Categories
ಉದ್ಯೋಗ ಸುದ್ದಿ

ಕೆ.ಇ.ಬಿಯಲ್ಲಿ ಉದ್ಯೋಗ ಅವಕಾಶ

ಕೆ.ಇ.ಬಿಯಲ್ಲಿ ಉದ್ಯೋಗ ಅವಕಾಶ
– ಬೆಸ್ಕಾಂನಲ್ಲಿ 400 ಹುದ್ದೆಗಳ ನೇಮಕಾತಿಗೆ ಅರ್ಜಿ
– ಏನಿದು ಕೆಲಸ..? ಯಾರು ಅರ್ಜಿ ಹಾಕಬಹುದು?

NAMMUR EXPRESS NEWS
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) 400 ಪದವೀಧರ ಮತ್ತು ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಬೆಸ್ಕಾಂ ಗ್ರಾಜುಯೇಟ್ ಮತ್ತು ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್‌ ನೇಮಕಾತಿಗೆ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ portal.mhrdnats.gov.in ಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಡಿಸೆಂಬರ್ 31 ರವರೆಗೆ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು. ಶಾರ್ಟ್ ಲಿಸ್ಟ್ ಮಾಡಿದ ಅರ್ಜಿದಾರರ ಹೆಸರನ್ನು ಜನವರಿ 8, 2024 ರಂದು ಘೋಷಿಸಲಾಗುವುದು. ಅಭ್ಯರ್ಥಿಗಳ ದಾಖಲೆ ಪರಿಶೀಲನೆಯನ್ನು ಬೆಸ್ಕಾಂ, ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, 1ನೇ ಮಹಡಿ, ಕ್ರೆಸೆಂಟ್ ಟವ‌ರ್, ಕ್ರೆಸೆಂಟ್ ರಸ್ತೆ, ಮಲ್ಲಿಗೆ ನರ್ಸಿಂಗ್ ಹೋಂ ಬಳಿ, ರೇಸ್ ಕೋರ್ಸ್, ಬೆಂಗಳೂರು-560001 ವಿಳಾಸದಲ್ಲಿ ನಡೆಸಲಾಗುತ್ತದೆ. ದಾಖಲೆ ಪರಿಶೀಲನೆ ಪ್ರಕ್ರಿಯೆಯನ್ನು ಜನವರಿ 22 ರಿಂದ 24, 2024 ರ ನಡುವೆ ಕೆಲಸದ ದಿನಗಳಲ್ಲಿ ಮಾಡಲಾಗುತ್ತದೆ.

ಗ್ರಾಜುಯೇಟ್ ಅಪ್ರೆಂಟಿಸ್‌ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಎಐಸಿಟಿಇ ಅಥವಾ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಬ್ಯಾಚುಲ‌ರ್ ಆಫ್ ಎಂಜಿನಿಯರಿಂಗ್ ಅಥವಾ ಟೆಕ್ನಾಲಜಿ (ಬಿಇ / ಬಿಟೆಕ್) ಪಡೆದಿರಬೇಕು. ಟೆಕ್ನಿಷಿಯನ್ (ಡಿಪ್ಲೊಮಾ) ನೇಮಕಾತಿಗೆ ಅರ್ಜಿ ಸಲ್ಲಿಸುವವರು ರಾಜ್ಯ ಅಥವಾ ಕೇಂದ್ರ ಸರ್ಕಾರಗಳಿಂದ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಕಾಲೇಜು ಅಥವಾ ಸಂಸ್ಥೆಯಿಂದ ಮೂರು ವರ್ಷದ ಡಿಪ್ಲೊಮಾ ಪಡೆದಿರಬೇಕು. ಅಭ್ಯರ್ಥಿಗಳು ಕನ್ನಡ ಭಾಷೆಯಲ್ಲಿ ಓದುವ ಮತ್ತು ಬರೆಯುವ ಜ್ಞಾನವನ್ನು ಹೊಂದಿರಬೇಕು.

ಅರ್ಹತಾ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮಾತ್ರ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ (143), ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ (116), ಕಂಪ್ಯೂಟರ್ ಸೈನ್ಸ್ (36), ಮಾಹಿತಿ ವಿಜ್ಞಾನ (20) ಮತ್ತು ಸಿವಿಲ್ (5) ಮತ್ತು ಇನ್ಫೋುಮೆಂಟೇಶನ್ ಟೆಕ್ನಾಲಜಿ (5) ವಿಭಾಗಗಳಲ್ಲಿ ಎಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಟೆಕ್ನಿಷಿಯನ್ (ಡಿಪ್ಲೊಮಾ) ನೇಮಕಾತಿಗೆ ಅರ್ಜಿ ಸಲ್ಲಿಸುವವರು ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ (55), ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ (10) ಮತ್ತು ಕಂಪ್ಯೂಟರ್ ಸೈನ್ಸ್‌ (10) ವಿಭಾಗಗಳಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಗ್ರಾಜುಯೇಟ್ ಅಪ್ರೆಂಟಿಸ್ ಗೆ 9,008 ರೂ., ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್ ಗೆ 8,000 ರೂ.

