Categories
ಉದ್ಯೋಗ ಸುದ್ದಿ ಬೆಂಗಳೂರು ರಾಜ್ಯ

ಬ್ಯಾಂಕಲ್ಲಿ ಉದ್ಯೋಗ: ಯಾರು ಅರ್ಜಿ ಹಾಕಬಹುದು?

ಬ್ಯಾಂಕಲ್ಲಿ ಉದ್ಯೋಗ: ಯಾರು ಅರ್ಜಿ ಹಾಕಬಹುದು?
– 606 ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಫೆ.23ರಂದು ಕೊನೆ ದಿನ
– ಯೂನಿಯನ್‌ ಬ್ಯಾಂಕ್‌ ಹುದ್ದೆಗಳ ಭರ್ತಿಗೆ ಅರ್ಜಿ

NAMMUR EXPRESS NEWS
ಬೆಂಗಳೂರು: ಬ್ಯಾಂಕ್‌ ಉದ್ಯೋಗ ಹೊಂದಬೇಕು ಎನ್ನುವುದು ಬಹುತೇಕರ ಗುರಿ. ಅದಕ್ಕಾಗಿ ಕಾಲೇಜು ದಿನಗಳಿಂದಲೇ ತಯಾರಿ ನಡೆಸುತ್ತಿರುತ್ತಾರೆ. ಇದೀಗ ಅಂತಹವರಿಗೊಂದು ಭರ್ಜರಿ ಗುಡ್‌ನ್ಯೂಸ್‌ ಹೊರ ಬಿದ್ದಿದೆ. ದೇಶದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಯೂನಿಯನ್‌ ಬ್ಯಾಂಕ್‌ ಬರೋಬ್ಬರಿ 606 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಚೀಫ್‌ ಮ್ಯಾನೇಜರ್‌, ಸೀನಿಯರ್‌ ಮ್ಯಾನೇಜರ್‌ ಸೇರಿ ಸ್ಪೆಷಲಿಸ್ಟ್‌ ಆಫೀಸರ್ ಹುದ್ದೆ ಇದಾಗಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಫೆಬ್ರವರಿ 23.

ಹುದ್ದೆಗಳ ವಿವರ ವಿದ್ಯಾರ್ಹತೆ

ಚೀಫ್‌ ಮ್ಯಾನೇಜರ್‌- 5, ಸೀನಿಯರ್‌ ಮ್ಯಾನೇಜರ್‌- 42, ಮ್ಯಾನೇಜರ್‌- 451 ಮತ್ತು ಅಸಿಸ್ಟಂಟ್‌ ಮ್ಯಾನೇಜರ್‌- 108 ಹುದ್ದೆಗಳಿವೆ. ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಬಿ.ಎಸ್‌ಸಿ / ಬಿ.ಇ. / ಬಿ.ಟೆಕ್‌ / ಎಂ.ಟೆಕ್‌ / ಎಂ.ಎಸ್‌ಸಿ / ಯಾವುದೇ ಪದವಿ / ಸಿಎ / ಎಂಬಿಎ / ಪಿಜಿಡಿಸಿಎ / ಪಿಜಿಡಿಬಿಎಂ / ಪಿಜಿಪಿಎಂ / ಪಿಜಿಡಿಎಂ ಪಡೆದವರು ಮತ್ತು ಕಾರ್ಯಾನುಭವ ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹರು.

ವಯೋಮಿತಿ ಮತ್ತು ಅರ್ಜಿ ಶುಲ್ಕ

ಅರ್ಜಿ ಸಲ್ಲಿಸಲು ಹುದ್ದೆಗೆ ಅನುಗುಣವಾಗಿ ಕನಿಷ್ಠ ವಯಸ್ಸು 25 ವರ್ಷ ಮತ್ತು ಗರಿಷ್ಠ ವಯಸ್ಸು 45 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ ಎಂದು ಪ್ರಕಟಣೆ ತಿಳಿಸಿದೆ. ಸಾಮಾನ್ಯ / ಒಬಿಸಿ / ಇಡಬ್ಲ್ಯುಎಸ್‌ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 850 ರೂ. ಮತ್ತು ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು 175 ರೂ. ಪಾವತಿಸಬೇಕು. ಇದನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ

ಆನ್‌ಲೈನ್‌ ಪರೀಕ್ಷೆ, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅಭ್ಯರ್ಥಿಗಳ ತಪ್ಪು ಉತ್ತರಕ್ಕೆ ನೆಗೆಟಿವ್‌ ಅಂಕಗಳಿವೆ. ಹೀಗಾಗಿ ಎಚ್ಚರಿಕೆಯಿಂದ ಪರೀಕ್ಷೆ ಎದುರಿಸುವಂತೆ ಪ್ರಕಟಣೆ ತಿಳಿಸಿದೆ.

