Categories
ಕರಾವಳಿ ಕಾರ್ಕಳ

ಕಾರ್ಕಳ ಕಾಲೇಜಿನ ಉಪನ್ಯಾಸಕರು ನೀರುಪಾಲು!

  • ತೀರ್ಥಹಳ್ಳಿ ತುಂಗಾ ನದಿಯಲ್ಲಿ ನಾಪತ್ತೆ: ಶೋಧ ಕಾರ್ಯ, ಓರ್ವನ ಶವ ಪತ್ತೆ
  • ಕಾರ್ಕಳ ನಿಟ್ಟೆ ಕಾಲೇಜಿನ ಉಪನ್ಯಾಸಕರು

NAMMUR EXPRESS NEWS
ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಉಪನ್ಯಾಸಕರು ನಾಪತ್ತೆಯಾಗಿದ್ದಾರೆ. ಈ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.
ತೀರ್ಥಹಳ್ಳಿ ತಾಲೂಕು ತೀರ್ಥ ಮತ್ತೂರು ಗ್ರಾಮದ ಬಳಿ ತುಂಗಾ ನದಿಯಲ್ಲಿ ಘಟನೆ ಸಂಭವಿಸಿದೆ. ಕಾರ್ಕಳದ ನಿಟ್ಟೆ ಕಾಲೇಜಿನ ಉಪನ್ಯಾಸಕರಾದ ಪುನೀತ್‌ (38) ಮತ್ತು ಬಾಲಾಜಿ (36) ತುಂಗಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಇಬ್ಬರು ನಾಪತ್ತೆಯಾಗಿದ್ದು. ರಕ್ಷಣಾ ಕಾರ್ಯಾಚರಣೆ ವೇಳೆ ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ.
ಉಪನ್ಯಾಸಕರು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದರು. ತೀರ್ಥಹಳ್ಳಿಯ ತೀರ್ಥಮತ್ತೂರು ಮಠದ ಸಮೀಪ ಇರುವ ಹೋಂ ಸ್ಟೇಯಲ್ಲಿ ತಂಗಿದ್ದರು. ತೀರ್ಥಹಳ್ಳಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

Categories
ಕಾರ್ಕಳ

ಕಾರ್ಕಳ‌ ಅಂಗನವಾಡಿಯಲ್ಲಿ ಕಳಪೆ ಆಹಾರ ಪದಾರ್ಥ ವಿತರಣೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು- ಶುಭದರಾವ್

ಕಾರ್ಕಳ‌ : ತಾಲೂಕಿನ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ತಾಯಿ ಕಾರ್ಡ್ ಮೂಲಕ ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರಿಗೆ ವಿತರಣೆಯಾಗುವ ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಯಾಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ.

 

ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರ ಆರೋಗ್ಯದ ದೃಷ್ಟಿಯಿಂದ ಸರಕಾರವು ಅಕ್ಕಿ , ಬೇಳೆ, ಸಾಂಬಾರು ಹುಡಿ, ಮತ್ತು ‌ಮೊಟ್ಟೆ ಮೊದಲಾದ ಪೋಷಕಾಂಶ ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದು ಈ ಬಾರಿ ವಿತರಣೆಯಾದ ಸಾಬಾಂರು ಹುಡಿಯ ಗುಣಮಟ್ಟ ತೀರ ಕಳಪೆಯಾಗಿದ್ದು ಉಂಡೆಗಳಾಗಿ ಪರಿವರ್ತನೆಯಾಗಿ ಬಳಕೆಗೆ ಅಯೋಗ್ಯವಾಗಿದೆ. ಇಂತಹ ಪದಾರ್ಥಗಳನ್ನು ಸೇವಿಸುವುದರಿಂದ ಸ್ತ್ರೀಯರ ಅರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರಿ ಅನಾಹುತವಾಗುವ ಸಾದ್ಯತೆ ಇದೆ ಆಹಾರ ಪದಾರ್ಥಗಳ ವಿತರಣೆಯ ಜವಾಬ್ದಾರಿ ಹೊತ್ತ ಸಂಸ್ಥೆಯ ವಿರುದ್ಧ ಕಠಿಣ ಕ್ರಮವಾಗಬೇಕು ಮತ್ತು ಅವರ ಟೆಂಡರನ್ನು ರದ್ದು ಮಾಡಬೇಕು ಎಂದು ಆಗ್ರಹಿಸುತ್ತೇನೆ.

 

ಈ ಹಿಂದೆಯೂ ಕೊಳೆತ ಮೊಟ್ಟೆ ವಿತರಣೆಯಾಗಿದ್ದು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ, ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪೋಟೋ ಸಹಿತ ಟ್ವಿಟರ್ ಮೂಲಕ ಮತ್ತು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಯವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

Categories
ಕಾರ್ಕಳ

ರಾಂ ಅಜೆಕಾರು ಕಾರ್ಕಳ

ಕಾರ್ಕಳ: ಮಳೆಗಾಲ ಆರಂಭವಾಗಿರುವ ಸಮಯದಲ್ಲೇ ಕೋಳಿ‌ಮಾಂಸ  ,ಹಾಗೂ ಮೊಟ್ಟೆಯ ಬೆಲೆ ಗಗನಕ್ಕೆ ಏರಿಕೆಯಾಗಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ.

