Categories
ದಕ್ಷಿಣ ಕನ್ನಡ

ತುಳು ಭಾಷೆಗಾಗಿ ಶಾಸಕ ಅಶೋಕ್ ರೈ ಹೋರಾಟ

ತುಳು ಭಾಷೆಗಾಗಿ ಶಾಸಕ ಅಶೋಕ್ ರೈ ಹೋರಾಟ

– ಸದನದಲ್ಲಿ ತುಳುವಿಗಾಗಿ ಶಾಸಕರ ದನಿ
– ತುಳು ಅಕಾಡೆಮಿಯಿಂದ ಶಾಸಕ ಅಶೋಕ್ ರೈಗೆ ಸನ್ಮಾನ

NAMMUR EXPRESS NEWS

ಪುತ್ತೂರು: ವಿಧಾನಸಭಾ ಅಧಿವೇಶನದಲ್ಲಿ ತುಳು ವಿನಲ್ಲೇ ಮಾತನಾಡುವ ಮೂಲಕ, ತಾನು ಶಾಸಕನಾಗಿ ಆಯ್ಕೆಯಾದ ಮೊದಲ ಅಧಿವೇಶನದಲ್ಲೂ ತುಳು ಬಗ್ಗೆ ಸದನಕ್ಕೆ ಪರಿಚಯಿಸುವ ಮೂಲಕ ತುಳುವಿಗಾಗಿ ನಿರಂತರ ಹೋರಾಟ ಮಾಡುತ್ತಿರುವ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಕರ್ನಾಟಕ ರಾಜ್ಯ ತುಳು ಅಕಾಡೆಮಿಯಿಂದ ಗೌರವ ನೀಡಲಾಯಿತು. ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷರಾದ ತಾರನಾಥ ಗಟ್ಟಿ ಕಾಪಿಕ್ಕಾಡ್ ರವರು ಶಾಸಕರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು ಶಾಸಕರಾದ ಬಳಿಕ ಪ್ರತೀ ಬಾರಿ ಸದನದಲ್ಲಿ ತುಳು ಭಾಷೆಯಲ್ಲಿ ಮಾತನಾಡಿ, ತುಳುವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಶಾಸಕರು ಮಾಡಿದ್ದಾರೆ. ತುಳು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಣೆ ಮಾಡಬೇಕೆಂದು ಕಳೆದ ವಿಧಾನ ಸಭೆಯಲ್ಲಿಆಗ್ರಹವನ್ನೂ ಮಾಡಿದ್ದಾರೆ. ತುಳು ನಾಡಿನ ಇತಿಹಾಸದಲ್ಲೇ ಓರ್ವ ಶಾಸಕ ಈ ಪರಿಯಾಗಿ ತುಳುವಿಗೆ ಹೋರಾಟ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯ ತುಳು ಅಕಾಡೆಮಿ ಸದಸ್ಯರಾದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್‌ ರೈ, ಮೋಹನ್ ದಾಸ್ ಮುನ್ನೂರು ಮತ್ತು ಹಿರಿಯ ಪತ್ರಕರ್ತ ರಮೇಶ್ ಪೆರ್ಲ ಉಪಸ್ಥಿತರಿದ್ದರು.

Categories
ದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಸಂಸದ ಬ್ರಿಜೇಶ್‌ ಚೌಟ ಕಚೇರಿ ಆರಂಭ

ದಕ್ಷಿಣ ಕನ್ನಡ ಸಂಸದ ಬ್ರಿಜೇಶ್‌ ಚೌಟ ಕಚೇರಿ ಆರಂಭ

– ಇನ್ಮೇಲೆ ಸಂಸದರ ಕಚೇರಿ ಜನರ ಸೇವೆಗೆ ಸಿದ್ಧ
– ನಮ್ಮ ಕ್ಷೇತ್ರಕ್ಕೆ ಕ್ಯಾಪ್ಟನ್‌ ಸಂಸದರು ಸಿಕ್ಕಿದ್ದಾರೆ: ಕಲ್ಲಡ್ಕ
– ವಿಕಸಿತ ದಕ್ಷಿಣ ಕನ್ನಡ ಮಾಡುವುದೇ ನನ್ನ ಗುರಿ: ಚೌಟ

