Categories
ಹಬ್ಬಗಳು

ಗಣೇಶ ಮತ್ತೆ ಬಂದ.. ಏನಿದು ಹಬ್ಬದ ವಿಶೇಷ?!

ಗಣೇಶ ಮತ್ತೆ ಬಂದ.. ಏನಿದು ಹಬ್ಬದ ವಿಶೇಷ?!
– ಆಚರಣೆ ಹೇಗೆ..? ಎಲ್ಲರಿಗೂ ಹಬ್ಬದ ಶುಭಾಶಯಗಳು

NAMMUR EXPRESS NEWS
ಭಗವಂತ ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ. ಅಂದರೆ, ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಿಸುವವನು. ಮಹಾಭಾರತವನ್ನು ಬರೆಯುವಾಗ ವ್ಯಾಸರು ಉತ್ತಮ ಲಿಪಿಕಾರನನ್ನು ಅರಸುವ ಸಂದರ್ಭ ಸಿಕ್ಕಿದ್ದು ಈ ಗಜಮುಖನೆ. ಈ ಮೂಲಕ ಗಣೇಶನ ಬುದ್ಧಿವಂತಿಕೆಯನ್ನು ಗಮನಿಸಬಹುದಾಗಿದೆ.
ಗಣೇಶ ಚತುರ್ಥಿಯು ಹಿಂದೂ ಧರ್ಮದಲ್ಲಿ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ವಿಘ್ನಹರ್ತಾ, ಬುದ್ಧಿಯ ದೇವರು ಎಂದು ಪೂಜಿಸಲ್ಪಡುವ ಗಣಪತಿಯ ಜನ್ಮದಿನವನ್ನು ಆಚರಿಸುತ್ತದೆ. ಈ ಹಬ್ಬವು ಭಾರತದಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲ್ಪಡುತ್ತದೆ ಮತ್ತು ಇದಕ್ಕೆ ಹಲವಾರು ಮಹತ್ವಗಳಿವೆ.

* ಅವುಗಳನ್ನು ಒಂದೊಂದಾಗಿ ಗಮನಿಸುವುದಾದರೆ!

ವಿಘ್ನ ನಿವಾರಣೆ: ಗಣೇಶನನ್ನು ವಿಘ್ನವಿನಾಶಕ ಎಂದು ಪೂಜಿಸಲಾಗುತ್ತದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಗಣಪತಿಯನ್ನು ಪೂಜಿಸುವುದರಿಂದ ಎ್ಲಾ ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

ಗಣೇಶನ ಮೂರ್ತಿ ಪ್ರತಿಷ್ಠಾಪನೆ: ಈ ದಿನ ಮನೆ ಅಥವಾ ಪೂಜಾ ಮಂದಿರದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ಸಾಮಾಜಿಕ ಮಹತ್ವ: ಈ ಹಬ್ಬವು ಜನರನ್ನು ಒಂದುಗೂಡಿಸುವ ಮತ್ತು ಸಾಮಾಜಿಕ ಬಾಂಧವ್ಯವನ್ನು ಬಲಪಡಿಸುವ ಒಂದು ಅವಕಾಶವಾಗಿದೆ.
ಒಟ್ಟಾರೆಯಾಗಿ, ಗಣೇಶ ಚತುರ್ಥಿಯು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಮಹತ್ವವನ್ನು ಹೊಂದಿರುವ ಒಂದು ಹಬ್ಬವಾಗಿದೆ.
ಒಟ್ಟಿನಲ್ಲಿ ಏಕದಂತ ಗಣೇಶನು ನಿಮ್ಮ ಇಷ್ಟಾರ್ಥಗಳನ್ನೆಲ್ಲ ಈಡೇರಿಸಲಿ.

ಸಮಸ್ತ ಜನತೆಗೆ ವಿನಾಯಕ ಒಳ್ಳೆಯದನ್ನು ಮಾಡಲಿ…

Categories
ಹಬ್ಬಗಳು

ಗೌರಿ ಹಬ್ಬದ ಸಡಗರ… ಸಂಭ್ರಮ..!

ಗೌರಿ ಹಬ್ಬದ ಸಡಗರ… ಸಂಭ್ರಮ..!
– ಹೆಣ್ಣಿನ ಸೌಭಾಗ್ಯದ ಪವಿತ್ರ ಹಬ್ಬ ಸ್ವರ್ಣಗೌರಿ ಹಬ್ಬ
– ಸಮಸ್ತ ಜನತೆಗೆ ಗೌರಿ ಹಬ್ಬದ ಶುಭಾಶಯಗಳು