Categories
ಉದ್ಯೋಗ ಸುದ್ದಿ ಚಿಕ್ಕಮಗಳೂರು ತೀರ್ಥಹಳ್ಳಿ ಶಿವಮೊಗ್ಗ

ರಾಹುಲ್ ಹ್ಯುಂಡೈ ಶೋ ರೂಂನಲ್ಲಿ ಉದ್ಯೋಗ

ರಾಹುಲ್ ಹ್ಯುಂಡೈ ಶೋ ರೂಂ ನಲ್ಲಿ ಉದ್ಯೋಗ
– ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರ, ಸಾಗರ, ಕಡೂರು, ಚಿಕ್ಕಮಗಳೂರಲ್ಲಿ ಉದ್ಯೋಗ
– ಯಾರು ಅರ್ಜಿ ಸಲ್ಲಿಸಬಹುದು ಇಲ್ಲಿದೆ ಡೀಟೇಲ್!

NAMMUR EXPRESS JOB NEWS
ಮಲೆನಾಡಿನ ಪ್ರಸಿದ್ಧ ಹುಂಡೈ ಕಾರ್ ಡೀಲರ್ ಆದ ರಾಹುಲ್ ಹುಂಡೈ ಕಾರ್ ಶೋರೂಂ ನಲ್ಲಿ ಉದ್ಯೋಗವಕಾಶ

ಹುದ್ದೆ: ಫೈನಾನ್ಸ್ ಎಕ್ಸಿಕ್ಯೂಟಿವ್
ಎಲ್ಲಿದೆ ಉದ್ಯೋಗ ಅವಕಾಶ :– ಸಾಗರ ಮತ್ತು ತೀರ್ಥಹಳ್ಳಿ

ಹುದ್ದೆ : ಸರ್ವಿಸ್ ಅಡ್ವೈಸರ್
ಎಲ್ಲಿದೆ ಉದ್ಯೋಗಾವಕಾಶ : ಶಿವಮೊಗ್ಗ

ಹುದ್ದೆ: ಸೇಲ್ಸ್ ಕನ್ಸಲ್ಟೆಂಟ್
ಎಲ್ಲಿದೆ ಉದ್ಯೋಗಾವಕಾಶ: ಶಿವಮೊಗ್ಗ, ತೀರ್ಥಹಳ್ಳಿ, ಚಿಕ್ಕಮಗಳೂರು, ಸಾಗರ, ಶಿಕಾರಿಪುರ, ಕಡೂರು.

ಹೊಸಬರು ಹಾಗೂ ಮಾರ್ಕೆಟಿಂಗ್ ಅನುಭವ ಇರುವವರು ( ವಿದ್ಯಾರ್ಹತೆ ಶೈಕ್ಷಣಿಕ ಹಂತದಲ್ಲಿ ತೇರ್ಗಡೆ ಹಾಗೂ ಯಾವುದೇ ಪದವಿ )

hr@grouprahul.in
9448397066
RAHUL HYUNDAI

Categories
ಉಡುಪಿ ಉದ್ಯೋಗ ಸುದ್ದಿ ಕರಾವಳಿ ಮಂಗಳೂರು

ಸ್ವ-ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ!

ಸ್ವ-ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ!
– ವಿವಿಧ ಉಚಿತ ತರಬೇತಿಗಳಿಗೆ ಅರ್ಜಿ ಆಹ್ವಾನ
– ರುಡ್ ಸೆಟ್ ವತಿಯಿಂದ ವಿವಿಧ ಕೋರ್ಸ್

NAMMUR EXPRESS NEWS
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ರುಡ್‌ ಸೆಟ್ ಸಂಸ್ಥೆಯ ಮೂಲಕ ವಿವಿಧ ಉಚಿತ ತರಬೇತಿಗಳನ್ನು ಸ್ವ ಉದ್ಯೋಗಾಕಾಂಕ್ಷಿಗಳಿಗೆ ನೀಡಲಾಗುತ್ತಿದೆ. ಇದೀಗ ವಿವಿಧ ಕೋರ್ಸ್ ಗಳಿಗೆ ಉಚಿತ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕುರಿತಂತೆ ರುಡ್ ಸೆಟ್ ಸಂಸ್ಥೆಯಿಂದ ಮಾಹಿತಿ ನೀಡಲಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಎಸ್‌ ಡಿಎಮ್‌ಇ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಜೊತೆಯಾಗಿ ಸ್ಥಾಪಿಸಿರುವ ರುಡ್‌ಸೆಟ್ ಸಂಸ್ಥೆ ಇದೀಗ ದೇಶಾದ್ಯಂತ ಇರುವ ನಿರುದ್ಯೋಗ ಯುವಕ ಯುವತಿಯರಿಗೆ ಮತ್ತು ಉದ್ಯೋಗವನ್ನು ಅರಸುತ್ತಿರುವವರಿಗೆ, ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಆಶಾ ಕಿರಣವಾಗಿದೆ ಎಂದಿದೆ.

ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರಿತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ ವಿವಿಧ ಬ್ಯಾಂಕುಗಳಿಂದ ರುಡ್‌ಸೆಟ್‌ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿರುತ್ತದೆ. ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದಿದೆ.

ಈ ಕೆಳಕಂಡ ವಿವಿಧ ಉಚಿತ ತರಬೇತಿಗೆ ಅರ್ಜಿ ಆಹ್ವಾನ

1. ಕೃತಕ ಆಭರಣಗಳ ತಯಾರಿಕೆ – ದಿನಾಂಕ 18.12.2023 ರಿಂದ 30.12.2023 (13 ದಿನ )
2. ಮೋಟಾರ್ ರಿವೈಂಡಿಂಗ್ – ದಿನಾಂಕ 04.01.2024 ರಿಂದ 02.02.2024ರವರೆಗೆ (30 ದಿನಗಳು)
3. ಜೇನು ಸಾಕಾಣಿಕೆ 08.01.2024 ರಿಂದ 17.01.202483 (10)
4. ಎಸಿ ಮತ್ತು ಫ್ರಿಡ್ಜ್ ರಿಪೇರಿ 19.01.2024 ರಿಂದ 17.02.20248 (30 ದಿನ)
5. ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ದಿನಾಂಕ 05.02.2024 ರಿಂದ 17.02.2024838 (13 ದಿನಗಳು)

ಈ ತರಬೇತಿಗಳು ನಡೆಯಲಿದೆ ಜೊತೆಗೆ ಮುಂದಿನ ದಿನಗಳಲ್ಲಿ ಕೃಷಿ ಉದ್ಯಮಿ, ಮೊಬೈಲ್ ಫೋನ್ ರಿಪೇರಿ, ಮೆನ್ಸ್ ಪಾರ್ಲರ್, ಮೋದಲಾದ ತರಬೇತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಎಲ್ಲಾ ತರಬೇತಿಗಳು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ ಯುವತಿಯರು ರುಡ್ ಸೆಟ್ ಸಂಸ್ಥೆಯ email – ujirerudseti@gmail.com ಗೆ ಅರ್ಜಿ ಸಲ್ಲಿಸಿ ಅಥವಾ ವಾಟ್ಸಪ್‌ ಮೂಲಕ ಅರ್ಜಿ ಸಲ್ಲಿಸುವವರು ಮೊಬೈಲ್‌ ನಂ. 6364561982 ಗೆ ಸಲ್ಲಿಸಬಹುದು.
ನೇರವಾಗಿ ಕೂಡ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಅರ್ಜಿಯನ್ನು ಬರೆದು ನಿರ್ದೇಶಕರು ರುಡ್‌ಸೆಟ್‌ ಸಂಸ್ಥೆ, ಸಿದ್ಧವನ ಉಜಿರೆ 574240, ಇವರಿಗೆ ಕಳ್ಳಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9591044014, 9902594791

Categories
ಉದ್ಯೋಗ ಸುದ್ದಿ

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್
– 75 ಸಾವಿರ ಜಿಡಿ ಕಾನ್ಸ್ ಟೇಬಲ್ ಗಳ ನೇಮಕಾತಿ
– ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

NAMMUR EXPRESS NEWS
10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಬಂಪ‌ರ್ ನೇಮಕಾತಿಗೆ ಅವಕಾಶವಿದೆ. ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ಜಿಡಿ ಕಾನ್ಸ್ಟೇಬಲ್ ನೇಮಕಾತಿ 2023 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಇದರ ಮೂಲಕ 75768 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹೊರಡಿಸಿದ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಇಂದಿನಿಂದ ನವೆಂಬರ್ 24 ರಿಂದ ಎಸ್ಎಸ್ಸಿಯ ಅಧಿಕೃತ ವೆಬೈಟ್ ssc.nic.in ಭೇಟಿ ನೀಡುವ ಮೂಲಕ ಆನೈನ್ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 28 ಕೊನೆಯ ದಿನವಾಗಿದೆ. ವಿವಿಧ ಭದ್ರತಾ ಪಡೆಗಳಲ್ಲಿ ಜನರಲ್ ಡ್ಯೂಟಿ ಕಾನ್ಸೆಬಲ್ ಹುದ್ದೆಗಳನ್ನು ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಇದರಲ್ಲಿ ಬಿಎಸ್‌ಎಫ್‌ 27,875 ಹುದ್ದೆಗಳು, ಸಿಐಎಸ್‌ಎಘ್ನ 8,598 ಹುದ್ದೆಗಳು, ಸಿಆರ್ಪಿಎಘ್ನ 25,427 ಹುದ್ದೆಗಳು, ಎಸ್ಎಸ್ಪಿಯ 5,278 ಹುದ್ದೆಗಳು, ಐಟಿಬಿಪಿಯ 3,006 ಹುದ್ದೆಗಳು, ಅಸ್ಸಾಂ ರೈಫಲ್ಸ್ 4,776 ಹುದ್ದೆಗಳು ಮತ್ತು ಎಸ್‌ಎಸ್‌ಎಫ್ ನ 583 ಹುದ್ದೆಗಳು ಸೇರಿವೆ.

