Categories
ಹೊಸನಗರ

ಬಾವಿಗೆ ಹಾರಿ ಹಿರಿಯ ರಾಜಕಾರಣಿ ಆತ್ಮಹತ್ಯೆ!

ಬಾವಿಗೆ ಹಾರಿ ಹಿರಿಯ ರಾಜಕಾರಣಿ ಆತ್ಮಹತ್ಯೆ!
– ಹೊಸನಗರದ ರಿಪ್ಪಿನ ಪೇಟೆ ಬಳಿ ಘಟನೆ
– ಭದ್ರಾವತಿ: ವಿಐಎಸ್​ಎಲ್​​ ಆವರಣದಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ಚಿರತೆ!

NAMMUR EXPRESS NEWS
ಹೊಸನಗರ: ಮಂಡಲ ಪಂಚಾಯತ್ ಮಾಜಿ ಉಪಪ್ರಧಾನ ಹಾಗೂ ಬಸವೇಶ್ವರ ವೀರಶೈವ ಸಮಾಜದ ಸ್ಥಳದಾನಿ ಡಿ.ಸಿ ಈಶ್ವರಪ್ಪ (76) ಶನಿವಾರ ಬೆಳಗ್ಗೆ ತಮ್ಮ ಮನೆಯ ಬಳಿಯಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತೀಚೆಗೆ ಪತ್ನಿ ಸಾವಿನಿಂದ ಮಾನಸಿಕವಾಗಿ ನೊಂದಿದ್ದ ಈಶ್ವರಪ್ಪ ಇಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರಿಗೆ ಮೂವರು ಪುತ್ರರಿದ್ದು ಅಂತ್ಯಕ್ರಿಯೆ ಬರುವೆ ಗ್ರಾಮದ ದೊಡ್ಡಿನಕೊಪ್ಪದ ಜಮೀನಿನಲ್ಲಿ ವೀರಶೈವ ಜನಾಂಗದ ಸಂಪ್ರದಾಯದಂತೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿಐಎಸ್​ಎಲ್​​ ಆವರಣದಲ್ಲಿ ಮತ್ತೊಂದು ಚಿರತೆ!

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ವಿಐಎಸ್​ಎಲ್ ಆವರಣದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಮರಿ ಸೆರೆಯಾದ ಬೆನ್ನಲ್ಲೆ ಮತ್ತೊಂದು ಚಿರತೆ ಅಲ್ಲಿಯೇ ಸಮೀಪ ಕ್ಯಾಮರಾದ ಕಣ್ಣಿಗೆ ಕಾಣಿಸಿಕೊಂಡಿದೆ. ಚಿರತೆಯ ಮರಿಯನ್ನು ಹುಡುಕಿಕೊಂಡು ಅದರ ತಾಯಿ ಚಿರತೆ ಬರಬಹುದು ಎಂದು ಅರಣ್ಯ ಇಲಾಖೆ ಈ ಮೊದಲೇ ಊಹಿಸಿತ್ತು. ಅಲ್ಲದೆ ಸ್ಥಳದಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಿತ್ತು. ಇದೀಗ ಅಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿರುವ ಫೋಟೊವೊಂದು ಲಭ್ಯವಾಗಿದೆ. ನೈಟ್ ಬೀಟ್ ವಾಚ್​ಮನ್​ ಕಾರ್ಖಾನೆಯ ಒಳಗಡೆ ಗಸ್ತು ತಿರುಗುತ್ತಿದ್ದ ವೇಳೆ ಚಿರತೆ ಕಾಣಿಸಿಕೊಂಡಿದೆ. ಸಿಬ್ಬಂದಿಯ ಜೀಪ್​ಗೆ ಅಡ್ಡವಾಗಿ ಚಿರತೆ ಪಾಸ್ ಆಗಿದೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಈ ಭಾಗದಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Categories
ಹೊಸನಗರ

ಹೊಸನಗರ ತಾಲೂಕಿನಲ್ಲಿ ಗಣೇಶೋತ್ಸವದ ರಂಗು!

ಹೊಸನಗರ ತಾಲೂಕಿನಲ್ಲಿ ಗಣೇಶೋತ್ಸವದ ರಂಗು!
– ರಿಪ್ಪನ್ ಪೇಟೆ, ಹುಂಚ, ಹೊಸ ನಗರದಲ್ಲಿ ಅದ್ದೂರಿ ಗಣೇಶೋತ್ಸವ
– ಶಾಂತಿಯುತ ಹಬ್ಬ: ಪೊಲೀಸ್ ಇಲಾಖೆ ಬಂದೋಬಸ್ತ್

NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕಿನಲ್ಲಿ ಸಂಭ್ರಮದಿಂದ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ಹೊಸನಗರ, ರಿಪ್ಪನ್ ಪೇಟೆ, ನಗರ, ಹುಂಚ ಸೇರಿದಂತೆ ಬಹುತೇಕ ಭಾಗಗಳಲ್ಲಿ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಣೆ ಮಾಡಲಾಗಿದೆ.
ತಾಲೂಕಿನಲ್ಲಿ ರಿಪ್ಪನ್ ಪೇಟೆ ಹಿಂದೂ ಮಹಾ ಸಭಾ ಗಣಪತಿ ಗಮನ ಸೆಳೆದಿದೆ. ಇಲ್ಲಿ ಕೂಡ ಅದ್ದೂರಿ ಗಣೇಶೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಹೊಸನಗರ ಪಟ್ಟಣದಲ್ಲೂ ಕೂಡ ಅನೇಕ ಭಾಗಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಸಂಭ್ರಮದ ಗಣೇಶೋತ್ಸವವನ್ನು ಆಚರಿಸಲಾಗಿದ್ದು, ಈಗಾಗಲೇ ಅನೇಕ ಗಣೇಶ ವಿಸರ್ಜನೆ ಮಾಡಲಾಗಿದೆ.

ಹೊಸನಗರ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗಣೇಶೋತ್ಸವವನ್ನು ಸಾರ್ವಜನಿಕರು, ಭಕ್ತರು ಹಾಗೂ ಸಂಘ ಸಂಸ್ಥೆಗಳು ಅಚ್ಚುಕಟ್ಟಾಗಿ ಆಚರಣೆ ಮಾಡಿದ್ದಾರೆ. ಶಾಂತಿಯುತವಾಗಿ ಗಣೇಶೋತ್ಸವವನ್ನು ಆಚರಣೆ ಮಾಡಿದ್ದು ಅನೇಕ ಕಡೆ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

Categories
ಹೊಸನಗರ

ಹೊಸನಗರ, ಸಾಗರದ ಇಬ್ಬರು ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ!

ಹೊಸನಗರ, ಸಾಗರದ ಇಬ್ಬರು ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ!
– ಹೊಸನಗರ ಮಾದಾಪುರ ಶಾಲೆಯ ಫೌಜಿಯಾ ಸರವತ್, ಸಾಗರದ ತ್ಯಾಗರ್ತಿ ಹೈಸ್ಕೂಲಿನ ವಿಜಯಾನಂದ ರಾವ್​ ಅವರಿಗೆ ಪ್ರಶಸ್ತಿ

NAMMUR EXPRESS NEWS
ಹೊಸನಗರ/ಸಾಗರ: ಶಿವಮೊಗ್ಗ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಈ ಸಲದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭ್ಯವಾಗಿದೆ. ರಾಜ್ಯ ಸರ್ಕಾರ ಕೊಡಮಾಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯು ಸಾಗರ ತಾಲೂಕು ತ್ಯಾಗರ್ತಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ವಿಜಯಾನಂದ ರಾವ್ ಮತ್ತು ಹೊಸನಗರ ತಾಲೂಕು ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಫೌಜಿಯಾ ಸರವತ್ ಲಭಿಸಿದೆ. ಸೆಪ್ಟೆಂಬರ್​ 5 ರಂದು ಶಿಕ್ಷಕರ ದಿನಾಚರಣೆ ಹಿನ್ನೆಯಲ್ಲಿಈ ಪ್ರಶಸ್ತಿ ನೀಡಲಾಗುತ್ತದೆ.

ವಿಜ್ಞಾನ ಮಾಷ್ಟ್ರು ವಿಜಯಾನಂದ ಸಾಧನೆ

ವಿಜಯಾನಂದ ರಾವ್ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಕೆಲಸ ಮಾಡಿದವರು. ಅಲ್ಲಿಂದ ಹೊಸನಗರ ತಾಲೂಕಿನ ಕಾರಣಗಿರಿಗೆ ಬಂದು 8 ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ತ್ಯಾಗರ್ತಿಯಲ್ಲಿ ಕಳೆದ 12 ವರ್ಷಗಳಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ವಿಜೂಸ್ ಕ್ಲಾಸಸ್ ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೆ ಅದರ ಮೂಲಕ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ತೆಗೆದುಕೊಳ್ತಿದ್ದಾರೆ. ಮೇಲಾಗಿ ಯೂಟ್ಯೂಬ್ ಚಾನಲ್ ಮೂಲಕ ಆಧುನಿಕ ವಿಜ್ಞಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ತರಬೇತಿ ಕ್ಲಾಸ್ ತೆಗೆದುಕೊಂಡಿದ್ಧಾರೆ.

ಫೌಜಿಯಾ ಮಕ್ಕಳ ಮೆಚ್ಚಿನ ಟೀಚರ್!

