Categories
ಕರಾವಳಿ ಕಾರ್ಕಳ

ಸಿಟಿ ವಿದ್ಯಾರ್ಥಿಗಳ ಹಳ್ಳಿ ಲೈಫು – ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಗದ್ದೆ ನಾಟಿ

ಸಿಟಿ ವಿದ್ಯಾರ್ಥಿಗಳ ಹಳ್ಳಿ ಲೈಫು!
– ಕಾರ್ಕಳಕ್ಕೆ ಬಂದು ನಾಟಿ ಮಾಡಿದ ಕಾಲೇಜು ವಿದ್ಯಾರ್ಥಿಗಳು
– ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಗದ್ದೆ ನಾಟಿ

NAMMUR EXPRESS NEWS
ಕಾರ್ಕಳ: ಬೆಂಗಳೂರಿನ ವಿದ್ಯಾರ್ಥಿಗಳು ಕಾರ್ಕಳದ ಹಳ್ಳಿಯೊಂದಕ್ಕೆ ಬಂದು ನಾಟಿ ಮಾಡುವ ಮೂಲಕ ಕೃಷಿಗೂ ಸೈ… ಓದೋಕೂ ಸೈ ಎಂದಿದ್ದಾರೆ.
ಕಾರ್ಕಳದ ಪರಪ್ಪು ರಸ್ತೆಯಲ್ಲಿರುವ ಜಗನ್ನಾಥ ಪೈ ಅವರ ಗದ್ದೆಗೆ ಬೆಂಗಳೂರಿನ  ಆರ್ ಸಿ ಕಾಲೇಜು ,ಎಂ ಇ ಎಸ್ ಕಾಲೇಜು ಮಲ್ಲೇಶ್ವರಂ , ಬೆಂಗಳೂರು ಆರ್ಟ್ಸ್ ಕಾಲೇಜು, ಜಿ.ಎಫ್ ಜಿ.ಸಿ  ರಾಜಾಜಿನಗರ,ಶೇಷಾದ್ರಿ ಪುರಂ ಮೈನ್ ಕಾಲೇಜು, ಮಹಾರಾಣಿ ಕಾಲೇಜು, ಎಂ ಇ ಎಸ್ ಕೆ ಕೆ  ಪಿಯು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಭಾರತ ಸ್ಕೌಟ್ಸ್ ಗೈಡ್ಸ್ ಕರ್ನಾಟಕ  ಮತ್ತು ರೊವರ್ಸ್ ರೇಂಜರ್ಸ್, ಬೆಂಗಳೂರಿನ ಉತ್ತರ ಜಿಲ್ಲೆಯ ಒಟ್ಟು 82 ವಿದ್ಯಾರ್ಥಿಗಳು ಸೇರಿ ಸುಮಾರು ಎರಡು ಎಕರೆ ಗದ್ದೆಗಳಲ್ಲಿ ನಾಟಿ ಮಾಡಿ ಖುಷಿ ಪಟ್ಟರು. ಅಲ್ಲದೆ ಹಳ್ಳಿಯ ಬದುಕಿನ ಕೃಷಿ ಸೊಗಡು ಅನುಭವಿಸಿದರು.
ಪದವಿ ಹಾಗು ಪಿಯುಸಿ  ವಿದ್ಯಾರ್ಥಿಗಳು ತುಳುನಾಡಿನ  ಪಾರ್ದನ ಹಾಗು ಕೆಸರು ಗದ್ದೆಯಲ್ಲಿ ಆಟವಾಡಿ ಖುಷಿಪಟ್ಟರು. ಕಜೆಜಯ ಭತ್ತದ ತಳಿಯನ್ನು ನಾಟಿ ಸಮಯದಲ್ಲಿ ವಿದ್ಯಾರ್ಥಿಗಳು ಸಾಲುನಾಟಿಯನ್ನು ಪರಿಚಯಿಸಿದರು. ಕಾರ್ಕಳದ  ಎಂಪಿ ಎಂ ಕಾಲೇಜು ವಿದ್ಯಾರ್ಥಿಗಳು  ಗದ್ದೆಯಲ್ಲಿ ನಾಟಿ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನೆರವಾದರು.

ಟ್ರಾಕ್ಟರ್ ಓಡಿಸಿದ ಹುಡುಗಿ!

ಎಮ್.ಇ.ಎಸ್ ಕಾಲೇಜಿನ ಕಟೀಲು ಮೂಲದ ವಿದ್ಯಾರ್ಥಿ ನಿ  ಪಂಚಮಿ ಗದ್ದೆಯಲ್ಲಿ ಟ್ರಾಕ್ಟರ್ ಮೂಲಕ  ಉಳುಮೆ ಮಾಡಿ ಖುಷಿ ಪಟ್ಟಳು. ಸೇರಿದ್ದ ಜನರು ವಿದ್ಯಾರ್ಥಿನಿ  ಟ್ರಾಕ್ಟರ್ ಉಳುಮೆಗೆ  ಜನರು ಮೆಚ್ಚುಗೆ ಸೂಚಿಸಿದರು . ಸೇರಿದ್ದ ವಿದ್ಯಾರ್ಥಿಗಳು ತುಳುನಾಡ ಸಂಸ್ಕೃತಿಗೆ ಮನಸೋತರು. ಬೆಂಗಳೂರಿನ ವಿದ್ಯಾರ್ಥಿಗಳಿಗೆ ತುಳುನಾಡ ಸ್ವಾದಿಷ್ಟ ಭೋಜನವನ್ನು ಏರ್ಪಡಿಸಲಾಗಿತ್ತು, ಹಲಸಿನ ಸೋಳೆಯ ಸುಕ್ಕ,  ಪತ್ರಾಡೆ, ಹಾಗೂ   ಹುರುಳಿ ಚಟ್ನಿ , ಕುಚ್ಚಲಕ್ಕಿ ಹಾಗೂ ಬೆಳ್ತಿಗೆ ಅಕ್ಕಿಯ ಅನ್ನ , ಸಾರು ಉಂಡು   ಖುಷಿ ಪಟ್ಟರು .