ಬೆಲೆ ಎಷ್ಟಿದೆ:  ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ  ಬಾಯ್ಲರ್ ಕೋಳಿ ಮಾಂಸ  ರೀಟೈಲ್ ವ್ಯಾಪಾರ ದಲ್ಲಿ ಕೆಜಿ ಯೊಂದಕ್ಕೆ 220-240 ರೂ  , ರಖಂ ಕೆಜಿಯೊಂದಕ್ಕೆ 210-230ರೂ,ಟೈಸನ್‌‌ ಕೋಳಿ  ಕೆಜಿ ಯೊಂದಕ್ಕೆ 230-250ರೂ , ರಖಂ ಕೆಜಿಯೊಂದಕ್ಕೆ 220-240 ರೂ ದರದಲ್ಲಿ  ಮಾರಾಟ ವಾಗುತ್ತಿದೆ . ಇಡೀ ಕೋಳಿ  ಖರೀದಿಸುವವರು ಬಾಯ್ಲರ್ ಕೆಜಿಯೊಂದಕ್ಕೆ  ರೂ.170 , ಟೈಸನ್‌ ರೂ180  ಅದರ ಭಾರಕ್ಕೆ ತಕ್ಕಂತೆ ಬದಲಾಗುತ್ತಿದೆ .ಕೋಳಿ ಮೊಟ್ಟೆಯೊಂದಕ್ಕೆ 6.50- 7 ರೂ ವರೆಗೆ ಮಾರಟ ವಾಗುತ್ತಿದೆ.

ಕಳೆದ ವರ್ಷ 2022 ರಲ್ಲಿ  ಬಾಯ್ಲರ್   ಕೋಳಿ ಮಾಂಸ ಬೆಲೆ 160 -180 ರೂ ನಡುವೆ ಸ್ಥಿರವಾಗಿತ್ತು. ಟೈಸನ್‌ ಕೋಳಿ‌ಮಾಂಸ ರೂ. 190- 200 ರ ನಡುವೆ ಸ್ಥಿರವಾಗಿತ್ತು. 2022 ರಲ್ಲಿ ಮೊಟ್ಟೆ ಗೆ  ರೂ .5- 5.30 ರ ವರೆಗೆ ಸ್ಥಿರವಾಗಿತ್ತು.

 

ಊರಿನ ಕೋಳಿ ದರ ದುಬಾರಿ: ಮೆ ಕೊನೆ ಹಾಗೂ ಜೂನ್ ತಿಂಗಳಲ್ಲಿ ಕರಾವಳಿ ಭಾಗದಲ್ಲಿ ತಂಬಿಲ ಸೇರಿದಂತೆ ದೈವದ ಆರಾಧನೆಗೆ  ಊರಿನ ಕೋಳಿಗೆ ಬಲು ಬೇಡಿಕೆ ಅದ್ದರಿಂದ ಈ  ಊರಿನ ಕೋಳಿಗಳ ಬೆಲೆಯಲ್ಲು ಏರಿಕೆ ಯಾಗಿದೆ.  ಊರಿನ ಕೋಳಿ  ಮಾಂಸ ಕೆಜಿಯೊಂದಕ್ಕೆ 320 -350 ,ರಖಂಗಳಲ್ಲಿ 300-310 ವರೆಗೆ ಮಾರಾಟ ವಾಗುತ್ತಿದೆ. ಇಡಿ ಕೋಳಿ  ಕೆಜಿಯೊಂದಕ್ಕೆ 250- 290 ವರೆಗೆ ಮಾರಾಟ ವಾಗುತ್ತಿದೆ.

 

ಕೋಳಿ ಸಾಕಾಣಿಕಾ ಶೆಡ್ ಗಳಲ್ಲಿ ಕಾಡುತ್ತಿದೆ ನೀರಿನ ಕೊರತೆ: ಈ  ಬಾರಿ  ಕೋಳಿ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವೆ ಅಧಿಕ ಉಷ್ಣತೆ. ಆದ್ದರಿಂದ ಕೋಳಿ ಶೆಡ್ ಗಳಲ್ಲಿ ನೀರಿನ ಕೊರತೆ ಎದುರಾಗಿದೆ .ಎಪ್ರಿಲ್ ಮೇ ಜೂನ್‌ ತಿಂಗಳುಗಳಲ್ಲಿ ಬಾಯ್ಲರ್ ಹಾಗು ಟೈಸನ್ ಕೋಳಿಗಳ ಶೆಡ್ ಗಳ ಉಷ್ಣತೆಯನ್ನು ಸಾಮಾನ್ಯ ಉಷ್ಣತೆ ಯನ್ನು ಕಾಯ್ದುಕೊಳ್ಳಲು ನೀರಿನ‌ಪೂರೈಕೆ ಅಧಿಕವಾಗಿದೆ .

 

ಬೆಳವಣಿಗೆ ಕುಂಠಿತ: ಪ್ರತಿ ಸೋಮವಾರ ಕೋಳಿಫಾರಂ ಕಂಪೆನಿಗಳು ಕೋಳಿ ಮರಿಗಳ ಬೆಲೆ ನಿರ್ಧಾರಿಸುತಿದ್ದು    ಈ ವಾರದಲ್ಲಿ ಬಾಯ್ಲರ್ ಕೋಳಿ ಮರಿಯೊಂದಕ್ಕೆ 32 ರೂ  ನಿಗದಿಪಡಿಸಲಾಗಿದೆ. ಅದರೆ ಮೇ ತಿಂಗಳಲ್ಲಿ ಕೋಳಿ ಮರಿಯೊಂದಕ್ಕೆ   40 -42 ರೂ ಬೆಲೆ ಹೆಚ್ಚಳವಾಗಿತ್ತು. ಅದರಿಂದ ಮೇ ತಿಂಗಳಲ್ಲಿ ಅಧಿಕ ಉಷ್ಣತೆ ಯಿದ್ದ ಕಾರಣ ಕೋಳಿ ಮರಿಗಳು ಉಷ್ಣತೆ ತಡೆಯಲಾರದೆ  ಸಾವನ್ನಪ್ಪುತ್ತವೆ.ಈ  ಉತ್ಪಾದನೆ ಕುಂಠಿತ ವಾಗಿತ್ತು. ಕೆಲವು ಬಾರಿ ಹೆಚ್ಚಿನ  ಉಷ್ಣತೆಯಿಂದ ಕೋಳಿಗಳು ತೂಕ ಕಳೆದುಕೊಳ್ಳುವ ಪ್ರಮೇಯ ವಿದೆ. ಮೇ ಜೂನ್‌ ತಿಂಗಳಲ್ಲಿ ಮದುವೆ ,ಮೆಹೆಂದಿ  ಸೇರಿದಂತೆ ಹೆಚ್ಚಿನ ಸಮಾರಂಭ ಗಳಿದ್ದು  ಕೋಳಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಯಿತ್ತು.

