Categories
ದಕ್ಷಿಣ ಕನ್ನಡ

ಫೆ. 2ಕ್ಕೆ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಮೂರ್ತಿಗೆ ಪಾದಾಭಿಷೇಕ

ಫೆ. 2ಕ್ಕೆ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಮೂರ್ತಿಗೆ ಪಾದಾಭಿಷೇಕ
– ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ ಮಂಗಲ ಪ್ರವಚನ
– ಹಲವಾರು ಧಾರ್ಮಿಕ ವಿಧಿ-ವಿಧಾನಗಳ ಆಯೋಜನೆ

NAMMUR EXPRESS NEWS
ಉಜಿರೆ: ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿರುವ ಭಗವಾನ್ ಬಾಹುಬಲಿಮೂರ್ತಿಗೆ ಫೆ. 2 ರಂದು ಭಾನುವಾರ ಬೆಳಿಗ್ಗೆ ಗಂಟೆ 8.30 ರಿಂದ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ 216 ಕಲಶಗಳಿಂದ ಪಾದಾಭಿಷೇಕ ಅದ್ದೂರಿಯಾಗಿ ನಡೆಯಲಿದೆ. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಲ ಪ್ರವಚನ ನೀಡುವರು.
ಇದಕ್ಕೆ ಪೂರ್ವಭಾವಿಯಾಗಿ ಫೆ. ಒಂದರಂದು ಶನಿವಾರ ಬೆಳಿಗ್ಗೆ ಗಂಟೆ 9 ರಿಂದ ರತ್ನಗಿರಿಯಲ್ಲಿ ತೋರಣಮುಹೂರ್ತ, ವಿಮಾನಶುದ್ಧಿ ಷೋಡಶ ಕಲಶಾಭಿಷೇಕ ಮತ್ತು ಸಂಜೆ ನಾಲ್ಕು ಗಂಟೆಯಿಂದ ನಾಂದಿಮಂಗಲ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ.

Categories
ದಕ್ಷಿಣ ಕನ್ನಡ

ಧರ್ಮಸ್ಥಳದ ಡಾ.ಹೇಮಾವತಿ ಹೆಗಡೆಯವರಿಗೆ “ಗಿರಿಜಾ ರತ್ನ ಪ್ರಶಸ್ತಿ”!

ಧರ್ಮಸ್ಥಳದ ಡಾ.ಹೇಮಾವತಿ ಹೆಗಡೆಯವರಿಗೆ “ಗಿರಿಜಾ ರತ್ನ ಪ್ರಶಸ್ತಿ”!
* ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯಿಂದ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವ
* ಕರಾವಳಿಯ ಹಲವು ಸಾಧಕರಿಗೆ ಪ್ರಶಸ್ತಿ ಗೌರವ

NAMMUR EXPRESS NEWS
ಬೆಳ್ತಂಗಡಿ:
ಬಂಟ್ವಾಳ ತಾಲೂಕಿನ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ವತಿಯಿಂದ ನೀಡುವ ರಾಜ್ಯ ಮಟ್ಟದ, “ಗಿರಿಜಾ ರತ್ನ ಪ್ರಶಸ್ತಿ” ಗೆ ಶ್ರೀಮತಿ ಡಾ. ಹೇಮಾವತಿ ಹೆಗಡೆ ಧರ್ಮಸ್ಥಳ ಯವರನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ಯನ್ನು ಸಮಿತಿಯ ಸದಸ್ಯರಾದ ಡಾ.ಹೇಮಾವತಿ ಹೆಗಡೆಯವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗುರುವಾರ ಭೇಟಿಮಾಡಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಮುಖ್ಯಸ್ಥೆ ಪ್ರತಿಷ್ಟಿತ ಕರ್ನಾಟಕ ಸರ್ಕಾರ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯಪ್ರಶಸ್ತಿ ಪುರಸ್ಕೃತ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್, ಸಮಿತಿಯ ಸದಸ್ಯರುಗಳಾದ ಜಯಂತಿ, ಇಂದಿರಾ ಗೋಪಾಲ್, ಭಾರತಿ, ಮಲ್ಲಿಕಾ ಕಲ್ಲಡ್ಕ, ಹಿರಿಯ ಸಮಾಜಸೇವಕ ಭುಜಬಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Categories
ದಕ್ಷಿಣ ಕನ್ನಡ

ನಾಳೆಯಿಂದಲೇ ಮಂಗಳೂರು-ಮೂಡುಬಿದಿರೆ- ಕಾರ್ಕಳ ರಸ್ತೆಗೆ ಸರಕಾರಿ ಬಸ್?

ನಾಳೆಯಿಂದಲೇ ಮಂಗಳೂರು-ಮೂಡುಬಿದಿರೆ- ಕಾರ್ಕಳ ರಸ್ತೆಗೆ ಸರಕಾರಿ ಬಸ್?

– ನಾಳೆಯಿಂದಲೇ ನಾಲ್ಕು ಬಸ್ ಗಳು ಓಡಾಡಲಿದೆ!
– ‘ ನಾಳೆಯಿಂದಲೇ ಬಸ್ ಸಂಚಾರ’ ಪ್ರಾರಂಭಿಸುತ್ತೇವೆ- ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು

NAMMUR EXPRESS NEWS
ಮಂಗಳೂರು: ಬಹುದಿನಗಳ ಬೇಡಿಕೆಯಾಗಿರುವ ಮಂಗಳೂರು- ಮೂಡುಬಿದಿರೆ- ಕಾರ್ಕಳ ರಸ್ತೆಯಲ್ಲಿ ನಾಳೆಯಿಂದಲೇ ಕೆ.ಎಸ್.ಆರ್.ಟಿ.ಸಿ.ಬಸ್ ಸಂಚಾರ ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ. ವಿಧಾನಸಭಾಧಿವೇಶನದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರು ಈ ಬಗ್ಗೆ ಪ್ರಸ್ತಾಪಿಸಲು ಮುಂದಾದಾಗ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ‘ ನಾಳೆಯಿಂದಲೇ ಬಸ್ ಸಂಚಾರ’ ಪ್ರಾರಂಭಿಸುತ್ತೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ರಾಜ್ಯ ಸರಕಾರದ ಈ ಯೋಜನೆಯನ್ನು ಶೀಘ್ರ ಅನುಷ್ಠಾನಕ್ಕಾಗಿ ಧ್ವನಿ ಎತ್ತಿದ್ದರು.ಇದೀಗ ಉಮಾನಾಥ ಕೋಟ್ಯಾನ್ ಅವರು ಕೂಡಾ ಈ ಬಗ್ಗೆ ಪ್ರಸ್ತಾಪಿಸಿರುವುದರಿಂದ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರುವಂತಾಗಿದೆ. ಈ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ.ಬಸ್ ಸಂಚಾರ ಆರಂಭಿಸಬೇಕೆಂದು ಅರುಣ್ ಶೆಟ್ಟಿ ಸಹಿತ ಈ ಭಾಗದ ವಿದ್ಯಾರ್ಥಿಗಳು, ಸಾರ್ವಜನಿಕರ ಆಗ್ರಹವಿತ್ತು.ಕೆ.ಎಸ್.ಆರ್.ಟಿ.ಸಿ.ಯಿಂದ ಮಂಜೂರಾತಿ ದೊರಕಿದ್ದರೂ ಅದು ಸ್ಥಗಿತಗೊಂಡಿತ್ತು.ಇದೀಗ ನಾಳೆಯಿಂದಲೇ ನಾಲ್ಕು ಬಸ್ ಗಳು ಓಡಾಡಲಿದೆ ಎಂದು ಹೇಳಲಾಗುತ್ತಿದೆ.

