Categories
ಕರಾವಳಿ ಕಾರ್ಕಳ ಯಶಸ್ಸಿನ ಕಥೆಗಳು ರಾಜ್ಯ

ತಹಸೀಲ್ದಾರ್ ಅಂದ್ರೆ ಕಾರ್ಕಳ ತಹಸೀಲ್ದಾರ್ ಕಣಪ್ಪ!

ತಹಸೀಲ್ದಾರ್ ಅಂದ್ರೆ ಕಾರ್ಕಳ ತಹಸೀಲ್ದಾರ್ ಕಣಪ್ಪ!
– 4 ಗಂಟೆಯಲ್ಲಿ ವೃದ್ದೆಗೆ ಸ್ಥಳದಲ್ಲೇ ವೃದ್ಧಾಪ್ಯ ವೇತನ ರಿಲೀಸ್
– ಇಡೀ ಆಡಳಿತ ಒಟ್ಟಾಗಿ ಸೇವೆಗೆ ನಿಂತಿತು..ರಾಜ್ಯಕ್ಕೆ ಮಾದರಿ ಆಯಿತು..!

NAMMUR EXPRESS NEWS
ಕಾರ್ಕಳ: ನಾಲ್ಕು ಗಂಟೆಯಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನವನ್ನು ಮಂಜೂರು ಗೊಳಿಸಿದ ಕಾರ್ಕಳ ತಹಶಿಲ್ದಾರ್ ಅವರ ಕೆಲಸ ಈಗ ರಾಜ್ಯದ ಗಮನ ಸೆಳೆದಿದೆ. ಹೌದು. ಸರಕಾರದ ಸವಲತ್ತುಗಳನ್ನು ಪಡೆಯಲು ಸರಕಾರದ ಕಛೇರಿಗಳಿಗೆ ಪಲಾನುಭವಿಗಳು  ಅಲೆಯಬೇಕಾದ ಸ್ಥಿತಿ ಇನ್ನು ಇದೆ. ಆದರೆ ಉಡುಪಿ ಜಿಲ್ಲೆ ಕಾರ್ಕಳ ತಹಸೀಲ್ದಾರ್ ಇದೀಗ ರಾಜ್ಯಕ್ಕೆ ಮಾದರಿ ಹೆಜ್ಜೆಯನ್ನು ಇಟ್ಟಿದ್ದಾರೆ.

ಏನಿದು ಕೇಸ್?

ಆಧಾರ್ ಕಾರ್ಡ್ ಮೊಬೈಲ್ ನಂಬರ್ ಲಿಂಕ್ ಮಾಡಲು ಬಂದ  ವೃದ್ದೆಯೋರ್ವರ ಸಮಸ್ಯೆಯನ್ನು ಆಲಿಸಿ ವೃದ್ದಾಪ್ಯ ವೇತನವನ್ನು ಕೇವಲ ನಾಲ್ಕು ಘಂಟೆಗಳಲ್ಲಿ ಕಲ್ಪಿಸಿ ಕೊಟ್ಟಿದ್ದಾರೆ ಕಾರ್ಕಳ ತಹಶಿಲ್ದಾರ್ ನರಸಪ್ಪ. ತಮ್ಮ ಕಛೇರಿಗೆ ಆಗಮಿಸುವ ವೇಳೆ ವೃದ್ದೆ ಶೀಲಾರವರ ಸಮಸ್ಯೆ ಆಲಿಸಿದರು. ಶೀಲ ಮಲೆಕುಡಿಯ 70 ವರ್ಷ ಪ್ರಾಯದ ವೃದ್ದೆ. ಕಾರ್ಕಳ ತಾಲೂಕಿನ ಕೆರುವಾಶೆಯ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತಿದ್ದಾರೆ. ಒಬ್ಬಂಟಿಯಾಗಿದ್ದು     ಸರಕಾರದ ಯಾವುದೇ ಯೋಜನೆಯ ಫಲಾನುಭವಿಯಲ್ಲ. ರೇಷನ್ ಕಾರ್ಡ್ ಇದ್ದರೂ ಗೃಹಲಕ್ಷ್ಮಿ ಸೇರಿದಂತೆ ಯಾವ ಸವಲತ್ತುಗಳು ಸಿಕ್ಕಿಲ್ಲ. ಇದನ್ನರಿತ ತಹಶಿಲ್ದಾರ್ ನರಸಪ್ಪ ತಕ್ಷಣಕ್ಕೆ  ಅಜೆಕಾರಿನ ನಾಡ ಕಛೇರಿ ಉಪತಹಶಿಲ್ದಾರ್ ವೃದ್ದಾಪ್ಯ ವೇತನವನ್ನು  ಮಂಜೂರು ಮಾಡಬೇಕೆಂದು ಅಜೆಕಾರು ಉಪತಹಶಿಲ್ದಾರ್ ಆದೇಶ ಹೊರಡಿಸಿದರು.

