Categories
ಚಿಕ್ಕಮಗಳೂರು ಬೆಂಗಳೂರು ರಾಜ್ಯ

ಕಾಫಿನಾಡಲ್ಲಿ ಚಡ್ಡಿ ಗ್ಯಾಂಗ್‌ನ ಇಬ್ಬರು ಕಳ್ಳರು ಬಂಧನ

ಕಾಫಿನಾಡಲ್ಲಿ ಚಡ್ಡಿ ಗ್ಯಾಂಗ್‌ನ ಇಬ್ಬರು ಕಳ್ಳರು ಬಂಧನ

* ಬಂಧಿತ ಅಂತರ್ ರಾಜ್ಯ ಕಳ್ಳರಿಂದ 32 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ
* ಎಲ್ಲೆಡೆ ಆತಂಕ ಸೃಷ್ಠಿಸಿರುವ ಚಡ್ಡಿ ಗ್ಯಾಂಗ್‌ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದ ಎಸ್‌ಪಿ

NAMMMUR EXPRESS NEWS
ಚಿಕ್ಕಮಗಳೂರು: ಎಲ್ಲೆಡೆ ಆತಂಕ ಸೃಷ್ಠಿಸಿರುವ ಕುಖ್ಯಾತ ಚಡ್ಡಿ ಗ್ಯಾಂಗ್ ನ ಇಬ್ಬರನ್ನು ಬಂಧಿಸುವಲ್ಲಿ ಕಾಫಿನಾಡಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಅ.25ರ ಶನಿವಾರ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಕಳ್ಳರ ಹೆಡೆಮುರಿ ಕಟ್ಟಿದ್ದು, ಬಂಧಿತರಿಂದ ಕದ್ದಿದ್ದ 32 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತರನ್ನು ಮಹಾರಾಷ್ಟ್ರ ಮೂಲದ ಪಪ್ಪು ಟಿಪ್ಪು ಪವಾರ್ ಹಾಗೂ ಮಂಗೇಶ್ ಅಂಕುಶ್ ಶಿಂಧೆ ಎಂದು ಗುರುತಿಸಲಾಗಿದೆ.
ಚಿಕ್ಕಮಗಳೂರು ನಗರ ಪೊಲೀಸರು ನಡೆಸಿದ ಈ ಕಾರ್ಯಚರಣೆ ಮೂಲಕ ಚಡ್ಡಿ ಗ್ಯಾಂಗಿನ 17 ಪ್ರಕರಣಗಳನ್ನು ಭೇದಿಸಿ, ಪೊಲೀಸರು 495 ಗ್ರಾಂ ಚಿನ್ನ, 1010ಗ್ರಾಂ ಬೆಳ್ಳಿ, 75 ಸಾವಿರ ಹಣ ವಶಕ್ಕೆ ಪಡೆದುಕೊಂಡಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಡ್ಡಿ ಗ್ಯಾಂಗ್‌ ಕಳ್ಳತನ ಮಾಡುತ್ತಿದ್ದು, ಚಿಕ್ಕಮಗಳೂರು ಸೇರಿ ಹೊರ ರಾಜ್ಯ ಹಾಗೂ ರಾಜ್ಯದ ವಿವಿಧ ಕಡೆ ಈ ಗ್ಯಾಂಗ್ ಕಳ್ಳತನ ಮಾಡಿದ್ದು, ಪ್ರಕರಣ ದಾಖಲಾಗಿದ್ದವು.
ಚಿಕ್ಕಮಗಳೂರು ನಗರದ ಪೊಲೀಸ್ ಕ್ವಾಟ್ರಸ್ಟ್‌ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಎಸ್ಪಿ ವಿಕ್ರಂ ಅವರು ವಿಶೇಷ ತಂಡ ರಚಿಸಿದ್ದು, ಎಎಸ್ಪಿ ಜಯಕುಮಾ‌ರ್, ಡಿವೈಎಸ್ಪಿ ಶೈಲೇಂದ್ರ, ನಗರ ರಾಣೆ ಪಿಐ ಅಭಯ್ ಪ್ರಕಾಶ್‌ ನೇತೃತ್ವದ ತಂಡ ರಚನೆ ಮಾಡಲಾಗಿತ್ತು.
ಎರಡೂವರೆ ತಿಂಗಳಲ್ಲಿ 400ಕ್ಕೂ ಹೆಚ್ಚು ಸಿಸಿಟಿವಿ ಫುಟೇಜ್ ಸಂಗ್ರಹ ಮಾಡಿದ್ದ ಪೊಲೀಸರ ತಂಡ ಚಡ್ಡಿ ಗ್ಯಾಂಗ್ ನ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ಗದಗ ಎಲ್ಲಾ ಕಡೆ 3 ಪ್ರಕರಣದ ಆರೋಪಿಗಳಾಗಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.