Categories
ಹಬ್ಬಗಳು

ದೀಪಾವಳಿ ಹಬ್ಬ: ಯಾವತ್ತು, ಏನೇನು ವಿಶೇಷ?

ದೀಪಾವಳಿ ಹಬ್ಬ: ಯಾವತ್ತು, ಏನೇನು ವಿಶೇಷ?
– ಹಬ್ಬದ ದಿನ ಹಾಗೂ ಮುಹೂರ್ತ ಯಾವಾಗ?
– ಗೋಪೂಜೆ, ಲಕ್ಷ್ಮಿ ಪೂಜೆ ದೀಪಾವಳಿ ಸಂಭ್ರಮ

NAMMUR EXPRESS NEWS
ದೀಪಾವಳಿ ಎಂದರೆ ಬೆಳಕಿನ ಹಬ್ಬದ ಸಂಭ್ರಮ, ಈ ಹಬ್ಬವನ್ನು ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಕೂಡ ಸಂಭ್ರಮಿಸುವ ಹಬ್ಬ ಎಂದು ಹೇಳಬಹುದಾಗಿದೆ. ಹಿಂದೂ ಧರ್ಮದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಪ್ರಾಕೃತಿಕ, ನೈಸರ್ಗಿಕ ಸಂಬಂಧಗಳಿದ್ದರೂ ಎಲ್ಲಾ ಹಬ್ಬಗಳೂ ಮನರಂಜನೆ ಜೊತೆಗೆ ಸಂಬಂಧಗಳನ್ನು ಬೆಸೆಯುವ ಕೊಂಡಿಗಳೇ ಆಗಿವೆ. ದೀಪಾವಳಿ ಹಬ್ಬದಲ್ಲಿ ಎಲ್ಲರೂ ಕೂಡ ಕುಟುಂಬದವರೊಂದಿಗೆ ಸಂಭ್ರಮದಿಂದ ದೀಪ ಹಚ್ಚಿ ಸಂಭ್ರಮದಿಂದ ಪೂಜೆ ಪುನಸ್ಕಾರ ಮಾಡಿ ಆಚರಿಸುವ ಹಬ್ಬವೇ ಈ ದೀಪಾವಳಿ ಹಬ್ಬ.

ದೀಪಾವಳಿ ಹಬ್ಬದ ಸಂಭ್ರಮ ಎಲ್ಲರ ಮನೆಯಲ್ಲಿಯೂ ಕೂಡ ಒಂದು ಸಮಾರಂಭದ ವಾತಾವರಣ ಆಗಿದೆ. ಈ ಹಬ್ಬದಲ್ಲಿ ಯಾವೆಲ್ಲಾ ರೀತಿಯ ವಿಶೇಷತೆಗಳಿವೆ, ಮುಹೂರ್ತ, ಯಾವ ದಿನ ಲಕ್ಷ್ಮಿ ಪೂಜೆ, ಗೋ ಪೂಜೆ ತಿಳಿಯೋಣ.
ಅಕ್ಟೋಬರ್ 30 ಬುಧವಾರದಂದು ನೀರು ತುಂಬುವ ಹಬ್ಬ, ರಾತ್ರಿ ಚಂದ್ರೋದಯದ ಕಾಲದಲ್ಲಿ ಅಭ್ಯಂಜನ ಸ್ನಾನ ಗಂಟೆ 4-30, ಅಕ್ಟೋಬರ್ 31 ಗುರುವಾರ ನರಕ ಚತುರ್ದಶಿ, ಧನಲಕ್ಷ್ಮಿ ಪೂಜೆ, ನವೆಂಬರ್ 1 ಶುಕ್ರವಾರ ಅಮಾವಾಸ್ಯೆ
ನವೆಂಬರ್ 2 ಶನಿವಾರ ಬಲಿಪಾಡ್ಯಮಿ, ಗೋಪೂಜೆ, ದೀಪಾವಳಿ ಹಬ್ಬ ಗಂಟೆ 10:30 ರಿಂದ 1 :30 ರ ಒಳಗೆ, ಸಂಜೆ 6 ಗಂಟೆಯ ನಂತರ ದೀಪ ಹಚ್ಚುವುದು.ನವೆಂಬರ್ 3 ಭಾನುವಾರ ಹಬ್ಬದ ಕರಿನವೆಂಬರ್ 4 ಸೋಮವಾರ ವರ್ಷ ತಡುಕು, ಕದಿರು ತರುವುದು ಸಂಜೆ 6 ಗಂಟೆಯಿಂದ 7.30, 9 ರಿಂದ 10:30, 12ರಿಂದ 1:30ರ ಒಳಗೆ.