NAMMUR EXPRESS NEWS
ಹೆಣ್ಣು ತನ್ನ ಸೌಮಾಂಗಲ್ಯಕ್ಕಾಗಿ ಮಾಡುವ ವಿವಿಧ ಪೂಜೆ- ವ್ರತಗಳಲ್ಲಿ ಸ್ವರ್ಣಗೌರಿ ವ್ರತ ಪ್ರಮುಖವಾದದ್ದು. ಈ ಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.
ಹೊಸದಾಗಿ ಮದುವೆಯಾದವರಿಗೆ ಈ ಹಬ್ಬ ಪವಿತ್ರವಾದುದು. ಇನ್ನು ಪ್ರತಿ ಮನೆಯಲ್ಲೂ ತವರಿನ ಬಾಗಿನ ಕೊಡುವುದು ವಾಡಿಕೆ ಇದೆ.
ಭಾದ್ರಪದ ಮಾಸದ ತದಿಗೆಯಂದು ಸ್ವರ್ಣಗೌರಿ ವ್ರತವನ್ನು ಆಚರಿಸಲಾಗುತ್ತದೆ. ಆಷಾಢಮಾಸದ ಮಧ್ಯದಲ್ಲಿ ಉತ್ತರಾಯಣ ಕಾಲ ಮುಗಿದು ದಕ್ಷಿಣಾಯನ ಆರಂಭವಾಗುತ್ತಿದ್ದಂತೆ ವ್ರತಗಳು ಆರಂಭವಾಗುತ್ತವೆ. ಜ್ಯೋತಿರ್ಭೀಮೇಶ್ವರ ವ್ರತದಿಂದ ಆರಂಭವಾಗಿ ಶ್ರಾವಣಮಾಸದಲ್ಲಿ ಮಂಗಳಗೌರಿ, ವರಮಹಾಲಕ್ಷ್ಮಿ ವ್ರತಗಳ ನಂತರ ಬರುವುದೇ ಭಾದ್ರಪದ ಮಾಸದ ತದಿಗೆ. ಮಹಾಗೌರಿಯನ್ನು ಪೂಜಿಸುವ ಸ್ವರ್ಣಗೌರಿ ವ್ರತವು ಸುಮಂಗಲಿಯರ ಪ್ರಮುಖ ಹಬ್ಬ.
ಸ್ವರ್ಣಗೌರಿಯನ್ನು ವ್ರತ ನಿಯಮದಂತೆ ಪೂಜಿಸುವ ಮುತ್ತೈದೆಯರಿಗೆ ದೀರ್ಘ ಸೌಮಾಂಗಲ್ಯ ಪ್ರಪ್ಿಯಾಗಿ ಸಕಲ ಭೋಗ-ಭಾಗ್ಯಗಳು ದೊರೆಯುತ್ತವೆ ಎಂದು ಶಾಸ್ತ್ರಗ್ರಂಥಗಳು ಉಲ್ಲೇಖಿಸಿವೆ. ಶಿವ-ಪಾರ್ವತಿಯರ ಪುತ್ರಶ್ರೇಷ್ಠನಾದ ಷಣ್ಮುಖನು ಜಗದೀಶ್ವರನಲ್ಲಿ ಭೂಲೋಕದ ಮಾನವರ ಸಕಲ ಇಷ್ಟಾರ್ಥಗಳೆಲ್ಲವನ್ನೂ ಪೂರೈಸುವ ಶ್ರೇಷ್ಠ ವ್ರತ ಯಾವುದು ಎಂದು ಕೇಳಿದಾಗ ಸಾಕ್ಷಾತ್ ಶಿವನೇ ಹೇಳಿದ ಶ್ರೇಷ್ಠ ವ್ರತವೇ ಸ್ವರ್ಣಗೌರಿ ವ್ರತ.
ಬಾಗಿನ ಅರ್ಪಣೆ: ಗೌರಿ ಹಬ್ಬದ ಪ್ರಮುಖವಾದ ಭಾಗ ಸುಮಂಗಲಿಯರಿಗೆ ಬಾಗಿನ ನೀಡುವುದು. ‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ’ ಎಂಬ ಮಾತಿನಂತೆ ಪ್ರತಿಯೋರ್ವ ಸ್ತ್ರೀ ಕೂಡಾ ಶಕ್ತಿಯ ಪ್ರತಿರೂಪ ಎಂಬುದರ ಪ್ರತೀಕವಾಗಿ ಸ್ವರ್ಣಗೌರಿ ವ್ರತದಲ್ಲಿ 16 ಜನ ಮುತ್ತೈದೆಯರಿಗೆ ಬಾಗಿನ ಸಮರ್ಪಿಸಬೇಕು. ಬಾಗಿನ ಸಮರ್ಪಣೆಯ ಹೊರತು ವ್ರತ ಸಂಪೂರ್ಣವಾಗುವುದಿಲ್ಲ. ಬಾಗಿನವನ್ನು ಮಾಡಿರುವ ನೀಡಬೇಕೆಂಬ ಬಿದಿರಿನಿಂದ ಮೊರದಲ್ಲಿಯೇ ನಿಯಮವಿದೆ. ಬಾಗಿನವನ್ನು ತೆರೆದು ನೀಡಬಾರದು, ಮುಚ್ಚಿ ಕೊಡುವುದು ಪದ್ಧತಿ. ಮುಚ್ಚಿದ ಬಾಗಿನ ಕೊಟ್ಟು ಮುತ್ತೈದೆಯಾಗಿರು ಎಂದು ಬಾಗಿನ ಹರಸುತ್ತಾರೆ. ಪಡೆದವರು ಒಂದು ಮೊರದಲ್ಲಿ ಅಕ್ಕಿ, ಬೆಲ್ಲ, ಬೇಳೆ, ಕುಪ್ಪಸ, ಬಳೆ, ಕನ್ನಡಿ, ಕಾಲುಂಗುರ ಇತ್ಯಾದಿ ಶುಭಕಾರಕ ವಸ್ತುಗಳನ್ನು ಇಟ್ಟು ಮತ್ತೊಂದು ಮೊರವನ್ನು ಮುಚ್ಚಿ ಮುತ್ತೈದೆಯರ ಉಡಿ ತುಂಬಿ ಆರತಿ ಬೆಳಗಿ ಅವರ ಮನಸ್ಸಂತೋಷ ಪಡಿಸಬೇಕು. ಮುತ್ತೈದೆಯರು ಸಂತೋಷಪಟ್ಟರೆ ಬಾಗಿನ ನೀಡಿದವರು ಅಖಂಡ ಸೌಭಾಗ್ಯವತಿಯಾಗುತ್ತಾರೆ. ಆ ಮೂಲಕ ವ್ರತದ ಫಲ ಸಂಪೂರ್ಣವಾಗಿ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಎಲ್ಲೆಡೆ ಗೌರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಕೆಲವೆಡೆ ಗುರುವಾರವೇ ಆಚರಣೆ ಮಾಡಲಾಗಿದೆ.