ಸಾಮರ್ಥ್ಯ:

ನೇಮಕಾತಿ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ ಉತ್ತೀರ್ಣ ಪ್ರಮಾಣಪತ್ರವನ್ನು ಹೊಂದಿರಬೇಕು. ಇದಲ್ಲದೆ, ಅವರ ವಯಸ್ಸು 18 ರಿಂದ 23 ವರ್ಷಗಳ ನಡುವೆ ಇರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 3 ವರ್ಷದಿಂದ 5 ವರ್ಷಗಳಿಗೆ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

ಎಸ್‌ಎಸ್ಸಿ ಜಿಡಿ ಕಾನ್ಸಬಲ್‌ ನೇಮಕಾತಿ ಪ್ರಕ್ರಿಯೆಯಲ್ಲಿ, ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ, ದೈಹಿಕ ಮಾನದಂಡ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ರೀಸನಿಂಗ್, ಜಿಕೆ, ಗಣಿತ ಮತ್ತು ಹಿಂದಿ-ಇಂಗ್ಲಿಷ್ ನಿಂದ ಪ್ರಶ್ನೆಗಳು ಇರುತ್ತವೆ. ನೇಮಕಾತಿ ಅಧಿಸೂಚನೆಗೆ ಭೇಟಿ ನೀಡುವ ಮೂಲಕ ನೀವು ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಬಹುದು.

Categories
ಉದ್ಯೋಗ ಸುದ್ದಿ

ಎಸ್.ಬಿ.ಐನಲ್ಲಿ ಉದ್ಯೋಗಾವಕಾಶ!

ಎಸ್.ಬಿ.ಐನಲ್ಲಿ ಉದ್ಯೋಗಾವಕಾಶ!
– ಕ್ಲರ್ಕ್, ಜೂನಿಯರ್ ಅಸೋಸಿಯೇಟ್ 8283 ಖಾಲಿ
– ನೇಮಕಾತಿಯ ಮಾಹಿತಿ ಇಲ್ಲಿದೆ..!

NAMMUR EXPRESS NEWS
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಒಟ್ಟು ಹುದ್ದೆಗಳು:
8283

ಹುದ್ದೆಗಳ ವಿವರ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್.ಬಿ.ಐ ಕ್ಲರ್ಕ್ ನೇಮಕಾತಿಯಲ್ಲಿ ಡ್ರೈವ್ ಕ್ಲೆರಿಕಲ್ ಕೇಡರ್ ನಲ್ಲಿ, ಜೂನಿಯರ್ ಅಸೋಸಿಯೇಟ್ 8283 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಅರ್ಹತೆ ಏನು?

ಮಾನ್ಯತ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತಾ ಇಂಟಿಗ್ರೇಟೆಡ್ ಡಯಲ್ (idd) ಪ್ರಮಾಣಪತ್ರವನ್ನು ಹೊಂದಿರುವ ಅಭ್ಯರ್ಥಿಗಳು idd ಪಾಸ್ ಮಾಡುವ ದಿನಾಂಕವು ಡಿಸೆಂಬರ್ 31, 2023ರಂದು ಅಥವಾ ಅದಕ್ಕಿಂತ ಮೊದಲು ಎಂದು ಖಚಿತಪಡಿಸಿಕೊಳ್ಳಬೇಕು.

ವಯೋಮಿತಿ:
20 ವರ್ಷದಿಂದ 28 ವರ್ಷಗಳ ನಡುವೆ ಇರಬೇಕು.

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆಯು ಆನ್ ಲೈನ್ ಪರೀಕ್ಷೆ (ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ಮತ್ತು ನಿರ್ದಿಷ್ಟಪಡಿಸಿದ ಸ್ಥಳೀಯ ಭಾಷೆಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. 100 ಅಂಕಗಳಿಗೆ ಆಬ್ಜೆಕ್ಟಿವ್ ಪರೀಕ್ಷೆಗಳನ್ನು ಒಳಗೊಂಡಿರುವ ಆನ್ ಲೈನ್ ಪೂರ್ವಭಾವಿ ಪರೀಕ್ಷೆಯನ್ನು ಆನ್ ಲೈನ್ ನಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಯು 1 ಗಂಟೆ ಅವಧಿಯ 3 ವಿಭಾಗಗಳನ್ನು ಒಳಗೊಂಡಿರುತ್ತದೆ. ಇಂಗ್ಲಿಷ್ ಭಾಷೆ, ಸಂಖ್ಯಾತ್ಮಕ ಸಾಮರ್ಥ್ಯ ಮತ್ತು ತಾರ್ಕಿಕ ಸಾಮರ್ಥ್ಯ.

ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಸಾಮಾನ್ಯ ವರ್ಗಕ್ಕೆ 750 ರೂ, ಎಸ್ಸಿ ಎಸ್ಟಿ ವರ್ಗಕ್ಕೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:
ನವೆಂಬರ್ 17, 2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಡಿಸೆಂಬರ್ 07, 2023

ಪೂರ್ವಭಾವಿ ಪರೀಕ್ಷೆ:
ಜನವರಿ 2024

ಮುಖ್ಯ ಪರೀಕ್ಷೆ:
ಫೆಬ್ರವರಿ 2024

Categories
ಉದ್ಯೋಗ ಸುದ್ದಿ

ಅಂಚೆ ಇಲಾಖೆಯಲ್ಲಿ 1899 ಹುದ್ದೆ!

