ಬೆಂಗಳೂರು ಮಂಗಳೂರು ನಡುವೆ ವಂದೇ ಭಾರತ್ ರೈಲು!
– ಸುಬ್ರಹ್ಮಣ್ಯಕ್ಕೂ ಸ್ಲೀಪಿಂಗ್ ಕೋಚ್ ರೈಲಿಗೆ ಚಿಂತನೆ
– 2026ರ ಫೆಬ್ರವರಿ ಒಳಗೆ ಆರಂಭ ಸಾಧ್ಯತೆ
NAMMUR EXPRESS NEWS
ಬೆಂಗಳೂರು: ಬೆಂಗಳೂರು ಮತ್ತು ಮಂಗಳೂರಿನ ನಡುವೆ ವಂದೇ ಭಾರತ್ ರೈಲು 2026ರ ಫೆಬ್ರವರಿ ಒಳಗೆ ಆರಂಭವಾಗಲಿದ್ದು, ಇದರಿಂದ ಬೆಂಗಳೂರು, ತುಮಕೂರು, ಹಾಸನ, ಮಂಗಳೂರು ಈ ನಾಲ್ಕು ಜಿಲ್ಲೆಗಳಿಗೆ ಅನುಕೂಲವಾಗಲಿದೆ.
ಶುಕ್ರವಾರ ಬೆಂಗಳೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರೈಲ್ವೆ ಹಾಗೂ ಕೆಪಿಟಿಸಿಎಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ವಿ. ಸೋಮಣ್ಣ ಅವರು ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲು ಆರಂಭವಾಗಲಿದ್ದು, ಈಗ 33ಕಿಮೀ ವಿದ್ಯುತ್ ಕಾಮಗಾರಿ ಬಾಕಿ ಇದೆ, ಹಾಸನ ಮತ್ತು ಮಂಗಳೂರು ನಡುವಿನ ಮಾರ್ಗದಲ್ಲಿ 57 ಸುರಂಗ, 700 ಸೇತುವೆಗಳನ್ನು ಡಬ್ಲಿಂಗ್ ಮಾಡಲು 50 ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದ್ದು, ಡಿಪಿಆರ್ ರಚಿಸಿ ಟೆಂಡರ್ ಕರೆಯಲಾಗುವುದು. ಈಗಾಗಲೇ 22ಕಿಮೀ ಕಾಮಗಾರಿ ಪೂರ್ಣಗೊಂಡಿದ್ದು, 32ಕಿಮೀ ಕಾಮಗಾರಿ ಪ್ರಗತಿಯಲ್ಲಿದೆ ಎಂದಿದ್ದಾರೆ. ಇದರೊಂದಿಗೆ ಸುಬ್ರಹ್ಮಣ್ಯ ಮಾರ್ಗದಲ್ಲಿ ವಂದೇ ಭಾರತ್ ಹಾಗೂ ಸ್ಲೀಪರ್ ಕೋಚ್ ರೈಲು ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.