ಪ್ರಶಕ್ತಸಾಲಿನಲ್ಲಿ   ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಗಳ 315  ಕೋಳಿ ಶೆಡ್ ಗಳು ಗಳಿವೆ.

 

ಕೋಳಿ ಅಹಾರ ಬೆಲೆ ಏರಿಕೆ: ಸಾಗಾಟ ವೆಚ್ಚ, ಉತ್ಪಾದನೆ ಕುಂಠಿತ, ಕೋಳಿಗಳಿಗೆ ನೀಡುವ ಆಹಾರದ ಕಚ್ಚಾವಸ್ತುಗಳಾದ ಜೋಳ, ಸೋಯಾ ,ಎಣ್ಣೆಕಾಳು ಬೆಲೆಗಳಲ್ಲಿ ಗಣನೀಯ ವಾದ ಏರಿಕೆ,  ಜೌಷದ ಬೆಲೆಗಳು , ಹಾಗು ಕಾರ್ಮಿಕರ ‌ಭತ್ಯೆ ,ಶೆಡ್ ಗಲ ನಿರ್ವಹಣಾ ವೆಚ್ಚಗಳು ಏರಿಕೆ ಯಾಗಿದ್ದ ಕಾರಣ ಬೆಲೆ ಏರಿಕೆ ಯಾಗುತ್ತಿದೆ.

 

ಸಂಕುಚಿತ ಮಾರುಕಟ್ಟೆ:  42 ದಿನಗಳ ಕಾಲ ಕೋಳಿ ಮರಿಗಳ ಬೆಳವಣಿಗೆ ಇದ್ದ ಕಾರಣ ಒಂದು ವರೆ ತಿಂಗಳ ಕಾಲ ಮಾರುಕಟ್ಟೆ ಬದಲಾವಣೆಗಳು ಅಗುತ್ತಿರುತ್ತವೆ.   ಬೇಡಿಕೆ ಹೆಚ್ಚಾದಂತೆ ಕೋಳಿಗಳನ್ನು  ಉತ್ಪಾದನಾ  ಪ್ರಕ್ರಿಯೆಯಲ್ಲಿ ವೇಗಗತಿಯಲ್ಲಿ ಸಾಗಿಸಲು  ಶೆಡ್ ಗಳಲ್ಲಿ ಸಾಧ್ಯವಾಗುವುದಿಲ್ಲ.  ಕೋಳಿಗಳನ್ನು ಹೆಚ್ಚಿನ ‌ ಮಲೆನಾಡು ಪ್ರದೇಶಗಲಾದ  ಶಿವಮೊಗ್ಗ ಹಾಸನ ಹುಬ್ಬಳ್ಳಿ ಗಳಿಂದ ಕರಾವಳಿ ಪ್ರದೇಶಗಳಲ್ಲಿ ಕೋಳಿ ಸಾಗಾಣಿಕೆ ಮಾಡಲಾಗುತ್ತದೆ.ಪೂರೈಕೆ ಇದ್ದಾಗ ಬೇಡಿಕೆ ಕುಸಿತ ವಾಗಬಹುದು, ಬೇಡಿಕೆ ಹೆಚ್ಚಿದ್ದಾಗ ಪೂರೈಕೆ ಕುಸಿತವಾಗಬಹುದು. ಅದ್ದರಿಂದ ಮಾರುಕಟ್ಟೆ ಸಂಕುಚಿತ ಗೊಳ್ಳಬಹುದು ಎಂದು ಕೋಳಿ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.

 

ಈ ಬಾರಿ ಅಧಿಕ ತಾಪಮಾನ ,ನೀರಿನ ಅಭಾವವೇ  ಕೋಳಿ ಬೆಲೆ ಏರಿಕೆಗೆ ಕಾರಣ , ಕಾರ್ಕಳದ ಹೆಬ್ರಿ ತಾಲೂಕುಗಳಲ್ಲಿ 315 ಫಾರಂಗಳಿದ್ದು ಅದರಲ್ಲಿಕಳೆದ ಮೂರು ತಿಂಗಳ ಲ್ಲಿ ಅರ್ಧದಷ್ಟು ಶೆಡ್ ಗಳಲ್ಲಿ ಕೊಳಿ ಮರಿಗಳನ್ನು ಸಾಕಿಲ್ಲ.ಹಾಗಾಗಿ ಖಾಲಿಬಿದ್ದಿವೆ ‌. ಮಳೆ ಬಂದ ಬಳಿಕ ಕೋಳಿ ಮರಿಗಳ ಸಾಕಾಣೆ ಹೆಚ್ಚಾಗಬಹುದು;

ಶೈಲೇಶ್ ಸಾಣೂರು   ಪೂರೈಕೆದಾರರು 

 

ಕೋಳಿ ಮಾಂಸದ ಬೆಲೆ ದೀಢಿರ್  ಏರಿಕೆ ಯಾಗಿದ್ದು ಹೋಟೆಲ್ ಗಳಲ್ಲಿ ಅಹಾರ ವಸ್ತು ಗಳ ಬೆಲೆ ಎರಿಕೆ ಯಾಗಬಹುದು.