NAMMUR EXPRESS NEWS

ಮಂಗಳೂರು: ದಕ್ಷಿಣ ಕನ್ನಡ ಸಂಸದ ಬ್ರಿಜೇಶ್‌ ಚೌಟ ಅವರ ಕಚೇರಿಯು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಉದ್ಘಾಟನೆಗೊಂಡಿದೆ. ಇನ್ಮೇಲೆ ಸಂಸದರ ಕಚೇರಿ ಜನರ ಸೇವೆಗೆ ಸಿದ್ಧವಾಗಿದೆ. ಉದ್ಘಾಟನೆ ವೇಳೆ ಮಾತನಾಡಿದ, ಆರ್‌ಎಸ್‌ಎಸ್‌ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್‌, ತುಳುನಾಡು ಹಿಂದುತ್ವದ ನಾಡು, ಈ ಸ್ಥಳದಲ್ಲಿ ನಾವು ದೈವವನ್ನು ಆರಾಧಿಸುತ್ತೇವೆ. ದೇವರ ದಯೆ ಮತ್ತು ಜನರ ಬೆಂಬಲದಿಂದ ನಮ್ಮ ಕ್ಷೇತ್ರಕ್ಕೆ ಕ್ಯಾಪ್ಟನ್‌ ಸಂಸದರು ಸಿಕ್ಕಿದ್ದಾರೆ. ಗಡಿಯಲ್ಲಿ ಸೈನಿಕರು ಹೇಗೆ ಕೆಲಸ ಮಾಡುತ್ತಾರೆಯೋ ಅದೇರೀತಿ ಜನರ ಹಕ್ಕುಗಳಿಗಾಗಿ ಚೌಟ ಕೆಲಸ ಮಾಡುತ್ತಾರೆ. ಆದರೆ ಸಂಸದರ ಸ್ಥಾನವು ಕೇವಲ ಕೇವಲ ಕುಳಿತುಕೊಳ್ಳುವುದು ಮಾತ್ರವಲ್ಲ ಅವರು ಪ್ರಮಾಣಿಕ ಸಂಸದರಾಗಿ ಕೆಲಸ ಮಾಡುತ್ತಾರೆ ಮತ್ತು ಶ್ರಮಿಸುತ್ತಾರೆ ಎಂದು ನಾನು ನಂಬುವುದಾಗಿ ಹೇಳಿದರು.

ವಿಕಸಿತ ದಕ್ಷಿಣ ಕನ್ನಡ ಮಾಡುವುದೇ ನನ್ನ ಗುರಿ: ಚೌಟ

ಬ್ರಿಜೇಶ್‌ ಚೌಟ ಮಾತನಾಡಿ, ನಾನು ಜನರ ಹಕ್ಕುಗಳಿಗಾಗಿ ಕೆಲಸ ಮಾಡಲು ಬಯಸುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೆ ಅವಕಾಶಗಳನ್ನು ಒದಗಿಸಲು ನಾನು ಸರ್ವಶಕ್ತನನ್ನು ಪ್ರಾರ್ಥಿಸುತ್ತೇನೆ. ಬಿಜೆಪಿ ಪಕ್ಷದ ಕಾರ್ಯಕರ್ತರ ಸಹಾಯದಿಂದ ನಾನು ಶ್ರಮಿಸುತ್ತೇನೆ. ನರೇಂದ್ರ ಮೋದಿಯವರ ವಿಕಸಿತ ಭಾರತ್‌ನ ಅದೇ ಕನಸಿನೊಂದಿಗೆ ನಾವು ವಿಕಸಿತ ದಕ್ಷಿಣ ಕನ್ನಡ ಮಾಡುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಜನರ ಸಮಸ್ಯೆ ಆಲಿಸಲು ಹಾಗೂ ಬಗೆಹರಿಸಲು ನಾನು ಕಚೇರಿಯಲ್ಲಿ ಕೆಲಸ ಮಾಡಲಿದ್ದೇನೆ ಎಂದರು.