ಹೊಸನಗರ ತಾಲೂಕು ಅರಸಾಳು ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕಿ ಮುಸ್ಲಿಂ ಯುವತಿ ಫೌಜಿಯ ಸರವತ್​ ಈ ಬಾರಿಯ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ಯಾರಜಾನ್ ಹಾಗೂ ಕೌಸರ್ ಫಾತಿಮಾ ದಂಪತಿಗಳ ಪುತ್ರಿ ಪೌಜಿಯ 2007 ರಿಂದ 2016 ರ ವರೆಗೂ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಮೇಲುಕೊಪ್ಪದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

2016ರಿಂದ 2022 ರ ವರೆಗೂ ತೀರ್ಥಹಳ್ಳಿ ತಾಲೂಕು ಕಲ್ಲು ಗುಡ್ಡ ಪ್ರಾಥಮಿಕ ಶಾಲೆಯಲ್ಲಿ ಹಾಗೂ 2022 ರಿಂದ ಹೊಸನಗರ ತಾಲೂಕು ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಫೌಜಿಯಾ ಸರವತ್ ಮಕ್ಕಳಿಗೆ ಸ್ಮಾರ್ಟ್‌ಕ್ಲಾಸ್ ಮೂಲಕ ಹಲವು ಕಾರ್ಯಕ್ರಮ ನೀಡಿದ್ದಾರೆ. ದಾನಿಗಳ ಮೂಲಕ ವಿದ್ಯಾರ್ಥಿಗಳಿಗೆ, ಶಾಲೆಗೆ ಅನೇಕ ಸಾಮಗ್ರಿ ಕೊಡಿಸಿದ್ದಾರೆ. ಯೂಟ್ಯೂಬ್ ಚಾನಲ್ ಮೂಲಕ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಿದ್ದಾರೆ. ಅಲ್ಲದೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ, ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

Categories
ಹೊಸನಗರ

ಕುಮಾರ್ ಬಂಗಾರಪ್ಪ ಪಕ್ಷ ಬಿಡಲ್ಲ…!

ಕುಮಾರ್ ಬಂಗಾರಪ್ಪ ಪಕ್ಷ ಬಿಡಲ್ಲ…!
– ಹೊಸನಗರದಲ್ಲಿ ಬಿವೈ ರಾಘವೇಂದ್ರ ಹೇಳಿಕೆ
– ಕಾಂಗ್ರೆಸ್ ಸೇರ್ಪಡೆ ವಿಚಾರ ಕೇವಲ ಕಟ್ಟುಕಥೆ
– ಅರಸಾಳು ರೈಲು ನಿಲುಗಡೆ: ಪ್ರಯಾಣಿಕರರಿಗೆ ಅನುಕೂಲ

NAMMUR EXPRESS NEWS
ಹೊಸನಗರ: ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಸುಳ್ಳು ವದಂತಿ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು. ಕುಮಾರ್ ಬಂಗಾರಪ್ಪರವರು ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಹಾಗೂ ರಾಜ್ಯ ವ್ಯಾಪ್ತಿಯಲ್ಲಿ ಸಂಘಟನೆಯ ಬಲವನ್ನು ಹೆಚ್ಚಿಸಿದವರಾಗಿದ್ದು ಅವರು ಕಾಂಗ್ರೆಸ್ ಸೇರ್ಪಡೆ ವಿಚಾರ ಕೇವಲ ಕಟ್ಟುಕಥೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕ್ ಅಧ್ಯಕ್ಷರಾದ ಗಣಪತಿ ಬೆಳಗೋಡು,ಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ,ಮುಖಂಡರಾದ ಮೆಣಸೆ ಆನಂದ್, ಕಗ್ಗಲಿ ಲಿಂಗಪ್ಪ, ಕೀರ್ತಿ ಗೌಡ, ರಾಜೇಶ್ ಜೈನ್, ಪದ್ಮ ಸುರೇಶ್, ಲೀಲಾ ಶಂಕರ್, ನಾಗರತ್ನ ದೇವರಾಜ್ ಇನ್ನಿತರರಿದ್ದರು.

ಮಲೆನಾಡಿನ ಪ್ರಯಾಣಿಕರಿಗೆ ಅನುಕೂಲ

ಮಲೆನಾಡಿನ ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ ರೈಲ್ವೆ ಪ್ರಯಾಣಿಕರಿಗೆ ಸದುಪಯೋಗವಾಗಲೆಂದು ಅರಸಾಳಿನ ಮಾಲ್ಗುಡಿ ರೈಲ್ವೇ ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆಯಿಂದ ಅನುಮತಿ ದೊರೆತಿದೆ.ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ ಹೊಸನಗರ, ರಿಪ್ಪನ್‌ಪೇಟೆ, ಹುಂಚ, ಕೋಣಂದೂರು, ನಿಟ್ಟೂರು, ಯಡೂರು, ಮಾಸ್ತಿಕಟ್ಟೆ, ರಾಮಚಂದ್ರಪುರ, ಹೊಂಬುಜ, ಕೋಡೂರು, ಸೂಡೂರು, ಚಿನ್ನಮನೆ, ನಗರ ರೋಡ್,ಹೀಗೆ ಸುತ್ತಮುತ್ತಲಿನ ಊರಿನ ಪ್ರಯಾಣಿಕರು ಅರಸಾಳು ರೈಲ್ವೆ ನಿಲ್ದಾಣ ಸಮೀಪವಿದ್ದರು ರೈಲಿಗಾಗಿ ಆನಂದಪುರ ಹೋಗುವ ಅನಿವಾರ್ಯತೆ ಇತ್ತು. ಸಾರ್ವಜನಿಕರ ಹಾಗೂ ಪ್ರಯಾಣಿಕರ ಬಹು ವರ್ಷಗಳಿಂದ ಅರಸಾಳು (ಮಾಲ್ಗುಡಿ) ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡುವಂತೆ ಅನೇಕ ಬಾರಿ ರಿಪ್ಪನ್‌ಪೇಟೆ, ಅರಸಾಳು ಗ್ರಾಮದ ನಾಗರಿಕರು ಹಲವಾರು ಬಾರಿ ಮನವಿ ಸಲ್ಲಿಸಿ ಹೋರಾಟಗಳನ್ನು ಮಾಡಿದ್ದರು.ಹಾಲಿ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ಆರಗ ಜ್ಞಾನೇಂದ್ರ, ಮತ್ತು ಮಾಜಿ ಮಂತ್ರಿಗಳಾದ ಹರತಾಳು ಹಾಲಪ್ಪರವರ ಈ ರೈಲ್ವೆ ನಿಲುಗಡೆಗೆ ಮನವಿಯನ್ನು ಸಲ್ಲಿಸಿದ್ದರು.

ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ರವರು ಅರಸಾಳು ಮಾಲ್ಗುಡಿ ರೈಲ್ವೇ ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ, ಅವರಿಗೆ ಹಾಗೂ ರೈಲ್ವೆ ಇಲಾಖೆಗೆ ಮಲೆನಾಡಿನ ಜನತೆಯ ಪರವಾಗಿ ಧನ್ಯವಾದಗಳು ಅರ್ಪಿಸುತ್ತೇನೆ. ದಿನಾ ನಾಲ್ಕು ಮುಖ್ಯ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲಲಿದೆ ಎಂದರು.
ಪ್ರಾಯೋಗಿಕವಾಗಿ ನೀಡಲಾಗುತ್ತಿರುವ ಈ ನಿಲುಗಡೆಯನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಈ ನಿಲುಗಡೆಯನ್ನು ಮುಂದುವರೆಸುವ ಸಾಧ್ಯತೆಗಳಿರುವುದರಿಂದ ಪ್ರಯಾಣಿಕರು ಈ ಅಮೂಲ್ಯ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

Categories
ಹೊಸನಗರ

ಬಾವಿಗೆ ಬಿದ್ದ ಮಹಿಳೆ ಮಹಿಳೆಗೆ ಸಿಕ್ತು ಪುನರ್ಜನ್ಮ!

ಬಾವಿಗೆ ಬಿದ್ದ ಮಹಿಳೆ ಮಹಿಳೆಗೆ ಸಿಕ್ತು ಪುನರ್ಜನ್ಮ!
– ಮಾನಸಿಕವಾಗಿ ದುರ್ಬಲವಾಗಿದ್ದ ಮಹಿಳೆ
– ಹೊಸನಗರದ ಮಾವಿನಕೊಪ್ಪದಲ್ಲಿ ನಡೆದ ಘಟನೆ

NAMMUR EXPRESS NEWS
ಹೊಸನಗರ: ಬಾವಿಗೆ ಬಿದ್ದ ಮಹಿಳೆಗೆ ಸಿಕ್ತು ಪುನರ್ಜನ್ಮ. ಹೌದು. ಮಾನಸಿಕವಾಗಿ ದುರ್ಬಲವಾಗಿದ್ದ ಹೊಸನಗರದ ಮಾವಿನಕೊಪ್ಪದಲ್ಲಿ ಬಾವಿಗೆ ಹಾರಿದ್ದು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಹೊಸನಗರ ಪಟ್ಟಣದ ಹೊರವಲಯ ಮಾವಿನಕೊಪ್ಪದ ನಿವಾಸಿ ಯಶೋದಮ್ಮ (62) ಎಂಬುವರು ತಮ್ಮ ಮನೆಯ ಹಿಂದಿನ ಬಾವಿಗೆ ಹಾರಿದ್ದು ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳ ಬಾವಿಯಿಂದ ಸಾಹಸದಿಂದ ಮೇಲೆ ಎತ್ತಿ ಪುನರ್ಜನ್ಮ ನೀಡಿದ್ದಾರೆ.
ಯಶೋದಮ್ಮ ಮಾನಸಿಕವಾಗಿ ದುರ್ಬಲರಾಗಿದ್ದು ಮನೆಯಲ್ಲಿ ಸೊಸೆ ಮತ್ತು ಮೊಮ್ಮಕ್ಕಳು ಮಾತ್ರ ಇದ್ದರು.