ಇಡೀ ಆಡಳಿತ ಒಟ್ಟಾಗಿ ಸೇವೆಗೆ ನಿಂತಿತು..!

ಅಜೆಕಾರು ನಾಡ ಕಚೇರಿಯ ಉಪ ತಹಶಿಲ್ದಾರ್ ನಮಿತಾ ಬಿ ಅರ್ಜಿಯನ್ನು ಸಲ್ಲಿಸಿ ಅವರ ನೇತೃತ್ವದಲ್ಲಿ ಶಿರ್ಲಾಲು ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಫಲಾನುಭವಿ ಶೀಲಾವರ ಖಾತೆ ತೆರೆಸಿ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಅನುಷಾ ಅವರಿಂದ ವಯಸ್ಸಿನ ದೃಢಪ್ರತಿ ಪಡೆದು ಕೆರುವಾಶೆ ಗ್ರಾಮ ಆಡಳಿತಾಧಿಕಾರಿ ರವಿಚಂದ್ರ ಪಾಟೀಲ್ ಕಂದಾಯ ನಿರೀಕ್ಷ  ಮೊಹಮ್ಮದ್ ರಿಯಾಜ್  ಸಂಬಂಧಿತ ಎಲ್ಲಾ ವರದಿಗಳನ್ನು ತರಿಸಿ ಉಪ ತಹಶಿಲ್ದಾರ್ ತಾಲೂಕು ತಹಶಿಲ್ದಾರ್ ಗೆ ಹಸ್ತಾಂತರಿಸಿದರು. ಕಾರ್ಕಳ ತಹಶಿಲ್ದಾರ್ ನರಸಪ್ಪ ಅವರು  ಸಂಧ್ಯಾ ಸುರಕ್ಷಾ ಯೋಜನೆಯನ್ನು ಮಂಜೂರು ಗೊಳಿಸಿ ಮಂಜುರಾತಿ ಪತ್ರವನ್ನು ಶೀಲರವರಿಗೆ ಹಸ್ತಾಂತರಿಸಿದರು. ಶೀಲಾರವರ ಸುಮಾರು 22 ವರ್ಷಗಳಿಂದ ಖಾತೆ ಬದಲಾವಣೆಯಾಗಿರದ  ಪಹಣಿಯನ್ನು ಬದಲಾಯಿಸುವ ಬಗ್ಗೆ ಭರವಸೆ ನೀಡಿ,ಸಂಬಂಧಿತ ಇಲಾಖೆಗೆ ಮಾಹಿತಿ ನೀಡಿದರು.

ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ ತಹಸೀಲ್ದಾರ್!