ಜಯಾನಂದ ಕುಲಾಲ್  ಅಜೆಕಾರು ಹೋಟೆಲ್ ಮಾಲೀಕರು ಕಾರ್ಕಳ

 

ಈ ಬಾರಿ ಕೋಳಿ ಮಾಂಸ ಬೆಲೆಗಳು ಹಳ್ಲಿ ಹಾಗೂ ಸಿಟಿಗಳಿಗೆ ಬದಲಾವಣೆಯಾಗಿದೆ.  ಅಂಗಡಿ ಬಾಡಿಗೆ ,ಸಾಗಾಣಿಕೆ ನಿರ್ವಹಣಾ ವೆಚ್ಚ ಅತಿಯಾಗಿದೆ. ಹಾಗಾಗಿ  ಬೆಲೆಗಳು ಏರಿಕೆ ಯಾಗಿದೆ‌.

ನಿತ್ಯಾನಂದ ಸುವರ್ಣ ಕೋಳಿ ವ್ಯಾಪಾರಸ್ಥರು

Categories
ಅಪರಾಧ ಕರಾವಳಿ ಕಾರ್ಕಳ

ಧರ್ಮಸ್ಥಳದ ಸೌಜನ್ಯ ರೇಪ್, ಕೊಲೆ ಪ್ರಕರಣಕ್ಕೆ ಟ್ವಿಸ್ಟ್!

  • 11 ವರ್ಷಗಳ ಬಳಿಕ ತೀರ್ಪು ಪ್ರಕಟ
  • ಆರೋಪಿ ಸಂತೋಷ್ ರಾವ್ ದೋಷಮುಕ್ತ
  • ಸಾಕ್ಷಿ ಇಲ್ಲದ ಕಾರಣ ಸಿಬಿಐ ಕೋರ್ಟ್‌ ಆದೇಶ

 

ಬೆಳ್ತಂಗಡಿ: ರಾಷ್ಟ್ರಮಟ್ಟದಲ್ಲಿ ಬಾರೀ ಸುದ್ದಿಯಾಗಿದ್ದ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಧರ್ಮಸ್ಥಳದ ನಿವಾಸಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯ ಬರೋಬ್ಬರಿ 11 ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದೆ.
ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ರಾವ್ ದೋಷಮುಕ್ತ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಏನಿದು ಘಟನೆ?: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಳಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. ಕರಾವಳಿಯಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಕಾಲೇಜು ಮುಗಿಸಿ ಮನೆಗೆ ಬರುತ್ತಿದ್ದ ಸೌಜನ್ಯಳನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಸಂತೋಷ್ ರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಸಾಕ್ಷಾಧಾರ ಕೊರತೆಯ ಹಿನ್ನೆಲೆಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ.
2012 ಅಕ್ಟೋಬರ್ 10 ರಂದು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಸೌಜನ್ಯ ನಾಪತ್ತೆಯಾಗಿದ್ದಳು. ಈ ಕುರಿತು ಸೌಜನ್ಯ ತಂದೆ ಚಂದ್ರಪ್ಪ ಗೌಡ ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ಧರ್ಮಸ್ಥಳದ ಬಳಿಯಲ್ಲಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಆರಂಭಿಕ ಹಂತದಲ್ಲಿ ಬೆಳ್ತಂಗಡಿ ಠಾಣೆಯ ಪೊಲೀಸರು ತನಿಖೆಯನ್ನು ನಡೆಸಿದ್ದು, ನಂತರದಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿತ್ತು. ಆದರೆ ಪ್ರಕಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಪ್ರಕರಣ ದೇಶದಾದ್ಯಂತ ಸದ್ದು ಮಾಡುತ್ತಿದ್ದಂತೆಯೇ ರಾಜ್ಯ ಸರಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ತನಿಖೆಯನ್ನು ನಡೆಸಿದ್ದ ಸಿಬಿಐ ಅಧಿಕಾರಿಗಳು 2016 ರಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರು. ಆದರೆ ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿ ಸೂಕ್ತವಾಗಿಲ್ಲ ಎಂದು ಸೌಜನ್ಯ ತಂದೆ ಆರೋಪಿಸಿದ್ದು, ಹೆಚ್ಚಿನ ತನಿಖೆಗೆ ಆಗ್ರಹಿಸಿದ್ದರು.
2018ರಲ್ಲಿ ಸೌಜನ್ಯ ತಂದೆ ಮರುತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ್ದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಅರ್ಜಿಯನ್ನು ವಜಾಗೊಳಿಸಿತ್ತು. ಅಲ್ಲದೇ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಲು ಹೈಕೋರ್ಟ್‌ ನಿರಾಕರಿಸಿತ್ತು. ಇನ್ನು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂತೋಷ್ ರಾವ್ ಪ್ರಮುಖ ಆರೋಪಿ ಎಂದು ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸಿದ ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

Categories
ಕಾರ್ಕಳ

ಕಾರ್ಕಳ‌ ಅಂಗನವಾಡಿಯಲ್ಲಿ ಕಳಪೆ ಆಹಾರ ಪದಾರ್ಥ ವಿತರಣೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು- ಶುಭದರಾವ್

ಕಾರ್ಕಳ‌ : ತಾಲೂಕಿನ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ತಾಯಿ ಕಾರ್ಡ್ ಮೂಲಕ ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರಿಗೆ ವಿತರಣೆಯಾಗುವ ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಯಾಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ.

ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರ ಆರೋಗ್ಯದ ದೃಷ್ಟಿಯಿಂದ ಸರಕಾರವು ಅಕ್ಕಿ , ಬೇಳೆ, ಸಾಂಬಾರು ಹುಡಿ, ಮತ್ತು ‌ಮೊಟ್ಟೆ ಮೊದಲಾದ ಪೋಷಕಾಂಶ ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದು ಈ ಬಾರಿ ವಿತರಣೆಯಾದ ಸಾಬಾಂರು ಹುಡಿಯ ಗುಣಮಟ್ಟ ತೀರ ಕಳಪೆಯಾಗಿದ್ದು ಉಂಡೆಗಳಾಗಿ ಪರಿವರ್ತನೆಯಾಗಿ ಬಳಕೆಗೆ ಅಯೋಗ್ಯವಾಗಿದೆ. ಇಂತಹ ಪದಾರ್ಥಗಳನ್ನು ಸೇವಿಸುವುದರಿಂದ ಸ್ತ್ರೀಯರ ಅರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರಿ ಅನಾಹುತವಾಗುವ ಸಾದ್ಯತೆ ಇದೆ ಆಹಾರ ಪದಾರ್ಥಗಳ ವಿತರಣೆಯ ಜವಾಬ್ದಾರಿ ಹೊತ್ತ ಸಂಸ್ಥೆಯ ವಿರುದ್ಧ ಕಠಿಣ ಕ್ರಮವಾಗಬೇಕು ಮತ್ತು ಅವರ ಟೆಂಡರನ್ನು ರದ್ದು ಮಾಡಬೇಕು ಎಂದು ಆಗ್ರಹಿಸುತ್ತೇನೆ.

ಈ ಹಿಂದೆಯೂ ಕೊಳೆತ ಮೊಟ್ಟೆ ವಿತರಣೆಯಾಗಿದ್ದು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ, ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪೋಟೋ ಸಹಿತ ಟ್ವಿಟರ್ ಮೂಲಕ ಮತ್ತು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಯವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

Categories
ಕರಾವಳಿ ಕಲಬುರಗಿ ಕಾರ್ಕಳ ಕೊಪ್ಪ ಚಿಕ್ಕಮಗಳೂರು ಜಿಲ್ಲಾ ವಾರ್ತೆ ತೀರ್ಥಹಳ್ಳಿ ಬೆಂಗಳೂರು ಮಂಗಳೂರು ಮಂಡ್ಯ ಶಿಕ್ಷಣ ಶಿವಮೊಗ್ಗ ಹುಬ್ಬಳ್ಳಿ

ಸಿಇಟಿ ಫಲಿತಾಂಶ: ಕ್ರಿಯೇಟಿವ್‌ ಕಾಲೇಜು ಬೆಸ್ಟ್!

ಕಾರ್ಕಳದ ಕ್ರಿಯೇಟಿವ್ ಕಾಲೇಜು ದ್ವಿತೀಯ ವರ್ಷವೂ ಅತ್ಯುತ್ತಮ ಸಾಧನೆ

  • ಇಂಜಿನಿಯರಿಂಗ್, ಕೃಷಿ ವಿಜ್ಞಾನದಲ್ಲಿ ರಾಜ್ಯಕ್ಕೆ ಹಲವು ರ‍್ಯಾಂಕ್‌
  • ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಅಭಿನಂದನೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 2023 ರಲ್ಲಿ ನಡೆಸಿದ ವಿವಿಧ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿ ರಾಜ್ಯದ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.

ಜಾಗೃತಿ ಕೆ.ಪಿ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 17ನೇ ರ‍್ಯಾಂಕ್‌, ಪಶು ವೈದ್ಯಕೀಯದಲ್ಲಿ 107ನೇ ರ‍್ಯಾಂಕ್‌, ಬಿ. ಎನ್‌ ವೈ ಎಸ್‌ ನಲ್ಲಿ 53 ನೇ ರ‍್ಯಾಂಕ್‌ ಹಾಗೂ ಇಂಜಿನಿಯರಿಂಗ್‌ ವಿಭಾಗದಲ್ಲಿ 112 ನೇ ರ‍್ಯಾಂಕ್‌ ಪಡೆದಿದ್ದಾರೆ. ಇಂಜಿನಿಯರಿಂಗ್‌ ವಿಭಾಗದಲ್ಲಿ ರಾಜ್ಯಕ್ಕೆ ಅಭಯ್‌ ಎಸ್‌ ಎಸ್‌ 99ನೇ ರ‍್ಯಾಂಕ್‌, ಆದಿತ್ಯ ಹೊಳ್ಳ 201 ನೇ ರ‍್ಯಾಂಕ್‌, ಪ್ರಣವ್‌ ಪಿ ಸಂಜಿ 294 ನೇ ರ‍್ಯಾಂಕ್‌, ಕಾರ್ತಿಕ್‌ ಕೃಷ್ಣಮೂರ್ತಿ ಹೆಗಡೆ 492 ನೇ ರ‍್ಯಾಂಕ್‌, ಉದ್ಭವ್‌ ಎಂ ಆರ್‌ 843 ನೇ ರ‍್ಯಾಂಕ್‌, ಸಾತ್ವಿಕ್‌ ಎಸ್‌ ಶೆಟ್ಟಿ 920 ನೇ ರ‍್ಯಾಂಕ್‌ ಗಳಿಸಿದ್ದಾರೆ.

ಬಿ.ಎಸ್ಸಿ ಅಗ್ರಿಕಲ್ಚರ್‌ ವಿಭಾಗದಲ್ಲಿ ಸಾತ್ವಿಕ್‌ ಎಸ್‌ ಶೆಟ್ಟಿ 237, ಉದ್ಭವ್‌ ಎಂ ಆರ್‌ 242, ಶ್ರೇಯಸ್‌ ಎಸ್‌ ಚಿಕಾಲೆ 333, ಸಾಕ್ಷಿತ್‌ ಶೆಟ್ಟಿ, 457 ನೇ ರ‍್ಯಾಂಕ್‌ ಪಡೆದಿದ್ದಾರೆ. ಪಶು ವೈದ್ಯಕೀಯ ವಿಭಾಗದಲ್ಲಿ ಉದ್ಭವ್‌ ಎಂ ಆರ್‌ 298 ನೇ ರ‍್ಯಾಂಕ್‌ ಹಾಗೂ ಬಿ. ಎನ್‌ ವೈ ಎಸ್‌ ನಲ್ಲಿ 243 ನೇ ರ‍್ಯಾಂಕ್‌, ಪಶುವೈದ್ಯಕೀಯ ವಿಭಾಗದಲ್ಲಿ ಸಾತ್ವಿಕ್‌ ಎಸ್‌ ಶೆಟ್ಟಿ 407 ನೇ ರ‍್ಯಾಂಕ್‌ ಮತ್ತು ಬಿ. ಎನ್‌ ವೈ ಎಸ್‌ ನಲ್ಲಿ 531 ನೇ ರ‍್ಯಾಂಕ್‌ ಗಳಿಸಿದ್ದಾರೆ.