Categories
ದಕ್ಷಿಣ ಕನ್ನಡ

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್:16 ಕಡೆ ದಾಳಿ

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್:16 ಕಡೆ ದಾಳಿ
– ಈಗಾಗಲೇ ಆರೋಪಿಗಳ ಬಂಧಿಸಿರುವ ಎನ್‌ಐಎ
– ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದ ಕೊಲೆ ಪ್ರಕರಣ

NAMMUR EXPRESS NEWS
ಸುಳ್ಯ: Ma16 ಕಡೆ NIA ದಾಳಿ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಡಿ. 5 ಕ್ಕೆ ರಾಜ್ಯದ 16 ಸ್ಥಳಗಳಲ್ಲಿ ದಾಳಿ ನಡೆಸಿದೆ. 2022ರ ಜುಲೈ 26 ರಂದು ಸುಳ್ಯ ತಾಲೂಕಿನ ಬೆಳ್ಳಾರೆ ಎಂಬಲ್ಲಿ ಪ್ರವೀಣ್ ನೆಟ್ಟಾರು ಅವರ ಹತ್ಯೆ ನಡೆದಿತ್ತು. 2022ರ ಆಗಸ್ಟ್ 4ರಂದು ಈ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿತ್ತು. ಈ ಪ್ರಕರಣ ಸಂಬಂಧ ಕೆಲವು ಆರೋಪಿಗಳನ್ನು ಈಗಾಗಲೇ ಬಂಧಿಸಿರುವ ಎನ್‌ಐಎ ಮತ್ತೆ 16 ಕಡೆಗಳಲ್ಲಿ ದಾಳಿ ನಡೆಸಿದೆ.

Categories
ದಕ್ಷಿಣ ಕನ್ನಡ

ಧರ್ಮಸ್ಥಳ ಲಕ್ಷದೀಪೋತ್ಸವ!

ಧರ್ಮಸ್ಥಳ ಲಕ್ಷದೀಪೋತ್ಸವ!

– ಉಜಿರೆಯಿಂದ ಧರ್ಮಸ್ಥಳಕ್ಕೆ ಭಕ್ತರು ಹಾಗೂ ಅಭಿಮಾನಿಗಳ ಯಶಸ್ವಿ ಪಾದಯಾತ್ರೆ
– 25 ಸಾವಿರಕ್ಕೂ ಮಿಕ್ಕಿದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಹೆಗ್ಗಡೆಯವರು

NAMMUR EXPRESS NEWS
ಉಜಿರೆ: ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ಮಾರ್ಗದಲ್ಲಿ ನಡೆದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹೃದಯ ವೈಶಾಲ್ಯದಿಂದ ಕಾಯಕದ ಮೂಲಕ ತಾನು ಸಂತೋಷದಿಂದ ನಿತ್ಯವೂ, ನಿರಂತರವೂ ಶ್ರೀ ಮಂಜುನಾಥ ಸ್ವಾಮಿಯ ಸೇವೆ ಮಾಡುತ್ತಿರುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದಲ್ಲಿ ಹೇಳಿದರು.
ಲಕ್ಷದೀಪೋತ್ಸವ ಸಂದರ್ಭದಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಶ್ರದ್ಧಾ ಭಕ್ತಿಯಿಂದ ಬಂದ 25 ಸಾವಿರಕ್ಕೂ ಮಿಕ್ಕಿದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಲಕ್ಷಾಂತರ ಮಂದಿ ಭಕ್ತರ ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ ಮತ್ತು ಗೌರವವೇ ತಮಗೆ ಶ್ರೀರಕ್ಷೆಯಾಗಿದೆ ಎಂದರು.
2025 ರ ಜನವರಿ 7 ಮತ್ತು 8ರಂದು ಮಾನ್ಯ ಉಪರಾಷ್ಟ್ರಪತಿಗಳನ್ನು ಧರ್ಮಸ್ಥಳಕ್ಕೆ ಆಹ್ವಾನಿಸಿದ್ದು, ನೂತನ ಸರತಿ ಸಾಲಿನ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಅಂದು 60 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗುವುದು.ಉಡುಪಿಯಲ್ಲಿ ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ಉದ್ಘಾಟಿಸಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು. ಕಳೆದ ಕೆಲವು ವರ್ಷಗಳಿಂದ ಧರ್ಮಸ್ಥಳಕ್ಕೆ ಬೇಕಾದಷ್ಟು ಅಕ್ಕಿ, ತರಕಾರಿಗಳನ್ನು ಭಕ್ತರೇ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲಕ್ಷದೀಪೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು ಲಕ್ಷದೀಪೋತ್ಸವವು ಎಲ್ಲರ ಮನೆಗಳಿಗೂ, ಮನಗಳಿಗೂ ಬೆಳಕನ್ನು ನೀಡಲಿ. ಎಲ್ಲೆಲ್ಲೂ ಸುಖ-ಶಾಂತಿ ಹಾಗೂ ನೆಮ್ಮದಿ ನೆಲೆಸಲಿ ಎಂದು ಹೆಗ್ಗಡೆಯವರು ಹಾರೈಸಿದರು.
ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಶಾಸಕ ಹರೀಶ್ ಪೂಂಜ, ಹೇಮಾವತಿ ವೀ. ಹೆಗ್ಗಡೆ, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರ ಕುಮಾರ್, ಉಜಿರೆಯ ಶರತ್‌ಕೃಷ್ಣ ಪಡ್ವೆಟ್ನಾಯ, ಸೋನಿಯಾ ಯಶೋವರ್ಮ, ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಪೂರನ್‌ವರ್ಮ ಉಪಸ್ಥಿತರಿದ್ದರು.