ಅಂಚೆ ಇಲಾಖೆಯಲ್ಲಿ 1899 ಹುದ್ದೆ!
-10, 12, ಪದವೀಧರರಿಗೆ ಉದ್ಯೋಗಾವಕಾಶ
– ಯಾವ ಹುದ್ದೆ… ಇಲ್ಲಿದೆ ಅರ್ಜಿ…!

NAMMUR EXPRESS NEWS
ಭಾರತೀಯ ಸಂವಹನ ಸಚಿವಾಲಯ ಅಧೀನದ ಅಂಚೆ ಇಲಾಖೆಯು ಸ್ಪೋರ್ಟ್ಸ್ ಕೋಟಾದ 1899 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 64 ವಿವಿಧ ಬಗೆಯ ಕ್ರೀಡಾ ವಿಭಾಗದಲ್ಲಿ ಆಡಿದ, ಆಸಕ್ತರು ಅರ್ಜಿ ಸಲ್ಲಿಸಲು ಆನ್‌ಲೈನ್‌ ಲಿಂಕ್‌ ಅನ್ನು ಆಕ್ಟಿವೇಟ್‌ ಮಾಡಲಾಗಿದೆ. ಹುದ್ದೆಗಳ ವಿವರ ಕುರಿತು, ಪ್ರಮುಖ ದಿನಾಂಕಗಳ ಕುರಿತು ಈಗಾಗಲೇ ಸುದ್ದಿಯನ್ನು ಪ್ರಕಟಿಸಲಾಗಿತ್ತು.

ಹುದ್ದೆವಾರು ವೇತನ ಶ್ರೇಣಿ
ಪೋಸ್ಟಲ್ ಅಸಿಸ್ಟಂಟ್ : Rs.25,500-81,000.
ಸಾರ್ಟಿಂಗ್ ಅಸಿಸ್ಟಂಟ್: Rs.25,500-81,000.
ಪೋಸ್ಟ್‌ಮ್ಯಾನ್ : Rs.21,700-69,100.
ಮೇಲ್ ಗಾರ್ಡ್‌: Rs.21,700-69,100.
ಎಂಟಿಎಸ್‌ : Rs.18,000-56,900.

ಅಂಚೆ ಇಲಾಖೆ ಕ್ರೀಡಾಕೋಟಾದ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯಲ್ಲಿ ಒಟ್ಟು 3 ಹಂತಗಳಿವೆ. ಅವುಗಳೆಂದರೆ
ಅಪ್ಲೇಕೇಶನ್‌ ಸ್ಟೇಜ್‌-1
ಅಪ್ಲಿಕೇಶನ್‌ ಸ್ಟೇಜ್‌-2
ಸ್ಟೆಜ್‌-3 ಶುಲ್ಕ ಪಾವತಿ

ಅರ್ಜಿ ಸಲ್ಲಿಸುವ ವಿಧಾನ
– ಕ್ರೀಡಾ ಕೋಟಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವೆಬ್‌ಪೇಜ್‌ ಲಿಂಕ್ ಕ್ಲಿಕ್ ಮಾಡಿ.
– ಓಪನ್ ಆದ ಪೇಜ್‌ನಲ್ಲಿ ‘Application Stage-1’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ತೆರೆಯುವ ಆನ್‌ಲೈನ್‌ ಅರ್ಜಿ ನಮೂನೆಯಲ್ಲಿ ಕೇಳಲಾದ ಮಾಹಿತಿಗಳನ್ನು ನೀಡಿ.
– ಮೊದಲಿಗೆ ಮೊಬೈಲ್ ನಂಬರ್, ಇ-ಮೇಲ್‌ ವಿಳಾಸ ನೀಡಿ ವ್ಯಾಲಿಡೇಟ್‌ ಮಾಡಬೇಕು.
– ನಂತರ ಇತರೆ ಮಾಹಿತಿಗಳನ್ನು ನೀಡಿ. ರಿಜಿಸ್ಟ್ರೇಷನ್‌ ಪಡೆಯಿರಿ.
– ನಂತರ Application Stage-2 ಎಂದಿರುವಲ್ಲಿ ಕ್ಲಿಕ್ ಮಾಡಿ.
– ರಿಜಿಸ್ಟ್ರೇಷನ್‌ ಪಡೆದ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ.
– ಇಲ್ಲಿ ವಿದ್ಯಾರ್ಹತೆ, ಕ್ರೀಡಾ ಅರ್ಹತೆ ಪ್ರಮಾಣ ಪತ್ರ, ಇತರೆ ಮಾಹಿತಿಗಳನ್ನು ನೀಡಿ ಅರ್ಜಿ ಪೂರ್ಣಗೊಳಿಸಬೇಕು. ದಾಖಲೆ ಅಪ್‌ಲೋಡ್‌ ಮಾಡಬೇಕು.
ಮುಂದಿನ ಹಂತದಲ್ಲಿ ಶುಲ್ಕ ಪಾವತಿಸಿ.
– ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುತ್ತದೆ. ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್‌ ತೆಗೆದುಕೊಳ್ಳಿ.