ಸಮಸ್ತ ಜನತೆಗೆ ಗೌರಿ ಹಬ್ಬದ ಶುಭಾಶಯಗಳು

Categories
ಹಬ್ಬಗಳು

ಗೌರಿ – ಗಣೇಶ ಹಬ್ಬಕ್ಕೆ ಮಳೆ ಅಡ್ಡಿ!

ಗೌರಿ – ಗಣೇಶ ಹಬ್ಬಕ್ಕೆ ಮಳೆ ಅಡ್ಡಿ!
– ನಿರಂತರ ಗಾಳಿ ಜತೆಗೆ ಭಾರಿ‌ ಮಳೆ ಎಚ್ಚರಿಕೆ
– ಮುಂದಿನ ಮೂರು ದಿನ ಬಾರಿ ಮಳೆಯಾಗುವ ಮುನ್ಸೂಚನೆ

NAMMUR EXPRESS NEWS
ಬೆಂಗಳೂರು: ನೈರುತ್ಯ ಮುಂಗಾರು ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿದ್ದರೆ, ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿದೆ. ಗುರುವಾರದಂದು ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯೊಂದಿಗೆ ನಿರಂತರ ಗಾಳಿಯ ವೇಗ ತಲುಪುವ ಸಾಧ್ಯತೆಯಿದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

– ಗೌರಿ-ಗಣೇಶ ಹಬ್ಬಕ್ಕೆ ಮಳೆಯಾಟ

ಸೆ.6-7ರಂದು ಗೌರಿ -ಗಣೇಶ ಹಬ್ಬದಂದು ಮಳೆಯು ಅಬ್ಬರಿಸಲಿದೆ. ಶುಕ್ರವಾರದಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಶನಿವಾರದಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಹಗುರ ಮಳೆಯಾಗುವ ಾಧ್ಯತೆ ಹೆ್ಚಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಡಿ.ಸೆ ಮತ್ತು 20 ಡಿ.ಸೆ ಇರಲಿದೆ.

Categories
ಹಬ್ಬಗಳು

ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ಸಿದ್ಧತೆ!

ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ಸಿದ್ಧತೆ!
– ಗೌರಿ ಹಬ್ಬ ಹೆಣ್ಣು ಮಕ್ಕಳ ಹಬ್ಬ: ಎಲ್ಲೆಡೆ ಸಂಭ್ರಮ
– ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಗಣೇಶನ ಮೂರ್ತಿ

NAMMUR EXPRESS NEWS
ಗೌರಿ, ಗಣೇಶ ಹಬ್ಬ ಎಂದರೆ ಎಲ್ಲರಿಗೂ ಸಂಭ್ರಮ. ಎಲ್ಲೆಡೆ ಸಾರ್ವಜನಿಕವಾಗಿ ಗಣೇಶನನ್ನು ಕೂರಿಸಲೆಂದು ಭರ್ಜರಿ ತಯಾರಿಯೂ ನಡೆಯುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಈ ಹಬ್ಬಕ್ಕೆಂದು ಸಾಕಷ್ಟು ತಯಾರಿಯಲ್ಲಿ ಇರುತ್ತಾರೆ. ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನ ತಯಾರಿ ನಡೆಸಿದ್ದಾರೆ.
ಗೌರಿ ಹಬ್ಬ ಹೆಣ್ಣುಮಕ್ಕಳ ಅತ್ಯಂತ ಸಂಭ್ರಮದ ಹಬ್ಬವಾಗಿದೆ. ಈ ಹಬ್ಬದಲ್ಲಿ ತವರು ಮನೆಯಿಂದ ಬರುವ ಉಡುಗೊರೆಯನ್ನ ತುಂಬಾ ಸಂಭ್ರಮದಿಂದ ಹೆಣ್ಣು ಮಕ್ಕಳು ಆಚರಿಸುವ ಹಬ್ಬವೇ ಆಗಿದೆ.
ಹಳ್ಳಿ ಹಳ್ಳಿಗಳಿಂದ ಹಿಡಿದು ಎಲ್ಲಾ ನಗರ ಭಾಗಗಳಲ್ಲೂ ಗಣೇಶ ಕೂರಿಸುವುದು ಎಂದರೆ ಒಂದು ರೀತಿಯ ಸಂಭ್ರಮ.