Categories
ದಕ್ಷಿಣ ಕನ್ನಡ ರಾಜ್ಯ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.7ರಂದು ಮಹಾರಥೋತ್ಸವ!

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.7ರಂದು ಮಹಾರಥೋತ್ಸವ!

* ಪೂಜಾ ಸೇವೆ, ಉತ್ಸವಾದಿಗಳ ವಿವರ ಹೇಗಿದೆ?
* ಸೇವೆಗಳ ವಿವರ ಹೇಗಿದೆ?

NAMMUR EXPRESS NEWS
ಇತಿಹಾಸ ಪ್ರಸಿದ್ಧ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿಗೆ ದಿನಗಣನೆ ಆರಂಭವಾಗಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಚಂಪಾಷಷ್ಠಿ ಹಿನ್ನೆಲೆಯಲ್ಲಿ ನವೆಂಬರ್ 27ರಿಂದ ಡಿ.12ರವರೆಗೆ ವಿವಿಧ ಪೂಜಾ ಸೇವೆಗಳು, ಜಾತ್ರಾ ಉತ್ಸವಾದಿಗಳು ನಡೆಯಲಿದೆ.
ಭಗವತ್ಸಂಕಲ್ಪ ಪ್ರಕಾರ ನಡೆಯುವ ಮಹೋತ್ಸವಗಳಿಗೆ ಭಕ್ತರು ಆಗಮಿಸಿ, ಶ್ರೀ ದೇವರ ಮೂಲ ಮೃತ್ತಿಕಾ ಗಂಧ-ಪ್ರಸಾದವನ್ನು ಸ್ವೀಕರಿಸಿ, ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದೆ.
ನ. 27-2024 ರಿಂದ ನ.30-2024ಗೂ ಹಸಿರು ಕಾಣಿಕೆಗಳನ್ನು ವರೆಗೂ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ತಿಳಿಸಿದೆ. ಡಿಸೆಂಬರ್ ಮಹಾರಥೋತ್ಸವ ಸಾಮಾನ್ಯವಾಗಿ 7ರಂದು ದೇವರ ಮಹಾರಥೋತ್ಸವ ನಡೆಯಲಿದೆ. ಚಂಪಾಷಷ್ಠಿಯಂದು ಸುಬ್ರಹ್ಮಣ್ಯ ದೇಗುಲಗಳಲ್ಲೆಲ್ಲ ವಿಶೇಷ ಪೂಜೆಗಳು ನಡೆಯುತ್ತವೆ.
ಅಷ್ಟೇ ಅಲ್ಲ, ಅಶ್ವತ್ಥ ಕಟ್ಟೆಯಲ್ಲಿ ಸರ್ಪಾಕಾರದ ವಿಗ್ರಹವನ್ನಿಟ್ಟು ಸುಬ್ರಹ್ಮಣ್ಯ ಸ್ವಾಮಿಯನ್ನು ಆವಾಹನೆ ಮಾಡಿ, ಹಾಲೆರೆದು ಅಭಿಷೇಕ ಹಾಗೂ ಪಾಯಸದ ನೈವೇದ್ಯ ಅರ್ಪಿಸಲಾಗುತ್ತದೆ. ಜೊತೆಗೆ, ಅಂದು ಉಪವಾಸ ವೃತವನ್ನೂ ಆಚರಿಸಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಲ್ಮೀಖ ಅರ್ಥಾತ್ ಹುತ್ತವು ಇಲ್ಲಿನ ಆರಾಧ್ಯ ದೈವ. ಅಲ್ಲಿಂದ ತೆಗೆದ ಮಣ್ಣು ಅಥವಾ ಮೃತಿಕಾ ಪ್ರಸಾದವೂ ಅತ್ಯಮೂಲ್ಯ ಪ್ರಸಾದವಾಗಿದೆ. ಸರ್ಪದೋಷಕ್ಕೊಳಗಾದವರು ಇಲ್ಲಿ ಸರ್ಪ ಸಂಸ್ಕಾರ ಮಾಡಿ ತಮ್ಮ ಪಾಪ ಕಳೆದು ಕೊಳ್ಳುತ್ತಾರೆ ಎಂಬುದು ಐತಿಹ್ಯ.
ಚಂಪಾಷಷ್ಠಿಯ ದಿನ ಕುಮಾರಧಾರಾ ನದಿಗೆ ವಿಶೇಷ ದೇವರ ಮೀನುಗಳ ಆಗಮಿಸುವುದು ಇಲ್ಲಿನ ಇನ್ನೊಂದು ವಿಶೇಷತೆ. ಇಲ್ಲಿನ ಮಲೆಕುಡಿಯ ಜನಾಂಗದವರು ರಚಿಸುವ ಜಾತ್ರಾ ತೇರು ರಚನೆ ಸೇರಿದಂತೆ ಪ್ರತಿಯೊಂದಕ್ಕೂ ಕೂಡ ಅದರದ್ದೇ ಆದ ವಿಶೇಷತೆಗಳಿವೆ.

ಸೇವೆಗಳ ವಿವರ ಹೇಗಿದೆ?

ಮಹಾರಥೋತ್ಸವ, ಚಿಕ್ಕ ರಥೋತ್ಸವ, ಚಂದ್ರಮಂಡಲ ಉತ್ಸವ, ಹೂವಿನ ತೇರಿನ ಉತ್ಸವ, ಬಂಡಿ ಉತ್ಸವ, ಮಹಾಭಿಷೇಕ, ದೀಪಾರಾಧನೆ ಪಾಲಕಿ ಉತ್ಸವ, ಮಹಾಪೂಜೆ ಪಾಲಕಿ ಉತ್ಸವ, ಸಪರಿವಾರ ಸೇವಾ, ನಾಗಪ್ರತಿಷ್ಠೆ, ಆಶ್ಲೇಷ ಬಲಿ, ಮಹಾಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಶೇಷ ಸೇವೆ, ಹರಿವಾಣ ನೈವೇದ್ಯ ಕಾರ್ತಿಕ ಪೂಜೆ ಸೇವೆಗಳು ನಡೆಯಲಿವೆ.

Categories
ದಕ್ಷಿಣ ಕನ್ನಡ

ಮೊದಲ ನಕ್ಸಲ್ ಎನ್ಕೌಂಟರ್ ನಡೆದ ಊರಿಗಿಲ್ಲ ಅಭಿವೃದ್ಧಿ ಭಾಗ್ಯ!

