Categories
ಕುಂದಾಪುರ

ಕುಂದಾಪುರ ಸುರೇಂದ್ರ ಶೆಟ್ಟಿಯವರ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನ!

ಕುಂದಾಪುರ ಸುರೇಂದ್ರ ಶೆಟ್ಟಿಯವರ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನ!

– ಕಾರು ಜಖಂ: ಓರ್ವ ಬಂಧನ, ಇನ್ನೋರ್ವ ಪರಾರಿ
– ಸಹನಾ ಸಮೂಹ ಸಂಸ್ಥೆಗಳನ್ನು ಸ್ಥಾಪಿಸಿ ಸಾಧನೆ: ಏನಿದು ಘಟನೆ?

NAMMUR EXPRESS NEWS

ಕುಂದಾಪುರ: ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಕಳೆದ 10 ವರ್ಷಗಳಿಂದ ಸಹನಾ ಸಮೂಹ ಸಂಸ್ಥೆಗಳನ್ನು ನಡೆಸುತ್ತಿರುವ ಸುರೇಂದ್ರ ಶೆಟ್ಟಿಯವರ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನಿಸಿ, ಕಾರು ಜಖಂಗೊಳಿಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಇನ್ನೋರ್ವ ಪರಾರಿಯಾದ ಘಟನೆ ಜು.7 ರಂದು ನಡೆದಿದೆ. ಎಸ್‌ಎಸ್‌ಎಸ್‌ ಟ್ರಾವೆಲ್ಸ್ ಎಂಬ ಸಂಸ್ಥೆಯ ಮಾಲೀಕ ಸತೀಶ ಶೆಟ್ಟಿ (53) ಬಂಧಿತ ಆರೋಪಿಯಾಗಿದ್ದು ಪುತ್ರ ಸನ್ನಿಧಿ ಶೆಟ್ಟಿ ತಲೆಮರೆಸಿಕೊಂಡಿದ್ದಾನೆ.

ಏನಿದು ಘಟನೆ?

ಸಹನಾ ಸುರೇಂದ್ರ ಶೆಟ್ಟಿಯವರ ಪತ್ನಿಯವರ ಕುಂದಾಪುರ ನಗರದ ಎ.ಎಸ್ ಟ್ರೇಡರ್ ಎಂಬ ಕಟ್ಟಡದಲ್ಲಿ ಮಳೆ ನೀರಿನ ಕೆಲಸ ಮಾಡುತ್ತಿದ್ದು ಈ ಕೆಲಸದ ಬಗ್ಗೆ 1 ನೇ ಮಹಡಿಯಲ್ಲಿರುವ ಸತೀಶ ಶೆಟ್ಟಿ ಎಂಬಾತ ಅಸಮಧಾನ ಹೊಂದಿದ್ದು ಈ ವಿಚಾರವಾಗಿ ಸುರೇಂದ್ರ ಶೆಟ್ಟಿಯವರಿಗೆ ಕರೆ ಮಾಡಿ ಅವಾಚ್ಯವಾಗಿ ಬೈದಿದ್ದು ಜು.7 ರಂದು ಬೆಳಿಗ್ಗೆ ಕುಂದಾಪುರದ ಕೆ.ಎಸ್.ಆ‌ರ್.ಟಿ.ಸಿ ಡಿಪ್ಪೋ ಎದುರಿನ ಸರ್ವೀಸ್ ರಸ್ತೆಯಲ್ಲಿ ಸುರೇಂದ್ರ ಶೆಟ್ಟಿಯವರ ಕಾರಿಗೆ ತಮ್ಮ ಇನ್ನೋವಾ ಕಾರನ್ನು ಅಡ್ಡ ನಿಲ್ಲಿಸಿ ಕಬ್ಬಿಣದ ರಾಡ್ ಮೂಲಕ ಹಲ್ಲೆ ನಡೆಸಲು ಯತ್ನಿಸಿದ್ದು ಕಾರಿನ ಗ್ಲಾಸ್ ಹಾಗೂ ಬಾಗಿಲು ತೆಗೆಯದ್ದರಿಂದ ಕಾರಿನ ಡೋರಿಗೆ ಜಖಂ ಮಾಡಿದ್ದಲ್ಲದೆ ಪೋಲೀಸರಿಗೆ ದೂರು ನೀಡಿದ್ದಲ್ಲಿ ಕೊಲ್ಲುವುದಾಗಿ ಜೀವಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.