ಈಗಾಗೇ ಮಾರುಕಟ್ಟೆಯಲ್ಲೂ ಕೂಡ ಗಣೇಶನ ಮೂರ್ತಿಗಳು ಬಂದಿವೆ. ಗಣೇಶನ ಮೂರ್ತಿಗಳನ್ನು ಕೆಲವೊಂದಿಷ್ಟು ಹಳ್ಳಿಗಳಲ್ಲಿ ನಗರ ಪ್ರದೇಶಗಳಲ್ಲಿ ಅದನ್ನ ಬುಕ್ ಮಾಡಿಕೊಂಡು ಹೋಗಿರುತ್ತಾರೆ, ವಿವಿಧ ಬಣ್ಣದ ವಿವಿಧ ವಿನ್ಯಾಸದಲ್ಲಿ ನಾವು ಗಣೇಶನ ಮೂರ್ತಿಯನ್ನು ಮಾರುಕಟ್ಟೆಯಲ್ಲಿ ನೋಡಬಹುದಾಗಿದೆ. ಪರಿಸರ ಸ್ನೇಹಿ ಗಣಪತಿಯನ್ನ ನಾವು ಪೂಜೆ ಮಾಡಿ ಗಣಪತಿ ಹಬ್ಬವನ್ನು ಸಂಭ್ರಮಿಸೋಣ.
ಗಣೇಶ ಹಬ್ಬವನ್ನು ಎಲ್ಲರೂ ಕೂಡ ಸಂಭ್ರಮದಿಂದ ಆಚರಣೆ ಮಾಡುತ್ತಾರೆ, ಮಾರುಕಟ್ಟೆಯಲ್ಲೂ ಕೂಡ ವಿವಿಧ ಬಗೆಯ ಹೂಗಳು ಹಣ್ಣುಗಳು ಕೂಡ ಜನರ ಗಮನ ಸೆಳೆಯುತ್ತದೆ, ಬೆಲೆಗಳು ಕೂಡ ಹೆಚ್ಚಾಗಿದ್ದು ಜನರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಕೂಡ ಇದೆ ಆದರೆ ಗಣಪತಿ ಹಬ್ಬ ಎಂದರೆ ಎಲ್ಲರೂ ಕೂಡ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ, ಎಲ್ಲಾರ ಮನೆಗಳಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳನ್ನ ಮಾಡಿ ದೇವರಿಗೆ ನೈವೇದ್ಯವನ್ನ ಇಟ್ಟು ಪೂಜೆ ಪುನಸ್ಕಾರವನ್ನ ಮಾಡಿ ಎಲ್ಲರೂ ಕೂಡ ತುಂಬಾ ಸಂಭ್ರಮದಿಂದ ಸಂಭ್ರಮಿಸುವ ಹಬ್ಬವೇ ಗೌರಿ ಗಣೇಶ ಹಬ್ಬ.

Categories
ಹಬ್ಬಗಳು

ಕೃಷ್ಣನನಿಗಿಂದು ಜನ್ಮಾಷ್ಟಮಿ: ಎಲ್ಲೆಡೆ ಮಕ್ಕಳ ಸಂಭ್ರಮ

ಕೃಷ್ಣನನಿಗಿಂದು ಜನ್ಮಾಷ್ಟಮಿ: ಎಲ್ಲೆಡೆ ಮಕ್ಕಳ ಸಂಭ್ರಮ
– ಇಸ್ಕಾನ್, ಉಡುಪಿ ಸೇರಿ ಕೃಷ್ಣ ದೇವಾಲಯಗಳಲ್ಲಿ ಪೂಜೆ
– ಕೃಷ್ಣ ರಾಧೆ ವೇಷ ಸ್ಪರ್ಧೆ: ಸಮಸ್ತ ಜನತೆಗೆ ಶುಭಾಶಯಗಳು