ಮೊದಲ ನಕ್ಸಲ್ ಎನ್ಕೌಂಟರ್ ನಡೆದ ಊರಿಗಿಲ್ಲ ಅಭಿವೃದ್ಧಿ ಭಾಗ್ಯ!
– ಸೇತುವೆ ಇಲ್ಲ, ರಸ್ತೆ ಇಲ್ಲ, ಬೆಳಕೂ ಇಲ್ಲ… ಕೇಳೋರು ಯಾರು ಇಲ್ಲ
– ಸಿಎಂ, ಸಚಿವರು, ಶಾಸಕರ ಭರವಸೆ ಈಡೇರಿಲ್ಲ

NAMMUR EXPRESS NEWS
ಕಾರ್ಕಳ :
ಕಾರ್ಕಳ ಬೆಳ್ತಂಗಡಿ ತಾಲೂಕುಗಳ ಗಡಿ ಪ್ರದೇಶವಾದ ಈದುವಿನ ಬೊಳ್ಳೆಟ್ಟು ಭಾಗದಲ್ಲಿ ಮೂಲಸೌಕರ್ಯ ವಿಲ್ಲದೆ ಅಭಿವೃದ್ಧಿ ಮರಿಚಿಕೆಯಾಗಿದೆ. ರಾಜ್ಯದ ಮೊದಲ ನಕ್ಸಲ್ ಎನ್ಕೌಂಟರ್ ನಡೆದ ಗ್ರಾಮದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ.  ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹುಟ್ಟುವ ಸುವರ್ಣ ನದಿಯು ಈದು ಗ್ರಾಮದ ಬೊಳ್ಳೆಟ್ಟು ಪ್ರದೇಶದಲ್ಲಿ ಹರಿಯುತ್ತಿದೆ. ಆದರೆ ಮಳೆಗಾಲವೆಂದರೆ ಈ ಗ್ರಾಮಕ್ಕೆ ಕಷ್ಟ, ಏಕೆಂದರೆ 4 ತಿಂಗಳು ಲಾರಿ ಪಿಕಪ್ ಸಹಿತ ವಾಹನ ಗಳು ಬರುವಂತಿಲ್ಲ. ವಾಹನಗಳು ಸಾಗಬೇಕಾದರೆ ಮಳೆಗಾಲ ಕಳೆದು ಚಳಿಗಾಲ ಕಳೆಯಬೇಕು . ನದಿಯ ಮೂಲಕ ವಾಹನ ಸಾಗಿ ಬೊಳ್ಳೆಟ್ಟು ತಲುಪಬೇಕು.

ಈದುವಿನಿಂದ ಸಂಪರ್ಕವಿಲ್ಲ: ಕಾರ್ಕಳ ತಾಲೂಕಿನ ಈದು ಗ್ರಾಮ‌ ಪಂಚಾಯಿತಿಯಿಂದ ಬೊಲ್ಲೊಟ್ಟಿಗೆ‌ಸಾಗಲು ಸುಮಾರು ನಾಲ್ಕು ಕಿಮೀ ನಡೆದುಕೊಂಡು ಸಾಗಬೇಕು.ಯಾವುದೇ ವಾಹನ ಸಂಚಾರಕ್ಕೆ ಸಾಧ್ಯವಿಲ್ಲ. ಅದರೆ ಪರ್ಯಾಯ ವಾಗಿ ಕಾಲು ಸಂಕ ವನ್ನು ಮಾತ್ರ ನಿರ್ಮಾಣ ಮಾಡಲಾಗಿದೆ. ಆದರೆ ಬೊಲ್ಲೊಟ್ಟು ಪ್ರದೇಶಕ್ಕೆ ಸಾಗಲು ದ.ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಮೂಲಕ ನಾಲ್ಕು ಕಿ.ಮೀ ರಿಕ್ಷಾ ಮೂಲಕ ಕ್ರಮಿಸಬೇಕು. ಆದರೆ ಈ ರಸ್ತೆಯಲ್ಲಿ ಯಾವುದೇ ಲಾರಿ ಸೇರಿದಂತೆ ಯಾವುದೇ ದೊಡ್ಡ ಗಾತ್ರದ ವಾಹನಗಳು ಸಾಗಲು ಸಾಧ್ಯವಿಲ್ಲ. ಆದರೆ ಎನ್ ಕೌಂಟರ್ ನಡೆದ ಬಳಿಕ 65 ಕುಟುಂಬಗಳಿಗೆ ಯೋಗ್ಯವಾಗುವಂತೆ ಸ್ತಳೀಯರೆ ಸೇರಿ ಖಾಸಗಿ ಜಾಗವನ್ನು ಬಿಟ್ಟುಕೊಟ್ಟು 9 ಅಡಿ ಅಗಲದ ಕಚ್ಚಾ ರಸ್ತೆ ಯನ್ನು ತಾವೇ ನಿರ್ಮಾಣ ಮಾಡಿದ್ದರು.ಆದರೆ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ರಸ್ತೆ ಯ ಎರಡೂ ಭಾಗಗಳಲ್ಲಿ ತಡೆಗೋಡೆ ನಿರ್ಮಿಸಿ ಕೊಟ್ಟಿದ್ದರು.‌ಈ ರಸ್ತೆಯಲ್ಲಿ ಯಾವುದೇ ಹಿರಿಗಾತ್ರದ ಲಾರಿಗಳು ಸಾಗಲು ಸಾಧ್ಯವಿಲ್ಲ. ಕೇವಲ ರಿಕ್ಷಾ ಮಾತ್ರ ಸಾಗಬಹುದಾಗಿದೆ.

ಶವವನ್ನು ಹೊತ್ತು ಸಾಗಿದರು!

ಮಳೆಗಾಲದಲ್ಲಿ ಬೊಳ್ಳೆಟ್ಟು ಪ್ರದೇಶದಲ್ಲಿ ತುಂಬಿ ಹರಿಯುತಿದ್ದ ಸುವರ್ಣ ನದಿಯು ದಾಟಲು ಸಾಧ್ಯವಾಗದೆ ಕಲ್ಲು ಬಂಡೆಗಳನ್ನು ಹತ್ತಿಕೊಂಡು ಶವವನ್ನು ಹೊತ್ತುಕೊಂಡು ನಾಲ್ಕು ಕಿ.ಮೀ ನಡೆದು ಹೋಗಬೇಕಾದ ಪರಿಸ್ಥಿತಿ ಬಂದಿತ್ತು ಎನ್ನುತ್ತಾರೆ ಬೊಳ್ಳೆಟ್ಟಿನ ಮೊಯಿದ್ದಿನ್ , ಶಾಲೆ ಮಕ್ಕಳಿಗೆ ಮಾತ್ರ ನಾಲ್ಕು ತಿಂಗಳು ರಜೆ ಹೆಚ್ಚಿನ ಶಿಕ್ಷಣ ಕಲಿತವರು ಬೆರಳೆಣಿಕೆಯಷ್ಟು ಮಾತ್ರ ಅಥವಾ ದೂರದ ಹಾಸ್ಟೆಲ್ ಗೆ ಸೇರಿಸಬೇಕು ಎಂದು ಅವಲತ್ತು ಕೊಂಡರು .