ಸ್ಕೌಟ್ಸ್ ಗೈಡ್ಸ್ ಜಿಲ್ಲಾ ತರಬೇತಿ ಆಯುಕ್ತ ಸಾವಿತ್ರಿ ಮನೋಹರ ,  ನಿತಿನ್ ಅಮೀನ್ ಸೇರಿದಂತೆ ಹಲವರು ಸಹಕರಿಸಿದ್ದರು.
ರಾಜ್ಯ ಮುಖ್ಯ ಆಯುಕ್ತರ ಪಿ ಜಿ ಆರ್ ಸಿಂಧೀಯಾ  ಮಾರ್ಗದರ್ಶನದಲ್ಲಿ ಈ ಕೃಷಿ ನಾಟಿ ಕಾರ್ಯ ನಡೆಯುತಿದೆ. ವಿದ್ಯಾರ್ಥಿಗಳಿಗೆ ತುಳುನಾಡನ್ನು ಪರಿಚಯಿಸುವ ಕಾರ್ಯವಾಗಿದೆ ಎಂದು ಗೈಡ್ ಆದ ಜ್ಯೋತಿ ಜಗನ್ನಾಥ ಪೈ ಹೇಳಿದ್ದಾರೆ.

ಇದನ್ನೂ ಓದಿ : ತುಂಬಿದ ನದಿಯಲ್ಲಿ ಮರ ಹಿಡಿದು ಜೀವ ಉಳಿಸಿಕೊಂಡ ಅಜ್ಜಿ!

HOW TO APPLY : NEET-UG COUNSELLING 2023

Categories
ಕರಾವಳಿ ಕಾರ್ಕಳ

ಕರಾವಳಿಯಲ್ಲಿ ಹೆಚ್ಚಾಯ್ತು ಅನಾಹುತ, ದುರಂತ!

ಕರಾವಳಿಯಲ್ಲಿ ಹೆಚ್ಚಾಯ್ತು ಅನಾಹುತ, ದುರಂತ!
– ಕಾರ್ಕಳ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
– ಕಚೇರಿಯಲ್ಲೇ ನೇಣಿಗೆ ಶರಣಾದ ಮಹಿಳೆ
– ಮಂಗಳೂರಲ್ಲಿ ಅಪಘಾತ: ಮೂವರು ಪಾರು
– ಸುರತ್ಕಲ್: ಮೀನು ಹಿಡಿಯಲು ಹೋದವ ನೀರುಪಾಲು

NAMMUR EXPRESS NEWS
ಕಾರ್ಕಳ: ಕೂಲಿ ಕಾರ್ಮಿಕ ಯುವಕನೋರ್ವ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ದಾರುಣ ಘಟನೆ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಬಿಹಾರ ಮೂಲದ ಸೌರವ್ ಕುಮಾರ್ (20) ಮೃತ ಯುವಕ. ಕೆಲ ವರ್ಷಗಳ ಹಿಂದೆ ದಿನಗೂಲಿ ಕಾರ್ಮಿಕನಾಗಿ ನಿಟ್ಟೆಗೆ ಬಂದಿದ್ದ ಇವರು ನಿಟ್ಟೆ ಕಾಲೇಜಿನ ಎದುರಿನ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು.

ತಾನು ಕೆಲಸ ನಿರ್ವಹಿಸುತ್ತಿದ್ದ ಕಚೇರಿಯಲ್ಲೇ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕಾರ್ಕಳದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ನಗರದ ಮಾರ್ಕೆಟ್‌ ಬಳಿಯ ನಿವಾಸಿ ಪ್ರಮೀಳಾ ದೇವಾಡಿಗ (32) ಎಂದು ಗುರುತಿಸಲಾಗಿದೆ.
ಕಾರ್ಕಳ ಪೇಟೆಯ ಮಾರ್ಕೆಟ್‌ ರಸ್ತೆಯಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇತರ ಸಿಬಂದಿ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ ಸಂದರ್ಭ ಪ್ರಮೀಳಾ ನೇಣು ಬಿಗಿದಿರುವುದು ಕಂಡು ಬಂದಿದೆ. ಅವರು ನೇಣು ಬಿಗಿಯಲು ಮನೆಯಿಂದಲೇ ಸೀರೆ ತಂದಿರಬೇಕು ಎಂದು ಶಂಕಿಸಲಾಗಿದೆ.ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಮೃತರು ಪತಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಮಂಗಳೂರಿನ ಕದ್ರಿ ಸರ್ಕಿಟ್ ಹೌಸ್ ಬಿಜೈ ರಸ್ತೆ ಮಧ್ಯೆ ಬಟ್ಟಗುಡ್ಡೆ ಬಳಿ ಕಾರು ಅಪಘಾತ ಸಂಭವಿಸಿ ಮೂವರು ಅಲ್ಪಸ್ವಲ್ಪಗಾಯಗಳೊಂದಿಗೆ ಪಾರಾಗಿರುವ ಘಟನೆ ನಡೆದಿದೆ. ಈ ಅಪಘಾತ ಶುಕ್ರವಾರ ಮಧ್ಯರಾತ್ರಿ ಸುಮಾರು 12.30 ರ ಸುಮಾರಿಗೆ ಸಂಭವಿಸಿದ್ದು, ಸರ್ಕಿಟ್ ಹೌಸ್ ಕಡೆಯಿಂದ ಬಿಜೈ ಕಡೆಗೆ ವೇಗವಾಗಿ ಸಾಗುತ್ತಿದ್ದ ಮಾರುತಿ ಬಲೇನೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ ವಿದ್ಯುತ್ ಕಂಬಕ್ಕೆ ಹೊಡೆದು ಪಕ್ಕದ ರಸ್ತೆ ಬಿದ್ದು ಹತ್ತಿರದಲ್ಲಿದ್ದ ಗಿಡ ಗಂಟಿಗಳ ಮಧ್ಯೆ ಸಿಲುಕಿಕೊಂಡಿದೆ. ಕಾರಿನಲ್ಲಿದ್ದ ಮೂವರಿಗೆ ಅಲ್ಪ ಸ್ವಲ್ಪ ಗಾಯಾಗಳಾಗಿದೆ.