ಪ್ರಕರಣ ಸಂಬಂಧ ಕುಂದಾಪುರ ಪೊಲೀಸರು ಆರೋಪಿ ಸತೀಶ್ ಶೆಟ್ಟಿಯನ್ನು ಬಂಧಿಸಿನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನೋರ್ವ ಆರೋಪಿ ಸನ್ನಿಧಿ ಶೆಟ್ಟಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಸತೀಶ್‌ ಶೆಟ್ಟಿ ಮೇಲೆ ಈ ಹಿಂದೆಯೂ ವಂಚನೆ ಸಹಿತ ಇತರ ಪ್ರಕರಣಗಳ ಬಗ್ಗೆ ದೂರುಗಳಿರುವುದಾಗಿ ತಿಳಿದುಬಂದಿದೆ.ಇನ್ನು ದೂರು ನೀಡಿರುವ ಸುರೇಂದ್ರ ಶೆಟ್ಟಿಯವರು ಕಳೆದ ಹತ್ತು ವರ್ಷಗಳಿಂದ ಸಹನಾ ಸಮೂಹ ಸಂಸ್ಥೆಗಳನ್ನು ಸ್ಥಾಪಿಸಿ ಉದ್ಯಮ ಕ್ಷೇತ್ರದಲ್ಲಿ ಪ್ರಸಿದ್ಧಿಯಾಗಿದ್ದಾರೆ. ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಅವರು ಕೆಪಿಸಿಸಿ ಸದಸ್ಯರಾಗಿದ್ದಾರೆ. ಇನ್ನು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

Categories
ಉಡುಪಿ ಕುಂದಾಪುರ

ಉಡುಪಿಯಲ್ಲಿ ಮಳೆ ಜತೆ ಸುಂಟರಗಾಳಿ…!

ಉಡುಪಿಯಲ್ಲಿ ಮಳೆ ಜತೆ ಸುಂಟರಗಾಳಿ…!

– ಕುಂದಾಪುರ, ಬೈಂದೂರು ಭಾಗದಲ್ಲಿ ಭಾರೀ ಮಳೆ
– ಕಮಲಶಿಲೆ, ಮಾರನಕಟ್ಟೆ ದೇವಾಲಯಕ್ಕೆ ನೀರು
– ಹಲವು ಕಡೆ ಮನೆ, ರಸ್ತೆ ಜಲಾವೃತ: ಅಪಾಯದತ್ತ ಕರಾವಳಿ

NAMMUR EXPRESS NEWS

ಉಡುಪಿ: ಉಡುಪಿಯ ಅಮಾವಾಸ್ಯೆಬೈಲು ವ್ಯಾಪ್ತಿಯಲ್ಲಿ ಮಳೆ ಜತೆಗೆ ಭಾರೀ ಸುಂಟರಗಾಳಿ ಕಾಣಿಸಿಕೊಂಡಿದೆ.
ಭಾರೀ ಸುಂಟರಗಾಳಿಗೆ ರಟ್ಟಾಡಿ ಗ್ರಾಮದ ಕೃಷಿಕರು ಕಂಗಾಲಾಗಿದ್ದಾರೆ. ಅಪಾರ ಪ್ರಮಾಣದ ಮರ, ಮನೆಗಳಿಗೆ ಹಾನಿಯಾಗಿದೆ. ಭಾರಿ ಶಬ್ಧದೊಂದಿಗೆ ಸುಂಟರಗಾಳಿ ಅಪ್ಪಳಿಸಿದೆ. ಕೆಲವು ಹೊತ್ತು ಚಂಡಮಾರುತದಂತೆ ಸುಂಟರಗಾಳಿ ಭಾಸವಾಗಿದೆ. ಮೊದಲ ಬಾರಿಗೆ ಇಂತಹ ಅನುಭವಕ್ಕೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ರಟ್ಟಾಡಿಯಲ್ಲಿ ಏಕಾಏಕಿ ಸುಂಟರಗಾಳಿ ಕಾಣಿಸಿಕೊಂಡಿದೆ. ಡ್ರೋನ್‌ ಕ್ಯಾಮೆರಾ ಮೂಲಕ ಮರ, ಮನೆಗಳ ಹಾನಿ ಕುರಿತು ಅಂದಾಜು ಲೆಕ್ಕಚಾರ ನಡೆಸಿದ್ದಾರೆ. ಇನ್ನೂ ರಟ್ಟಾಡಿ ವ್ಯಾಪ್ತಿಯಲ್ಲಿರುವ ಸಾವಿರಾರು ಮರಗಳು ಧರಶಾಹಿಯಾಗಿವೆ. 5 ಸಾವಿರಕ್ಕೂ ಅಧಿಕ ಅಡಿಕೆ ಮರ, 2 ಸಾವಿರದಷ್ಟು ರಬ್ಬರ್‌ ಮರ ಹಾಗೂ ತೆಂಗಿಗೂ ಹಾನಿಯಾಗಿದೆ. ಅಪಾರ ಪ್ರಮಾಣದ ಮರಗಳು ಕತ್ತರಿಸಿದಂತೆ ನೆಲಕ್ಕುರುಳಿದೆ.