NAMMUR EXPRESS NEWS
ಬಾಲಕನಾಗಿದ್ದಾಗ ಕೃಷ್ಣನ ತುಂಟತನದ ಆಟ ಯೌವನದ ಕೃಷ್ಣಲೀಲೆ ಕುರುಕ್ಷೇತ್ರದಲ್ಲಿ ಬುದ್ಧಿವಂತಿಕೆ ಕೃಷ್ಣನನ್ನು ಹೀಗೆ ಎಂದು ವರ್ಣಿಸಲಸಾಧ್ಯ ಕೃಷ್ಣ ನೋಡಲು ಸ್ತ್ರೀ ಲೋಲನಂತೆ ಕಂಡರೂ ಸಹೃದಯತೆ ಗೋಪಿಕೆಯರ ಗೋವಿಂದ ಸುಭದ್ರ ದ್ರೌಪದಿಯರ ಪ್ರತಿಕ್ಷಣ ಕಾಯುವ ಪ್ರೀತಿಯ ಸಹೋದರ ಯಶೋಧೆಯ ಮುದ್ದು ಕಂದಮ್ಮಸುಧಾಮ ಅರ್ಜುನರ ಪ್ರಿಯಮಿತ್ರ ಭಕ್ತರನ್ನು ಸಲಹುವ ಭಗವಂತ .
ಬಾಲ್ಯದಿಂದಲೂ ಬೆಣ್ಣೆಯೆಂದರೇ ಬಲು ಪ್ರೀತಿ ಯಶೋಧೆ ಬೆಣ್ಣೆ ಕಡೆಯುತ್ತಿದ್ದಂತೆ ಬೆಣ್ಣೆ ಕದ್ದು ತಿನ್ನುತ್ತಿದ್ದ ಬೆಣ್ಣೆ ನಿಲುಕದಂತೆ ಕದ್ದಿಟ್ಟರು ಹುಡುಕಿ ಕದ್ದು ತಿನ್ನುತ್ತಿದ್ದವ ಗೋಕುಲದಲ್ಲಿ ಬಾಲಕೃಷ್ಣ ಕಳ್ಳಕೃಷ್ಣ , ಬೆಣ್ಣೆಕೃಷ್ಣನಾಗಿದ್ದ.
ಆಟ ಆಡುವಾಗ ಮಣ್ಣು ತಿಂದ ಎಂದು ಗದರಿಸಿ ಬಾಯ ತೆರಸಿದ ಯಶೋಧೆ ಕೃಷ್ಣನ ಬಾಯಿಯಲ್ಲಿ ವಿಶ್ವವನ್ನೇ ನೋಡಿ ಕೃಷ್ಣ ಸಾಧಾರಣ ಬಾಲಕನಲ್ಲ ಎಂದು ಅರಿತಿದ್ದಳು.
ಭಾರತ ಮೊದಲೇ ಅವತಾರ ಪುರುಷರ ನಾಡು ಇಲ್ಲಿ ಅವತಾರ ಎತ್ತಿದ್ದವರ ನೆನಪನ್ನು ಹಬ್ಬದಂತೆ ಆಚರಿಸುವ ರೂಢಿ ನಮ್ಮ ಸನಾತನ ಸಂಸ್ಕೃತಿಯದ್ದು
ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುವುದು
ಕೃಷ್ಣನ ಅವತಾರವೇ ಧರ್ಮ ಸಂಸ್ಥಾಪನೆಗೆ ದುಷ್ಟರ ನಾಶಕ್ಕಾಗಿ ಮಹಾವಿಷ್ಣು ಕೃಷ್ಣನ ಅವತಾರ ತಾಳಿ ಗರ್ಭ ಪ್ರವೇಶಿಸುವಾಗಲೇ ಕೃಷ್ಣನನ್ನು ಹೊಸಕಿ ಹಾಕುವ ಹುನ್ನಾರ ನಡೆದಿತ್ತು. ವಿಧಿಲಿಖಿತ ದೇವಕಿಗೆ ಯಾವುದೇ ಅಪಾಯಗಳು ಆಗಿರಲಿಲ್ಲ ದೇವಕಿಯ ಎಂಟನೇ ಮಗನಿಂದ ಸಾವು ಎಂದು ಕಂಸನಿಗೆ ಅಶರೀರವಾಣಿಯಿಂದ ತಿಳಿದಿದ್ದರಿಂದ ಕಂಸ ದೇವಕಿ ಮತ್ತು ವಸುದೇವನನ್ನು ಸೆರೆಮನೆಯಲ್ಲಿರಿಸಿದ್ದ ಕಾರಗೃಹ ಕೊಣೆಯಲ್ಲಿ ಗುಡುಗು ಸಿಡಿಲು ಆರ್ಭಟದ ನಡುವೆಯೂ ಪ್ರಕಾಶಮಾನವಾದ ತೇಜಸ್ಸಿನಿಂದ ಕೋಣೆಯೇ ಬೆಳಗಲಾರಂಭಿಸಿ ನೀಲ ಮೇಘ ಶ್ಯಾಮನ ಜನನವಾಗಿತ್ತು ಕೃಷ್ಣ ಹುಟ್ಟುತ್ತಿದ್ದಂತೆ ಕಾರಾಗೃಹದ ಕೊಠಡಿ ತೆರೆಯಿತು. ಅಲ್ಲಿಂದ ವಸುದೇವದ ಮಗುವನ್ನು ಗೋಕುಲಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿ ಯಮುನಾ ನದಿಯ ದಡಕ್ಕೆ ಬಂದಾಗ ಕೃಷ್ಣನ ಪಾದ ಸ್ಪರ್ಶದಿಂದ ಯಮುನಾ ನದಿ ಇಭ್ಭಾಗವಾಗಿ ಹರಿಯಲಾರಂಭಿಸಿತು. ಮಳೆ ಸುರಿಯುತ್ತಿದ್ದು ಶೇಷ ನಾಗಹೆಡೆ ಬಿಚ್ಚಿ ಮಳೆಯಿಂದ ಕೃಷ್ಣನಿಗೆ ರಕ್ಷಣೆ ನೀಡಿದ್ದ ವಸುದೇವ ಗೋಕುಲದಲ್ಲಿ ಯಶೋಧೆಯೊಡನೆ ಮಗುವನ್ನು ಬಿಟ್ಟು ಬಂದಿದ್ದ. ಗೋಕುಲದಲ್ಲಿ ನಂದ ಮತ್ತು ಯುಶೋಧೆ ಮಗುವಿಗೆ” ಕೃಷ್ಣ” ಎಂದು ನಾಮಕರಣ ಮಾಡಿದರು ಅಲ್ಲಿಂದ ಕೃಷ್ಣ ಗೋಕುಲ ಕೃಷ್ಣನಾಗಿದ್ದ .
ಕಾಳಿಂಗ ಮರ್ಧನ ಮಾಡಿದವ, ಅರಿಷ್ಟಾಸುರನಿಗೆ ಬುದ್ದಿಕಲಿಸಿದವ ಬ್ರಹ್ಮನಿಗೆ ಪಾಠ ಕಲಿಸಿದ ಕೃಷ್ಣ. ಗೋವರ್ಧನ ಿರಿಯನ್ನು ಿರುಬೆರಳಲ್ಲಿ ಎತ್ತಿ ಹಿಡಿದಿವ,ಅಘಾಸುರ ಚಾಣೂರ ಕಂಸನಂತಹ ರಾಕ್ಷಸ ಗುಣದವರ ಸಂಹರಿಸಿ ಧರ್ಮ ಸಂಸ್ಥಾಪನೆಗಾಗಿ ಜನಿಸಿದ ಅವತಾರ ಪುರುಷ.
ಕೃಷ್ಣ ಎಂದರೆ ಚೇಷ್ಟೆಗೆ ಪ್ರಸಿದ್ದಿ ಸಣ್ಣ ಮಗುವಾಗಿದ್ದಾಗ ಯಶೋಧೆಯ ಮಮತೆಯ ಹೊಳೆ ಹರಿಸಿದವ, ಮಿತ್ರನಾಗಿ ಸುಧಾಮನ ದಾರಿದ್ರ್ಯಾ ಪರಿಹರಿಸಿದವ, ತಮ್ಮನಾಗಿ ಬಲರಾಮನಿಗೆ ಜೊತೆಯಾದವ, ಗೊಲ್ಲನಾಗಿ ಗೋವುಗಳ ಪರಿಪಾಲಿಸಿದವ, ಕುರುಕ್ಷೇತ್ರದ ಗೀತಪ್ರದಾಯಕ ಮೀರಾಳಿಗೆ ಮಾದವನಾಗಿ, ಭಕ್ತ ಕುಂಬಾರನಿಗೆ ವಿಠ್ಠಲನಾಗಿ, ಬೆಣ್ಣೆಕೃಷ್ಣ, ಮುದ್ದುಕೃಷ್ಣ, ನೀಲ ಕೃಷ್ಣ ನಾಗಿ ಅವರವರ ಭಾವಕ್ಕೆ ತಕ್ಕಂತೆ ಬೇರೆ ಬೇರೆ ತೆರನಾಗಿ ಅವರು ಇಷ್ಟಪಟ್ಟ ರೀತಿಯಲ್ಲೇ ಅವತಾರಗಳನ್ನು ಎತ್ತಿ ನೂರು ತಪ್ಪುಗಳನ್ನು ಮನ್ನಿಸುವ ಸಮಾಧಾನ ಗುಣದವ ಧರ್ಮ ಪರಿಪಾಲನೆ ನಿಮಿತ್ತಮಾತ್ರನಾಗಿ ಜಗತ್ತನ್ನು ನೋಡುವ ಪರಿ ಧೀನರಿಗೆ ಸಹಾಯ ನೀಡುವ ಹಸ್ತವಾಗಿ ಮಿತ್ರತ್ವಕ್ಕಾಗಿ, ಗುರುವಾಗಿ ಮಾರ್ಗದರ್ಶಿಯಾಗಿ, ಧರ್ಮಕ್ಕಾಗಿ ಶಾಸ್ತ್ರವನೆತ್ತು ಎಂದು ಹೇಳುವ ಪರಮಾತ್ಮನಾದ ಶ್ರೀ ಕೃಷ್ಣನ ಜನ್ಮದಿನವನ್ನು ಜನ್ಮಾಷ್ಟಮಿಯಾಗಿ ಆಚರಿಸುತ್ತೇವೆ.
ಈಗಾಗಲೇ ಉಡುಪಿ ಕೃಷ್ಣ ಮಠ, ಬೆಂಗಳೂರು ಇಸ್ಕಾನ್ ಸೇರಿ ಎಲ್ಲಾ ಕೃಷ್ಣ ದೇವಾಲಯಗಳಲ್ಲಿ ಪೂಜೆ ನಡೆಯುತ್ತಿದೆ.
ಮಕ್ಕಳು ಸಂಭ್ರಮದಿಂದ ಕೃಷ್ಣ ರಾಧೆ ವೇಷ ಹಾಕಿದ್ದಾರೆ.