Categories
ಹಬ್ಬಗಳು

ದೇಶದಾದ್ಯಂತ ಈದ್ ಮಿಲಾದ್ ಹಬ್ಬದ ಸಂಭ್ರಮ!

ದೇಶದಾದ್ಯಂತ ಈದ್ ಮಿಲಾದ್ ಹಬ್ಬದ ಸಂಭ್ರಮ!

* ಪ್ರವಾದಿ ಮುಹಮ್ಮದ್ ಜನ್ಮ ದಿನ ಆಚರಣೆ 

* ಎಲ್ಲೆಡೆ ದಾನ, ಧರ್ಮದ ಕಾರ್ಯಕ್ರಮ

 

NAMMUR EXPRESS NEWS

ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಈದ್-ಎ-ಮಿಲಾದ್ ಎಂದು ಆಚರಿಸುತ್ತಿದ್ದಾರೆ. ಈ ದಿನವನ್ನು ನಬಿದ್, ಮೌಲಿದ್ ಅಥವಾ ಮೌಲಿದ್ ಆನ್-ನಬಿ ಎಂದೂ ಕರೆಯಲಾಗುತ್ತದೆ. ಅನೇಕ ದೇಶಗಳು ಈ ದಿನವನ್ನು ಸಾರ್ವಜನಿಕ ರಜಾದಿನವಾಗಿಯೂ ಆಚರಿಸುತ್ತವೆ.

ಈದ್-ಎ-ಮಿಲಾದ್ ದಿನಾಂಕ ಚಂದ್ರನ ಸ್ಥಾನವನ್ನು ಅವಲಂಬಿಸಿರುತ್ತದೆ. ಸಂಜೆಯಿಂದ ಚಂದ್ರ ನೋಡುವುರದಿಂದ ಆಚರಣೆ ಆರಂಭವಾಗಿ ನಡೆಯುತ್ತದೆ.

ಈದ ಮಿಲಾದ್ ಇತಿಹಾಸ

ಮುಸ್ಲಿಂ ಸಮುದಾಯಕ್ಕೆ ಈ ದಿನವು ಅತ್ಯಂತ ಮಹತ್ವದ್ದಾಗಿದೆ. ಪ್ರವಾದಿ ಮುಹಮ್ಮದ್ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳ 12 ನೇ ತಾರೀಖಿನಂದು ಜನಿಸಿದರು. ಇಸ್ಲಾಮಿಕ್ ನಂಬಿಕೆಯ ಪ್ರಕಾರ, ಪ್ರವಾದಿ ಕ್ರಿಸ್ತಶಕ 517 ರಲ್ಲಿ ಜನಿಸಿದರು. ಈದ-ಈ-ಮಿಲಾದ್ ನ ಮೊದಲ ಹಬ್ಬವನ್ನು ಈಜಿಪ್ಟ್‌ನಲ್ಲಿ ಆಚರಿಸಲಾಯಿತು ಎಂದು ಹೇಳಲಾಗಿದೆ. 11ನೇ ಶತಮಾನದ ಆಗಮನದಂದಿೆ, ಇನ್ನು ಪ್ರಪಂಚದಾದ್ಂತ ಆಚರಿಸಲು ಪ್ರಾರಂಭಿಸಿದರು.