ಬೊಳ್ಳೆಟ್ಟು ಭಾಗವನ್ನು ಬೆಳ್ತಂಗಡಿ ತಾಲೂಕಿಗೆಕ್ಕೆ ಸೇರಿಸಿ

ಈದು ಗ್ರಾಮಧ ಬೊಳ್ಳೆಟ್ಟು ಪ್ರದೇಶದಲ್ಲಿ ಒಟ್ಟು 65 ಕುಟುಂಬಗಳಿದ್ದು ಸುಮಾರು ಮುನ್ನೂರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಂದಿಗೂ ಮೂಲಭೂತ ಸೌಕರ್ಯಗಳ ಕೊರತೆ ಕಾಣುತ್ತಿದೆ. ಇಲ್ಲಿಯ ಜನ ಬೊಳ್ಳೆಟ್ಟು ಈದುವನ್ನು ಆಶ್ರಯಿಸದೆ ನಾರಾವಿ ಹಾಗೂ ಬೆಳ್ತಂಗಡಿ ತಾಲೂಕನ್ನು ಆಶ್ರಯಿಸಿದ್ದಾರೆ. ಆದರೆ ಈದು ಗ್ರಾಮ ಕಾರ್ಕಳ ತಾಲೂಕಿನಲ್ಲಿ ಬರುವ ಕಾರಣ ಕೇವಲ ಪಡಿತರ ವ್ಯವಸ್ಥೆಗಾಗಿ ಮಾತ್ರ ಈದುವನ್ನು ಆಶ್ರಯಿಸಬೇಕು. ಆದ್ದರಿಂದ ನಮಗೆ ಬೊಳ್ಳೆಟ್ಟು ಭಾಗವನ್ನು ಈದುವಿನಿಂದ ಬೇರ್ಪಡಿಸಿ ನಾರಾವಿಗೆ ಸೇರಿಸಿ ಬೆಳ್ತಂಗಡಿ ತಾಲೂಕಿನಿಂದ ಹೆಚ್ಚಿನ ಪ್ರಮಾಣದಲ್ಲಿ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಬೊಳ್ಳೆಟ್ಟಿನ ಹಿರಿಯರು‌.

ಲೈಟ್ ಕಂಬಗಳಿದ್ದರು ದಾರಿಗೆ ಸ್ಟ್ರೀಟ್ ಲೈಟ್ಗಳಿಲ್ಲ

ಎನ್ಕೌಂಟರ್ ನಡೆದ ಸಂದರ್ಭದಲ್ಲಿ ಈ ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಯಾಗಿತ್ತು ‌ ಬಳಿಕ ಬೊಳ್ಳೆಟ್ಟು ಗೆ ಸಾಗಲು ಕಾಡದಾರಿಯ ಮೂಲಕ ನಡೆದುಕೊಂಡು ಹೋಗಲು ಸ್ಟ್ರೀಟ್ ಲೈಟ್ ಗಳನ್ನು ಕೂಡ ಪಂಚಾಯತ್ ಒದಗಿಸುವಲ್ಲಿ ವಿಫಲವಾಗಿದೆ.ಈ ಬೊಳ್ಳೆಟ್ಟು ಗ್ರಾಮದಲ್ಲಿ 65 ಕುಟುಂಬಗಳಿವೆ.

ಇಚ್ಛಾಶಕ್ತಿ ಕೊರತೆ: ಅಂದಿನ ಕೇಂದ್ರ ಸಚಿವರಾಗಿದ್ದ ಎಂ ವೀರಪ್ಪ ಮೊಯ್ಲಿ ಯವರು ಎನ್ಕೌಂಟರ್ ನಡೆದಿದ್ದ ರಾಮಪ್ಪ ಪೂಜಾರಿ ಮನೆಗೆ ಭೇಟಿ ನೀಡಿದ್ದು ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಭರವಸೆ ನೀಡಿದ್ದರು ,ಆದರೆ ಭರವಸೆಯಾಗಿಯೆ ಉಳಿದಿತ್ತು.ದಿ.ಧರಂ ಸಿಂಗ್ ಮುಖ್ಯ ಮಂತ್ರಿ ಯಾಗಿದ್ದ ಸಮಯದಲ್ಲಿ ಅಂದಿನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಬೊಳ್ಳೊಟ್ಟು ಗೆ ಭೇಟಿ ನೀಡಿದ್ದು ಭರವಸೆ ನೀಡಿದ್ದರು,ಭರವಸೆಗಳು ಇನ್ನೂ ಭರವಸೆಯಾಗಿಯೆ ಉಳಿದಿದೆ. ಯಾವುದೇ ಅಭಿವೃದ್ಧಿ ಫಲಶ್ರುತಿ ಕಂಡಿಲ್ಲ. ಬಳಿಕ ನವೆಂಬರ್ 17 ಕ್ಕೆ ಎನ್ಕೌಂಟರ್ ನಡೆದು 21 ವರ್ಷಗಳು ಕಳೆದಿವೆ.

ಶಾಲೆಗೆ‌ ನಾಲ್ಕು ಕಿಮೀ ನಡೆದೆ ಸಾಗಬೇಕು: ಬೊಳ್ಳೆಟ್ಟು ಪ್ರದೇಶದ ಮಠದ ಬೆಟ್ಟು ಎಂಬಲ್ಲಿ ಸೇತುವೆ ನಿರ್ಮಾಣಕ್ಕಾಗಿ ಜನತೆ ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನ ವಾಗಿಲ್ಲ.ಬೊಳ್ಳೆಟ್ಟು ಪರಿಸರದಲ್ಲಿನ ಶಾಲಾ ಮಕ್ಕಳು ನಿತ್ಯ ಶಾಲೆ ಕಾಲೇಜುಗಳಿಗೆ ತೆರಳಲು ಕಾಡು ದಾರಿ ಮಧ್ಯೆ ಕಾಲು ನಡಿಗೆಯಲ್ಲೇ ನಾಲ್ಕು ಕಿ.ಮೀ ಸಾಗಬೇಕಾಗಿದೆ. .

Categories
ಕರಾವಳಿ ದಕ್ಷಿಣ ಕನ್ನಡ

ಈಶ್ವರ ಮಲ್ಪೆ ಕುಟುಂಬಕ್ಕೆ 1ಲಕ್ಷ ಮೊತ್ತದ ಚೆಕ್!

ಈಶ್ವರ ಮಲ್ಪೆ ಕುಟುಂಬಕ್ಕೆ 1ಲಕ್ಷ ಮೊತ್ತದ ಚೆಕ್!
– ತುರ್ತು ಸಂದರ್ಭದಲ್ಲಿ ತನ್ನ ಜೀವದ ಹಂಗುತೊರೆದು ಜೀವ ಉಳಿಸಿದ!