– ಕಮಲಶಿಲೆ ದೇವಾಲಯದಲ್ಲಿ ನೈಸರ್ಗಿಕ ಪುಣ್ಯಸ್ನಾನ

ಉಡುಪಿಯ ಕುಂದಾಪುರ ತಾಲೂಕಿನ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದೊಳಗೆ ಕುಬ್ಜ ನದಿ ನೀರು ಹರಿದಿದೆ. ಬೆಳಗಿನ ಜಾವ ಮೂರುವರೆ ಸುಮಾರಿಗೆ ದೇವಿಯ ಚರಣವನ್ನು ಕುಬ್ಜಾ ನದಿ ನೀರು ಸ್ಪರ್ಶ ಮಾಡಿದೆ. ಈ ಮೂಲಕ ದೇವಸ್ಥಾನದಲ್ಲಿ ನೈಸರ್ಗಿಕ ಪುಣ್ಯಸ್ನಾನ ನಡೆದಿದೆ. ಗರ್ಭಗುಡಿಗೆ ನೀರು ಬರುತ್ತಿದ್ದಂತೆ ಅರ್ಚಕರು ಮಂಗಳಾರತಿ ಮಾಡಿದ್ದಾರೆ. ವರ್ಷಂಪ್ರತಿ ಒಂದು ಬಾರಿ ಗರ್ಭಗುಡಿಗೆ ಕುಬ್ಜಾ ನದಿ ನೀರು ಬರುತ್ತದೆ. ಈ ನೈಸರ್ಗಿಕ ಪುಣ್ಯಸ್ನಾನಕ್ಕೆ ಭಕ್ತರು ಕಾತರದಿಂದ ಕಾಯುತ್ತಾರೆ. ಸದ್ಯ ನೀರು ಇಳಿಮುಖವಾಗಿ ದೇವಾಲಯದಿಂದ ತೆರವು ಮಾಡಲಾಗಿದೆ.
ಮಾರಣಕಟ್ಟೆಗೂ ನೀರು!: ಪ್ರಸಿದ್ಧ ದೇವಾಲಯ ಮಾರಣಕಟ್ಟೆಗೆ ನೀರು ನುಗ್ಗಿದೆ. ಕರಾವಳಿಯಲ್ಲಿ ಮಳೆ ಜತೆಗೆ ಕಡಲ ಅಬ್ಬರವೂ ಹೆಚ್ಚಾಗಿದೆ.

Categories
ಕುಂದಾಪುರ

ಬಾರ್ಕೂರು ರೋಟರಿಗೆ ನೂತನ ಸಾರಥಿಗಳು!

ಬಾರ್ಕೂರು ರೋಟರಿಗೆ ನೂತನ ಸಾರಥಿಗಳು!

– ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಬಿ, ಕಾರ್ಯದರ್ಶಿ ಹೆಚ್ ಅಜಿತ್ ಕುಮಾರ್ ಶೆಟ್ಟಿ
– ಪದಾಧಿಕಾರಿಗಳ ಆಯ್ಕೆ: ನೂತನ ಆಡಳಿತ ಮಂಡಳಿಗೆ ಶುಭಾಶಯಗಳು

NAMMUR EXPRESS NEWS
ಬ್ರಹ್ಮಾವರ: ಬಾರ್ಕೂರು ರೋಟರಿ ನೂತನ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಬಿ, ಕಾರ್ಯದರ್ಶಿ ಹೆಚ್ ಅಜಿತ್ ಕುಮಾರ್ ಶೆಟ್ಟಿ ಆಯ್ಕೆ ಆಗಿದ್ದಾರೆ.

ಪದಾಧಿಕಾರಿಗಳಾಗಿ ಯು ಕೆ ವಾಸುದೇವ್ ಶೆಟ್ಟಿ, ಆನಂದ ಶೆಟ್ಟಿ, ಕೆ ಬಾಬು ನಾಯಕ್, ಹರೀಶ್ ಕುಂದರ್, ಆರ್ ರತ್ನಾಕರ್ ಶೆಟ್ಟಿ, ಗಣೇಶ್ ಆಚಾರ್ಯ, ರಾಜು ಪೂಜಾರಿ, ಸುಧಾಕರ್ ರಾವ್, ಕಿಶೋರ್ ಶೆಟ್ಟಿ, ಜಯಶ್ರೀ ಶೆಟ್ಟಿ, ಶ್ರೀನಿವಾಸ್ ನೆಟ್ಟಿಗಾರ್, ಸತೀಶ್ ಲಿಮಿನ್, ಡಾ. ಸುರೇಶ್ ಶೆಟ್ಟಿ, ಪ್ರಕಾಶ್ ತಂತ್ರಿ, ಎ ರತ್ನಾಕರ್ ಶೆಟ್ಟಿ, ರತ್ನಾಕರ್ ಶೆಟ್ಟಿ ಬಿ, ಸೀತಾರಾಮ್ ಎಸ್ ಆಯ್ಕೆಯಾಗಿದ್ದಾರೆ.