ಮೀನು ಹಿಡಿಯಲು ಹೋದವ ನೀರಲ್ಲಿ ಮುಳುಗಿ ವ್ಯಕ್ತಿ ಮೃತ್ಯು

ಮೀನು ಹಿಡಿಯಲು ಬಂದು ನೀರಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಪೋರ್ಕೊಡಿ ನಿವಾಸಿ ಪೂವಪ್ಪ(40) ಎಂದು ಗುರುತಿಸಲಾಗಿದೆ. ಅಣ್ಣ ತಮ್ಮಂದಿರು ಮೀನು ಹಿಡಿಯಲು ಎಂದು ಸುರತ್ಕಲ್ 62ನೇ ತೋಕೂರು ಬಳಿಯ ಜಾರಂದಾಯ ದೈವಸ್ಥಾನದ ಗುತ್ತಿನ ಮನೆಯ ಸಮೀಪದ ಕೆರೆಗೆ ಇಳಿದಿದ್ದು, ಕೆಸರಿನಲ್ಲಿ ಹೂತುಹೋದ ಕಾರಣ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಗೃಹ ಲಕ್ಷ್ಮೀ ಯೋಜನೆಗೆ ಜು.16ಕ್ಕೆ ಚಾಲನೆ!

HOW TO APPLY : NEET-UG COUNSELLING 2023

Categories
ಕಾರ್ಕಳ

ಕಾರ್ಕಳ ಕ್ರಿಯೇಟಿವ್‌ ಕಾಲೇಜಲ್ಲಿ “ಕ್ರಿಯೇಟಿವ್‌ ಸಮಾಗಮ”!

ಕಾರ್ಕಳ ಕ್ರಿಯೇಟಿವ್‌ ಕಾಲೇಜಲ್ಲಿ “ಕ್ರಿಯೇಟಿವ್‌ ಸಮಾಗಮ”!
– ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
– ಪ್ರಥಮ ಪಿಯುಸಿ ತರಗತಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಗೌರವ

NAMMUR EXPRESS NEWS
ಕಾರ್ಕಳ: ಕಾರ್ಕಳ ಕ್ರಿಯೇಟಿವ್‌ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ “ಕ್ರಿಯೇಟಿವ್‌ ಸಮಾಗಮ” ಕಾರ್ಯಕ್ರಮ ಕಾಲೇಜಿನ ನೇಸರ ಸಭಾಂಗಣದಲ್ಲಿ ನಡೆಯಿತು.
ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನ (ರಿ) ಕಾರ್ಕಳ ಇದರ ವತಿಯಿಂದ ಜು.7ರ ಶುಕ್ರವಾರ ಶೈಕ್ಷಣಿಕ ಸಾಲಿನ ಪ್ರಥಮ
ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ʼಕ್ರಿಯೇಟಿವ್‌ ಸಮಾಗಮʼ ನಡೆಯಿತು.
ಸಂಸ್ಥಾಪಕರಾದ ಅಮೃತ್‌ ರೈ ಕಾಲೇಜಿನ ವಿವಿಧ ಸಂಘಗಳನ್ನು ಉದ್ಘಾಟಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಅಶ್ವತ್‌ ಎಸ್‌.ಎಲ್‌, ಬದುಕನ್ನು ನಿರ್ಧರಿಸುವ ಪಿ.ಯು ಶಿಕ್ಷಣದಲ್ಲಿ ತಾವುಗಳೆಲ್ಲ ತಮ್ಮ ಅಪ್ಪ ಅಮ್ಮಂದಿರ ಭರವಸೆ ಉಳಿಸಿಕೊಳ್ಳುವಂತಹ ಸಾಧನೆ
ಮಾಡುವಂತಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ಮಾತನಾಡಿ, ಕ್ರಿಯಾಶೀಲ ವ್ಯಕ್ತಿತ್ವದಿಂದ ಮಾತ್ರ
ಸವಾಲುಗಳನ್ನು ಎದುರಿಸಲು ಸಾಧ್ಯ. ಸಾಧನೆಗೆ ಯಾವುದೇ ಅಡ್ಡದಾರಿಗಳಿಲ್ಲ. ನೇರ ದಾರಿಯ ಪರಿಶ್ರಮವೇ ಸಾಧನೆಯ ಮೆಟ್ಟಿಲು ಆದ್ದರಿಂದ
ವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲಿ ಉದಾಸೀನ ಪ್ರವೃತ್ತಿಯವರಾಗದೆ ನಿರಂತರ ಶ್ರಮದಿಂದ ಉನ್ನತಿಗೇರುವಂತಾಗಲಿ ಎಂದು ನುಡಿದರು.

ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ:

2022-23 ನೇ ಸಾಲಿನ ಪ್ರಥಮ ಪಿಯುಸಿ ತರಗತಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಿಗಳಾದ ವಿದ್ಯಾರ್ಥಿಗಳನ್ನು ಸಂಸ್ಥಾಪಕರಾದ ಆದರ್ಶ ಎಂ. ಕೆ ಮತ್ತು ಗಣಪತಿ ಭಟ್‌ ಕೆ. ಎಸ್‌ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.
ಹಿಂದಿ ಉಪನ್ಯಾಸಕ ವಿನಾಯಕ ಜೋಗ್‌ ಸ್ವಾಗತಿಸಿದರು. ಕುಮಾರಿ ವಿಜೇತಾ ಮತ್ತು ಬಳಗದವರು ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್‌ ಎಸ್‌ ಕೆ ವಂದನಾರ್ಪಣೆ ಮಾಡಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿಯರಾದ ಕೀರ್ತಿ ಪಾಟ್ಕರ್‌, ಯೋನಾ
ಭಾಸ್ಕರ ಶೆಟ್ಟಿ, ನಾಗಶಿವಾನಿ, ಸಾನ್ವಿಕುಮಾರ್‌ ನಿರೂಪಣೆ ನೆರವೇರಿಸಿಕೊಟ್ಟರು.