ಸಮಸ್ತ ಜನತೆಗೆ ಶುಭಾಶಯಗಳು

Categories
ಹಬ್ಬಗಳು

ಮುಂಜಾನೆಯಿಂದ ನಾಗರ ಪೂಜೆ!

ಮುಂಜಾನೆಯಿಂದ ನಾಗರ ಪೂಜೆ!
– ನಾಗ ದೇವಾಲಯ, ನಾಗರಕಟ್ಟೆಯಲ್ಲಿ ಪೂಜೆ
– ಹೂವು, ಹಣ್ಣು ಹಾಕಿ ವಿಶೇಷ ಪ್ರಾರ್ಥನೆ

NAMMUR EXPRESS NEWS
ಶ್ರಾವಣ ಮಾಸದ ನಾಗರ ಪಂಚಮಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಎಲ್ಲೆಡೆಯೂ ಆಚರಿಸಲಾಗುತ್ತಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಬರುವ ಈ ಹಬ್ಬದ ದಿನ ನಾಗ ದೇವರನ್ನು ಪೂಜಿಸಿ ಉಪವಾಸ ಮಾಡುವ ಸಂಪ್ರದಾಯವಿದೆ. ನಾಗ ದೇವರನ್ನು ಪೂಜಿಸುವುದರಿಂದ ವ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿದೆ ಭಕ್ತಿ ಪೂರ್ವಕವಾಗಿ ಪೂಜಿಸಲಾಗುತ್ತಿದೆ. ಹಾಗಾಗಿ ನಾಗ ದೇವಾಲಯ, ನಾಗರ ಕಟ್ಟೆಗಳಲ್ಲಿ ನಾಗನಿಗೆ ಹಾಲು ಎರೆದು ವಿಶೇಷ ಪೂಜೆ ಮಾಡಲಾಗುತ್ತಿದೆ.