Categories
ಉದ್ಯೋಗ ಸುದ್ದಿ ಬೆಂಗಳೂರು ರಾಜ್ಯ

ಕೆಎಎಸ್‌ ನೇಮಕಕ್ಕೆ ದಿನಗಣನೆ ಶುರು

ಕೆಎಎಸ್‌ ನೇಮಕಕ್ಕೆ ದಿನಗಣನೆ ಶುರು
– 504 ಹುದ್ದೆಗಳಿಗೆ ಬದಲಾಗಿ 384 ಹುದ್ದೆಗಳಿಗೆ ನೇಮಕ

NAMMUR EXPRESS NEWS
ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ (KAS) ಹುದ್ದೆಗಳ ನೇಮಕಕ್ಕಾಗಿ ಕಾದು ಕುಳಿತಿದ್ದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಕರ್ನಾಟಕ ಲೋಕ ಸೇವಾ ಆಯೋಗವು ಇನ್ನು ಬೆರಳೆಣಿಕೆಯಷ್ಟು ದಿನಗಳಲ್ಲಿ ಈ ನೇಮಕಾತಿಯ ಅಧಿಸೂಚನೆ ಹೊರಡಿಸಲಿದೆ. ಆದರೆ ಈ ಹಿಂದೆ ಪ್ರಕಟಿಸಿದಂತೆ 504 ಹುದ್ದೆಗಳಿಗೆ ಬದಲಾಗಿ 384 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದರಲ್ಲಿ ಗ್ರೂಪ್‌ ʻಎʼಯ 159 ಹುದ್ದೆಗಳಾದರೆ ಗ್ರೂಪ್‌ ʻಬಿʼಯ 225 ಹುದ್ದೆಗಳಾಗಿವೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಗ್ರೂಪ್‌ ʻಎʼ ಮತ್ತು ಗ್ರೂಪ್‌ ʻಬಿʼ ಹುದ್ದೆಗಳ ರಿಕ್ತ ಸ್ಥಾನಗಳನ್ನು ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಗಳಂತೆ ವರ್ಗೀಕರಣ ಮಾಡಿ ಫೆಬ್ರವರಿ 2 ಶುಕ್ರವಾರದಂದು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಸಲ್ಲಿಸಿದೆ. ಅಲ್ಲದೆ, ನೇಮಕಾತಿಯನ್ನು ಆರಂಭಿಸಲು ಅಧಿಸೂಚನೆಯನ್ನು ಹೊರಡಿಸುವಂತೆ ಸಹ ಕೋರಿದೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ನೇಮಕಾತಿ ಅಧಿಸೂಚನೆ ಪ್ರಕಟವಾಗಲಿದೆ.

ಗ್ರೂಪ್‌ ʻಎʼ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ 36 ಹುದ್ದೆಗಳು ಮೀಸಲಾಗಿದ್ದರೆ, ಗ್ರೂಪ್‌ ʻಬಿʼ ಹುದ್ದೆಗಳಲ್ಲಿ 41 ಹುದ್ದೆಗಳು ಮೀಸಲಾಗಿವೆ. ಒಟ್ಟು ಏಳು ಇಲಾಖೆಗಳಲ್ಲಿ ಗ್ರೂಪ್‌ ʻಎʼ ಹುದ್ದೆಗಳಿಗೆ ಈಗ ನೇಮಕ ನಡೆಯಲಿದೆ. ಇದರಲ್ಲಿ ಹೆಚ್ಚು ಹುದ್ದೆಗಳು (41 ಹುದ್ದೆಗಳು) ವಾಣಿಜ್ಯ ತೆರಿಗೆ ಇಲಾಖೆಯಲ್ಲಿವೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 40 ಹುದ್ದೆಗಳಿಗೂ ನೇಮಕ ನಡೆಯಲಿದೆ. 9 ಡಿವೈಎಸ್‌ಪಿ ಹುದ್ದೆಗಳಿಗೂ ನೇಮಕ ಮಾಡಿಕೊಳ್ಳಲಾಗುತ್ತದೆ. ಒಟ್ಟು 15 ಇಲಾಖೆಗಳಲ್ಲಿನ ಗ್ರೂಪ್‌ ʻಬಿʼಯ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಅತಿ ಹೆಚ್ಚು ಎಂದರೆ 59 ಹುದ್ದೆಗಳು ವಾಣಿಜ್ಯ ತೆರಿಗೆ ಇಲಾಖೆಯಲ್ಲಿವೆ. 51 ತಹಶೀಲ್ದಾರ್‌ (ಗ್ರೇಡ್‌-2) ಹುದ್ದೆಗಳಿಗೂ ನೇಮಕ ನಡೆಯಲಿದೆ. ಆರ್ಥಿಕ ಇಲಾಖೆಯ ಸಹಾಯಕ ಖಜಾನಾಧಿಕಾರಿ 46 ಹುದ್ದೆಗಳಿಗೂ ಈಗ ನೇಮಕ ಮಾಡಿಕೊಳ್ಳಲಾಗುತ್ತದೆ.