ಎಲ್ಲಾ ವಿಭಾಗಗಳನ್ನು ಸೇರಿ 1000 ರ‍್ಯಾಂಕ್‌ ಒಳಗೆ 54 ವಿದ್ಯಾರ್ಥಿಗಳು, 2000 ರ‍್ಯಾಂಕ್‌ ಒಳಗೆ 112 ವಿದ್ಯಾರ್ಥಿಗಳು, 5000 ರ‍್ಯಾಂಕ್‌ ಒಳಗೆ 203 ವಿದ್ಯಾರ್ಥಿಗಳು ರ‍್ಯಾಂಕ್‌ಗಳನ್ನು ಗಳಿಸುವುದರ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ.

ದ್ವಿತೀಯ ಪಿಯುಸಿ, ನೀಟ್ ಅಲ್ಲೂ ಸಾಧನೆ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 100 ಶೇಕಡಾ ಫಲಿತಾಂಶದೊಂದಿಗೆ ನೀಟ್‌ (NEET) ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ನೀಟ್ ಪರೀಕ್ಷೆಯಲ್ಲೂ ಅನೇಕ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ರ‍್ಯಾಂಕ್‌ ಗಳಿಸಿದ್ದಾರೆ. ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಯನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಹೆತ್ತವರು, ಉಪನ್ಯಾಸಕ ವರ್ಗದವರು ಹಾಗೂ ಸಿಇಟಿ ಸಂಯೋಜಕರಾದ ಸುಜಯ್‌ ಬಿ.ಟಿ ಸಂತಸ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.

Categories
ಕರಾವಳಿ ಕಾರ್ಕಳ ಕೊಪ್ಪ ಚಿಕ್ಕಮಗಳೂರು ತೀರ್ಥಹಳ್ಳಿ ದಾವಣಗೆರೆ ಬೆಂಗಳೂರು ಮಂಗಳೂರು ಮಂಡ್ಯ ಮಲ್ನಾಡ್ ರಾಜ್ಯ ಶಿಕ್ಷಣ ಶಿವಮೊಗ್ಗ ಹುಬ್ಬಳ್ಳಿ

ನೀಟ್‌ ಫಲಿತಾಂಶ ಪ್ರಕಟ, ಕ್ರಿಯೇಟಿವ್‌ನ ಜಾಗೃತಿ ಕೆ ಪಿ ಗೆ ಆಲ್‌ ಇಂಡಿಯಾ 23 ನೇ ರ‍್ಯಾಂಕ್‌

  • ಆರಂಭವಾದ ಮೊದಲ ವರ್ಷದಿಂದಲೂ ಕ್ರಿಯೇಟಿವ್ ನ ಅಮೋಘ ಸಾಧನೆ
  • ಅತೀ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆ

ಕಾರ್ಕಳ :

ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಥೆ ಪ್ರಾರಂಭವಾದ ದ್ವಿತೀಯ ವರ್ಷದಲ್ಲೇ ಅತ್ಯುತ್ತಮ ಫಲಿತಾಂಶ ಗಳಿಸಿದ್ದಾರೆ. ಆಲ್‌ ಇಂಡಿಯಾ ರ‍್ಯಾಂಕಿಂಗ್‌ನಲ್ಲಿ ಕುಮಾರಿ ಜಾಗೃತಿ ಕೆ ಪಿ 661 ಅಂಕಗಳೊಂದಿಗೆ ಕೆಟೆಗರಿಯಲ್ಲಿ 23 ನೇ ರ‍್ಯಾಂಕ್‌, ಉದ್ಭವ್‌ ಎಂ ಆರ್‌ 625 ಅಂಕಗಳೊಂದಿಗೆ ಕೆಟೆಗರಿಯಲ್ಲಿ 72 ನೇ ರ‍್ಯಾಂಕ್‌ ಗಳಿಸಿದ್ದಾರೆ. ಹಾಗೆಯೇ ಸಂಸ್ಥೆಯ ವಿದ್ಯಾರ್ಥಿಗಳಾದ ತನುಶ್ರೀ ಕೆ ಎನ್‌ 625, ಶ್ರೇಯಸ್‌ ಎಸ್‌ ಚಿಕಾಲೇ 612, ಸಾತ್ವಿಕ್‌ ಎಸ್‌ ಶೆಟ್ಟಿ 609, ಚಂದನ ಹೆಚ್‌ ಎಂ 605, ಸಾಕ್ಷಿತ್‌ ಶೆಟ್ಟಿ 604, ಸ್ವೀಕೃತಿ ಶೆಟ್ಟಿ 596, ಗೌರಿ ಸಿ ಸಂಕೊಲ್‌ 595, ಮನೋಜ ಪಾಲನ್ಕರ್‌ 592,ಪ್ರೀತಮ್ ಎಸ್ ಜಿ 584, ಪ್ರಶಿನ್‌ ಶೆಟ್ಟಿ 578,ಚಮನ್ ಜಿ 576, ಜ್ಞಾನದೀಪ್‌ ಕೆ ಆರ್‌ 555, ಸಾನ್ವಿ ಎಂ ಆರ್‌ 548, ಶ್ರೀಗಂಗಾ 547, ಜೀವನ್‌ ಎ 545, ನೇಹಾ ಬಿ ಜಿ 543, ಮಿಂಚು ಪಿ ಆರ್‌ 535, ಅವಿನ್‌ ಫ್ರಾನ್ಸೀಸ್‌ ಡಿಸೋಜಾ 531, ಅಭಯ್‌ ಕೆ ಆರ್‌ 525, ಶ್ರೇಯಸ್‌ ಎಸ್‌ ಶೆಟ್ಟಿ 521,ಸುಹಾಸ್ ಜಿ 520, ಆದಿತ್ಯ ಮಹೇಶ್‌ ಶೇಟ್‌ 517, ಭರತ್‌ ವಿ 516, ಪ್ರವೀಣ್‌ ಆರ್ ಎಮ್ಮಿ 515 ,ಅಭಿನವ್ ಹೆಚ್ ಬಿ 505 ಅಂಕಗಳಿಸಿ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮೆಡಿಕಲ್‌ ಸೀಟ್‌ ಪಡೆದುಕೊಳ್ಳಲು ಅರ್ಹರಾಗಿದ್ದಾರೆ.

