Categories
ಚಿನ್ನದ ದರ ರಾಜ್ಯ

ಚಿನ್ನದ ದರ ಸಾರ್ವಕಾಲಿಕ ಗರಿಷ್ಠ!

ಚಿನ್ನದ ದರ ಸಾರ್ವಕಾಲಿಕ ಗರಿಷ್ಠ!

* ಬೆಳ್ಳಿ ದರವೂ ಲಕ್ಷ ರೂ. ತಲುಪುವ ಸಾಧ್ಯತೆ!
* ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿರುವ ಹೂಡಿಕೆದಾರರು!

NAMMUR EXPRESS NEWS
ಮುಂಬಯಿ: ದಸರಾ ಹಬ್ಬದ ಸಡಗರದ ನಡುವೆ ಚಿನ್ನದ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ.
ಚಿನಿವಾರ ಪೇಟೆಯಲ್ಲಿ ಅ. 7ರಂದು ಪ್ರತಿ ಗ್ರಾಂಗೆ 250ರೂ. ಹೆಚ್ಚಳದೊಂದಿಗೆ 10 ಗ್ರಾಂ ಶುದ್ದ ಚಿನ್ನದ ದರ 78,700 ರೂ.ಗೆ ತಲುಪಿತು. ಇದುವರೆಗಿನ ಗರಿಷ್ಠ ದರವಾಗಿದೆ.
ಬೆಳ್ಳಿ ದರವೂ 1 ಕೆ.ಜಿ.ಗೆ 94,000 ರೂ.ಗೆ ತಲುಪಿದ್ದು, ಸದ್ಯದಲ್ಲೇ 1 ಲಕ್ಷ ರೂ. ಮುಟ್ಟಬಹುದೆಂದು ಅಂದಾಜಿಸಲಾಗಿದೆ. ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಬಿಕ್ಕಟ್ಟು, ಭೌಗೋಳಿಕ ಉದ್ವಿಗ್ನತೆಗಳಿಂದಾಗಿ ಸತತ ಆರು ದಿನಗಳಿಂದ ಷೇರುಪೇಟೆಯಲ್ಲಿ ಇಳಿಮುಖ ಪ್ರವೃತ್ತಿ ಮುಂದುವರಿದಿದೆ.
ಜಾಗತಿಕ ಅಸ್ಥಿರತೆಯಿಂದಾಗಿ ಹೂಡಿಕೆದಾರರು ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿರುವುದು ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.