ಕೆಎಎಸ್‌ ನೇಮಕಾತಿ ಕುರಿತು ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಟ್ಟು 16 ಇಲಾಖೆಗಳಲ್ಲಿನ ಒಟ್ಟು 656 ಗ್ರೂಪ್‌ ʻಎʼ ಮತ್ತು ಗ್ರೂಪ್‌ ʻಬಿʼ ಹುದ್ದೆಗಳ ನೇಮಕಕ್ಕೆ ಪ್ರಸ್ತಾವನೆ ಬಂದಿದೆ. ಆರ್ಥಿಕ ಇಲಾಖೆಯು ಒಟ್ಟು 504 ಹುದ್ದೆಗಳ ನೇಮಕಕ್ಕೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದರು. ಹೀಗಾಗಿ ಈ ಬಾರಿ 504 ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂದೇ ನಿರೀಕ್ಷಿಸಲಾಗುತ್ತಿತ್ತು. 2017-18ನೇ ಸಾಲಿನಲ್ಲಿ 106 ಕೆಎಎಸ್‌ ಹುದ್ದೆಗಳಿಗೆ ನೇಮಕಾತಿ ನಡೆದಿತ್ತು. ಆ ನಂತರ ಹುದ್ದೆಗಳಿಗೆ ನೇಮಕಾತಿಯೇ ನಡೆದಿಲ್ಲ. ಹೀಗಾಗಿ ಕಳೆದ ಐದು ವರ್ಷಗಳಿಂದ ಅಭ್ಯರ್ಥಿಗಳು ಈ ನೇಮಕ ಪ್ರಕ್ರಿಯೆಗಾಗಿ ಕಾದು ಕುಳಿತಿದ್ದರು. ಈಗ ನೇಮಕ ಪ್ರಕ್ರಿಯೆ ಆರಂಭವಾಗುವ ಸೂಚನೆ ಕಂಡು ಬಂದಿದ್ದರೂ, ಹುದ್ದೆಗಳ ಸಂಖ್ಯೆ ಕಡಿಮೆಯಾಗಿರುವುದು ಅಭ್ಯರ್ಥಿಗಳಿಗೆ ಬೇಸರವನ್ನುಂಟು ಮಾಡಿದೆ.

Categories
ಉದ್ಯೋಗ ಸುದ್ದಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ

ಶಿವಮೊಗ್ಗ ಜಿಲ್ಲೆ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ
-14 ಗ್ರಾಮ ಪಂಚಾಯಿತಿಯಲ್ಲಿ ಭರ್ತಿಗೆ ಅವಕಾಶ
– ಅರ್ಜಿ ಸಲ್ಲಿಸಲು ಫೆ.23 ಕೊನೆಯ ದಿನ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ 251 ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳಲ್ಲಿ ಪ್ರಸ್ತುತ ಖಾಲಿ ಇರುವ 14 ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ, ಹೋತನಕಟ್ಟೆ, ತಾಳಗುಂದ, ಮಾರವಳ್ಳಿ, ಅಗ್ರಹಾರ ಮುಚುಡಿ, ಸೊರಬ ತಾಲ್ಲೂಕಿನ ಅಂಡಿಗೆ, ಮುಟುಗುಪ್ಪೆ, ಭದ್ರಾವತಿ ತಾಲ್ಲೂಕಿನ ಹನುಮಂತಾಪುರ, ಸನ್ಯಾಸಿ ಕೋಡಮಗ್ಗೆ, ಹೊಸನಗರ ತಾಲ್ಲೂಕಿನ ರಾಮಚಂದ್ರಾಪುರ, ರಿಪ್ಪನ್‍ಪೇಟೆ, ಶಿವಮೊಗ್ಗ ತಾಲ್ಲೂಕಿನ ತುಪ್ಪೂರು, ತೀರ್ಥಹಳ್ಳಿ ತಾಲ್ಲೂಕಿನ ತೂದೂರು, ಸಾಗರ ತಾಲ್ಲೂಕಿನ ಭೀಮನಕೋಣೆ ಇಲ್ಲಿ ಮೀಸಲಾತಿಯನ್ವಯ ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಫೆ.23 ಕೊನೆಯ ದಿನ. ಅರ್ಜಿಯನ್ನು ಸಂಬಂಧಿಸಿದ 14 ಗ್ರಾಮ ಪಂಚಾಯಿತಿ ಮತ್ತು ವೆಬ್‍ಸೈಟ್ https://shimoga.nic.in ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ದೃಢೀಕರಿಸಿದ ಅಗತ್ಯ ದಾಖಲೆ ಸಹಿತ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ಸಲ್ಲಿಸಬೇಕು ಎಂದು ಗ್ರಾಮ ಪಂಚಾಯಿತಿ ಮೇಲ್ವಿಚಾರಕರ ನೇಮಕಾತಿ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯನ್ನು ಸಂಪರ್ಕಿಸಬಹುದು.

Categories
ಉದ್ಯೋಗ ಸುದ್ದಿ ಬೆಂಗಳೂರು ರಾಜ್ಯ

ರೈಲ್ವೆ ಇಲಾಖೆಯಲ್ಲಿ ಉದ್ಯೋಗ.. ಯಾರಿಗೆ ಅವಕಾಶ?

ರೈಲ್ವೆ ಇಲಾಖೆಯಲ್ಲಿ ಉದ್ಯೋಗ.. ಯಾರಿಗೆ ಅವಕಾಶ?
– ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
– 5696 ಸಹಾಯಕ ಲೋಕೋ ಪೈಲಟ್ ಹುದ್ದೆ ಭರ್ತಿ

NAMMUR EXPRESS NEWS
ಬೆಂಗಳೂರು: ಸಹಾಯಕ ಲೋಕೋ ಪೈಲಟ್’ಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಮಂಡಳಿ (ಆರ್‌ ಆರ್ ಬಿ ) ಕೇಂದ್ರೀಕೃತ ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಫೆಬ್ರವರಿ 19 ರವರೆಗೆ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 7 ನೇ ಸಿಪಿಸಿಯ ಭಾರತೀಯ ರೈಲ್ವೆ ಪೇ ಲೆವೆಲ್ -2 ರ ವಿವಿಧ ವಲಯಗಳಲ್ಲಿ ಒಟ್ಟು 5696 ಸಹಾಯಕ ಲೋಕೋ ಪೈಲಟ್ ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ. ಅರ್ಜಿ ತಿದ್ದುಪಡಿ / ಸಂಪಾದನೆ ವಿಂಡೋ ಫೆಬ್ರವರಿ 20 ರಿಂದ 29, 2024 ರವರೆಗೆ ತೆರೆದಿರುತ್ತದೆ.