ಈದ್ ಮಿಲಾದ್ ಆಚರಣೆ

ಶಿಯಾಗಳು ಮತ್ತು ಸುನ್ನಿಗಳು ಈ ದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಈ ದಿನದಂದು ಪ್ರವಾದಿ ಮುಹಮ್ಮದ್ ಶಿಯಾ ಸಂಪ್ರದಾಯದ ಪ್ರಕಾರ ಹಜರತ್ ಅಲಿಯನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದರು. ಸುನ್ನಿ ಸಮುದಾಯಗಳು ಈ ದಿನದಂದು ಪ್ರಾರ್ಥನೆಗಾಗಿ ಸೇರಿಸುತ್ತವೆ. ಈದ್ ಮಿಲಾದ್ ಅನ್-ನಬಿ ಆಚರಣೆಯು ಈಜಿಪ್ಟ್‌ನಲ್ಲಿ ಹುಟ್ಟಿಕೊಂಡಿತು ಮತ್ತು ಅಂತಿಮವಾಗಿ ಪ್ರಪಂಚದಾದ್ಯಂತ ಹರಡಿತು.

Categories
ಹಬ್ಬಗಳು

Categories
ಹಬ್ಬಗಳು

Categories
ಹಬ್ಬಗಳು

Categories
ಹಬ್ಬಗಳು

ತೀರ್ಥಹಳ್ಳಿ ತಾಲೂಕಿನ ಗಣಪತಿ ವಿಶೇಷ ಫೋಟೋಗಳು

ತೀರ್ಥಹಳ್ಳಿ ತಾಲೂಕಿನ ಗಣಪತಿ ವಿಶೇಷ ಫೋಟೋಗಳು

Categories
ಹಬ್ಬಗಳು

ತೀರ್ಥಹಳ್ಳಿ ತಾಲೂಕಿನ ಹಳ್ಳಿ ಹಳ್ಳಿಯಲ್ಲಿ ಗಣಪತಿ

ತೀರ್ಥಹಳ್ಳಿ ತಾಲೂಕಿನ ಹಳ್ಳಿ ಹಳ್ಳಿಯಲ್ಲಿ ಗಣಪತಿ

Categories
ತೀರ್ಥಹಳ್ಳಿ ಹಬ್ಬಗಳು

ತೀರ್ಥಹಳ್ಳಿ ತಾಲೂಕಿನ ಹಳ್ಳಿ ಹಳ್ಳಿಯಲ್ಲಿ ಗಣಪತಿ

ತೀರ್ಥಹಳ್ಳಿ ತಾಲೂಕಿನ ಹಳ್ಳಿ ಹಳ್ಳಿಯಲ್ಲಿ ಗಣಪತಿ

Categories
ಹಬ್ಬಗಳು

ದಕ್ಷಿಣ ಕನ್ನಡ ವಿವಿಧ ಕಡೆ ಗಣಪತಿ ಸಂಭ್ರಮ

ದಕ್ಷಿಣ ಕನ್ನಡ ವಿವಿಧ ಕಡೆ ಗಣಪತಿ ಸಂಭ್ರಮ

Categories
ಹಬ್ಬಗಳು

ಮನೆ ಮನೆ, ಹಳ್ಳಿ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ!

ಮನೆ ಮನೆ, ಹಳ್ಳಿ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ!
– ಗಣಪತಿ ಕೂರಿಸಿ ವಿಶೇಷ ಪೂಜೆ: ಮನೆಗಳಲ್ಲಿ ಆಚರಣೆ
– ಕರಾವಳಿಯಲ್ಲಿ ಹುಲಿ ವೇಷದ ಸೊಬಗು
– ದೇಶದ ಮೂಲೆ ಮೂಲೆಯಲ್ಲಿ ಗಣಪತಿಗೆ ಜೈ