“ಸಪ್ತಸ್ವರ” ಬಿಡುಗಡೆಗೊಳಿಸಿದ ಡಾ.ಗಣನಾಥ ಶೆಟ್ಟಿ

ʼಕ್ರಿಯೇಟಿವ್‌ ಸಮಾಗಮʼ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾರ್ಷಿಕ ಸಂಚಿಕೆ “ಸಪ್ತಸ್ವರ”ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ. ಗಣನಾಥ ಶೆಟ್ಟಿಯವರು, ವಿದ್ಯಾರ್ಥಿಗಳು ವಿದ್ಯಾರ್ಥಿದೆಸೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು.

ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!

[embedyt] https://www.youtube.com/watch?v=-UejHxlYBXg%5B/embedyt%5D

HOW TO APPLY : NEET-UG COUNSELLING 2023

Categories
ಕರಾವಳಿ ಕಾರ್ಕಳ ಶಿಕ್ಷಣ

ಆಳ್ವಾಸ್ ಕಾಲೇಜು, ಎಐಇಟಿ: ‘ಸಂಸ್ಕೃತ ಚಿಂತನ’!

ಆಳ್ವಾಸ್ ಕಾಲೇಜು, ಎಐಇಟಿ: ‘ಸಂಸ್ಕೃತ ಚಿಂತನ’!
– ಪುರಾತನ ಸಂಸ್ಕೃತಿ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳುವ ಆಸಕ್ತಿ ಬೇಕು: ಸಾಹಿತಿ ಪ್ರೊ.ಗೋಪಾಲಕೃಷ್ಣ ಎನ್. ಭಟ್

NAMMUR EXPRESS NEWS
ಮೂಡುಬಿದಿರೆ: ದೇಹ, ಇಂದ್ರೀಯ, ಮನಸ್ಸು ಸೇರಿ ವ್ಯಕ್ತಿ ಸಂಪೂರ್ಣವಾಗುತ್ತಾನೆ. ಬಾಹ್ಯ ಪ್ರಪಂಚದ ಕಡೆಗೆ ಗಮನ ಹರಿಸುವ ಬದಲು, ನಮ್ಮ ಆತ್ಮದ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮನ್ನು ನಾವು ಅರಿತಾಗ ಮಾತ್ರ ಹೊರ ಜಗತ್ತಿನಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಸಾಹಿತಿ ಪ್ರೊ.ಗೋಪಾಲಕೃಷ್ಣ ಎನ್. ಭಟ್ ಹೇಳಿದರು.

ಅವರು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು(ಎಐಇಟಿ) ಹಾಗೂ ಆಳ್ವಾಸ್ ಕಾಲೇಜು ಸಂಸ್ಕೃತ ವಿಭಾಗ, ಸಂಸ್ಕೃತ ಸಂಘ ಹಾಗೂ ಪ್ರಜ್ಞಾ ಜಿಜ್ಞಾಸಾವೇದಿಃ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸಂಸ್ಕೃತ ಚಿಂತನ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಜ್ಞಾನ ವೃದ್ಧಿಗೆ ಸ್ವಯಂ ಅನಾವರಣ ಮಾಡಬೇಕು.
ಓಂ ಉಚ್ಚಾರ, ಧ್ಯಾನ ಹಾಗೂ ಯೋಗದಿಂದ ಹಲವು ರೋಗ ಮುಕ್ತಿ ಸಾಧ್ಯ. ಪುರಾತನ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು ಎಂದರು.

ಪಶ್ಚಿಮ ಬಂಗಾಳದ ಬೇಲೂರು ರಾಮಕೃಷ್ಣ ಮಿಷನ್ ವಿವೇಕಾನಂದ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆ ಮುಖ್ಯಸ್ಥ ಜಪಸಿದ್ಧಾನಂದ ಸ್ವಾಮೀಜಿ ಶಿಖರೋಪನ್ಯಾಸ ನೀಡಿದರು.
ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಭಟ್ ಗಾಳಿಮನೆ ಸ್ವಾಗತಿಸಿ, ಅನಘಾ, ಚೈತ್ರಾ, ಸುನ್ನಿಧಿ ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿನಿ ಪ್ರತೀಕ್ಷಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸಿಂಧು ಭಟ್ ನಿರೂಪಿಸಿ, ಸಿವಿಲ್ ವಿಭಾಗದ ಉಪನ್ಯಾಸಕ ಡಾ ರಮೇಶ್ ರಾವ್ ವಂದಿಸಿದರು.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಕರಾವಳಿ ಕಾರ್ಕಳ

ಕಾರ್ಕಳ ತಾಲೂಕಿನ 27 ಗ್ರಾ. ಪಂ. ಅಧ್ಯಕ್ಷ – ಉಪಾಧ್ಯಕ್ಷತೆಗೆ ಮೀಸಲಾತಿ ಪ್ರಕಟ: ಯಾರಿಗೆ ಸ್ಥಾನ?

ಕಾರ್ಕಳ ತಾಲೂಕಿನ 27 ಗ್ರಾ. ಪಂ. ಅಧ್ಯಕ್ಷ – ಉಪಾಧ್ಯಕ್ಷತೆಗೆ ಮೀಸಲಾತಿ ಪ್ರಕಟ: ಯಾರಿಗೆ ಸ್ಥಾನ?