ಕ್ರೀಡಾ ಸಾಧನೆಯ ಅರ್ಹತೆಗಳೇನು? ಯಾರು ಅರ್ಜಿ ಸಲ್ಲಿಸಬಹುದು?
ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಆಡಿದವರು.
ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಆಡಿದವರು.
ಅಂತರ ವಿಶ್ವವಿದ್ಯಾಲಯಗಳ ಮಟ್ಟದ ಕ್ರೀಡಾ ಕೂಟದಲ್ಲಿ ಆಡಿದವರು.
ಶಾಲಾ ಮಟ್ಟದ ಕ್ರೀಡಾ ಕೂಟದಲ್ಲಿ ಆಡಿದವರು.
ರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಪಂದ್ಯಾವಳಿಯಲ್ಲಿ ಭಾಗವಹಿಸಿದವರು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಮೊಬೈಲ್ ನಂಬರ್
ಇ-ಮೇಲ್ ವಿಳಾಸ
ಅಭ್ಯರ್ಥಿ ಹೆಸರು
ಸರ್‌ ನೇಮ್
ತಂದೆ ಹೆಸರು
ಕೆಟಗರಿ
ಲಿಂಗ ಮಾಹಿತಿ
ಜನ್ಮ ದಿನಾಂಕ ಮಾಹಿತಿ
ಕ್ರೀಡಾಕೂಟದ ಮಾಹಿತಿ
ವಿದ್ಯಾರ್ಹತೆ ಮಾಹಿತಿ / ಪ್ರಮಾಣ ಪತ್ರ
ಇತರೆ

ಅರ್ಜಿ ಸಲ್ಲಿಸಲು ನವೆಂಬರ್ 10 ರಿಂದ ಡಿಸೆಂಬರ್ 09 ರವರೆಗೆ ಅವಕಾಶ ನೀಡಲಾಗಿದೆ.

Categories
ಉದ್ಯೋಗ ಸುದ್ದಿ

ಸೇನೆ ಸೇರ ಬಯಸುವವರಿಗೆ ಗುಡ್ ನ್ಯೂಸ್!

ಸೇನೆ ಸೇರ ಬಯಸುವವರಿಗೆ ಗುಡ್ ನ್ಯೂಸ್!
– ಸಶಸ್ತ್ರ ಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ
– ಯಾರು ಅರ್ಜಿ ಸಲ್ಲಿಸಬೇಕು… ಇಲ್ಲಿದೆ ಡೀಟೇಲ್ಸ್

NAMMUR EXPRESS NEWS
ಭಾರತೀಯ ಸೇನೆಯಲ್ಲಿ (ಸರ್ಕಾರಿ ನೌಕರಿ) ಅಧಿಕಾರಿ ಕೆಲಸ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಿದೆ. ಸೇನೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು (ಎಎಫ್‌ಎಂಎಸ್) ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಇನ್ನೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ಎಎಫ್‌ಎಂಎಸ್ನ ಅಧಿಕೃತ ವೆಬೈಟ್ afmc.nic.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಪ್ರಕ್ರಿಯೆ ಅಕ್ಟೋಬರ್ 16 ರಂದು ಪ್ರಾರಂಭವಾಯಿತು ಮತ್ತು ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 05 ಆಗಿತ್ತು. ಆದಾಗ್ಯೂ, ಅಧಿಕಾರಿಗಳು ಗಡುವನ್ನು ನವೆಂಬರ್ 12 ರವರೆಗೆ ವಿಸ್ತರಿಸಿದ್ದಾರೆ. ಖಾಲಿ ಇರುವ 650 ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಡೈವ್ ನಡೆಸಲಾಗುತ್ತಿದೆ.

ಈ ನೇಮಕಾತಿ ಡೈವ್ ಮೂಲಕ ಒಟ್ಟು 650 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಎಎಫ್‌ಎಂಎಸ್ ಹೊಂದಿದೆ. ಈ ಪೈಕಿ 585 ಹುದ್ದೆಗಳನ್ನು ಪುರುಷ ಅಭ್ಯರ್ಥಿಗಳಿಗೆ ಮತ್ತು 65 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಪುರುಷ ಅಭ್ಯರ್ಥಿಗಳು – 585 ಹುದ್ದೆಗಳು
ಮಹಿಳಾ ಅಭ್ಯರ್ಥಿಗಳು – 65 ಹುದ್ದೆಗಳು
ಒಟ್ಟು ಹುದ್ದೆಗಳು- 650