ವಿದ್ಯಾರ್ಹತೆ :

ಫಿಟ್ಟರ್, ಎಲೆಕ್ಟ್ರಿಷಿಯನ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್, ಮಿಲ್ ರೈಟ್/ ಮೆಂಟೇನೆನ್ಸ್ ಮೆಕ್ಯಾನಿಕ್, ಮೆಕ್ಯಾನಿಕ್ (ರೇಡಿಯೋ ಮತ್ತು ಟಿವಿ), ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (ಮೋಟಾರು ವಾಹನ), ವೈರ್ ಮ್ಯಾನ್, ಟ್ರ್ಯಾಕ್ಟರ್ ಮೆಕ್ಯಾನಿಕ್, ಆರ್ಮೇಚರ್ ಮತ್ತು ಕಾಯಿಲ್ ವಿಂಡರ್, ಮೆಕ್ಯಾನಿಕ್ (ಡೀಸೆಲ್), ಹೀಟ್ ಎಂಜಿನಿಯರ್, ಟರ್ನರ್, ಮೆಷಿನಿಸ್ಟ್, ಶೈತ್ಯೀಕರಣ ಮತ್ತು ಹವಾನಿಯಂತ್ರಣ ಮೆಕ್ಯಾನಿಕ್ ಹುದ್ದೆಗಳಿಗೆ ಎನ್ಸಿವಿಟಿ/ ಎಸ್ಸಿವಿಟಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಮೆಟ್ರಿಕ್ಯುಲೇಷನ್/ ಎಸ್‌ಎಸ್‌ಎಲ್ಸಿ ಮತ್ತು ಐಟಿಐ. ಅಥವಾ ಮೇಲೆ ತಿಳಿಸಿದ ಟ್ರೇಡ್ಗಳಲ್ಲಿ ಮೆಟ್ರಿಕ್ಯುಲೇಷನ್ / ಎಸ್‌ಎಸ್‌ಎಲ್ಸಿ ಪ್ಲಸ್ ಕೋರ್ಸ್ ಪೂರ್ಣಗೊಳಿಸಿದ ಆಕ್ಟ್ ಅಪ್ರೆಂಟಿಸ್ಶಿಪ್; ಅಥವಾ ಮೆಟ್ರಿಕ್ಯುಲೇಷನ್/ ಎಸ್‌ಎಸ್‌ಎಲ್ಸಿ ಜೊತೆಗೆ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಆಟೋಮೊಬೈಲ್ ವಿಭಾಗಗಳ ವಿವಿಧ ವಿಭಾಗಗಳ ಸಂಯೋಜನೆಯಾಗಿದೆ.

ಮಾನದಂಡಗಳು :

ವಯೋಮಿತಿ: ಜುಲೈ 1, 2024ಕ್ಕೆ ಅನ್ವಯವಾಗುವಂತೆ 18 ರಿಂದ 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಅನ್ವಯವಾಗುವ ಗರಿಷ್ಠ ವಯಸ್ಸಿನ ಮಿತಿ ಸಡಿಲಿಕೆಗಳು ಆಗಿದೆ.

ಅರ್ಜಿ ಸಲ್ಲಿಕೆ :

ಅಧಿಕೃತ ನೇಮಕಾತಿಗಾಗಿ ಈ ಕೆಳಗಿನ ಪೋರ್ಟಲ್ ಭೇಟಿ ನೀಡಿ.

www.recruitmentrrb.in

Categories
ಉದ್ಯೋಗ ಸುದ್ದಿ ಬೆಂಗಳೂರು ಮಾಹಿತಿ ರಾಜ್ಯ

ಕೆ. ಎಸ್. ಆರ್. ಟಿ ಸಿ ಚಾಲಕ ಹುದ್ದೆ… ನೀವೂ ಅರ್ಜಿ ಹಾಕಿ

ಉದ್ಯೋಗಾವಕಾಶ
– ಕೆ. ಎಸ್. ಆರ್. ಟಿ ಸಿ ಚಾಲಕ ಹುದ್ದೆ… ನೀವೂ ಅರ್ಜಿ ಹಾಕಿ

NAMMUR EXPRESS NEWS
ಬೆಂಗಳೂರು: ವಿಸ್ಡಂ ಗ್ರೂಪ್ಸ್, ಬೆಂಗಳೂರು. ಇವರು ಬಸ್ ಚಾಲಕ ಹುದ್ದೆಗೆ ವಿವಿಧ ಸ್ಥಳಗಳಿಂದ ಅರ್ಜಿಗಳನ್ನು ಅಹ್ವಾನಿಸಿದ್ದಾರೆ. ಮಾಹಿತಿಗಳು ಇಲ್ಲಿವೆ.
ಕೆ ಎಸ್ ಆರ್ ಟಿ ಸಿ ಸಂಸ್ಥೆಗೆ ಹೊರಗುತ್ತಿಗೆ ಆಧಾರದ ಮೇಲೆ ಈ ಕೆಳಕಂಡ ವಿಭಾಗಗಳಿಗೆ ಬಸ್ ಚಾಲಕರನ್ನು ನೇಮಕ ಮಾಡಲಾಗುತ್ತಿದೆ.