NAMMUR EXPRESS
ಗಣಪತಿ ಹಬ್ಬ ಎಂದರೆ ಪ್ರತಿಯೊಬ್ಬರಿಗೂ ಸಂಭ್ರಮ ಸಡಗರ. ಹಬ್ಬಕೆಂದೇ ಹೊಸ ಬಟ್ಟೆ ತೆಗೆದುಕೊಡುವ ತಾಯಿ ತಂದೆ.
ನಾನಾ ತರದ ಅಡುಗೆ ತಯಾರಿ, ನೆಂಟರ ಹಾವಳಿ ಎಲ್ಲಾ ಜೋರೋ ಜೋರು.ಗಣೇಶನ ಹಬ್ಬಕ್ಕೆ ಕಡುಬು, ಮೋದಕ, ಲಡ್ಡು ಸ್ಪೆಷಲ್, ಮಕ್ಕಳಿಗಂತೂ ಗಣೇಶ ಹಬ್ಬ ಮದುವೆ ಮನೆಯ ಸಂಭ್ರಮವನ್ನು ನೀಡುತ್ತದೆ.
ಪ್ರತಿಯೊಂದು ಗ್ರಾಮ ಗ್ರಾಮಗಳಲ್ಲೂ ಗಣೇಶನನ್ನು ಕೂರಿಸಿ ಅಲಂಕಾರ ಮಾಡಿ ಪೂಜೆ ಮಾಡುಹುದು ಕ್ರಮ ಆದರೆ ಎಲ್ಲೆಡೆ ಇಂತಿಷ್ಟೇ ದಿನ ಗಣಪತಿನ ಕೂರಿಸಬೇಕು ಎಂಬ ಕಡ್ಡಾಯವೇನಿಲ್ಲ ಮೊದಲ ವರ್ಷ ಯಾವ ರೀತಿ ನಿಯಮ ಪಾಲನೆ ಆಚರಿಸುತ್ತಿದ್ದಾರೋ ಅದನ್ನೇ ಮುಂದುವರಿಸುವ ಪದ್ಧತಿ ಅಷ್ಟೇ… ಕೆಲವೊಂದು ಕಡೆ ಮೂರು ದಿನ ಇನ್ನೂ ಮಲೆನಾಡು ಶಿವಮೊಗ್ಗ ಭಾಗಗಳಲ್ಲಿ ,9,15, ಒಂದು ಿಂಗಳವರೆಗೆ ಗಣಪತಿ ಕೂರಿಸಿ ಪೂಜೆ ನಡೆಸುತ್ತಾರೆ. ಆದರೆ ಕರಾವಳಿ ಭಾಗದಲ್ಲಿ ಕಡಿಮೆ, ಹೆಚ್ಚೆಂದರೆ ಒಂಬತ್ತು ದಿನ ಅಷ್ಟೇ, ಮತ್ತೆ ಮೂರು ದಿನ ಹೆಚ್ಚಾಗಿ ಪೂಜೆ ಆಚರಣೆ ಇರುತ್ತದೆ.

ಹಬ್ಬ ಎಂದರೆ ಎಲ್ಲೆಡೆ ಸಂಭ್ರಮ ಇದ್ದೆ ಇರುತ್ತೆ!

ಗಣಪತಿ ಹಬ್ಬದಂದು ಮನೆಯ ಔತಣ ಕೂಟ ಮುಗಿಸಿ ಗಣಪತಿ ವೀಕ್ಷಣೆಗೆ ಹೆಚ್ಚಾಗಿ ರಾತ್ರಿ ಸಮಯದಲ್ಲಿ ಹೋರಾಡುತ್ತಾರೆ. ಗಣೇಶ ಅಂತೂ ಫುಲ್ ಅಲಂಕಾರದಿಂದ ಕಂಗೊಳಿಸುತ್ತಿರುತ್ತಾನೆ. ಆತನ ಕೇಳೋದೆ ಬೇಡ ಎಷ್ಟದ್ರೂ, ಅವಂದೇ ದಿನ ಅಲ್ವಾ?
ಮತ್ತೆ ಸಾರ್ವಜನಿಕರಂತೂ ಪೂರ್ತಿ ಜೋಶ್ ಹಾಕಿ ಹಬ್ಬದ ಹೊರಗಡೆ ನೆರೆದಿರುವ ಜಾತ್ರೆ ವೀಕ್ಷಣೆಯಲ್ಲಿ ಬ್ಯುಸಿ. ಮಹಿಳೆಯರು ಗಣೇಶನ ಪೂಜೆ ಸಾಂಸ್ಕೃತಿಕ ಕಾರ್ಯಕ್ರಮದ ವೀಕ್ಷಣೆಯಲ್ಲಿ ತೊಡಗಿಕೊಂಡಿರುತ್ತಾರೆ.