ಯುವ ಸಂಘಟಕರಿಗೆ ಸಂಸ್ಥೆಯ ಹೊಣೆ

ಗಣೇಶ್ ಶೆಟ್ಟಿ ಅವರು ಹಲಸು ಮೇಳ ಸೇರಿದಂತೆ ಅನೇಕ ಕಾರ್ಯಕ್ರಮ ಆಯೋಜನೆ ಮೂಲಕ ಕರಾವಳಿಯಲ್ಲಿ ತಮ್ಮದೇ ಹೆಸರು ಹೊಂದಿದ್ದು, ಸ್ವದೇಶಿ ಆಯುರ್ವೇದ ಸಂಸ್ಥೆಯ ಮಾಲೀಕರಾಗಿ, ಸದ್ಗುರು ಆಯುರ್ವೇದ ಸಂಸ್ಥೆಯ ಕರಾವಳಿ ಮುಖ್ಯಸ್ಥರಾಗಿ, ನಮ್ಮೂರ್ ಬಾರ್ಕೂರು ಸಂಘಟಕರಾಗಿ, ಬೆಣ್ಣೆ ಕುದ್ರು ಗಣೇಶೋತ್ಸವದ ಅಧ್ಯಕ್ಷರಾಗಿ, ಯುವ ಉದ್ಯಮಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾರ್ಯದರ್ಶಿಯಾಗಿರುವ ಹೆಚ್ ಅಜಿತ್ ಕುಮಾರ್ ಶೆಟ್ಟಿ ಅವರು ಉದ್ಯಮಿಯಾಗಿ, ಸಂಘಟಕರಾಗಿ ಸಮಾಜಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಮತ್ತಷ್ಟು ಸೇವೆ ಮಾಡಲು ಅವಕಾಶ ಸಿಕ್ಕಿದೆ.

Categories
ಕುಂದಾಪುರ

ಇನ್ನೂ ಸಿಗದ ಯುವಕನ ಸುಳಿವು!

ಇನ್ನೂ ಸಿಗದ ಯುವಕನ ಸುಳಿವು!

– ಕುಂದಾಪುರದಲ್ಲಿ ಸಮುದ್ರಪಾಲಾಗಿರುವ ತಿಪಟೂರು ಮೂಲದ ಯುವಕ
– ಪುತ್ತೂರು: ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