ಬೆಂಗಳೂರು ನಗರ: 9591058169
ರಾಮನಗರ : 7022004472
ಚಿಕ್ಕಬಳ್ಳಾಪುರ : 9945230205
ಮಂಗಳೂರು: 8296434555
ತುಮಕೂರು: 9591058169
ಶಿವಮೊಗ್ಗ : 9074202245
ಆಸಕ್ತಿಯಿರುವ/ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

ಕನಿಷ್ಠ ಅರ್ಹತೆ :
– ಕನಿಷ್ಠ 7ನೇ ತರಗತಿ ಪಾಸ್ ಆಗಿರಬೇಕು.
– ಹೆವಿ ಬ್ಯಾಡ್ಜ್ ಮಾಡಿಸಿ ಕನಿಷ್ಠ ಎರಡು ವರ್ಷಗಳಾಗಿರಬೇಕು.
– ವಯಸ್ಸಿನ ಮಿತಿ 50 ವರ್ಷ ಮೀರಿರಬಾರದು.

ಅಗತ್ಯ ದಾಖಲಾತಿಗಳು :
ಆಧಾರ್ ಪ್ರತಿ, ಡ್ರೈವಿಂಗ್ ಲೈಸೆನ್ಸ್ ವಿಥ್ ಬ್ಯಾಡ್ಜ್ ಪ್ರತಿ, ಮಾರ್ಕ್ಸ್ ಕಾರ್ಡ್ ಪ್ರತಿ

ಖುದ್ದಾಗಿ / ಅಂಚೆ ಮುಖಾಂತರ ಅರ್ಜಿ ಸಲ್ಲಿಸಲು ಸಂಪರ್ಕಿಸಬಹುದಾದ ವಿಳಾಸ :
ವಿಸ್ಡಂ ಗ್ರೂಪ್ಸ್ #106,40 ಅಡಿ ರಸ್ತೆ, ಮಂಜುನಾಥ ನಗರ, ಸಿಟಿ ಆಸ್ಪತ್ರೆ ಎದುರು, ವೆಸ್ಟ್ ಆಫ್ ಕಾರ್ಡ್ ರೋಡ್, ಬೆಂಗಳೂರು – 560010
E-mail – wisdomgruops.kar@gmail.com
Website : www.jobs.wisdomsecurity.in
ಮುಖಾಂತರ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

Mob : 7204907555
( ಕರೆ ಮಾಡಬೇಕಾದ ಸಮಯ: ಬೆಳಗ್ಗೆ 10 ರಿಂದ ಸಂಜೆ 5:30 ವರೆಗೆ ಮಾತ್ರ )
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 15-01-2024

Categories
ಉದ್ಯೋಗ ಸುದ್ದಿ ಬೆಂಗಳೂರು

ರಿಸರ್ವ್ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ

ರಿಸರ್ವ್ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ
– ವೈದ್ಯಕೀಯ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ
– ಅರೆಕಾಲಿಕ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕಾತಿ

NAMMUR EXPRESS NEWS
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರೆಕಾಲಿಕ ಹಾಗೂ ಗುತ್ತಿಗೆ ಆಧಾರದ ಮೇಲೆ ಬ್ಯಾಂಕ್ ನ ವೈದ್ಯಕೀಯ ಸಲಹೆಗಾರರ ಸ್ಥಾನಕ್ಕೆ ನೇಮಕಾತಿ ಹುದ್ದೆಗಳ ವಿವರ:

ಆರ್ ಬಿ ಐ ಮುಖ್ಯ ಕಚೇರಿ, ಔಷಧಾಲಯ, ನೃಪತುಂಗ ರಸ್ತೆ, ಬೆಂಗಳೂರು : 2
ಆರ್ ಬಿ ಐ ಅಧಿಕಾರಿಗಳ ಕ್ವಾರ್ಟಸ್, ಕನ್ನಿಂಗ್ ಹ್ಯಾಮ್ ಕ್ರೆಸೆಂಟ್, ಬೆಂಗಳೂರು: 1
ಆರ್ ಬಿ ಐ ಅಧಿಕಾರಿಗಳ ಕ್ವಾರ್ಟಸ್, ಕನ್ನಿಂಗ್ ಹ್ಯಾಮ್ ರಸ್ತೆ, ಬೆಂಗಳೂರು : 1
ಆರ್ ಬಿ ಐ ಸಿಬ್ಬಂದಿ ಕ್ವಾರ್ಟಸ್, ನಂದಿನಿ ಬಡಾವಣೆ, ಬೆಂಗಳೂರು: 1
ಆರ್ ಬಿ ಐ ಸಿಬ್ಬಂದಿ ಕ್ವಾರ್ಟಸ್, ಒಸ್ಟೋರ್ನ್ ರಸ್ತೆ, ಬೆಂಗಳೂರು : 1
ಆರ್ ಬಿ ಐ ಅಧಿಕಾರಿಗಳ ಕ್ವಾರ್ಟಸ್, ಕೋರಮಂಗಲ, ಬೆಂಗಳೂರು: 1

ವಿದ್ಯಾರ್ಹತೆ:
ಎಂಬಿಬಿಎಸ್, ಎಂಡಿ, ಬಿಡಿಎಸ್, ಇತರೆ ವೈದ್ಯಕೀಯ ಕ್ಷೇತ್ರದ ಅರ್ಹತೆಗಳು ಹಾಗೂ ಅನುಭವಗಳನ್ನು ಹೊಂದಿರಬೇಕು.