ಮನೆಯಲ್ಲಿ ಅತ್ತೆ ಕಾಣದಾದಾಗ ಸೊಸೆ ಮನೆ ಹಿಂಭಾಗವೆಲ್ಲ ಹುಡುಕಿ ಮನೆ ಹಿಂಭಾಗದ ಬಾವಿಗೆ ಮುಚ್ಚಿದ ಕಬ್ಬಿಣದ ಗ್ರಿಲ್ ತೆರೆದಿದ್ದನ್ನು ಕಂಡ ಸೊಸೆ ಬಾವಿಗೆ ಬಗ್ಗಿ ನೋಡಿದಾಗ ಅತ್ತೆ ಯಶೋದಮ್ಮ ಬಾವಿಯೊಳಗೆ ಪೈಪ್ ಹಿಡಿದು ನಿಂತಿರುವುದು ಕಂಡು ಭಯಭೀತರಾಗಿದ್ದಾರೆ. ಬಳಿಕ ಆಸುಪಾಸಿನವರನ್ನು ಕೂಗಿ ಕರೆದಿದ್ದು ನಂತರ ತಕ್ಷಣ ಅಗ್ನಿಶಾಮಕದಳಕ್ಕೆ ಫೋನ್ ಮಾಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಯಶೋದಮ್ಮನನ್ನು ಸಾಹಸದಿಂದ ಮೇಲಕ್ಕೆತ್ತಿ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಹಿಂದೆ ಯಶೋದಮ್ಮನ ಪತಿ ದಿನಸಿ ವ್ಯಾಪಾರಿ ಶಂಕರನಾರಾಯಣ ಶೇಟ್ ರವರು ಸಹ ಮನೆ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

Categories
ಹೊಸನಗರ

ಹೊಸನಗರದ ತುಂಗಾ ಅಡಿಕೆ ಮಾರಾಟ ಸೊಸೈಟಿ ನೂತನ ಸಾರಥಿಗಳು!

– ಹೊಸನಗರದ ತುಂಗಾ ಅಡಿಕೆ ಮಾರಾಟ ಸೊಸೈಟಿ ನೂತನ ಸಾರಥಿಗಳು!
– ಅಧ್ಯಕ್ಷರಾಗಿ ವಿನಯ್ ದುಮ್ಮ, ಉಪಾಧ್ಯಕ್ಷರಾಗಿ ನಗರ ಮಾಲ್ತೇಶ್ ಅವಿರೋಧ ಆಯ್ಕೆ

NAMMUR EXPRESS NEWS
ಹೊಸನಗರದ ತುಂಗಾ ಅಡಿಕೆ ಮಾರಾಟ ಸೊಸೈಟಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಯುವ ಸಹಕಾರಿಗಳಾದ ವಿನಯ್ ಧುಮ್ಮಹಾಗೂ ಉಪಾಧ್ಯಕ್ಷರಾಗಿ ನಗರ ಮಾಲ್ತೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ಅಪೆಕ್ಸ್ ಬ್ಯಾಂಕ್,ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಡಾ ಆರ್ ಎಂ ಮಂಜುನಾಥ ಗೌಡ ಅವರ ಮಾರ್ಗದರ್ಶನದಂತೆ ನೂತನ ಸಾರಥಿಗಳ ಆಯ್ಕೆ ನಡೆದಿದೆ.  ಎಲ್ಲಾ ನಿರ್ದೇಶಕರು, ಸಮಸ್ತ ಷೇರುದಾರರು, ಜನತೆಗೆ ನೂತನ ಪದಾಧಿಕಾರಿಗಳು ಕೃತಜ್ಞತೆ ಅರ್ಪಿಸಿದ್ದಾರೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಹೊಸನಗರ

ಹೊಸನಗರದ ನಗರ ಬಳಿ ದೇಗುಲದಲ್ಲಿ ನಿಧಿ ಶೋಧ?!

ಹೊಸನಗರದ ನಗರ ಬಳಿ ದೇಗುಲದಲ್ಲಿ ನಿಧಿ ಶೋಧ?!
– ವೀರಭದ್ರೇಶ್ವರ ದೇವಸ್ಥಾನದ ನಿಧಿ ತೆಗೆಯಲು ಯತ್ನ
– ಘಟನೆ ನಡೆದು 20 ದಿನ ಕಳೆದರೂ ತನಿಖೆ ಇಲ್ಲ..?

NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅರೋಡಿ ಸಮೀಪ ಕೊಡುಸೆ ಎಂಬ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ದೇವಸ್ಥಾನವೊಂದರ ನಿಧಿ ಕಳ್ಳತನ ಯತ್ನ ನಡೆದಿದೆ. ಈ ಸುದ್ದಿ ಹೊರ ಬಾರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಸಸೆ ಎಂಬ ಗ್ರಾಮದಲ್ಲಿ ಅತ್ಯಂತ ಪುರಾತನ ಕಾಲದ ಅಂದರೆ ಬಿದನೂರು ಸಂಸ್ಥಾಪಕ ಶಿವಪ್ಪ ನಾಯಕನ ಕಾಲದ ವೀರಭದ್ರೇಶ್ವರ ದೇವಸ್ಥಾನ ಒಂದರಲ್ಲಿ ನೀಧಿ ಕಳ್ಳತನವಾಗಿರುವ ಬಹುದೊಡ್ಡ ಸುದ್ದಿ ಹೊರಬೀಳುತ್ತಿದೆ.