NAMMUR EXPRESS NEWS
ಕುಂದಾಪುರ: ಕುಂದಾಪುರ ತಾಲೂಕಿನ ಬೀಜಾಡಿಯಲ್ಲಿ ಸ್ನೇಹಿತನ ಮದುವೆಗೆಂದು ಬಂದು ಸಮುದ್ರಪಾಲಾಗಿರುವ ತಿಪಟೂರು ಮೂಲದ ಟಿಆರ್‌ ಯೋಗೀಶ್‌(23) ಎಂಬ ಯುವಕನ ಪತ್ತೆಗೆ ಇನ್ನೂ ಶೋಧ ಕಾರ್ಯ ಮುಂದುವರಿದಿದೆ.
ಕಳೆದ ಬುಧವಾರ ಸಂಜೆ ಯೋಗೀಶ್‌ ಇಲ್ಲಿನ ಸಮುದ್ರ ತೀರದಲ್ಲಿ ನೀರಲ್ಲಿ ಆಟವಾಡುವುದಕ್ಕೆ ತೆರಳಿದ್ದು ಆ ವೇಳೆ ಅಲೆಗಳ ಅಲೆಗೆ ಕೊಚ್ಚಿ ಹೋಗಿದ್ದರು. ಯೋಗೀಶ್‌ ಮೃತಪಟ್ಟಿರುವುದಾಗಿ ಶಂಕಿಸಲಾಗಿದ್ದು, ಕಳೆದ ಮೂರು ದಿನಗಳಿಂದ ಹುಡುಕಾಡುತ್ತಿದ್ದರೂ ಮೃತದೇಹದ ಯಾವುದೇ ಸುಳಿವು ಲಭ್ಯವಾಗಿಲ್ಲ.
ಕುಂದಾಪುರದ ಗೋಪಾಡಿ-ಬೀಜಾಡಿಯ ಸ್ನೇಹಿತನ ಮನೆಯಲ್ಲಿನ ವಿವಾಹ ಕಾರ್ಯಕ್ರಮಕ್ಕೆ ಬಂದಿದ್ದ ಇಬ್ಬರು ಯುವಕರು ಸಮುದ್ರ ವಿವಾರಕ್ಕೆ ತೆರಳಿದ್ದರು. ಆ ಪೈಕಿ ಸಂದೀಪ್‌ ಎನ್ನುವ ಯುವಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ, ಯೋಗೀಶ್‌ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಯೋಗೀಶ್‌ ಐಟಿಐ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ಬುಧವಾರ ಸಂಜೆಯವರೆಗೂ ಕಾಣೆಯಾದ ಯುವಕನ ಹುಡುಕಾಟಕ್ಕೆ ಪೊಲೀಸರು, ಮೀನುಗಾರರು, ಸ್ಥಳೀಯರು ಹರಸಾಹಸಪಟ್ಟಿದ್ದು, ಗುರುವಾರ ಬೆಳಗ್ಗಿನಿಂದಲೂ ಮೀನುಗಾರರು, ಪೊಲೀಸರು, ಕರಾವಳಿ ಕಾವಲು ಪಡೆಯುವರು, ಸ್ಥಳೀಯರು ಸತತ ಹುಡುಕಾಟ ನಡೆಸಿದರೂ ಕೂಡ ಪತ್ತೆಯಾಗದಿರುವುದು ಕುಟುಂಬಸ್ಥರಲ್ಲಿ ಮತ್ತಷ್ಟು ದುಃಖಕ್ಕೆ ಕಾರಣವಾಗಿದೆ. ಕಡಲು ಪ್ರಕ್ಷುಬದ್ಧಗೊಂಡಿರುವ ಕಾರಣ ಮೃತದೇಹ ಪತ್ತೆಯಾಗಿಲ್ಲ ಎಂದು ಸ್ಥಳೀಯ ಮೀನುಗಾರರು ಹೇಳಿದ್ದಾರೆ. ಕುಂದಾಪುರ ಪೊಲೀಸ್‌ ಠಾಣಾ ನಿರೀಕ್ಷಕ ಯುಬಿ ನಂದಕುಮಾರ್‌, ಪಿಎಸ್‌ಐ ಪ್ರಸಾದ್‌ ಕುಮಾರ್‌ ಹಾಗೂ ಸಿಬ್ಬಂದಿ ಕೂಡ ಭೇಟಿ ನೀಡಿದ್ದಾರೆ.

ಪುತ್ತೂರಿನಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹೋಟೆಲ್‌ವೊಂದರಲ್ಲಿ ಸಪ್ಲೈಯರ್‌ ಆಗಿರುವ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ಶುಕ್ರವಾರ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ನೆಲ್ಲಿಕಟ್ಟೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ ಬೊಳುವಾರಿನಲ್ಲಿರುವ ಹೋಟೆಲ್‌ನಲ್ಲಿ ಸಪ್ಲೈಯರ್‌ ಆಗಿ ಕೆಲಸ ಮಾಡುತ್ತಿದ್ದ ಶಿವಣ್ಣ(45) ಕಾಣೆಯಾದವರು. ಅವರು ಜೈ.10ರಂದು ಪೇಟೆಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವರು ಹಿಂದುರುಗಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ದೂರುನಲ್ಲಿ ಉಲ್ಲೇಖಿಸಲಾಗಿದೆ.
ಶಿವಪ್ಪ ಅವರ ಪತ್ನಿ ಗೀತಾ ಅವರು ಪುತ್ತೂರು ನಗರ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ನನ್ನ ಗಂಡ ಶಿವಪ್ಪ ಯಾನೆ ಶಿವಣ್ಣ ಬೊಳುವಾರಿನ ಹೋಟೆಲ್‌ನಲ್ಲಿ ಸಪ್ಲೈಯರ್‌ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದರು. ಜೂ.10ರಂದು ಬೆಳಗ್ಗೆ ಅವರು ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ಹಿಂದುರುಗಿ ಬಂದಿಲ್ಲ. ಈ ಹಿಂದೆಯೂ ಇದೇರೀತಿ ಮನೆಯಿಂದ ಹೋದವರು ಒಂದು ವಾರ ಕಳೆದು ಬಂದಿದ್ದರು. ಹೀಗಾಗಿ, ಅವರು ಹಿಂದುರುಗಿ ಬರಬಹುದೆಂದು ತಿಳಿದುಕೊಂಡಿದ್ದೆ. ಆದರೆ, ಈ ಬಾರಿ ಅವರು ಮನೆಯಿಂದ ಹೋಗಿ 10 ದಿನ ಕಳೆದರೂ ಹಿಂದಿರುಗಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Categories
ಕುಂದಾಪುರ

ಎದೆ ಹಾಲು ಕುಡಿದ ಬಳಿಕ ಹಸುಗೂಸು ಸಾವು!