ಮುಂಜಾನೆ ಎದ್ದು ಶುದ್ಧರಾಗಿ ಹೊಸ ಬಟ್ಟೆಯನ್ನು ಧರಿಸಿ, ನಾಗರ ಕ್ಲಲುಗಳಿಗೆ ಹಾಲೆರೆದು, ಅರಿಶಿನ,ಕುಂಕುಮ, ಕೇದಿಗೆ ಹೂವು, ನಾಗರಿಗೆ ಪ್ರಿಯವಾದ ಭೋಗವನ್ನು ಅರ್ಪಿಸಿ, ದೂಫ ದೀಪ ಬೆಳಗಿ ಪ್ರದಕ್ಷಿಣೆಯನ್ನು ಹಾಕಲಾಗುತ್ತಿದೆ.
ಎಂಟು ಹಾವುಗಳನ್ನು ಈ ಹಬ್ಬದ ಪ್ರಮುಖ ದೇವರುಗಳೆಂದು ಪರಿಣಿಸಲಾಗುತ್ತದೆ. ಈ ದಿನ ಅನಂತ, ವಾಸುಕಿ, ಪದ್ಮ, ಮಹಾಪದ್ಮ, ತಕ್ಷಕ, ಕುಳಿರ, ಕಾರ್ಕೋಟಕ ಮತ್ತು ಶಂಖ ಎಂಬ ಎಂಟು ಸರ್ಪಗಳನ್ನು ಪೂಜಿಸಲಾಗುತ್ತದೆ.
ಚತುರ್ಥಿಯ ದಿನ ಒಂದು ಹೊತ್ತಿನ ಊಟ ಮಾಡಿ ಪಂಚಮಿ ದಿನ ಉಪವಾಸ ಮಾಡಿ ಸಂಜೆ ಒಂದು ಹೊತ್ತಿನ ಊಟ ಮಾಡುವ ಆಚರಣೆ ಕೆಲವೆಡೆ ಕಾಣಬಹುದಾಗಿದೆ.
ಮರದ ಪೀಠ ಅಥವಾ ಮಣೆಯ ಮೇಲೆ ಮಣ್ಣಿನ ಮೂರ್ತಿ ಅಥವಾ ಹಾವಿನ ವಿಗ್ರಹವನ್ನು ಇಟ್ಟು ಪೂಜೆಯನ್ನು ಮಾಡಲಾಗುತ್ತದೆ.

ನಂತರ ನಾಗ ದೇವರಿಗೆ ಅರಿಶಿನ, ಕುಂಕುಮ, ಅಕ್ಕಿ ಮತ್ತು ಹೂವುಗಳನ್ನು ಅರ್ಪಿಸಿ ಪೂಜಿಸಲಾಗುತ್ತದೆ.
ನಂತರ ಹಸಿ ಹಾಲು, ತುಪ್ಪ ಮತ್ತು ಸಕ್ಕರೆಯನ್ನು ಬೆರೆಸಿ ಪೀಠದ ಮೇಲೆ ಪ್ರತಿಷ್ಠಾಪಿಸಲಾದ ನಾಗ ದೇವರಿಗೆ ಅರ್ಪಿಸಿ
ಪೂಜೆಯ ನಂತರ ನಾಗದೇವರಿಗೆ ಆರತಿಯನ್ನು ಮಾಡಲಾಗುತ್ತದೆ.
ಈ ದಿನ ಹಾವಾಡಿಗರಿಗೆ ಸ್ವಲ್ಪ ದಕ್ಷಿಣೆಯನ್ನು ನೀಡಿ ಹಾವಿಗೆ ಹಾಲೆರೆಯುವ ಪದ್ಧತಿ ಪ್ರಸ್ತುತದವರೆಗೂ ಕಾಣಬಹುದಾಗಿದ್ದು
ಇಂದು ನಾಗರ ಪಂಚಮಿ ಕಥೆಯನ್ನು ಕೇಳಬೇಕೂ ಅಥವಾ ಓದಬೇಕು ಎನ್ನುವುದು ವಾಡಿಕೆ.
ಈ ದಿನ ಹಾವಿಗೆ ಹಾಲಿನಿಂದ ಅಭಿಷೇಕವನ್ನು ಮಾಡಿದರೆ ಶಾಶ್ವತ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೊಂದಿಗೆ ಸಕಲ ಸಿದ್ದತೆಯ ಮೂಲಕ ಅಚ್ಚುಕಟ್ಟಾಗಿ ಈ ಹಬ್ಬವನ್ನೂ ಅಚರಿಸುವ ಪರಿಯನ್ನು ಕಾಣಬಹುದಾಗಿದೆ.

Categories
ಹಬ್ಬಗಳು

ಯುಗಾದಿ ಚಂದ್ರನ ನೋಡಿದರೆ ಒಳ್ಳೆಯದಾಗುತ್ತೆ!

  • ಏನಿದು ಕಥೆ… ಏನು ಚಂದ್ರನ ನೋಡುವ ಪುರಾಣ?
  • ಬೇವು ಬೆಲ್ಲ ಎಂಬ ಬದುಕಿನ ಎರಡು ಮುಖಗಳು

NAMMUR EXPRESS NEWS
ಹಬ್ಬದ ಆಚರಣೆಯ ಸುತ್ತಮುತ್ತ ಹರಡಿರುವ ಕಥೆಗಳು ಸಂಪ್ರದಾಯ ಎಲ್ಲರನ್ನು ಆಕರ್ಷಿಸುತ್ತದೆ. ಜೊತೆಗೆ ಅದು ಸಂಪ್ರದಾಯವಾಗಿ ಎಲ್ಲಾ ಕಡೆ ಆಚರಣೆಯಲ್ಲಿದೆ.
ಯುಗಾದಿ ಹಬ್ಬದ ದಿನ ರಾತ್ರಿ ಕಾದು ಕೂತು ಹುಡುಕಿ ಚಂದಿರನ ನೋಡುವ ಸಂಪ್ರದಾಯದ ಹಿಂದೆ ಇರುವ ಕಥೆ ಎಲ್ಲರನ್ನೂ ಸಹ ಸೆಳೆಯುತ್ತದೆ.
ಚಂದ್ರಮಾನ ಯುಗಾದಿ ಎಂದು ಕೂಡ ಯುಗಾದಿ ಹಬ್ಬಕ್ಕೆ ಕರೆಯುತ್ತಾರೆ. ಯುಗಾದಿ ಹಬ್ಬದ ದಿನ