ಸುಮಾರು 27 ವಿದ್ಯಾರ್ಥಿಗಳು 500 ಕ್ಕಿಂತ ಅಧಿಕ ಅಂಕ, 70 ವಿದ್ಯಾರ್ಥಿಗಳು 400 ಕ್ಕಿಂತ ಅಧಿಕ ಅಂಕ, 110 ವಿದ್ಯಾರ್ಥಿಗಳು 300 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಪರೀಕ್ಷೆಗೆ ಕುಳಿತ 209 ವಿದ್ಯಾರ್ಥಿಗಳು ನೀಟ್ ಅರ್ಹತೆ ಪಡೆದುಕೊಂಡಿದ್ದು ಮುಂದಿನ ಕೌನ್ಸೆಲಿಂಗ್ ಹಂತದಲ್ಲಿ ಮೆಡಿಕಲ್ ಕಾಲೇಜು ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಕಳೆದ ವರ್ಷವೂ ಕ್ರಿಯೇಟಿವ್ ಸಂಸ್ಥೆ ತನ್ನ ಪ್ರಥಮ ವರ್ಷದ ನೀಟ್ ಫಲಿತಾಂಶದಲ್ಲಿಯೇ ಅಮೋಘ ಸಾಧನೆಗೈದಿದ್ದು ರಾಘವೇಂದ್ರ ತಾಳಿಕೋಟೆ 646, ಸಾತ್ವಿಕ್ ಶ್ರೀಕಾಂತ ಹೆಗಡೆ  641 ಅಂಕಗಳೊಂದಿಗೆ ಹಲವಾರು ವಿದ್ಯಾರ್ಥಿಗಳು ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆ ಆಗಿರುವುದನ್ನು ಸ್ಮರಿಸಬಹುದಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ನೀಟ್ ಸಂಯೋಜಕರಾದ ಲೋಹಿತ್‌ ಎಸ್‌ ಕೆ ಅಭಿನಂದಿಸಿದ್ದಾರೆ.

Categories
Uncategorized ಕಾರ್ಕಳ ಶಿಕ್ಷಣ

ಉಚಿತ ಯಕ್ಷಗಾನ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಕಾರ್ಕಳ: ಯಕ್ಷಗಾನ ಶಿಕ್ಷಣಕ್ಕಾಗಿಯೇ ಕಳೆದ 10 ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವ ಕಾರ್ಕಳದ ಯಕ್ಷಕಲಾರಂಗದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನ ಶಿಕ್ಷಣ ಪಡೆಯಲು ಆಸಕ್ತ ಶಾಲಾ ಕಾಲೇಜುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2023-24 ನೇ ಸಾಲಿನಲ್ಲಿ ಯಕ್ಷಗಾನ ಕಲಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಲು ಶಾಲಾ ಕಾಲೇಜುಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 1650 ವಿದ್ಯಾರ್ಥಿಗಳಿಗೆ ಉಚಿತವಾಗಿ ಬೇರೆ ಬೇರೆ ನಾಟ್ಯ ಗುರುಗಳಿಂದ ಯಕ್ಷ ಶಿಕ್ಷಣ ನೀಡಿ ವರ್ಷಾಂತ್ಯದಲ್ಲಿ ಕಿಶೋರ ಯಕ್ಷೋತ್ಸವ ನಡೆಸಿಕೊಂಡು ಬರುತ್ತಿದೆ.
ಆಸಕ್ತ ಶಾಲಾ ಮುಖ್ಯಸ್ಥರು ದಿನಾಂಕ 25-06-23ರ ಒಳಗೆ ಈ ವಿಳಾಸಕ್ಕೆ ಅರ್ಜಿಗಳನ್ನು ಕಳುಹಿಸಿ ಕೊಡುವಂತೆ ವಿನಂತಿಸಲಾಗಿದೆ.

Categories
Uncategorized ಕರಾವಳಿ ಕಾರ್ಕಳ ಶಿಕ್ಷಣ

ಮಕ್ಕಳನ್ನು ಸಮಾಜದ ಆಸ್ತಿಯಾಗಿ ಮಾಡಬೇಕು : ಡಾ. ಸುಧಾಕರ ಶೆಟ್ಟಿ

ಕಾರ್ಕಳ: ಸಣ್ಣ ವಿದ್ಯಾರ್ಥಿ ಗಳಿಗೆ ಶಿಕ್ಷಣ ನೀಡಿ ಜೀವನ ರೂಪಿಸುವಲ್ಲಿ ಪೋಷಕರ ಮತ್ತು ಶಿಕ್ಷಕರ ಮಹತ್ವದ ಪಾತ್ರವಿದೆ. ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕು. ಎಂದು ಪದ್ಮ ಗೋಪಾಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಹೇಳಿದರು ಅವರು ಸೋಮವಾರ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯಲ್ಲಿ, ೨೦೨೩-೨೪ ನೇ ಶೈಕ್ಷಣಿಕ ಸಾಲಿನ  ಪೋಷಕ ಶಿಕ್ಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ನಾವೆಲ್ಲರೂ ಸಾಮರಸ್ಯದಿಂದ ಬದುಕಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರ ಜವಾಬ್ದಾರಿ ಪ್ರಮುಖವಾದುದು ಎಂದು ತಿಳಿಸಿದರು.

