗೆ ಆಹ್ವಾನ ನೀಡಿದೆ. ಖ್ಯಾತ ಅಂತರಾಷ್ಟ್ರೀಯ ಸಹಕಾರಿ ತಜ್ಞ ದಿವಂಗತ ಶ್ರೀ ಬಿ. ಎಸ್ ವಿಶ್ವನಾಥನ್, ರಾಷ್ಟ್ರ ಕಂಡ ಖ್ಯಾತ ಸಂಸದೀಯ ಪಟು ಶ್ರೀ ಡಿ. ಬಿ. ಚಂದ್ರೇಗೌಡ ಅವರಿಗೆ ನುಡಿ ನಮನ ಕಾರ್ಯಕ್ರಮ ನಡೆಯಲಿದೆ. ಡಿ.16ರ ಸಂಜೆ 5.30 ರಿಂದ ಕಾರ್ಯಕ್ರಮ ಶುರುವಾಗಲಿದೆ.

ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಮಾಜಿ ಸಚಿವ ಪಿ ಜಿ ಆರ್ ಸಿಂಧ್ಯಾ, ಮುಖ್ಯ ಆಯುಕ್ತರು ಭಾರತ್ ಸೈಟ್ಸ್ ಅಂಡ್ ಗೈಡ್ಸ್ ಹಾಗೂ ಮಾಜಿ ಸಭಾಪತಿಗಳು, ವಿಧಾನಪರಿಷತ್ ಅಧ್ಯಕ್ಷರು ಚಿತ್ರಕಲಾ ಪರಿಷತ್ ಮತ್ತು ಅಧ್ಯಕ್ಷರಾದ ಡಾ.ಬಿ.ಎಲ್.ಶಂಕರ್, ಮಾಜಿ ಸಚಿವರಾದ ಲೀಲಾದೇವಿ ಆರ್ ಪ್ರಸಾದ್ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿ. ಎ. ಪುರುಷೋತ್ತಮಗೌಡ ವಿಶೇಷ ಕಾರ್ಯದರ್ಶಿಗಳು(ನಿ), ಕರ್ನಾಟಕ ವಿಧಾನ ಪರಿಷತ್, ಗೌರವಾಧ್ಯಕ್ಷರು, ಸಹ್ಯಾದ್ರಿ ಸಂಘ ಇವರು ವಹಿಸಲಿದ್ದಾರೆ. ಡಿ.ಬಿ.ಚಂದ್ರೇಗೌಡ ಮತ್ತು ಬಿ.ಎಸ್.ವಿಶ್ವನಾಥನ್ ಕುಟುಂಬದವರು ಉಪಸ್ಥಿತರಿರಲಿದ್ದಾರೆ. ಸಮಸ್ತರನ್ನು ಸಹ್ಯಾದ್ರಿ ಸಂಘದ ಅಧ್ಯಕ್ಷರಾದ ಡಿ. ಸಿ ಶ್ರೀಧರ್, ಕಾರ್ಯದರ್ಶಿಹೆಚ್.ಸಿ. ಜಯಪ್ರಕಾಶ್ ಉಪಾಧ್ಯಕ್ಷರುಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಆಹ್ವಾನಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.