ಕಳೆದ ಆಗಸ್ಟ್ 5 ರಂದು ಈ ದೇವಸ್ಥಾನದಲ್ಲಿ ನಿಧಿ ಕಳ್ಳತನ ನಡೆದಿದೆ. ಆದರೆ ಇದಿಗ 20 ದಿನಗಳು ಕಳೆಯುತ್ತಾ ಬಂದರೂ ಈ ಬಗ್ಗೆ ಎಲ್ಲೂ ತನಿಖೆ ನಡೆಯುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಆದರೆ ನಿಧಿ ಕಳ್ಳತನ ಆಗಿದೆಯೋ… ಯತ್ನವೋ ಅಥವಾ ಬೇರೆ ಕಾರಣಕ್ಕೆ ಬಂಡೆಗಳನ್ನು ಅಗೆಯಲಾಗಿದೆಯೋ ಎಂಬ ಬಗ್ಗೆ ಯಾರ ಬಳಿಯೂ ಉತ್ತರ ಇಲ್ಲ.
ಹೊಸನಗರ ತಾಲೂಕು ನಗರ ಭಾಗದಲ್ಲಿ ನಿಧಿ ಕಳ್ಳತನ ಪ್ರಯತ್ನ ಇದು ಪ್ರಥಮ ಅಲ್ಲ. ಅನೇಕ ಬಾರಿ ಇಂತಹ ಯತ್ನ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಹೊಸನಗರ

ಅಂತೂ ಅರಸಾಳು ನಿಲ್ದಾಣದಲ್ಲಿ ರೈಲು ನಿಲ್ಲುತ್ತೆ!

ಅಂತೂ ಅರಸಾಳು ನಿಲ್ದಾಣದಲ್ಲಿ ರೈಲು ನಿಲ್ಲುತ್ತೆ!
– ಹೊಸನಗರ, ತೀರ್ಥಹಳ್ಳಿ ಭಾಗದ ಪ್ರಯಾಣಿಕರಿಗೆ ಅನುಕೂಲ
– ಪೂಜೆ ಮಾಡಿ ರೈಲನ್ನು ಸ್ವಾಗತಿಸಿದ ಸ್ಥಳೀಯರು

NAMMUR EXPRESS NEWS
ಹೊಸನಗರ: ಬಹು ವರ್ಷಗಳ ಬೇಡಿಕೆಯಾಗಿದ್ದ ಅರಸಾಳು ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ಬೇಡಿಕೆ ಈಗ ಈಡೇರಿದೆ.
ಹೊಸನಗರ, ರಿಪ್ಪನಪೇಟೆ, ಹುಂಚ, ಕೋಣಂದೂರು ಹಾಗೂ ಸುತ್ತಮುತ್ತಲಿನ ಊರಿನ ಪ್ರಯಾಣಿಕರು ಅರಸಾಳು ರೈಲ್ವೆ ನಿಲ್ದಾಣ ಸಮೀಪವಿದ್ದರೂ ರೈಲಿಗಾಗಿ ಆನಂದಪುರ ಹೋಗುವ ಅನಿವಾರ್ಯತೆ ಇತ್ತು. ಇದೀಗ ಅರಸಾಳು ಮೂಲಕ ಶಿವಮೊಗ್ಗ, ಬೆಂಗಳೂರು ಸೇರಿ ರಾಜ್ಯದ ಹಲವೆಡೆಗೆ ರೈಲು ಪ್ರಯಾಣ ಮಾಡಬಹುದಾಗಿದೆ. ಸಾರ್ವಜನಿಕರ ಹಾಗೂ ಪ್ರಯಾಣಿಕರ ಬಹು ವರ್ಷಗಳಿಂದ ಅರಸಾಳು (ಮಾಲ್ಗುಡಿ) ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಈ ವಿಷಯವನ್ನು ಸಂಸದರಾದ ಬಿ.ವೈ ರಾಘವೇಂದ್ರರವರ ಗಮನಕ್ಕೂ ತರಲಾಗಿತ್ತು. ಸಂಸದರ ವಿಶೇಷ ಪ್ರಯತ್ನದಿಂದ ಆ.24ರ ಇಂದಿನಿಂದ (24-08-2023 ) ದಿನ ನಾಲ್ಕು ಮುಖ್ಯ ರೈಲುಗಳು ಅರಸಾಳು ರೈಲು ನಿಲ್ದಾಣದಲ್ಲಿ ನಿಲ್ಲಲಿವೆ.

ಪೂಜೆ ಸಲ್ಲಿಸಿ ಸ್ವಾಗತಿಸಿದ

ಅರಸಾಳು ರೈಲ್ವೆ ನಿಲ್ಧಾಣದಲ್ಲಿ ಪ್ರಪ್ರಥಮವಾಗಿ ನಿಲುಗಡೆಯಾದ ರೈಲಿಗೆ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಯಿತು.
ದಶಕಗಳ ಬೇಡಿಕೆ ಈಡೇರಿಸಿರುವ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ, ಸಂಸದರಾದ ಬಿ.ವೈ ರಾಘವೇಂದ್ರ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಲಾಯಿತು. ಪ್ರಾಯೋಗಿಕವಾಗಿ ನೀಡಲಾಗುತ್ತಿರುವ ಈ ನಿಲುಗಡೆಯನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಈ ನಿಲುಗಡೆಯನ್ನು ಮುಂದುವರೆಸುವ ಸಾಧ್ಯತೆಗಳಿರುವುದರಿಂದ, ಪ್ರಯಾಣಿಕರು ಈ ಅಮೂಲ್ಯ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ ಯುವ ನಾಯಕ, ಮಾಜಿ ತಾಪಂ ಅಧ್ಯಕ್ಷ ವೀರೇಶ್ ಆಲವಳ್ಳಿ ಮನವಿ ಮಾಡಿದ್ದಾರೆ.