ಅಗತ್ಯವಿರುವವಯಸ್ಸಿನ ಮಿತಿ
ಡಿಸೆಂಬರ್ 31, 2023 ಕ್ಕೆ ಅನ್ವಯವಾಗುವಂತೆ ಎಂಬಿಬಿಎಸ್ ಪದವಿ ಪಡೆದ ಅಭ್ಯರ್ಥಿಗಳಿಗೆ 30 ವರ್ಷಕ್ಕಿಂತ ಕಡಿಮೆ ಮತ್ತು ಪಿಜಿ ಪದವಿ ಪಡೆದ ಅಭ್ಯರ್ಥಿಗಳಿಗೆ 35 ವರ್ಷ ಮೀರಬಾರದು.
ಅಭ್ಯರ್ಥಿಗಳು ರಾಷ್ಟ್ರೀಯ ವೈದ್ಯಕೀಯ ಮಂಡಳಿ ಕಾಯ್ದೆ, 2019 ರ ಅಡಿಯಲ್ಲಿ ವೈದ್ಯಕೀಯ ಅರ್ಹತೆಯನ್ನು ಹೊಂದಿರಬೇಕು. ರಾಜ್ಯ ವೈದ್ಯಕೀಯ ಮಂಡಳಿ / ಎಸ್ಬಿಇ / ಎನ್ಎಂಸಿಯಿಂದ ಮಾನ್ಯತೆ ಪಡೆದ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
ಅಧಿಸೂಚನೆ ಮತ್ತು ಅಪ್ಲಿಕೇಶನ್ ಲಿಂಕ್ ಅನ್ನು ಇಲ್ಲಿ ನೋಡಿ
Indian Army AFMS Recruitment 2023
ಕೆಲಸದಲ್ಲಿಸಂಬಳ ಎಎಫ್‌ಎಂಎಸ್ ನೇಮಕಾತಿ 2023 ರ ಅಡಿಯಲ್ಲಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 61,300 ರೂ. ಇದಲ್ಲದೆ, ಅವರು ವಿವಿಧ ಭತ್ಯೆಗಳಿಗೆ ಅರ್ಹರಾಗಿರುತ್ತಾರೆ.

Categories
ಉದ್ಯೋಗ ಸುದ್ದಿ

ರೈಲ್ವೇ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ

ರೈಲ್ವೇ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ

NAMMUR EXPRESS NEWS
ಮಧ್ಯ ದಕ್ಷಿಣ ರೈಲ್ವೆಯ ರೈಲ್ವೆ ನೇಮಕಾತಿ ಸೆಲ್ (ಆರ್‌ಆರ್ಸಿ) 67 ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಕ್ರೀಡಾ ಕೋಟಾ ಡ್ರೈವ್ ಅಡಿಯಲ್ಲಿ ಲಭ್ಯವಿದೆ. ನೀವು ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದರೆ ಮತ್ತು ವಿವಿಧ ಹಂತಗಳಲ್ಲಿ ವಿವಿಧ ಕ್ರೀಡಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೆ ಭಾರತೀಯ ರೈಲ್ವೆಯ ಭಾಗವಾಗಲು ನಿಮಗೆ ಸುವರ್ಣಾವಕಾಶವಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ನವೆಂಬರ್ 27, 2023 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ರೈಲ್ವೆ ನೇಮಕಾತಿ ಅಧಿಕೃತ ಪಿಡಿಎಫ್ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಹೆಚ್ಚುವರಿ ಕ್ರೀಡಾ ಸಾಧನೆಗಳೊಂದಿಗೆ 10 ನೇ / 12 ನೇ / ಪದವಿ ಸೇರಿದಂತೆ ಕೆಲವು ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಅಕ್ಟೋಬರ್ 28, 2023

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 27-11-2023

ಶೈಕ್ಷಣಿಕ ಅರ್ಹತೆ

ಲೆವೆಲ್-1: ಮಾನ್ಯತೆ ಪಡೆದ ಶಾಲೆ ಅಥವಾ ಯಾವುದೇ ಸಂಸ್ಥೆಯಿಂದ 10 ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ಐಟಿಐ.

ಹಂತ-2/3: 12ನೇ ತರಗತಿ ಪಾಸ್ (+2 ಹಂತ)

ಲೆವೆಲ್-4/5: ಅಭ್ಯರ್ಥಿಗಳು ಪದವಿ ಪಡೆದಿರಬೇಕು.

ವಯಸ್ಸಿನ ಮಿತಿ
ಆರ್‌ಆರ್ಸಿ ದಕ್ಷಿಣ ರೈಲ್ವೆ ನೇಮಕಾತಿ 2023 ಗಾಗಿ, ಅಭ್ಯರ್ಥಿಯ ವಯಸ್ಸು 18-25 ವರ್ಷಗಳು.

ಸಂಬಳ
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 18,000 ರಿಂದ 29,000 ರೂ.ವರೆಗೆ ವೇತನ ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ? ಆರ್‌ಆರ್ಸಿ ದಕ್ಷಿಣ ರೈಲ್ವೆ ನೇಮಕಾತಿ 2023 ಗೆ ಅರ್ಜಿ ಸಲ್ಲಿಸಲು, ಈ ಹಂತಗಳನ್ನು ಅನುಸರಿಸಿ: ದಕ್ಷಿಣ ರೈಲ್ವೆಯ ರೈಲ್ವೆ ನೇಮಕಾತಿ ಕೋಶದ https://www.rrcmas.in/ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.