ಬೇಕಾಗುವ ದಾಖಲೆಗಳು:
* ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
* ಜನ್ಮ ದಿನಾಂಕ ದಾಖಲೆ
* ಹುದ್ದೆಗೆ ನಿಗದಿತ ಅರ್ಹತೆ ದಾಖಲೆ
* ಆಧಾರ್ ಕಾರ್ಡ್

ಆಯ್ಕೆ ವಿಧಾನ:
ಶೈಕ್ಷಣಿಕ ಅರ್ಹತೆ, ಸಂದರ್ಶನ, ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ :
25-01-2024
ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ:
opportunities.rbi.org.in

Categories
ಉದ್ಯೋಗ ಸುದ್ದಿ ತೀರ್ಥಹಳ್ಳಿ ಶಿವಮೊಗ್ಗ

ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಕೆಲಸ

ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಕೆಲಸ
– ಭದ್ರಾವತಿ, ಶಿವಮೊಗ್ಗ, ಕೋಣಂದೂರು, ಆಯನೂರು, ತೀರ್ಥಹಳ್ಳಿಯಲ್ಲಿ ಉದ್ಯೋಗ
– ಯಾರು ಯಾರು ಅರ್ಜಿ ಹಾಕಬಹುದು?

NAMMUR EXPRESS JOB NEWS
CreditAccess Grameen
ಭದ್ರಾವತಿ, ಶಿವಮೊಗ್ಗ, ಕೋಣಂದೂರು, ಆಯನೂರು, ತೀರ್ಥಹಳ್ಳಿ
ಬೇಕಾಗಿರುವ ಹುದ್ದೆ: ಟೈನಿ ಕೇಂದ್ರ ಮ್ಯಾನೇಜ‌ರ್
ಸಂದರ್ಶನವು ಪ್ರತಿದಿನ ಬೆಳಿಗ್ಗೆ 10:30 ಕ್ಕೆ

ಅರ್ಹತೆಗಳು:

ಪುರುಷ: ವಯಸ್ಸು 29 ವರ್ಷ.
ಮಹಿಳೆ: ವಯಸ್ಸು 35 ವರ್ಷ
ಶಿಕ್ಷಣ : 10+2 & ಡಿಗ್ರಿ ಉತ್ತೀರ್ಣ, ಅನುತ್ತೀರ್ಣ, ಐಟಿಐ

ಬೈಕ್ ಮತ್ತು ಚಾಲನೆ ಪರವಾನಗಿ ಕಡ್ಡಾಯ

ಅಭ್ಯರ್ಥಿಯು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಸಿದ್ಧರಾಗಿರಬೇಕು.
ಯಾವುದೇ ಹಣಕಾಸು ಸಂಸ್ಥೆಗಳಲ್ಲಿ ಅನುಭವ ಇರಬಾರದು

ಹೆಚ್ಚುವರಿ ಪ್ರಯೋಜನ
* PF ಮತ್ತು ESI ಯೊಂದಿಗೆ ಆಕರ್ಷಕ ಸಂಬಳ, ಮಾಸಿಕ ಪ್ರೋತ್ಸಾಹ ಧನ.
*ಇಂಧನ ಭತ್ಯೆ, ವಾರ್ಷಿಕ ಬೋನಸ್ ಮತ್ತು ವಾರ್ಷಿಕ ಸಂಬಳ ಹೆಚ್ಚಳ, ವೈದ್ಯಕೀಯ ಮತ್ತು ವಿಮೆ.

*ಪ್ರತಿ ಶನಿವಾರ ಮತ್ತು ಭಾನುವಾರ ರಜೆ

CreditAccess Grameen Limited

Ganeshram Arced, Vinayaka Circle, Above Karnataka Bank, Ayanur-577211

Premesh-9113842942, Ningappa H-9741713310, Jayaswamy- 8660958966

ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಯು ರೆಸೂಮ್, ಪಾಸ್ಪೋರ್ಟ್ ಫೋಟೋ, ಆಧಾರ್ ಕಾರ್ಡ್. ಪ್ಯಾನ್ ಕಾರ್ಡ್, ಚಾಲನೆ ಪರವಾನಗಿ / ಕಲಿಕೆ ಪರವಾನಗಿ ಸಲ್ಲಿಸಬೇಕು .