ಎದೆ ಹಾಲು ಕುಡಿದ ಬಳಿಕ ಹಸುಗೂಸು ಸಾವು!

– ಕುಂದಾಪುರದಲ್ಲಿ ಅಪರೂಪದ ಘಟನೆ
– ಏನಿದು ಘಟನೆ..? ಮಗು ಯಾಕೆ ಮೃತಪಟ್ಟಿತು?

NAMMUR EXPRESS NEWS
ಕುಂದಾಪುರ: ಕುಂದಾಪುರದಲ್ಲಿ ಕೇವಲ 43 ದಿನದ ಹಸುಗೂಸು ತಾಯಿಯ ಎದೆ ಹಾಲು ಕುಡಿದ ಕೆಲವೇ ಹೊತ್ತಿನಲ್ಲಿ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.

ಗಂಗೊಳ್ಳಿಯ ಗುಜ್ಜಾಡಿ ಗ್ರಾಮದ ಲಕ್ಷ್ಮಣ ಎಂಬವರ ಪುತ್ರಿ ನೇತ್ರಾವತಿ ಅವರ ಮಗು ಈ ರೀತಿ ಮೃತಪಟ್ಟಿದೆ. ಮಂಗಳವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ತಾಯಿ ಎದೆಹಾಲು ಕುಡಿಸಲಾಗಿದ್ದು, ಬಳಿಕ ಅಜ್ಜಿಯು ಮಗುವನ್ನು ನೋಡಲು ಹೋದಾಗ ಉಸಿರಾಡುತ್ತಿರಲಿಲ್ಲ. ಅನುಮಾನ ಬಂದು ಮೈಯನ್ನು ಮುಟ್ಟಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕೂಡಲೇ ಕುಂದಾಪುರದ ವಿನಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮಗು ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ.

Categories
ಕರಾವಳಿ ಕುಂದಾಪುರ ಚುನಾವಣಾ ಸುದ್ದಿ ರಾಜಕೀಯ

ನಟ ರಿಷಬ್ ಶೆಟ್ಟಿ ಸಹಿತ ಗಣ್ಯರಿಂದ ಮತದಾನ!

ನಟ ರಿಷಬ್ ಶೆಟ್ಟಿ ಸಹಿತ ಗಣ್ಯರಿಂದ ಮತದಾನ!
– ಕರಾವಳಿಯ ಬೈಂದೂರಿನಲ್ಲಿ ಕೂಡ ಚುನಾವಣೆ ಜೋಷ್
– ಬೈಂದೂರು, ಕುಂದಾಪುರ ಶಾಸಕರ ಮತ ದಾನ

NAMMUR EXPRESS NEWS
ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆಯಿತು. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಪೈಪೋಟಿ ಇದ್ದು, ಈಶ್ವರಪ್ಪ ಪರ ಕೂಡ ಇಲ್ಲಿ ಒಳ್ಳೆ ಅಭಿಪ್ರಾಯ ಇತ್ತು. ಆದರೆ ಮತದಾರ ಏನು ಮಾಡಿದ್ದಾನೆ ಎಂಬುದು ಕುತೂಹಲ ಮೂಡಿಸಿದೆ. ಬೈಂದೂರು ಕ್ಷೇತ್ರದ 246 ಮತಗಟ್ಟೆಗಳಲ್ಲಿ 43 ಸೂಕ್ಷ್ಮ ಮತಗಟ್ಟೆಗಳಾಗಿವೆ. ಪೈಕಿ 19 ಮತಗಟ್ಟೆಗಳು ನಕ್ಸಲ್ ಬಾಧಿತ ಪ್ರದೇಶಗಳ ವ್ಯಾಪ್ತಿಯಲ್ಲಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಎಲ್ಲಾ 19 ಮತಗಟ್ಟೆಗಳಿಗೆ ಸಶಸ್ತ್ರ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ಬೈಂದೂರು, ಕುಂದಾಪುರ ಶಾಸಕರ ಮತ ದಾನ

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಬಿಜೂರು ಗ್ರಾಮದ ಕಂಚಿಕಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಅಮಾಸಬೈಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು. ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕಟ್‌ಬೆಲ್ತೂರು ಗ್ರಾಮದ ಸರಕಾರಿ ಶಾಲೆಯಲ್ಲಿ ಹಾಗೂ ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಬೆಳ್ಳಾಲ ಮೂಡುಮುಂದ ಶಾಲೆಯಲ್ಲಿ ಮತಚಲಾಯಿಸಿದರು. ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕೆರಾಡಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದ್ದಾರೆ.

Categories
ಕರಾವಳಿ ಕುಂದಾಪುರ

ಕುಂದಾಪುರದಲ್ಲಿ ಭೀಕರ ಅಪಘಾತಕ್ಕೆ ಯುವತಿ ಬಲಿ!

