Categories
ಹೊಸನಗರ

ಬಾವಿಗೆ ಬಿದ್ದ ಮಹಿಳೆ ಮಹಿಳೆಗೆ ಸಿಕ್ತು ಪುನರ್ಜನ್ಮ!

ಬಾವಿಗೆ ಬಿದ್ದ ಮಹಿಳೆ ಮಹಿಳೆಗೆ ಸಿಕ್ತು ಪುನರ್ಜನ್ಮ!
– ಮಾನಸಿಕವಾಗಿ ದುರ್ಬಲವಾಗಿದ್ದ ಮಹಿಳೆ
– ಹೊಸನಗರದ ಮಾವಿನಕೊಪ್ಪದಲ್ಲಿ ನಡೆದ ಘಟನೆ

NAMMUR EXPRESS NEWS
ಹೊಸನಗರ: ಬಾವಿಗೆ ಬಿದ್ದ ಮಹಿಳೆಗೆ ಸಿಕ್ತು ಪುನರ್ಜನ್ಮ. ಹೌದು. ಮಾನಸಿಕವಾಗಿ ದುರ್ಬಲವಾಗಿದ್ದ ಹೊಸನಗರದ ಮಾವಿನಕೊಪ್ಪದಲ್ಲಿ ಬಾವಿಗೆ ಹಾರಿದ್ದು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಹೊಸನಗರ ಪಟ್ಟಣದ ಹೊರವಲಯ ಮಾವಿನಕೊಪ್ಪದ ನಿವಾಸಿ ಯಶೋದಮ್ಮ (62) ಎಂಬುವರು ತಮ್ಮ ಮನೆಯ ಹಿಂದಿನ ಬಾವಿಗೆ ಹಾರಿದ್ದು ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳ ಬಾವಿಯಿಂದ ಸಾಹಸದಿಂದ ಮೇಲೆ ಎತ್ತಿ ಪುನರ್ಜನ್ಮ ನೀಡಿದ್ದಾರೆ.
ಯಶೋದಮ್ಮ ಮಾನಸಿಕವಾಗಿ ದುರ್ಬಲರಾಗಿದ್ದು ಮನೆಯಲ್ಲಿ ಸೊಸೆ ಮತ್ತು ಮೊಮ್ಮಕ್ಕಳು ಮಾತ್ರ ಇದ್ದರು.

ಮನೆಯಲ್ಲಿ ಅತ್ತೆ ಕಾಣದಾದಾಗ ಸೊಸೆ ಮನೆ ಹಿಂಭಾಗವೆಲ್ಲ ಹುಡುಕಿ ಮನೆ ಹಿಂಭಾಗದ ಬಾವಿಗೆ ಮುಚ್ಚಿದ ಕಬ್ಬಿಣದ ಗ್ರಿಲ್ ತೆರೆದಿದ್ದನ್ನು ಕಂಡ ಸೊಸೆ ಬಾವಿಗೆ ಬಗ್ಗಿ ನೋಡಿದಾಗ ಅತ್ತೆ ಯಶೋದಮ್ಮ ಬಾವಿಯೊಳಗೆ ಪೈಪ್ ಹಿಡಿದು ನಿಂತಿರುವುದು ಕಂಡು ಭಯಭೀತರಾಗಿದ್ದಾರೆ. ಬಳಿಕ ಆಸುಪಾಸಿನವರನ್ನು ಕೂಗಿ ಕರೆದಿದ್ದು ನಂತರ ತಕ್ಷಣ ಅಗ್ನಿಶಾಮಕದಳಕ್ಕೆ ಫೋನ್ ಮಾಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಯಶೋದಮ್ಮನನ್ನು ಸಾಹಸದಿಂದ ಮೇಲಕ್ಕೆತ್ತಿ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಹಿಂದೆ ಯಶೋದಮ್ಮನ ಪತಿ ದಿನಸಿ ವ್ಯಾಪಾರಿ ಶಂಕರನಾರಾಯಣ ಶೇಟ್ ರವರು ಸಹ ಮನೆ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

One reply on “ಬಾವಿಗೆ ಬಿದ್ದ ಮಹಿಳೆ ಮಹಿಳೆಗೆ ಸಿಕ್ತು ಪುನರ್ಜನ್ಮ!”

ಪೂರ್ವ ಜನ್ಮ ಅಲ್ಲ ಅದು ಮರು ಜನ್ಮ ದಯವಿಟ್ಟು ಕನ್ನಡ ಪದಗಳನ್ನು ಸರಿಯಾಗಿ ಹಾಕಿ ನಿಮ್ಮ ಪೇಜ್ನಲ್ಲಿ ಒಳ್ಳೆ ನ್ಯೂಸ್ ಗಳನ್ನು ಪ್ರಸಾರ ಮಾಡುತ್ತೀರಿ ನಾನೂ ಓದುತ್ತೇನೆ ಕನ್ನಡ ಪದಗಳ ಮೇಲೆ ಹಿಡಿತವಿರಲಿ ಧನ್ಯವಾದಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.