* ಮಂಗಳೂರು: ನೀರುಪಾಲು ಘಟನೆ, ಓರ್ವ ಯುವಕನ ಮೃತದೇಹ ಪತ್ತೆ!
* ಕಾರ್ಕಳ:ಕಂಟೈನರ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು
* ಬಂಟ್ವಾಳ:ಮನೆಗೆ ಬಡಿದ ಸಿಡಿಲು: ಅಪಾರ ಹಾನಿ

NAMMUR EXPRESS NEWS
ಉಡುಪಿ: ತುರ್ತು ಸಂದರ್ಭದಲ್ಲಿ ತನ್ನ ಜೀವದ ಹಂಗುತೊರೆದು ನೂರಾರು ಜೀವಗಳನ್ನು ರಕ್ಷಿಸಿದ, ಹಲವು ಕ್ಲಿಷ್ಟಕರ ಸಂದರ್ಭದಲ್ಲಿ ಜಲ ಅವಘಡದಲ್ಲಿ ಮೃತಪಟ್ಟ ಮೃತದೇಹಗಳನ್ನು ನೀರಿನಿಂದ ಮೇಲೆತ್ತಿದ ಅಪದ್ಭಾಂದವ, ಖ್ಯಾತ ಮುಳುಗುತಜ್ಞ ಈಶ್ವ‌ರ್ ಮಲ್ಪೆಯವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ರೂ.1 ಲಕ್ಷದ ಚೆಕ್ ನ್ನು ಅರುಣ್ ಕುಮಾ‌ರ್ ಪುತ್ತಿಲ ಈಶ್ವ‌ರ್ ಮಲ್ಪೆ ಮತ್ತು ಗೀತಾ ದಂಪತಿಗಳಿಗೆ ಅವರ ಮಲ್ಪೆಯ ಮನೆಯಲ್ಲಿ ವಿತರಿಸಿದರು.
ತನ್ನ ಮಕ್ಕಳು ವಿಶೇಷ ಚೇತನರಾಗಿ ತೀವ್ರ ಅನಾರೋಗ್ಯದಿಂದಿದ್ದರೂ ಮನೆಯ ಪರಿಸ್ಥಿತಿಯನ್ನು ಲೆಕ್ಕಿಸದೆ ಪ್ರಾಕೃತಿಕ ವಿಕೋಪದ ಕಠಿಣ ಸಂದರ್ಭದಲ್ಲಿ ಜೀವದ ಹಂಗು ತೊರೆದು ಉಚಿತವಾಗಿ ರಕ್ಷಣೆಗೆ ಧಾವಿಸುವ ಖ್ಯಾತ ಮುಳುಗು ತಜ್ಞ ಈಶ್ವ‌ರ್ ಮಲ್ಪೆ ಯವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.
ಉತ್ತರ ಕನ್ನಡ ಜಿಲ್ಲೆಯ ಶೀರೂರು ಗುಡ್ಡ ಕುಸಿತದ ರಕ್ಷಣಾ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದ ಮನವಿಯ ಮೇರೆಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ನಾಪತ್ತೆಯಾಗಿದ್ದ ಚಾಲಕ ಅರ್ಜುನ್‌ ಲಾರಿಯನ್ನು ಗುರುತಿಸುವಲ್ಲಿಯೂ ಈಶ್ವರ್ ಮಲ್ಪೆ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕೊನೆಗೆ ಅವರನ್ನು ಅಧಿಕಾರಿಗಳು ಮತ್ತು ಸರ್ಕಾರ ಕಡೆಗಣನೆ ಮಾಡಿರುವುದು ಸಮಾಜದಲ್ಲಿ ತೀವ್ರ ಬೇಸರವನ್ನು ಉಂಟು ಮಾಡಿದೆ.ಮನೆಯಲ್ಲಿ ಬಡತನವಿದ್ದರೂ ಮಾನವೀಯತೆಯಲ್ಲಿ ಅಗರ್ಭ ಶ್ರೀಮಂತರಾಗಿರುವ ಈಶ್ವರ್ ಮಲ್ಪೆಯವರ ಸೇವೆ ಇನ್ನಷ್ಟು ಬೇಕೆಂಬ ಹಂಬಲದಿಂದ ಪ್ರತಿಯೊಬ್ಬನೂ ಈಶ್ವ‌ರ್ ಮಲ್ಪೆಯವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಈ ಸಂದರ್ಭದಲ್ಲಿ ಅರುಣ್ ಕುಮಾ‌ರ್ ಪುತ್ತಿಲ ಹೇಳಿದರು.

ಮಂಗಳೂರು: ನೀರುಪಾಲು ಘಟನೆ, ಓರ್ವ ಯುವಕನ ಮೃತದೇಹ ಪತ್ತೆ!

ಮಂಗಳೂರು: ಈಜಲು ತೆರಳಿದ್ದ ನಾಲ್ಕು ಮಂದಿ ಸ್ನೇಹಿತರ ಪೈಕಿ ಇಬ್ಬರು ನೀರಿನ ಸುಳಿಗೆ ಸಿಲುಕಿ ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ ಓರ್ವ ಯುವಕನ ಮೃತದೇಹ ಪತ್ತೆಯಾಗಿದೆ.
ಉರ್ವಸ್ಟೋರಿನ ಅನೀಶ್ (19) ಅವರ ಮೃತದೇಹ ಸೆ. 30ರಂದು ಬೆಳಗ್ಗೆ ಪತ್ತೆಯಾಗಿದೆ. ಅನೀಶ್ ಅವರ ಮೃತದೇಹವನ್ನು ಬೆಂಗ್ರೆಯ ಮುಳುಗು ತಜ್ಞರು ಮೇಲೆಕ್ಕೆತ್ತಿದ್ದಾರೆ. ಕೊಟ್ಟಾರ ಚೌಕಿಯ ಸುಮಿತ್ (20) ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಬೆಳಗ್ಗೆ ಬೆಂಗ್ರೆಯಿಂದ ಮುಳುಗು ತಜ್ಞರು ಆಗಮಿಸಿ ಯುವಕರಿಗಾಗಿ ಶೋಧ ಕಾರ್ಯ ಆರಂಭಿಸಿದ್ದರು. ಮುಳುಗು ತಜ್ಞರೊಂದಿಗೆ ಅಗ್ನಿಶಾಮಕ ದಳದವರೂ ಕಾರ್ಯಾಚರಣೆ ನಡೆಸುತ್ತಿದ್ದರು. ಬಜಪೆ ಪೊಲೀಸ್ ಇನ್‌ಸ್ಪೆಕ್ಟರ್ ಸಂದೀಪ್ ಜಿ.ಎಸ್. ಹಾಗೂ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಇದ್ದರು.