* ಕರಾವಳಿಯಲ್ಲಿ ಹುಲಿವೇಷಗಳ ರಂಗು

ಕರಾವಳಿಯಲ್ಲಂತೂ ಕೇಳೋದೆ ಬೇಡ, ಎಲ್ಲೆಡೆ ಹಬ್ಬದ ಮೆರಗು ಮನೆಮಾಡಿರುತ್ತದೆ. ಅದ್ರಲ್ಲೂ ಕರಾವಳಿ ಸ್ಪೆಷಲ್ ಹುಲಿವೇಷ. ಸಾಮಾನ್ಯವಾಗಿ ದಸರಾ ಸಂಭ್ರಮಕ್ಕೆ ಹುಲಿವೇಷ ಹಾಕುವವರಲ್ಲಿ ಒಂದರ್ಧ ಭಾಗ ಯುವಕರು ಗಣೇಶ ಹಬ್ಬಕ್ಕೂ ರಂಗ್ ಹಚ್ಚಿಕೊಂಡು ಕುಣಿಯುವುದುಂಟು.ಮೆರವಣಿಗೆ ಜಾತ್ರೆ ಸಮಯದಲ್ಲಿ ಕಾರವಳಿ ಭಾಗದಲ್ಲಿ ಕೆಲವೊಂದೆಡೆ ಹುಲಿವೇಷ ಭರ್ಜರಿಯಾಗಿ ನಡೆಯುತ್ತದೆ.ಹುಲಿವೇಷ ಇಲ್ಲದೆ ಕರಾವಳಿ ಹಬ್ಬ ಪರಿಪೂರ್ಣವಾಗಲೂ ಸಾಧ್ಯವೇ ಇಲ್ಲ ಎಂಬುಹುದು ಕರಾವಳಿ ಭಾಗದ ಜನರ ನಂಬಿಕೆ ಮುಂದೆ ಗಣಪತಿ ಹಿಂದೆ ಒಂದೊಂದು ವೇಷಧಾರಿಗಳು ಸಾಲು ಸಾಲು ಕಟ್ಟಿ ಮೆರವಣಿಗೆ ಹೊರಡುವುದುಂಟು, ಅದರ ಹಿಂದೆ ಕರಾವಳಿಯಲ್ಲಿ ಹುಲಿವೇಷ ಇದ್ದು, ಮೆರವಣಿಗೆಯಲ್ಲಿ ಕುಣಿಯುವುದೂ ಉಂಟು ಹಿರಿಯರೂ ಕೂಡ ಈ ಮೆರವಣಿಯಲ್ಲಿ ಪಾಲ್ಗೊಂಡು ಜೈ ಕಾರ ಕೂಗುತ್ತಾರೆ. ಮಕ್ಕಳು ನಾ ಮುಂದೆ ತಾಮುಂದೆ ಎಂದು ಪೈಪೋಟಿ ನಡೆಸುತ್ತಾ ಸಾಗುತ್ತಾರೆ.ಇದರ ಮಧ್ಯೆ ಕೀಲುಕುದುರೆ, ಕೋಲಾಟ, ಕುಣಿತ ಭಜನೆ ನಾನಾ ಬಗೆಯ ವೇಷಧಾರಿಗಳ ೆರವಣಿಗೆಯನ್ನು ಕಾಣಬಹುದಗಿದೆ.. ಎಲ್ಲರೂ ಗಣೇಶ ಹಬ್ಬ ಮೆರವಣಿಯಲ್ಲಿ ಪಾಲ್ಗೊಂಡು ಸಂಭ್ರಮವನ್ನು ಆಚರಿಸೋಣ.