ಅರಸಾಳಿನಲ್ಲಿ ರೈಲು ನಿಲುಗಡೆ ಶಾಸಕ ಆರಗ ಜ್ಞಾನೇಂದ್ರ ಸಂತಸ

ಬಹಳ ವರ್ಷಗಳ ಬೇಡಿಕೆಯಾಗಿದ್ದ ಅರಸಾಳು ರೈಲು ನಿಲ್ದಾಣ ಸ್ಥಾಪನೆಯಾಗಿ ರೈಲು ನಿಲುಗಡೆ ಗುರುವಾರದಿಂದ ಆರಂಭವಾಗಿದ್ದು,ಶಾಸಕ ಜ್ಞಾನೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ, ಬಹಳ ವರ್ಷಗಳಿಂದ ಈ ನಿಲುಗಡೆಗೆ ಪತ್ರ ಮುಖೇನ ಒತ್ತಾಯಿಸಿದ್ದನ್ನು ನೆನಪಿಸಿಕೊಂಡಿರುವ ಶಾಸಕರು, ತೀರ್ಥಹಳ್ಳಿ ಮತ್ತು ಹುಂಚ ಹೋಬಳಿಯ ಸಾರ್ವಜನಿಕರಿಗೆ ರೈಲು ಸೇವೆ ಹತ್ತಿರವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ಕೋರಿದ್ದಾರೆ, ಅರಸಾಳು ಕುಂಸಿ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಶ್ರಮವಹಿಸಿದ ಸಂಸದ ಬಿ ವೈ ರಾಘವೇಂದ್ರರವರನ್ನು ಶಾಸಕರು ಅಭಿನಂದಿಸಿದ್ದಾರೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಹೊಸನಗರ

ವಿವಾಹ, ಸಂತಾನ ಭಾಗ್ಯ ಕರುಣಿಸುವ ನಾಗೇಂದ್ರ ಸ್ವಾಮಿ!

ವಿವಾಹ, ಸಂತಾನ ಭಾಗ್ಯ ಕರುಣಿಸುವ ನಾಗೇಂದ್ರ ಸ್ವಾಮಿ!
– ನಾಗರಹಳ್ಳಿಯಲ್ಲಿ ಸಂಭ್ರಮದಿಂದ ನಡೆದ ಜಾತ್ರೆ
– ಹೊಸನಗರ ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರ

NAMMUR EXPRESS NEWS
ಹೊಸನಗರ: ಪುರಾಣ ಪ್ರಸಿದ್ಧ ನಾಗರಹಳ್ಳಿ ಕ್ಷೇತ್ರದ ಶ್ರೀ ನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ಜಾತ್ರಾ ಮಹೋತ್ಸವವು ಅದ್ಧೂರಿಯಿಂದ ನೆರವೇರಿತು. ಮಲೆನಾಡಿನ ಪ್ರಸಿದ್ಧ ನಾಗ ದೇಗುಲದಲ್ಲಿ ಒಂದಾದ ನಾಗರಹಳ್ಳಿಯಲ್ಲಿ ಪ್ರತಿ ವರ್ಷ ಈ ಜಾತ್ರೆ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯುತ್ತದೆ. ಶ್ರೀ ಕ್ಷೇತ್ರದಲ್ಲಿ ಮಳೆಗಾಲದ ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಾಗೂ ಚಳಿಗಾಲದ ಪುಣ್ಯ ವಾಸದಲ್ಲಿ ಕೂಳೆ ಪಂಚಮಿ ದಿನದಂದು ಅತ್ಯಂತ ಜರುಗುತ್ತವೆ. ನಾಡಿನ ವಿವಿಧ ಮೂಲೆಗಳಿಂದ ದೇಗುಲದ ಭಕ್ತರು ಆಗಮಿಸುತ್ತಾರೆ.

ಸ್ವಾಮಿಯ ದರ್ಶನ ಪಡೆದು, ಸನ್ನಿಧಿಯಲ್ಲಿ ವಿವಾಹ ಭಾಗ್ಯ, ಸಂತಾನ ಭಾಗ್ಯ, ಆರೋಗ್ಯ ಹಾಗೂ ಕುಟುಂಬ ರಕ್ಷಣೆಗಾಗಿ ಹರಕೆ ಹೊತ್ತು ತೀರಿಸುವುದು ವಾಡಿಕೆಯಾಗಿದೆ. ಮುಜರಾಯಿ ಇಲಾಖೆಗೆ ಒಳಪಟ್ಟ ಈ ಕ್ಷೇತ್ರದಲ್ಲಿ ತಾಲೂಕು ಆಡಳಿತ ಹಾಗೂ ದೇವಸ್ಥಾನ ವ್ಯವಸ್ಥಾಪನ ಸಮಿತಿ ಆಶ್ರಯದಲ್ಲಿ ಸದಾಕಾಲ ನಾಗರಾಧನೆಯು ನಡೆಯುತ್ತಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ತೀರ್ಥಹಳ್ಳಿ ಸಾಗರ ಹೊಸನಗರ

ಕಾಗೋಡು ತಿಮ್ಮಪ್ಪ ಅವರಿಗೆ ಕಿಮ್ಮನೆ ಸನ್ಮಾನ!