NAMMUR EXPRESS NEWS
ಕಾರ್ಕಳ: ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ 2020ಕ್ಕೆ ಸಂಬಂಧಿಸಿ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಚುನಾವಣೆ ಕುರಿತು ಮೀಸಲಾತಿ ಪ್ರಕಟವಾಗಿದೆ.
ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್,ಅಪರ‌ಜಿಲ್ಲಾಧಿಕಾರಿ ಬೀಣಾ ಬಿ.ಎಂ, ತಹಶೀಲ್ದಾರ್ ಅನಂತಶಂಕರ್.ಬಿ. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್, ಎನ್ ಐ.ಸಿ ಮಂಜುನಾಥ, ಕಂದಾಯ ನಿರೀಕ್ಷಕ ಶಿವಪ್ರಸಾದ್, ಎಲ್ಲಾ ಗ್ರಾಮ ಪಂಚಾಯತಿಗಳ ಗ್ರಾಮಾಭಿವ್ರದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು.

ಯಾವ ಗ್ರಾಮ ಪಂಚಾಯತ್ ಯಾರಿಗೆ?

  • ಕಡ್ತಲ : ಅಧ್ಯಕ್ಷ – ಹಿಂದುಳಿದ ವರ್ಗ (ಬಿ) , ಉಪಾಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ
  • ಮರ್ಣೆ : ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ (ಬಿ) ಮಹಿಳೆ
  • ಹಿರ್ಗಾನ : ಅಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ ಉಪಾಧ್ಯಕ್ಷ – ಸಾಮಾನ್ಯ
  • ಶಿರ್ಲಾಲು : ಅಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ ಉಪಾಧ್ಯಕ್ಷ – ಅನುಸೂಚಿತ ಜಾತಿ ಮಹಿಳೆ
  • ಕೆರ್ವಾಶೆ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ
  • ಮಾಳ : ಅಧ್ಯಕ್ಷ – ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ ಸಾಮಾನ್ಯ ಮಹಿಳೆ
  • ಮುಡಾರು : ಅಧ್ಯಕ್ಷ – ಹಿ೦ದುಳಿದ ವರ್ಗ (ಬಿ) ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ
  • ದುರ್ಗಾ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ ವರ್ಗ ಎ
  • ಕುಕ್ಕುಂದೂರು : ಅಧ್ಯಕ್ಷ – ಅನುಸೂಚಿತ ಜಾತಿ, ಉಪಾಧ್ಯಕ್ಷ – ಹಿಂದುಳಿದ (ಎ) ಮಹಿಳೆ
  • ಎರ್ಲಪಾಡಿ : ಅಧ್ಯಕ್ಷ – ಸಾಮಾನ್ಯ ಉಪಾಧ್ಯಕ್ಷ – ಹಿ೦ದುಳಿದ ವರ್ಗ (ಎ) ಮಹಿಳೆ
  • ಬೈಲೂರು : ಅಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ,ಉಪಾಧ್ಯಕ್ಷ – ಸಾಮಾನ್ಯ
  • ನೀರೆ : ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
  • ಪಳ್ಳಿ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ
  • ಕಲ್ಯಾ : ಅಧ್ಯಕ್ಷ – ಅನುಸೂಚಿತ ಜಾತಿ ಮಹಿಳೆ ಉಪಾಧ್ಯಕ್ಷ – ಹಿಂದುಳಿದ ವರ್ಗ ಬಿ
  • ನಿಟ್ಟೆ : ಅಧ್ಯಕ್ಷ – ಅನುಸೂಚಿತ ಜಾತಿ ಮಹಿಳೆ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
  • ಸಾಣೂರು : ಅಧ್ಯಕ್ಷ – ಸಾಮಾನ್ಯ ಉಪಾಧ್ಯಕ್ಷ
  • ಮಿಯ್ಯಾರು : ಅಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ
  • ನಲ್ಲೂರು : ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳ
  • ಈದು : ಅಧ್ಯಕ್ಷ – ಸಾಮಾನ್ಯ ಉಪಾಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ
  • ರೆಂಜಾಳ : ಅಧ್ಯಕ್ಷ – ಸಾಮಾನ್ಯ ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
  • ಇರ್ವತ್ತೂರು : ಅಧ್ಯಕ್ಷ – ಸಾಮಾನ್ಯ ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
  • ಬೋಳ : ಅಧ್ಯಕ್ಷ – ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ ಸಾಮಾನ್ಯ ಮಹಿಳೆ
  • ಕಾಂತಾವರ : ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ -ಹಿಂದುಳಿದ ವರ್ಗ (ಎ)
  • ಬೆಳ್ಮಣ್ : ಅಧ್ಯಕ್ಷ – ಸಾಮಾನ್ಯ ಮಹಿಳೆ ಉಪಾಧ್ಯಕ್ಷ -ಸಾಮಾನ್ಯ
  • ನಂದಳಿಕೆ : ಅಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ,ಉಪಾಧ್ಯಕ್ಷ-ಸಾಮಾನ್ಯ
  • ಇನ್ನಾ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಅನುಸೂಚಿತ ಜಾತಿ
  • ಮುಂಡ್ಕೂರು : ಅಧ್ಯಕ್ಷ – ಹಿಂದುಳಿದ ವರ್ಗ ಎ ಉಪಾಧ್ಯಕ್ಷ – ಅನುಸೂಚಿತ ಜಾತಿ ಮಹಿಳೆ

ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!

HOW TO APPLY : NEET-UG COUNSELLING 2023

Tunga college thirthahalli

Categories
ಕರಾವಳಿ ಕಾರ್ಕಳ

ಪರಶುರಾಮ ಥೀಂ ಪಾರ್ಕ್ ಭೇಟಿ: ತಾತ್ಕಾಲಿಕ ನಿಷೇಧ!