ಕುಂದಾಪುರದಲ್ಲಿ ಭೀಕರ ಅಪಘಾತಕ್ಕೆ ಯುವತಿ ಬಲಿ!
– ಮರಕ್ಕೆ ಡಿಕ್ಕಿಯಾದ ಇನ್ನೋವಾ ಕಾರು: ಸಂಪೂರ್ಣ ಪುಡಿ ಪುಡಿ
– 4 ಜನರ ಸ್ಥಿತಿ ಗಂಭೀರ: ಪ್ರವಾಸಕ್ಕೆ ಬಂದಿದ್ದ ವೇಳೆ ದುರಂತ

ಕುಂದಾಪುರ ವರದಿ: ಗಣೇಶ್
NAMMUR EXPRESS NEWS
ಕುಂದಾಪುರ: ಕುಂದಾಪುರ ತಾಲೂಕು ಗುಡ್ಡೆಅಂಗಡಿ ರಾ.ಹೆ. ಕೊಯ್ಕಾಡಿ ತಿರುವಿನಲ್ಲಿ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಹೊಂಡಕ್ಕೆ ಬಿದ್ದ ಪರಿಣಾಮ ಓರ್ವ ಯುವತಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ.

ಅಪಘಾತ ಹೇಗೆ?

ಅಪಘಾತದಲ್ಲಿ ಬೆಂಗಳೂರಿನ ಫೋನ್ ಪೇ ಖಾಸಗಿ ಕಂಪೆನಿಯ ಉದ್ಯೋಗಿ ಕೀರ್ತಿ (25) ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಇನ್ನೋವಾ ಕಾರಿನಲ್ಲಿ ಬೆಂಗಳೂರು ಮೂಲದ ಸ್ನೇಹಿತರಾದ ವಿಪ್ಪೇಶ್ (28), ಚೇತನ್ (28), ಐಶ್ವರ್ಯಾ (27), ಗಾಯಗಳಾಗಿದ್ದು, (26) ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರವಾಸಕ್ಕೆ ಬಂದಾಗ ನಡೆಯಿತು ದುರಂತ!

ಎಲ್ಲರೂ ಖಾಸಗಿ ಕಂಪೆನಿಯ ಉದ್ಯೋಗಿಗಳಾಗಿದ್ದು, ಎಲ್ಲರೂ ಒಂದಾಗಿ ಮುರುಡೇಶ್ವರ, ಗೋಕರ್ಣದ ಕಡೆಗೆ ವೀಕೆಂಡ್ ರಜೆಯಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದವರಾಗಿದ್ದಾರೆ. ಅಪಘಾತದ ತೀವ್ರತೆಗೆ ಕಾರಿನ ಒಂದು ಬದಿ ಸಂಪೂರ್ಣ ಜಖಂಗೊಂಡಿತ್ತು. ಕಾರಿನ ಒಳಗೆ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಹೊರತೆಗೆಯಲು ಸ್ಥಳೀಯರು ಹರ ಸಾಹಸಪಟ್ಟರು.

Categories
ಕರಾವಳಿ ಕುಂದಾಪುರ

ಬ್ರಹ್ಮಾವರ: ಬಿಜೆಪಿ ಮುಖಂಡನ ಮನೆಯಲ್ಲಿ ಅಕ್ರಮ ಮದ್ಯ ವಶ!

ಬ್ರಹ್ಮಾವರ: ಬಿಜೆಪಿ ಮುಖಂಡನ ಮನೆಯಲ್ಲಿ ಅಕ್ರಮ ಮದ್ಯ ವಶ!
– ಆರೋಪಿ ರಮೇಶ್‌ ಪ್ರಭು ಬಂಧನ: ಏನಿದು ಪ್ರಕರಣ?
– ಕುಂದಾಪುರದ ಬಳಿ ಭೀಕರ ಅಪಘಾತ: ಮೂವರು ಗಂಭೀರ