ಕಾರ್ಕಳ: ರಸ್ತೆ ದಾಟುವ ವೇಳೆ ಕಂಟೈನರ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಕಾರ್ಕಳ: ತಾಲೂಕಿನ ಬೈಲೂರಿನಲ್ಲಿ ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ಕಂಟೈನರ್ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಸೆ. 30ರಂದು ಸಂಭವಿಸಿದೆ. ಮೃತರು ಯರ್ಲಪ್ಪಾಡಿಯ ವಸಂತ ಆಚಾರ್ಯ (64). ಇವರು ಬೈಲೂರಿನಲ್ಲಿ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ ಸಂದರ್ಭ ಉಡುಪಿಯಿಂದ ಕಾರ್ಕಳ ಕಡೆ ಸಾಗುತ್ತಿದ್ದ ಲಾರಿ ವಸಂತ ಅವರಿಗೆ ಡಿಕ್ಕಿಯಾಗಿದೆ. ಪರಿಣಾಮ ವಸಂತ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಬಂಟ್ವಾಳ: ಮನೆಗೆ ಸಿಡಿಲು,ಅಪಾರ ಹಾನಿ

ಬಂಟ್ವಾಳ: ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಅಪಾರ ಹಾನಿಯುಂಟಾದ ಘಟನೆ ಬಂಟ್ವಾಳದ ಉರುವಾಲು ಗ್ರಾಮದ ಸೆ. 30ರಂದು ಸಂಜೆ ನಡೆದಿದೆ.
ತಾರಿದಡಿ ನಿವಾಸಿ ಸೇಸಪ್ಪ ಅವರ ಮನೆಗೆ ಸಿಡಿಲು ಬಡಿದಿದ್ದು, ಗೋಡೆ ಬಿರುಕು ಬಿಟ್ಟಿದೆ. ಇದರೊಂದಿಗೆ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಸಿಡಿಲು ಬಡಿದ ಸಂದರ್ಭದಲ್ಲಿ ಸೇಸಪ್ಪ ಗೌಡರು ಮಕ್ಕಳನ್ನು ಶಾಲೆಯಿಂದ ಕರೆದು ಬರಲು ತೆರಳಿದ್ದರು. ಹೀಗಾಗಿ ಸಂಭವನೀಯ ಅಪಾಯ ತಪ್ಪಿ. ಇನ್ನು ಸಿಡಿಲು ಬಡಿದ ಪರಿಣಾಮ 9 ವರ್ಷಗಳ ಹಿಂದೆ ಕಟ್ಟಿದ್ದ ಈ ಮನೆಯ ಸಂಪೂರ್ಣ ಹಾನಿಗೀಡಾಗಿದೆ ಎಂದು ಸೇಸಪ್ಪ ಅವರು ಹೇಳಿದ್ದಾರೆ

Categories
ಚಿತ್ರದುರ್ಗ ದಕ್ಷಿಣ ಕನ್ನಡ ಹಾಸನ

ರಸ್ತೆ ಮಧ್ಯೆ ಹೊತ್ತಿ ಉರಿಯುತ್ತಿರುವ ವಾಹನಗಳು.. ಹುಷಾರ್!

ರಸ್ತೆ ಮಧ್ಯೆ ಹೊತ್ತಿ ಉರಿಯುತ್ತಿರುವ ವಾಹನಗಳು.. ಹುಷಾರ್!
– ರಾಜ್ಯದಲ್ಲಿ ಹಲವೆಡೆ ಕಾರು, ಲಾರಿ ನಿಂತಲ್ಲೇ ಭಸ್ಮ
– ಮಂಗಳೂರು, ಹಾಸನ, ಚಿತ್ರದುರ್ಗದಲ್ಲಿ ಘಟನೆ

NAMMUR EXPRESS NEWS
ಮಂಗಳೂರು/ಹಾಸನ/ಚಿತ್ರದುರ್ಗ: ಇತ್ತೀಚಿಗೆ ರಸ್ತೆಯಲ್ಲಿ ಕಾರು, ವಾಹನಗಳು ಇದ್ದಕ್ಕಿದ್ದಂತೆ ಹೊತ್ತಿ ಉರಿಯುವ ಘಟನೆಗಳು ಹೆಚ್ಚಾಗುತ್ತಿವೆ. ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ ಮೂರು ಘಟನೆಯಲ್ಲಿ ಲಾರಿ, ಕಾರು, ಓಮ್ನಿ ಹೊತ್ತಿ ಉರಿದಿದೆ.
ಚಿತ್ರದುರ್ಗದಲ್ಲಿ ಹೊತ್ತಿ ಉರಿದ ಶಾರ್ಟ್‌ ಸರ್ಕ್ಯೂಟ್‌ನಿಂದ ಆಯಿಲ್ ಕಂಟೈನ‌ರ್ ಹೊತ್ತಿ ಉರಿದ ಘಟನೆ – ಚಿತ್ರದುರ್ಗ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ನಗರದ ನವೀನ್ ಐಶ್ವರ್ಯ ಹೋಟಲ್ ಮುಂಭಾಗದ ಹೆದ್ದಾರಿಯಲ್ಲಿ ಬೆಂಗಳೂರಿಂದ ಬಳ್ಳಾರಿ ಕಡೆಗೆ ಸಾಗುತ್ತಿದ್ದ ಕಂಟೈನರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೇತ್ತ ಚಾಲಕ, ಕ್ಲೀನರ್ ಕಂಟೈನರ್‌ನಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.

ಹಾಸನದಲ್ಲಿ ಹೊತ್ತಿ ಉರಿದ ಓಮ್ನಿ!

ಹಾಸನ: ಚಲಿಸುತ್ತಿದ್ದ ಓಮ್ಮಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಹಾಸನದಲ್ಲಿ ನಡೆದಿದ್ದು ಇತರ ಸವಾರರನ್ನು ಬೆಚ್ಚಿ ಬೀಳಿಸಿದೆ. ಓಮ್ಮಿ ಕಾರು ನೋಡನೋಡುತ್ತಿದ್ದಂತೆ ಹೊತ್ತಿ ಉರಿದಿದೆ. ಈ ವೇಳೆ ಇದರಲ್ಲಿ ಮೂರು ಜನ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಹಾಸನನ ಹೆರಗು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆನಳ್ಳಿ ಗ್ರಾಮದ ಅಶೋಕ್ ಎಂಬುವವರಿಗೆ ಸೇರಿದ ಓಮ್ಮಿ ಕಾರಿಗೆ ಬೆಂಕಿ ಹೊತ್ತಿ ಉರಿದಿದೆ. ಕೂಡಲೇ ರಸ್ತೆಯಲ್ಲಿಯೇ ಕಾರು ನಿಲ್ಲಿಸಿದ ಚಾಲಕ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಕಾರು ಸಂಪೂರ್ಣ ಸುಟ್ಟು ಹೋಗಿದೆ.

ಮಂಗಳೂರಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಕಾರು!

ಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಇದ್ದಕಿದ್ದಂತೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಅಡ್ಯಾರ್ ಸಹ್ಯಾದ್ರಿ ಕಾಲೇಜು ಬಳಿ ಸಂಭವಿಸಿದೆ.
ಶನಿವಾರ ಮಧ್ಯಾಹ್ನದ ಹೊತ್ತಿಗೆ ಘಟನೆ ಸಂಭವಿಸಿದ್ದು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಕಾರು ಚಾಲಕ ಕಾರನ್ನು ನಿಲ್ಲಿಸಿದ್ದು ಕೂಡಲೇ ಕಾರಿನಲ್ಲಿದ್ದವರು ಹೊರ ಬಂದು ಜೀವ ಉಳಿಸಿಕೊಂಡಿದ್ದಾರೆ. ಬೆಂಕಿ ಅವಘಡದಿಂದ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

Categories
ದಕ್ಷಿಣ ಕನ್ನಡ

ಸೌಜನ್ಯ ಕೇಸ್ ಮರು ತನಿಖೆ ಇಲ್ಲ!?

ಸೌಜನ್ಯ ಕೇಸ್ ಮರು ತನಿಖೆ ಇಲ್ಲ!?
– ಸೌಜನ್ಯ ಪೋಷಕರು ಸಲ್ಲಿಸಿದ ಅರ್ಜಿ ವಜಾ ಮಾಡಿದ ಕೋರ್ಟ್
– ಸೌಜನ್ಯ ಪರ ಹೋರಾಟಗಾರರಿಗೆ ತುಸು ನಿರಾಸೆ

NAMMUR EXPRESS NEWS
ಬೆಂಗಳೂರು: ದೇಶದಲ್ಲೇ ಭಾರೀ ಸಂಚಲನ ಮೂಡಿಸಿ ಇನ್ನೂ ನಿಗೂಢವಾಗಿ ಉಳಿದ ಸೌಜನ್ಯ ಪ್ರಕರಣದ ಹೈಕೋರ್ಟ್ ತೀರ್ಪು ಹೊರಬಿದ್ದಿದೆ.
ಸೌಜನ್ಯ ಕೊಲೆಯಾಗಿ 12 ವರ್ಷ ಆದರೂ ಇಂದು ನ್ಯಾಯ ಸಿಕ್ಕಿಲ್ಲ. ಈ ಹಿಂದೆ ನಡೆದ ತನಿಖೆಗಳಲ್ಲಿ ಸೌಜನ್ಯಗಳಿಗೆ ಸರ್ಕಾರದ ಅಂಗ ಸಂಸ್ಥೆಗಳೇ ಅನ್ಯಾಯ ಮಾಡಿದ್ದವು. ಹೀಗಾಗಿ ಸೌಜನ್ಯ ಮರುತನಿಗೆ ಮಾಡಬೇಕು ಎನ್ನುವ ಹಕ್ಕೋತ್ತಾಯ ಜನರಿಂದ ಮೂಡಿಬಂದಿತ್ತು. ಈ ಸಂಬಂಧ ಮಹೇಶ್‌ ಶೆಟ್ಟಿ ತಿಮರೋಡಿ ನೇತೃತ್ವದ ಹೋರಾಟಗಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ತೀರ್ಪು ನೀಡಿದೆ.
ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಲು ಆಗುವುದಿಲ್ಲ ಎಂದು ಹೇಳಿದೆ ಹೈಕೋರ್ಟ್. ಈ ಮೂಲಕ ಸೌಜನ್ಯಾ ಪೋಷಕರು ಸಲ್ಲಿಸಿದ ಅರ್ಜಿ ವಜಾ ಆಗಿದೆ.
ಧರ್ಮಸ್ಥಳದ ಸೌಜನ್ಯ ಪ್ರಕರಣವನ್ನು ಪೊಲೀಸರುಗಳು ವೈದ್ಯರುಗಳು ರಾಜಕಾರಣಿಗಳು ಮತ್ತು ಡೀ ್ಯವಸ್ಥೆ ತನಿಖೆ ಆಗದಂತೆ ನೋಡಿಕೊಂಡಿತ್ತು. ಎಲ್ಲರೂ ಸೇರಿಕೊಂಡು ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎಂದು ಆರೋಪಿಸಿ ಕಳೆದ 12 ವರ್ಷಗಳಿಂದಲೂ ತಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಲು ಸೌಜನ್ಯಾಳ ತಾಯಿ ಕುಸುಮಾವತಿ ಹೋರಾಟ ಮಾಡುತ್ತಿದ್ದಾರೆ.
ಸೌಜನ್ಯ ಪ್ರಕರಣದ ಪ್ರಾರಂಭದಿಂದಲೂ ಮಹೇಶ್ ಶೆಟ್ಟಿ ತಿಮರೋಡಿ, ಸಂತಸ್ಥ ಕುಟುಂಬದ ಬೆನ್ನಿಗೆ ನಿಂತಿದ್ದಾರೆ. ಕಾಲದಿಂದ ಕಾಲಕ್ಕೆ ಹೊಸ ಹೊಸ ಹೋರಾಟಗಾರರು ಸೌಜನ್ಯ ಪರ ಹೋರಾಟದ ಉದ್ದೇಶಕ್ಕೆ ಬಲ ತುಂಬಿದ್ದು, ಮಾಜಿ ಪೊಲೀಸ್‌ ಅಧಿಕಾರಿ ಗಿರೀಶ್ ಮಟ್ಟಣ್ಣನವ‌ರ್ ಈ ಪೈಕಿ ಪ್ರಮುಖ ಹೆಸರು. ಇವರೆಲ್ಲರ ಪ್ರಯತ್ನದ ಫಲವಾಗಿ ಸೌಜನ್ಯ ಪ್ರಕರಣ ಮರು ತನಿಖೆಗೆ ಹೋಗಬೇಕು ಎಂದು ಕೋರ್ಟ್ ಮೆಟ್ಟಲು ಹತ್ತಿದ್ದರು. ಆದರೆ ಕೋರ್ಟ್ ಇದೀಗ ಸೌಜನ್ಯ ಹೋರಾಟಗಾರರಿಗೆ ತುಸು ನಿರಾಸೆ ಮೂಡಿಸಿದೆ.