Categories
ಉದ್ಯೋಗ ಸುದ್ದಿ ಚಿಕ್ಕಮಗಳೂರು

247 ಹೋಮ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ

247 ಹೋಮ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ
– ಚಿಕ್ಕಮಗಳೂರು ಜಿಲ್ಲೆ ಹಾಗೂ ವಿವಿಧ ತಾಲೂಕುಗಳಲ್ಲಿ ನೇಮಕಾತಿ

NAMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಯ ವಿವಿಧ ತಾಲೂಕು ಮತ್ತು ಉಪ ಘಟಕಗಳಲ್ಲಿ ಖಾಲಿ ಇರುವ 247 ಸ್ವಯಂ ಸೇವಕ ಹೋಮ್ ಗಾರ್ಡ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜ. 31. ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿಯ ಜೊತೆ ವಿದ್ಯಾರ್ಹತೆ, ಜನ್ಮ ದಿನಾಂಕ ದೃಢೀಕರಣ, ವೈದ್ಯಕೀಯ ಪ್ರಮಾಣಪತ್ರ ಮತ್ತು ಪಾಸ್ ಪೋರ್ಟ್ ಅಳತೆಯ ಚಿತ್ರವನ್ನು ಗೃಹರಕ್ಷಕ ಘಟಕಾಧಿಕಾರಿಗಳಿಗೆ ಸಲ್ಲಿಸಲು ಸೂಚಿಸಿದೆ.

ಅರ್ಜಿ ಸಲ್ಲಿಸಲು ಕನಿಷ್ಠ 19ರಿಂದ 50 ವರ್ಷ ವಯೋಮಿತಿಯಿದ್ದು 10ನೇ ತರಗತಿ ಉತ್ತೀರ್ಣರಾಗಿರಬೇಕು. ಯಾವುದೇ ಕ್ರಿಮಿನಲ್ ಕೇಸ್ ಮತ್ತು ರಾಜಕೀಯ ಪಕ್ಷಕ್ಕೆ ಒಳಪಟ್ಟಿರುವಂತಿಲ್ಲ. ಅಭ್ಯರ್ಥಿಗಳು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು. ಗೃಹರಕ್ಷಕ ಸದಸ್ಯರಾಗಲು ಬಯಸುವವರು ತಮ್ಮ ವಾಸ ಸ್ಥಳದಿಂದ ಸೇರಬೇಕಿಂದಿರುವ ಘಟಕದ 6 ಕಿಮೀ ವ್ಯಾಪ್ತಿಯಲ್ಲಿ ಇರಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8151914734 (ಕರಿಬಸಪ್ಪ ಎಂ, ಸಹಾಯಕ ಬೋಧಕರು, ಜಿಲ್ಲಾ ಗೃಹರಕ್ಷಕ ಇಲಾಖೆ, ಕೆ.ಎಂ ರಸ್ತೆ) 9164283743 ( ಕಚೇರಿ ಸಂಖ್ಯೆ )

Categories
ಉದ್ಯೋಗ ಸುದ್ದಿ ರಾಜ್ಯ ಶಿಕ್ಷಣ

ದೈಹಿಕ ಶಿಕ್ಷಕ ಹುದ್ದೆಗೆ ಅರ್ಜಿ.. ಯಾರಿಗೆ ಅವಕಾಶ?

ದೈಹಿಕ ಶಿಕ್ಷಕ ಹುದ್ದೆಗೆ ಅರ್ಜಿ.. ಯಾರಿಗೆ ಅವಕಾಶ?
– 2,500 ದೈಹಿಕ ಶಿಕ್ಷಕರ ನೇಮಕ್ಕೆ ಗ್ರೀನ್ ಸಿಗ್ನಲ್‌
– ಶಿಕ್ಷಣ ಸಚಿವರಿಂದ ಹೊಸ ಘೋಷಣೆ

NAMMUR EXPRESS NEWS
ಸತತ 15 ವರ್ಷದಿಂದ ನೇಮಕಾತಿಗೆ ಎದುರು ನೋಡುತ್ತಿದ್ದ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕರಿಗೆ ಸರ್ಕಾರ ಸಂತಸದ ಸುದ್ದಿ ನೀಡಿದೆ. ಪ್ರಾಥಮಿಕ ಶಾಲೆಯ 2,120 ಮತ್ತು ಪ್ರೌಢಶಾಲೆಯ 200 ದೈಹಿಕ ಶಿಕ್ಷಕರ ಹುದ್ದೆ ಖಾಲಿಯಿದ್ದು, ಒಟ್ಟು 2500 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿರುವ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು 41913 ಪ್ರಾಥಮಿಕ ಶಾಲೆಗಳಿದ್ದು, ಅವುಗಳಲ್ಲಿ 6772 ದೈಹಿಕ ಶಿಕ್ಷಕರ ಹುದ್ದೆಗಳು ಮಂಜೂರಾಗಿದೆ. ಆದರೆ, ಕಾರ್ಯನಿರತ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು 4127 ಆಗಿದೆ. ಈ ನಿಟ್ಟಿನಲ್ಲಿ 2120 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಕುರಿತು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿದ್ದು, ಸದ್ಯ, ಇಲಾಖೆ ಸಮಾಲೋಚನೆ ನಡೆಸುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