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿಇಓ ಮತ್ತು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ  ದಿನೇಶ್ ಎಂ. ಕೊಡವೂರು ಮಾತನಾಡಿ ಪೋಷಕರು ಮಕ್ಕಳ ಪ್ರಗತಿಯನ್ನು ಗಮನಿಸುತ್ತಿರಬೇಕು ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟುವುದಕ್ಕೋಸ್ಕರ ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿರಿಸಲು ಸಲಹೆ ನೀಡಿದರು.

ವೇದಿಕೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಪ್ರಾಂಶುಪಾಲೆಯಾದ ಉಷಾ ರಾವ್.ಯು ಮತ್ತು ಉಪಪ್ರಾಂಶುಪಾಲೆಯಾದ ಶ್ರೀಮತಿ ವಾಣಿ.ಕೆ ಉಪಸ್ಥಿತರಿದ್ದರು.

ಶಾಲೆಯ ಪ್ರಾಂಶುಪಾಲೆಯಾದ ಶ್ರೀಮತಿ ಉಷಾ ರಾವ್.ಯು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಕ ಅರುಣ್ ಕುಮಾರ್  ಗಣ್ಯರನ್ನು ಗೌರವಿಸಿದರು.

ಶಿಕ್ಷಕಿ ಶ್ರೀಮತಿ ಚಂದ್ರಕಲಾ ಕಾರ್ಯಕ್ರಮವನ್ನು ನಿರೂಪಿಸಿದರು. ಉಪಪ್ರಾಂಶುಪಾಲೆಯಾದ ಶ್ರೀಮತಿ ವಾಣಿ.ಕೆ  ವಂದಿಸಿದರು

Categories
ಕರಾವಳಿ ಕಲಬುರಗಿ ಕಾರ್ಕಳ ಕೊಪ್ಪ ಚಿಕ್ಕಮಗಳೂರು ಜಿಲ್ಲಾ ವಾರ್ತೆ ತೀರ್ಥಹಳ್ಳಿ ದಾವಣಗೆರೆ ಬೆಂಗಳೂರು ಮಂಡ್ಯ ಮಲ್ನಾಡ್ ಮೈಸೂರು ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ ಶಿವಮೊಗ್ಗ ಹುಬ್ಬಳ್ಳಿ

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ನಿಯಮಗಳೇನು? – ಬೇಕು ಶಕ್ತಿ ಸ್ಮಾರ್ಟ್ ಕಾರ್ಡ್‌: ಅರ್ಜಿ ಸಲ್ಲಿಸುವುದು ಹೇಗೆ?

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ‘ಶಕ್ತಿ’ ಯೋಜನೆಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಸರ್ಕಾರ ಸೋಮವಾರ ಹೊರಡಿಸಿದೆ. ಅದರಂತೆ, ಮಹಿಳೆಯರು ಉಚಿತವಾಗಿ ಪ್ರಯಾಣಿಸಬೇಕಿದ್ದರೆ ‘ಶಕ್ತಿ ಸ್ಮಾರ್ಟ್‌ಕಾರ್ಡ್‌’ ಹೊಂದುವುದು ಕಡ್ಡಾಯವಾಗಿರಲಿದೆ.

ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಪಡೆದು, ಶಕ್ತಿ ಸ್ಮಾರ್ಟ್ ಕಾರ್ಡ್‌ಗಳನ್ನು ಪಡೆಯಬಹುದು. ಕಾರ್ಡ್‌ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸತಕ್ಕದ್ದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸ್ಮಾರ್ಟ್‌ಕಾರ್ಡ್‌ ದೊರೆಯುವವರೆಗೆ ಉಚಿತ ಪ್ರಯಾಣ ಹೇಗೆ?:

ಶಕ್ತಿ ಸ್ಮಾರ್ಟ್‌ಕಾರ್ಡ್‌ ಅನ್ನು ವಿತರಿಸುವವರೆಗೆ ಭಾರತ ಸರ್ಕಾರ/ ಕರ್ನಾಟಕ ಸರ್ಕಾರದ ಇಲಾಖೆ / ಸರ್ಕಾರಿ ಸ್ವಾಮ್ಯದ ಕಛೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಉಚಿತ ಟಿಕೆಟ್ ವಿತರಿಸುವ ಸ೦ದರ್ಭದಲ್ಲಿ ಪರಿಗಣಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ಸಂಸ್ಥೆಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದ್ದು, ಕೆಲವೊಂದು ಷರತ್ತುಗಳೊಂದಿಗೆ ಸೌಲಭ್ಯ ಒದಗಿಸಲು ಆದೇಶಿಸಲಾಗಿದೆ. ರಾಜ್ಯದ ನಾಲ್ಕು ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕ.ರಾ.ರ.ಸಾ.ನಿಗಮ), ಬೆ೦ಗಳೂರು ಮಹಾನಗರ ಸಾರಿಗೆ ಸ೦ಸ್ಥೆ (ಬೆ೦.ಮ.ಸಾ.ಸಂಸ್ಥೆ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.ಸಂಸ್ಥೆ) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ (ಕ.ಕ.ರ.ಸಾ.ನಿಗಮ) ಸಾರಿಗೆಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ನಗರ, ಸಾಮಾನ್ಯ ಹಾಗೂ ವೇಗದೂತ (ಐ/65) ಬಸ್ಸುಗಳಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು (ವಿದ್ಯಾರ್ಥಿನಿಯರು ಸೇರಿದಂತೆ) ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಅಧಿಸೂಚನೆ ತಿಳಿಸಿದೆ.