ಪರಶುರಾಮ ಥೀಂ ಪಾರ್ಕ್ ಭೇಟಿ: ತಾತ್ಕಾಲಿಕ ನಿಷೇಧ!
– ಮೂರ್ತಿ ಬಲಪಡಿಸುವಿಕೆ, ಸಿಡಿಲು ನಿರೋಧಕ ಅಳವಡಿಕೆ ಕಾಮಗಾರಿ
– ಸೆಪ್ಟೆಂಬರ್ ಅಂತ್ಯದವರೆಗೆ ಪ್ರವಾಸಿಗರಿಗೆ ನಿಷೇಧ
– ದೇವಸ್ಥಾನದ ನೌಕರರಿಗೆ ಆರೋಗ್ಯ ವಿಮೆ ಸೌಲಭ್ಯ

NAMMUR EXPRESS NEWS
ಕಾರ್ಕಳ: ಕಾರ್ಕಳ ತಾಲೂಕು ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಶುರಾಮ ಥೀಂ ಪಾರ್ಕ್ನಲ್ಲಿ ಪರಶುರಾಮ ಮೂರ್ತಿಯನ್ನು ಬಲಪಡಿಸುವ, ಮೂರ್ತಿಗೆ ಸಿಡಿಲು ನಿರೋಧಕವನ್ನು ಅಳವಡಿಸುವ, ಮೂರ್ತಿಗೆ ತುಕ್ಕು ನಿರೋಧಕ ಲೇಪನದ ಹಾಗೂ ಇನ್ನಿತರ ಮುಕ್ತಾಯದ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ಜೂನ್ 26 ರಿಂದ ಸೆಪ್ಟಂಬರ್ ಅಂತ್ಯದವರೆಗೆ ಪರಶುರಾಮ ರ್ಥೀಂ ಪಾರ್ಕ್ಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ ಎಂದು ಕಾರ್ಕಳ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇವಸ್ಥಾನದ ನೌಕರರಿಗೆ ಆರೋಗ್ಯ ವಿಮೆ ಸೌಲಭ್ಯ

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದ ಜಿಲ್ಲೆಯ ಪ್ರವರ್ಗ-ಸಿ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಆರೋಗ್ಯ ವಿಮೆ ಸೌಲಭ್ಯ ಪಡೆಯಲು, ನೌಕರರ ಹೆಸರು, ಹುದ್ದೆಗೆ ಸೇರಿದ ದಿನಾಂಕ, ಹುಟ್ಟಿದ ದಿನಾಂಕ, ಬ್ಯಾಂಕಿನ ಹೆಸರು, ಬ್ಯಾಂಕ್ ಖಾತೆಯ ಸಂಖ್ಯೆ, ಐ.ಎಫ್.ಎಸ್.ಸಿ ಕೋಡ್ ವಿವರವನ್ನು ಜೂನ್ 26 ರ ಒಳಗಾಗಿ ಸಹಾಯಕ ಆಯುಕ್ತರ ಕಚೇರಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂ.ಸಂಖ್ಯೆ: 0820-2575660 ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!

HOW TO APPLY : NEET-UG COUNSELLING 2023

Tunga college thirthahalli

Categories
ಕರಾವಳಿ ಕಾರ್ಕಳ ಶಿಕ್ಷಣ

ಕ್ರಿಯೇಟಿವ್ ಕಾಲೇಜಲ್ಲಿ ಯೋಗ ದಿನದ ರಂಗು

ಕ್ರಿಯೇಟಿವ್ ಕಾಲೇಜಲ್ಲಿ ಯೋಗ ದಿನದ ರಂಗು
– ಯೋಗಾಭ್ಯಾಸದಿಂದ ಆತ್ಮವಿಶ್ವಾಸ ಹೆಚ್ಚಳ: ವಿದ್ವಾನ್‌ ಗಣಪತಿ ಭಟ್‌
– ರೋಗ ಮುಕ್ತಿಗೆ ಯೋಗವೂ ಮದ್ದು: ಅಶ್ವತ್‌.ಎಸ್‌.ಎಲ್‌

NAMMUR EXPRESS NEWS
ಕಾರ್ಕಳ: ಯೋಗಾಭ್ಯಾಸದಿಂದ ಸದೃಢ ದೇಹ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಕ್ರಿಯೇಟಿವ್‌ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ಹೇಳಿದ್ದಾರೆ.
ಕಾರ್ಕಳ ಕ್ರಿಯೇಟಿವ್‌ ಪಿ ಯು ಕಾಲೇಜಿನಲ್ಲಿ ನಡೆದ ವಿಶ್ವ ಯೋಗ ದಿನದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿನಿತ್ಯ ಯೋಗ ಮತ್ತು ಸೂರ್ಯ ನಮಸ್ಕಾರಗಳನ್ನು ಮಾಡುವುದರಿಂದ ಶರೀರ ಮತ್ತು ಮನಸ್ಸು ಪ್ರಫುಲ್ಲಗೊಳ್ಳುವುದರ ಜೊತೆಗೆ ಆತ್ಮವಿಶ್ವಾಸ, ಏಕಾಗ್ರತೆ ಹೆಚ್ಚುತ್ತದೆ. ಇದರಿಂದ ಸ್ವಸ್ಥ ಮನಸ್ಸು, ಸುಂದರ ಬದುಕು, ರೋಗ ರಹಿತ ಜೀವನ ನಡೆಸಬಹುದಾಗಿದೆ ಎಂದರು.

ಜೂನ್‌ 21ನ್ನು ಅಂತರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸುವ ಮೂಲಕ ಇಡೀ ಜಗತ್ತೇ ಯೋಗವನ್ನು ಒಪ್ಪಿಕೊಂಡಿದೆ. ಇದರಿಂದ ಆರೋಗ್ಯಪೂರ್ಣ ವ್ಯಕ್ತಿತ್ವದೊಂದಿಗೆ, ವ್ಯಕ್ತಿಯ ವಯಕ್ತಿಕ ರೋಗ ಮುಕ್ತಿಯೂ ಆಗುವುದರಿಂದ ಎಲ್ಲರೂ ಯೋಗವನ್ನು ಪ್ರತಿದಿನ ಮಾಡುವಂತಾಗಬೇಕು ಎಂದು ಸಂಸ್ಥಾಪಕರಾದ ಅಶ್ವತ್‌.ಎಸ್‌.ಎಲ್‌ ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ರಿಯೇಟಿವ್‌ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ ನಿಲಯ ಪಾಲಕರು, ಉಪನ್ಯಾಸಕೇತರ ವರ್ಗದವರು ಯೋಗ ದಿನದಲ್ಲಿ ಪಾಲ್ಗೊಂಡರು.

ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!

HOW TO APPLY : NEET-UG COUNSELLING 2023

 

Categories
ಕರಾವಳಿ ಕಾರ್ಕಳ

ಕರಾವಳಿಯಲ್ಲಿ ಭಾರೀ ಮಳೆ ಅಲರ್ಟ್!

ಕರಾವಳಿಯಲ್ಲಿ ಭಾರೀ ಮಳೆ ಅಲರ್ಟ್!
– ಜೂನ್ 25ಕ್ಕೆ ಭಾರೀ ಮಳೆ,ಯೆಲ್ಲೋ ಅಲರ್ಟ್ ಘೋಷಣೆ
– ಕಾಪುವಿನಲ್ಲಿ ಜಾಸ್ತಿ, ಕಾರ್ಕಳದಲ್ಲಿ ಕಡಿಮೆ ಮಳೆ!

NAMMUR EXPRESS NEWS
ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ ಕುರಿತು ಉಡುಪಿ ಜಿಲ್ಲಾಡಳಿತ ಮಾಹಿತಿಯನ್ನು ನೀಡಿದೆ. ಜೂನ್ 25 ರಂದು ಭಾರೀ ಮಳೆ ಸುರಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ಜೂನ್ 21 ರಿಂದ ಜೂನ್ 24ರ ವರೆಗೆ ಉಡುಪಿ ಜಿಲ್ಲೆಯಲ್ಲಿ ಹಗುರ/ ಸಾಧಾರಣ ಮಳೆಯಾಗಲಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕನಿಷ್ಠ ಉಷ್ಣಾಂಶ 25.7 ಡಿಗ್ರಿ ಸೆಲ್ಸಿಯಸ್ ಇದ್ದು, ಗರಿಷ್ಠ ಉಷ್ಣಾಂಶ 32.6 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಸರಾಸರಿ 3.9 ಮಿ.ಮೀ. ಮಳೆ ಸುರಿದೆ. ಅದ್ರಲ್ಲೂ ಕಾಪುವಿನಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿದಿದೆ. ಕಾಪುವಿನಲ್ಲಿ 1.8 ಮಿ.ಮೀ ಮಳೆಯಾಗಿದ್ದರೆ, ಹೆಬ್ರಿಯಲ್ಲಿ 9.7 ಮಿ.ಮೀ, ಬೈಂದೂರು 3.2 ಮಿ.ಮೀ, ಕುಂದಾಪುರ 2.7 ಮೀ.ಮೀ, ಬ್ರಹ್ಮಾವರ 2.4 ಮಿ.ಮೀ, ಉಡುಪಿ 1.7 ಮೀ.ಮೀ ಮಳೆಯಾಗಿದ್ದರೆ, ಕಾರ್ಕಳದಲ್ಲಿ ಅತೀ ಕಡಿಮೆ 0.8 ಮೀ.ಮೀ. ಮಳೆಯಾಗಿದೆ.

ಮುಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಗಂಟೆಗೆ 40 ರಿಂದ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆಯನ್ನು ನೀಡಿದೆ.

Categories
ಕರಾವಳಿ ಕಾರ್ಕಳ

ಕ್ರಿಯೇಟಿವ್‌ ನಿನಾದ ಸಂಚಿಕೆ 4, ವಿಶೇಷ ಪುರವಣಿ ಬಿಡುಗಡೆ

ಕ್ರಿಯೇಟಿವ್‌ ನಿನಾದ ಸಂಚಿಕೆ 4, ವಿಶೇಷ ಪುರವಣಿ ಬಿಡುಗಡೆ
– ಕ್ರಿಯಾಶೀಲ ಮನಸ್ಸುಗಳನ್ನು ಕಟ್ಟುವ ಮೂಲಕ ಕ್ರಿಯೇಟಿವ್ ಕಾಲೇಜಿನ ವಿಶೇಷ ಪುರವಣಿ
– ಒಂದೇ ಸೂರಿನಡಿ ಯಶಸ್ಸಿನ ಆಯ್ಕೆಗೆ ಕ್ರಿಯೇಟಿವ್‌ ಮುಂಚೂಣಿ: ಪ್ರಾಂಶುಪಾಲ ವಿದ್ವಾನ್‌ ಗಣಪತಿ ಭಟ್‌

NAMMUR EXPRESS NEWS
ಕಾರ್ಕಳ: ಕ್ರಿಯಾಶೀಲ ಮನಸ್ಸುಗಳನ್ನು ಕಟ್ಟುವುದರ ಮೂಲಕ ಸಮಾಜಮುಖಿ ಚಿಂತನೆ ಹಾಗೂ ಶೈಕ್ಷಣಿಕ ಕ್ರಾಂತಿಯ ಮಹಾತ್ವಾಕಾಂಕ್ಷೆಯೊಂದಿಗೆ
ಆರಂಭಿಸಲಾದ “ಕ್ರಿಯೇಟಿವ್‌ ನಿನಾದ”ದ ನಾಲ್ಕನೇ ಸಂಚಿಕೆ ಹಾಗೂ ವಿಶೇಷ ಪುರವಣಿಯನ್ನು ಬಿಡುಗಡೆಗೊಳಿಸಲಾಯಿತು.
ಪತ್ರಿಕೆಯನ್ನು ಅನಾವರಣಗೊಳಿಸಿ ಮಾತನಾಡಿದ ಸಂಸ್ಥಾಪಕರಾದ ಡಾ.ಗಣನಾಥ ಶೆಟ್ಟಿಯವರು ಕ್ರಿಯಾತ್ಮಕ ಮತ್ತು ಸೃಜನ ಶೀಲತೆಯನ್ನು ಒಂದುಗೂಡಿಸಿ ಹೊಸ ವಿಚಾರವಂತಿಕೆಗಳನ್ನು ಮೂಡಿಸುವ ಸಂಚಿಕೆ ಸಮಾಜದಲ್ಲಿ ಜಾಗೃತಿ ಮೂಡಿಸುವಂತಾಗಲಿ ಎಂದು ಹಾರೈಸಿದರು.

ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ಒಂದೇ ಸೂರಿನಡಿ ಯಶಸ್ಸಿನ ಆಯ್ಕೆಗೆ ಕ್ರಿಯೇಟಿವ್‌ ಮುಂಚೂಣಿಯಲ್ಲಿದೆ ಎಂದು ಅಭಿಪ್ರಾಯ ಪಟ್ಟರು.
ಸಂಸ್ಥಾಪಕರಾದ ಅಮೃತ್‌ ರೈ ಮಾತನಾಡಿ ಕ್ರಿಯಾಶೀಲ ವ್ಯಕ್ತಿತ್ವಗಳಿಗೆ ವಿಶೇಷ ಅಭಿವ್ಯಕ್ತಿ ನೀಡುವ ಮೂಲಕ ನಿನಾದ ಮುನ್ನಡಿಯಾಗಿದೆ.

ಹೊಸ ಯೋಚನೆ, ಯೋಜನೆಗಳೊಂದಿಗೆ ಕಾರ್ಯ ಪ್ರವೃತ್ತರಾಗಲಿದ್ದೇವೆ ಎಂದರು ಈ ಸಂದರ್ಭದಲ್ಲಿ ಕ್ರಿಯೇಟಿವ್‌ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಅಶ್ವತ್ ಎಸ್‌. ಎಲ್‌, ಆದರ್ಶ ಎಂ. ಕೆ, ವಿಮಲ್ ರಾಜ್‌ ಹಾಗೂ “ನಿನಾದ” ಸಂಪಾದಕರಾದ ರಾಘವೇಂದ್ರ ರಾವ್‌, ಉಪನ್ಯಾಸಕರಾದ ವಿನಾಯಕ ಜೋಗ್‌, ರಾಜೇಶ್‌ ಶೆಟ್ಟಿ, ರಾಮಕೃಷ್ಣ ಹೆಗಡೆ, ಪಿ ಆರ್‌ ಒ ಲಿಶನ್‌ ಗೌಡ ಮತ್ತು ನರೇಶ್‌ ಕುಮಾರ್ ಉಪಸ್ಥಿತರಿದ್ದರು.

[embedyt] https://www.youtube.com/watch?v=R31oj3H0qz4%5B/embedyt%5D

Categories
ಕರಾವಳಿ ಕಲಬುರಗಿ ಕಾರ್ಕಳ ಕೊಪ್ಪ ಚಿಕ್ಕಮಗಳೂರು ಜಿಲ್ಲಾ ವಾರ್ತೆ ತೀರ್ಥಹಳ್ಳಿ ದಾವಣಗೆರೆ ಬೆಂಗಳೂರು ಮಂಗಳೂರು ಮಲ್ನಾಡ್ ಮೈಸೂರು ರಾಜ್ಯ ಶಿಕ್ಷಣ

ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳು IIT ಗೆ ಅರ್ಹತೆ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹಟಿ

ಕಾರ್ಕಳ : ದೇಶದ ಪ್ರತಿಷ್ಠಿತ ಐ.ಐ.ಟಿ ಸಂಸ್ಥೆಯಲ್ಲಿ ಬಿ.ಇ (B.E) ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಜೆ.ಇ.ಇ (JEE) ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ಉದ್ಭವ್‌ ಎಂ ಆರ್‌, ಜಾಗೃತಿ ಕೆ ಪಿ, ಆದಿತ್ಯ ವಿ ಹೊಳ್ಳ, ಅಭಯ್‌ ಎಸ್‌ ಎಸ್‌, ಕಾರ್ತಿಕ್‌ ಕೃಷ್ಣಮೂರ್ತಿ ಹೆಗಡೆ, ಸೂರಜ್‌ ಕುಮಾರ್‌ ಎನ್‌, ಪ್ರಣವ್‌ ಪಿ ಸಂಜೀ ಉನ್ನತ ರ‍್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಅದರಲ್ಲಿ ಉದ್ಭವ್‌ ಎಂ ಆರ್‌ PREP-ST ಯಲ್ಲಿ 3 ನೇ ರ‍್ಯಾಂಕ್‌, ಜಾಗೃತಿ ಕೆ ಪಿ 24 ನೇ ರ‍್ಯಾಂಕ್‌ ಗಳಿಸಿ ವಿಶೇಷ ಸಾಧನೆ ಗೈದಿದ್ದಾರೆ.

ಪರೀಕ್ಷೆಗೆ ಕುಳಿತ ಕ್ರಿಯೇಟಿವ್‌ ನ ಕೇವಲ 12 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ದೇಶದ ಪ್ರತಿಷ್ಠಿತ 23 IIT ಗಳ ಪ್ರವೇಶಕ್ಕೆ ನಡೆಯುವ ಆಯ್ಕೆ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ. ಸಂಸ್ಥೆಯ ಆರಂಭದ ವರ್ಷಗಳಲ್ಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಉಪನ್ಯಾಸಕೇತರ ವರ್ಗದವರು, ಜೆಇಇ ಸಂಯೋಜಕರಾದ ನಂದೀಶ್ ಹೆಚ್‌ ಬಿ ಮತ್ತು ತಿರುಮಲ ರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.