ಕಾಗೋಡು ತಿಮ್ಮಪ್ಪ ಅವರಿಗೆ ಕಿಮ್ಮನೆ ಸನ್ಮಾನ!
– ಸಾಗರದ ನಿವಾಸದಲ್ಲಿ ಸನ್ಮಾನಿಸಿ ಗೌರವ
– ತೀರ್ಥಹಳ್ಳಿ: ಯುವ ಮುಖಂಡ ನವೀನ್ ಅವರಿಗೆ ಕಿಮ್ಮನೆ ಮತ್ತು ಮುಖಂಡರಿಂದ ಗೌರವ
– ಹೊಸನಗರ: ತುಂಗಾ ಸೊಸೈಟಿಯಲ್ಲಿ ಮಂಜುನಾಥ ಗೌಡರಿಗೆ ಸನ್ಮಾನ

NAMMUR EXPRESS NEWS
ಸಾಗರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2023-2024 ಪ್ರಸಕ್ತ ಸಾಲಿನ ಡಿ ದೇವರಾಜ ಅರಸ್ ಪ್ರಶಸ್ತಿಗೆ ಭಾಜನರಾದ ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು, ಮಾಜಿ ವಿಧಾನಸಭೆ ಸಭಾಪತಿ ಕಾಗೋಡು ತಿಮ್ಮಪ್ಪನವರಿಗೆ ಸಾಗರದ ಅವರ ನಿವಾಸದಲ್ಲಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಸನ್ಮಾನಿಸಿ ಆಶೀರ್ವಾದ ಪಡೆದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕಲ್ಗೋಡ್ ರತ್ನಾಕರ್, ತೀರ್ಥಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಡಬ ರಾಘವೇಂದ್ರ, ಕೆಸ್ತೂರು ಮಂಜುನಾಥ್,ಕಾಂಗ್ರೆಸ್ ಮುಖಂಡರಾದ ಬಿಪಿ ರಾಮಚಂದ್ರ ಅವರು ಸಂದರ್ಭದಲ್ಲಿ ಜೊತೆಯಿದ್ದರು.

ಯುವ ಮುಖಂಡ ನವೀನ್ ಅವರಿಗೆ ಕಿಮ್ಮನೆ ಮತ್ತು ಮುಖಂಡರಿಂದ ಗೌರವ

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಸಿಂಗನಬಿದರೆ ಗ್ರಾಮಪಂಚಾಯತಿಗೆ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಯುವ ಮುಖಂಡ ನವೀನ್ ಕುಳ್ಳುoಡೆ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಸುಜಾತಾ ಅವರನ್ನು ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಸನ್ಮಾನಿಸಿ ಅಭಿನಂದಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್ , ಮುಖಂಡರಾದ ಆಮ್ರಪಾಲಿ ಸುರೇಶ್ , ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ್ ಶೆಟ್ಟಿ , ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಸದಸ್ಯರುಗಳಾದ ಜಯಪ್ರಕಾಶ್ ಶೆಟ್ಟಿ , ಗೀತಾ ರಮೇಶ್ , ಮಂಜುಳಾ ನಾಗೇಂದ್ರ ಹಾಗೂ ಮುಖಂಡರಾದ ವಿಲಿಯಂ ಮಾರ್ಟಿಸ್ , ಸಾಮಾಜಿಕ ಜಾಲತಾಣ ಅಧ್ಯಕ್ಷ ಶ್ರೇಯಸ್ ರಾವ್ ಮತ್ತು ಮಂಜುನಾಥ್ ಅವರುಗಳು ಉಪಸ್ಥಿತರಿದ್ದರು.

ತುಂಗಾ ಸೊಸೈಟಿಯಲ್ಲಿ ಮಂಜುನಾಥ ಗೌಡರಿಗೆ ಸನ್ಮಾನ

ಹೊಸನಗರ ತುಂಗಾ ಅಡಿಕೆ ಮಾರಾಟ ಸೌಹಾರ್ದ ಸೊಸೈಟಿ ನೂತನವಾಗಿ ನಿರ್ದೇಶಕರುಗಳಾಗಿ ಆಯ್ಕೆಯಾದ ಆಡಳಿತ ‌ಮಂಡಳಿ ವತಿಯಿಂದ ರಾಜ್ಯದ ಹಿರಿಯ ಸಹಕಾರಿಗಳು, ಡಿಸಿಸಿ ಬ್ಯಾಂಕ್ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರು, ಕೆಪಿಸಿಸಿ ರಾಜ್ಯ ಸಂಚಾಲಕರು ಡಾ ಆರ್ ಎಂ ಮಂಜುನಾಥ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