Categories
ದಕ್ಷಿಣ ಕನ್ನಡ

ಬಜ್ಪೆ ಪೇಟೆ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿ ವೀಕ್ಷಣೆ

ಬಜ್ಪೆ ಪೇಟೆ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿ ವೀಕ್ಷಣೆ

– ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಪರಿಶೀಲನೆ
– ಕಾಮಗಾರಿ ವೇಗವಾಗಿ ನಡೆಸುವಂತೆ ಮನವಿ

NAMMUR EXPRESS NEWS

ಬಜ್ಪೆ: ಬಜ್ಪೆ ಪಟ್ಟಣದಲ್ಲಿ ನಡೆಯುತ್ತಿರುವ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿ ವೀಕ್ಷಣೆಯನ್ನು ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ವೀಕ್ಷಿಸಿ ಸಂಬಂಧಪಟ್ಟವರ ಜತೆಗೆ ಚರ್ಚೆ ನಡೆಸಿದರು.

ಬಿಮಲ್ ಕಂಪನಿಯ ಇಂಜಿನಿಯರ್ ಮತ್ತು ಪಟ್ಟಣ ಪಂಚಾಯತ್ ಅಧಿಕಾರಿಗಳನ್ನು ಮತ್ತು ಮೆಸ್ಕಾಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದ ಚತುಷ್ಪಥ ರಸ್ತೆ ಸುಮಾರು 300 ಮೀಟರ್ ಉದ್ದ ಮತ್ತು 14 ಮೀಟರ್ ಅಗಲದ ಕಾಮಗಾರಿಯ ಬಗ್ಗೆ ತಿಳಿದುಕೊಂಡು,ಸ್ಥಳೀಯ ಮೆಸ್ಕಾಂ ಕಂಬಗಳನ್ನು ಮತ್ತು TC ಗಳನ್ನು ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆಸಿದರು. ಜನರ ಹಿತದೃಷ್ಟಿಯಿಂದ ಆದಷ್ಟು ಬೇಗ ಸಮಯಕ್ಕೆ ಸರಿಯಾಗಿ ಕಾಮಗಾರಿ ಮುಗಿದು,ಗುಣಮಟ್ಟದ ಕೆಲಸ ಮಾಡಿ ಸಾರ್ವಜನಿಕರಿಗೆ ಸುಲಭವಾಗಿ ಓಡಾಡಲು ಅನುಕೂಲ ಮಾಡಿಕೊಡಲು ಮನವಿ ಮಾಡಿದರು.

ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ ,ಸಹ ಸಂಚಾಲಕರಾದ ಇಸ್ಮಾಯಿಲ್ ಇಂಜಿನಿಯರ್ ,ದಲಿತ ಸಂಘ ಸಮಿತಿಯ ರಾಜ್ಯ ಸಂಚಾಲಕರಾದ ದೇವದಾಸ್ ,ಮುಲ್ಕಿ ಮೂಡಬಿದ್ರೆ ಐಟಿ ಸೆಲ್ ಅಧ್ಯಕ್ಷರಾದ ನಿಸಾರ್ ಕರಾವಳಿ ,ಗ್ರಾ .ಪಂ ,ಮಾಜಿ ಸದಸ್ಯರಾದ ನಜೀರ್ ಕಿನ್ನಿಪದವು ,ಖಾದರ್ ಏರ್ಪೋರ್ಟ್ ಟೈಲರ್ ಜಯ ,ಸಂತೋಷ್ ಉನಿಲೆ ,ಹಫೀಜ್ ಕೊಳಂಬೆ ,ಮೊನಕ ಏರ್ಪೋರ್ಟ್ ,ಖಾದರ್ ಬಿ.ಎಚ್ ,ರಮೇಶಪದ್ಮಾ ,ಆಸೀಫ್ ,ಕಂದಾವರ ಗ್ರಾ ಪಂ ಸದಸ್ಯರಾದ ಅಶ್ರಫ್ ಅನ್ವರ್ ,ಉಮರ್ ,ಹಕೀಮ್ ,ಪಲ್ಲು ,ಮನ್ಸೂರು,ಶಬೀರ್ ಹಾಂದಿ ,ಅಝರ್ ಸಾಗರ್ ,ನಜೀರ್ ಊರಿನ ಹಿರಿಯರು ಮತ್ತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಫಕೀರಪ್ಪ ಮೂಲ್ಯ ಮತ್ತು ಕಂದಾಯ ಅಧಿಕಾರಿಗಳು ,ಮೆಸ್ಕಾಂ ಸಿಬ್ಬಂದಿ ಸ್ಥಳದಲ್ಲಿದ್ದರು .