ಮುಖಪುಟದಲ್ಲಿ “ಆರ್‌ಆರ್ಸಿ ದಕ್ಷಿಣ ರೈಲ್ವೆ ನೇಮಕಾತಿ 2023” ಲಿಂಕ್ ಅನ್ನು ಕ್ಲಿಕ್ ಮಾಡಿ. ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಿ. ಇದರ ನಂತರ, “ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ” ಲಿಂಕ್ ಅನ್ನು ಕ್ಲಿಕ್ ಮಾಡಿ. ನೀವು ಈಗಾಗಲೇ ಖಾತೆಯನ್ನು ಹೊಂದಿದ್ದರೆ ಖಾತೆಯನ್ನು ರಚಿಸಿ ಅಥವಾ ಲಾಗ್ ಇನ್ ಮಾಡಿ. ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ. ಅರ್ಜಿ ಶುಲ್ಕವನ್ನು ಆನ್ ಲೈನ್ ನಲ್ಲಿ ಪಾವತಿಸಿ. ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಮತ್ತು ಅದನ್ನು ಸಲ್ಲಿಸಿ.

Categories
ಉದ್ಯೋಗ ಸುದ್ದಿ

ಸಶಸ್ತ್ರ ಸೇನಾ ಬಲ (SSB) ವಿವಿಧ ಹುದ್ದೆಗಳಿಗೆ ಅರ್ಜಿ

ಸಶಸ್ತ್ರ ಸೇನಾ ಬಲ (SSB) ವಿವಿಧ ಹುದ್ದೆಗಳಿಗೆ ಅರ್ಜಿ

NAMMUR EXPRESS JOB NEWS : 
ಸಶಸ್ತ್ರ ಸೇನಾ ಬಲ (SSB) ಕರ್ನಾಟಕ ಅಧಿಕೃತ ಅಧಿಸೂಚನೆಯ ಅಕ್ಟೋಬರ್ 2023 ರ ಮೂಲಕ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಇದು ಸಹಾಯಕ ಆಗಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 20 ನವೆಂಬರ್ 2023 ರ ವೊಳಗೆ ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು : 272

ಉದ್ಯೋಗ ಸ್ಥಳ: ಭಾರತದಾದ್ಯಂತ

ಹುದ್ದೆಗಳ ವಿವರ..

ಕಾನ್ಸ್ಟೇಬಲ್ (ಜನರಲ್ ಡ್ಯೂಟಿ)

ವಯೋಮಿತಿ..

ಸಶಸ್ತ್ರ ಸೇನಾ ಬಲ (SSB) ನಿಯಮಾನುಸಾರ ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 23 ವರ್ಷಗಳು

ಅರ್ಜಿ ಶುಲ್ಕ …

ಎಸ್ಸಿ ಎಸ್ಟಿ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ

ಓಬಿಸಿ ಅಭ್ಯರ್ಥಿಗಳಿಗೆ : Rs.100/-
ಆನ್ಲೈನ್ ಗಳ ಮೂಲಕ ಹಣವನ್ನು ಪಾವತಿಸಬೇಕು.

ವಿದ್ಯಾರ್ಹತೆ.
ಸಶಸ್ತ್ರ ಸೇನಾ ಬಲ (SSB) ನಿಯಮಾನುಸಾರ 10th ಪಾಸಾಗಿರಬೇಕು.

ವೇತನ: 21700 ರಿಂದ 69100 ಪ್ರತಿ ತಿಂಗಳು..

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 21-10-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ..20-11-23

ಅರ್ಜಿ ಸಲ್ಲಿಸಲು..

https://applyssb.com/SSBSports_2023/applicationAfterIndex

Categories
ಉದ್ಯೋಗ ಸುದ್ದಿ ಶಿವಮೊಗ್ಗ

ಶಿವಮೊಗ್ಗದಲ್ಲಿ ವಿಮಾನಯಾನ ಕಂಪನಿಯಲ್ಲಿ ಉದ್ಯೋಗ

ಶಿವಮೊಗ್ಗದಲ್ಲಿ ವಿಮಾನಯಾನ ಕಂಪನಿಯಲ್ಲಿ ಉದ್ಯೋಗ
– ನ.6ರಂದು ಶಿವಮೊಗ್ಗದಲ್ಲಿ ಸಂದರ್ಶನ
– ಯಾವ ಯಾವ ಹುದ್ದೆ… ಇಲ್ಲಿದೆ ನೋಡಿ ಡೀಟೇಲ್ಸ್

NAMMUR EXPRESS JOBS :
We are hiring in Shivamogga
For commercial and security positions
Commercial positions :
Duty supervisor /officer
Sr. Customer service executive customer service executive
Tr. Customer service executive

Security position

Assistant manager security
Security supervisor
Sr. Security agent
Security agent
Tr. Security agent

Walk in interview:
Date : 6th November 2023
Adress: Royal orchid central shimogga
Opp. Vinayaka theatre. B. H road shimogga

Time : 11AM – 6PM

Walk in with Updated resume, govt id and experience letter, valid documents