ಹಬ್ಬದ ಊಟ ಮುಗಿಸಿ ರಾತ್ರಿ ಚಂದ್ರನ ನೋಡುವುದು ಒಳ್ಳೆಯದು ಎಂಬ ನಂಬಿಕೆ ಇದೆ.
ಗಣೇಶ ಚತುರ್ಥಿ ಸಮಯದಲ್ಲಿ ಗಣೇಶ ಎಲ್ಲಾರ ಮನೆಯ ಮೋದಕ ಕಡುಬು ತಿಂದು ಹೊಟ್ಟೆ ದೊಡ್ಡ ಮಾಡಿಕೊಂಡು ಗದ್ದೆ ಬಯಲಲ್ಲಿ ಬರುವಾಗ ಜಾರಿ ಬಿದ್ದು ಗಣೇಶನ ಹೊಟ್ಟೆ ಒಡೆದು ಹೋಗುತ್ತದೆ ಅಗ ಗಣೇಶ ಪಕ್ಕದಲ್ಲಿ ಹರಿದು ಹೋಗುತ್ತಿದ ಹಾವು ಹಿಡಿದು ಹೊಟ್ಟೆಗೆ ಕಟ್ಟುಕೊಳ್ಳುತ್ತಾನೆ ಇದನ್ನೆಲ್ಲ ಮೇಲಿನಿಂದ ನೋಡುತ್ತಿದ ಚಂದ್ರ ಜೋರಾಗಿ ನಗುತ್ತಾನೆ. ಅಗ ಗಣೇಶನಿಗೆ ಸಿಟ್ಟು ಬಂದು ತನ್ನ ಒಂದು ದಂತವನ್ನು ಮುರಿದು ಚಂದ್ರನ ಮೇಲೆ ಎಸೆದು “ಗಣೇಶ ಚತುರ್ಥಿ ಅಂದು ಚಂದ್ರನ ನೋಡಿದ್ದವರಿಗೆ ಅಪವಾದ ತಪ್ಪಿದ್ದಲ್ಲ ಎಂಬ ಶಾಪವನ್ನು ಕೊಡುತ್ತಾನೆ”. ಇದರಿಂದ ತನ್ನ ತಪ್ಪಿನ ಅರಿವಾಗಿ ಚಂದಿರ ಕ್ಷಮೆಯನ್ನು ಕೇಳುತ್ತಾ ಶಾಪದ ಪರಿಹಾರವನ್ನು ಯಾಚಿಸುತ್ತೇನೆ ಅಗ ಗಣೇಶ ನೀನು ಯೋಚನೆ ಮಾಡುವುದು ಬೇಡ ಗಣೇಶ ಹಬ್ಬದ ದಿನ ಚಂದ್ರನನ್ನು ನೋಡಿದವರು ಯುಗಾದಿ ಹಬ್ಬದ ದಿನ ಚಂದ್ರನನ್ನು ನೋಡಿದರೆ ಅವರ ಶಾಪ ವಿಮೋಚನೆ ಆಗುತ್ತದೆ ಎಂದು ಹೇಳಿ ಅಭಯವನ್ನೂ ನೀಡುತ್ತಾನೆ ಎಂಬ ಪುರಾಣ ಇದೆ. ಹಾಗಾಗಿ ಯುಗಾದಿ ಹಬ್ಬದ ದಿನ ಚಂದಿರನು ನೋಡುವ ಪದ್ಧತಿ ರೂಡಿಯಲ್ಲಿ ಉಂಟು.


ಯುಗಾದಿ ಹಬ್ಬದ ದಿನ ಆಚರಣೆಯಲ್ಲಿ ಇರುವ ಇನ್ನೊಂದು ಪದ್ಧತಿ ಬೇವು ಬೆಲ್ಲ ಸೇವಿಸುವುದು. ಈ ಬೇವು ಬೆಲ್ಲವು ಜೀವನದ ಸುಖ ದುಃಖ ಸೂಚಿಸುತ್ತದೆ
ಬೇವು ಬೆಲ್ಲ ತಿಂದು ಒಳ್ಳೇ ಮಾತಾಡು ಎಂದು ಹೇಳುವ ಸಂಪ್ರದಾಯದಂತೆ ಜೀವನದಲ್ಲಿ ಬೇವು ಬೆಲ್ಲ ಅಂದ್ರೆ ಸುಖ ದುಃಖ ಎರಡು ಸಮನಾಗಿ ಇರಬೇಕು ಎಂಬುದನ್ನು ಸೂಚಿಸುತ್ತದೆ.
ಯುಗಾದಿಯ ಬೇವು ಬೆಲ್ಲ ತಿಂದವರು ಚಂದಿರನ ನೋಡಲು ಸಿದ್ಧರಾಗಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ.

  • ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ
    ಕರ್ನಾಟಕ