15,000 ಹುದ್ದೆಗಳಲ್ಲಿ ಪ್ರೌಢಶಾಲಾ ಶಿಕ್ಷಕರುಗಳ ನೇಮಕಾತಿಗೆ 1648 ಹುದ್ದೆಗಳು ಮಾತ್ರ ಉಳಿದಿದ್ದು, ಪ್ರಸ್ತುತ ಸಾಲಿನಲ್ಲಿ 200 ದೈಹಿಕ ಶಿಕ್ಷಕರ ಹುದ್ದೆಯು ಸೇರಿದ್ದು ಒಟ್ಟು 2500 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವ ಪ್ರಸ್ತಾವನೆಯ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿರುವ ಬಗ್ಗೆ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಅದೇ ರೀತಿ, ಪ್ರೌಢಶಾಲಾ ವಿಭಾಗಕ್ಕೆ ಸಂಬಂಧಿಸಿದ ಹಾಗೆ ರಾಜ್ಯದಲ್ಲಿ 4844 ಸರ್ಕಾರಿ ಪ್ರೌಢ ಶಾಲೆಯಿದ್ದು, ಇದರಲ್ಲಿ 5210 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ.

ರಾಜ್ಯದಲ್ಲಿ 4844 ಸರ್ಕಾರಿ ಪ್ರೌಢ ಶಾಲೆಯಿದ್ದು, ಇದರಲ್ಲಿ 5210 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ರಾಜ್ಯ ಸರ್ಕಾರಿ ಪ್ರೌಢಶಾಲೆಗಳಲ್ಲಿರುವ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್ 1 ಶಿಕ್ಷಕರ ಕಾರ್ಯನಿರತ ಹುದ್ದೆಗಳ ಸಂಖ್ಯೆ 3589 ಆಗಿದ್ದು, ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿಯಿರುವ ವಿವಿಧ ವೃಂದದ ದೈಹಿಕ ಶಿಕ್ಷಣ ಶಿಕ್ಷಕರ 200 ಹುದ್ದೆಗಳು ಒಳಗೊಂಡಂತೆ ಒಟ್ಟು 2500 ಶಿಕ್ಷಕರುಗಳ ಹುದ್ದೆ ಖಾಲಿಯಿದೆ. ಇದರ ಜೊತೆಗೆ 15,000 ಪದವೀಧರ ಪ್ರಾಥಮಿಕ ಶಾಲಾ ನೇಮಕಾತಿಯಲ್ಲಿ ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ಷರತ್ತಿನ ಅನುಸಾರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ.

Categories
ಉದ್ಯೋಗ ಸುದ್ದಿ ತೀರ್ಥಹಳ್ಳಿ ಮಾಹಿತಿ

ತೀರ್ಥಹಳ್ಳಿಯಲ್ಲಿ ಕಚೇರಿ ಸಹಾಯಕರು ಹುದ್ದೆ

ತೀರ್ಥಹಳ್ಳಿಯಲ್ಲಿ ಕಚೇರಿ ಸಹಾಯಕರು ಹುದ್ದೆ
– ಮಹಿಳೆ ಅಥವಾ ಪುರುಷ ಅಭ್ಯರ್ಥಿಗಳಿಗೆ ಅವಕಾಶ
– ಪಿಗ್ಮಿ ಸಂಗ್ರಾಹಕರು ಕೂಡ ಬೇಕಾಗಿದ್ದಾರೆ.

NAMMUR EXPRESS JOB NEWS
ತೀರ್ಥಹಳ್ಳಿಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕಲ್ಪವೃಕ್ಷ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡಲು ಅರ್ಹ ಕಚೇರಿ ಸಹಾಯಕರು ಬೇಕಾಗಿದ್ದಾರೆ.

ಹುದ್ದೆಗಳು

1. ಕಚೇರಿ ಸಹಾಯಕರು: ಹುದ್ದೆ-1( ಮಹಿಳೆ/ಪುರುಷ)
ವಿದ್ಯಾರ್ಹತೆ : ಬಿಕಾಂ, ಕಂಪ್ಯೂಟರ್, ಅಕೌಂಟ್ಸ್ ಜ್ಞಾನ ಇರಬೇಕು. ಸಂವಹನ ಕೌಶಲ್ಯ ಇರಬೇಕು.
– ಹೊಸಬರಿಗೂ ಅವಕಾಶ ಇದೆ.

2. ತೀರ್ಥಹಳ್ಳಿ ಪಟ್ಟಣದಲ್ಲಿ ಕೆಲಸ ಮಾಡಲು ಪಿಗ್ಮಿ ಸಹಾಯಕರು( ಪುರುಷ ಅಥವಾ ಮಹಿಳೆ)

– ಪಿಗ್ಮಿ ಕೆಲಸ ಮಾಡಲು ಆಸಕ್ತಿ ಇರಬೇಕು. ತೀರ್ಥಹಳ್ಳಿ ಪಟ್ಟಣದವರು ಆಗಿರಬೇಕು.

ತಮ್ಮ ರೆಸ್ಯೂಮ್ ಹಾಗೂ ಮಾಹಿತಿಯನ್ನು ಕೆಳಕಂಡ ನಂಬರಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ತೀರ್ಥಹಳ್ಳಿ ಮಾರಿಕಾಂಬಾ ದೇವಾಲಯದ ಹಿಂಭಾಗ ಇರುವ ಕಚೇರಿಗೆ ಹೋಗಿ ಮಾಹಿತಿ ಪಡೆಯಬಹುದು.

ಸಂಪರ್ಕಿಸಿ: ಕರೆ: 6360349622( resume whatsapp )