NAMMUR EXPRESS NEWS
ಬ್ರಹ್ಮಾವರ/ಕುಂದಾಪುರ: ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ರಾಜ್ಯದ ಹಲವೆಡೆ ಮದ್ಯ, ಹಣ ಸೇರಿದಂತೆ ಅಕ್ರಮ ಚಟುವಟಿಕೆಗಳು ಒಂದೊಂದಾಗಿ ಬಯಲಾಗುತ್ತಿವೆ. ಇದೀಗ ಬ್ರಹ್ಮಾವರದಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡನ ಮನೆಯಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿರುವ ಮದ್ಯ ಪತ್ತೆಯಾಗಿದೆ. ಆರೋಪಿ ರಮೇಶ್‌ ಪ್ರಭು ಮನೆ ಮೇಲೆ ಸೋಮವಾರ ರಾತ್ರಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, ಲಕ್ಷಾಂತರ ಮೌಲ್ಯದ ಡಿಫೆನ್ಸ್ (ಮಿಲಿಟರಿ) ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು ಉಡುಪಿ ಜಿಲ್ಲೆ ಇವರುಗಳು ಮಾರ್ಗದರ್ಶನದಡಿ ಖಚಿತ ಮಾಹಿತಿ ಮೇರೆಗೆ ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಬ್ರಹ್ಮಾವರ ಇಂದಿರಾ ನಗರದಲ್ಲಿರುವ ರಮೇಶ್‌ ಪ್ರಭು ಮನೆ ಮೇಲೆ ದಾಳಿ ನಡೆಸಲಾಗಿತ್ತು. ರಮೇಶ್ ಪ್ರಭು ಅವರ ಪುತ್ರ ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾದ ಮುಖಂಡ ಎಂದು ತಿಳಿದು ಬಂದಿದೆ.

ಆರೋಪಿಗಳ ಬಳಿಯಿಂದ ಒಟ್ಟು 33.500 ಲೀಟರ್ ಮಿಲಿಟರಿಯವರಿಗೆ ಸಂಬಂದಿಸಿದ ಮದ್ಯ ಪತ್ತೆಯಾಗಿದ್ದು, ಇದರ ಒಟ್ಟು ಮೌಲ್ಯ 1,55,000ರೂ. ಎಂದು ಅಂದಾಜಿಸಲಾಗಿದೆ. ಆರೋಪಿ ರಮೇಶ್ ಪ್ರಭುವನ್ನು ಬಂಧಿಸಲಾಗಿದೆ. ಈ ಬಗ್ಗೆ ಉಡುಪಿ ಉಪ ವಿಭಾಗದ ಅಬಕಾರಿ ಉಪ ನಿರೀಕ್ಷಕಿ ಮಧುರಾ. ಎನ್. ದಾಸ್ ಮೊಕದ್ದಮೆಯನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕುಂದಾಪುರದ ಬಳಿ ಭೀಕರ ಅಪಘಾತ: ಮೂವರು ಗಂಭೀರ!

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರದ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಬಳಿ ಮಂಗಳವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತ ನಡೆದಿದ್ದು, ಕಾರಿನಲ್ಲಿ ಸಂಚರಿಸುತ್ತಿದ್ದ ಮೂವರ ಸ್ಥಿತಿ ಗಂಭೀರವಾಗಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ಕೇರಳ ರಾಜ್ಯದ ಮಾಹೆ ಎಂಬಲ್ಲಿಗೆ ಟೊಯೊಟೊ ಫಾರ್ಚ್ಯೂನರ್‌ ಕಾರಿನಲ್ಲಿ ತೆರಳುತ್ತಿರಬೇಕಾದರೆ, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿದೆ. ಕಾರು ಗುದ್ದಿದ ರಭಸಕ್ಕೆ ಅದು ಮೇಲುರಸ್ತೆಯಿಂದ ಏಕಾಏಕಿ ಕೆಳಕ್ಕೆ ಪಲ್ಟಿಯಾಗಿದೆ. ಕಾರಿನಲ್ಲಿ ಮೂವರು ವ್ಯಕ್ತಿಗಳು ಸಂಚರಿಸುತ್ತಿದ್ದು, ಮೂವರ ಸ್ಥಿತಿಯೂ ಗಂಭೀರವಾಗಿದ್ದು, ಕುಂದಾಪುರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ತಲೆಕೆಳಗಾಗಿ ಕೆಳಕ್ಕೆ ಬಿದ್ದಿದ್ದು, ಅದು ಕೂಡ ಸರ್ವೀಸ್‌ ರಸ್ತೆಯಾಗಿದ್ದು, ಆ ಸಮಯದಲ್ಲಿ ಯಾವುದೇ ವಾಹನಗಳು ಹಾದು ಹೋಗದಿದ್ದ ಕಾರಣ ಅಷ್ಟೊಂದು ದುರಂತವಾಗಿಲ್ಲ. ಇಲ್ಲದಿದ್ದರೆ ಬಿದ್ದ ವಾಹನದ ಮೇಲೆ ಬೇರೆ ದೊಡ್ಡ ವಾಹನಗಳು ಹಾದು ಹೋಗುವ ಅಪಾಯವಿತ್ತು. ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ವಿಸ್ ರಸ್ತೆಯಲ್ಲಿ ಕಾರು ಬಿದ್ದ ಪರಿಣಾಮ ಕೆಲಕಾಲ ಸಂಚಾರ ವ್ಯತ್ಯಯ ಕೂಡ ಉಂಟಾಗಿತ್ತು.