ತಹಸೀಲ್ದಾರ್ ನರಸಪ್ಪ ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ಸಾಲಗುಂದ ಗ್ರಾಮದವರು. ಕಾರ್ಕಳ ತಹಶಿಲ್ದಾರ್ ಆಗಿರುವ 13 ವರ್ಷಗಳ ಕಾಲ ಶಿಕ್ಷಕರಾಗಿ, ಬಳಿಕ ಕೆ.ಎ.ಎಸ್ ಪರೀಕ್ಷೆ ಬರೆದು ಲಿಂಗಸೂರು ಪುರಸಭೆಯ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಬಳಿಕ ಕಾರ್ಕಳ ತಹಶಿಲ್ದಾರ್ ಆಗಿ ನಿಯೋಜನೆ ಗೊಂಡವರು. ಸೇವೆ ಒದಗಿಸುವಲ್ಲಿ ಕರ್ನಾಟಕ ಬ್ಯಾಂಕ್  ಸಿಬ್ಬಂದಿಗಳಾದ ಗಾಯತ್ರಿ ಶೆಣೈ,  ಮುಖ್ಯ ಪ್ರಬಂಧಕ ಉದಯ ಶಂಕರ್, ಅಜೆಕಾರು ನೆಮ್ಮದಿ ಕೇಂದ್ರದ ಸುರೇಂದ್ರ ನಾಯ್ಕ್ , ಭೋಜೆಗೌಡ  ಸಹಕಾರ ನೀಡಿದ್ದಾರೆ.

ಎಲ್ಲಾ ಸೇವೆ ಜನರಿಗೆ ತಲುಪಿಸೋಣ..!

ಸರಕಾರ ನೀಡುವ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದೇವೆ. ಸರಕಾರದ ನೀಡುವ ಎಲ್ಲಾ ಸೇವೆಗಳನ್ನು ಫಲಾನುಭವಿಗಳು ಸದುಪಯೋಗಪಡೆದುಕೊಳ್ಳಬೇಕು ಎನ್ನುತ್ತಾರೆ ತಹಸೀಲ್ದಾರ್ ನರಸಪ್ಪ.
ಸಂತಸ ತಂದಿದೆ: ವೃದ್ದಾಪ್ಯ ವೇತನ ಯೋಜನೆ ನನಗೆ ನೀಡಿರುವುದು ಖುಷಿ ತಂದಿದೆ. ಬದುಕಿಗೆ ಭದ್ರತೆ ನೀಡುತ್ತದೆ ಎಂದು ವೃದ್ಧಾಪ್ಯ ವೇತನ ಪಡೆದ ಫಲಾನುಭವಿ ಶೀಲಾ ಸಂತಸ ವ್ಯಕ್ತಪಡಿಸಿದ್ದಾರೆ.

Categories
ಕರಾವಳಿ ಕಾರ್ಕಳ ಯಶಸ್ಸಿನ ಕಥೆಗಳು ರಾಜ್ಯ

ಒಂದು ವರ್ಷದ ಮಗುವಿನ ಸಾಧನೆ

ಒಂದು ವರ್ಷದ ಮಗುವಿನ ಸಾಧನೆ
– ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆ.
– ಒಂದನೇ ವರ್ಷದಲ್ಲೆ ದಾಖಲೆ ನಿರ್ಮಿಸಿದ ಕಾರ್ಕಳದ ಮಗು!

NAMMUR EXPRESS NEWS
ಕಾರ್ಕಳ : ಇಂಡಿಯ ಬುಕ್ ಆಫ್ ರೆಕಾರ್ಡ್ಸ್ನಲ್ಲಿ 1 ವರ್ಷ 7 ತಿಂಗಳ ಮಗು ಆರುಷ್ ಧೀರಜ್ ದಾಖಲೆ ನಿರ್ಮಿಸಿದ್ದಾರೆ. ಆರುಷ್ ಉಡುಪಿ ಪಂದುಬೆಟ್ಟುವಿನ ಅಕ್ಷಿತ ಮತ್ತು ಧೀರಜ್ ಅವರ ಪುತ್ರ. ಆರುಷ್‌, ಇಂಗ್ಲಿಷ್ ಅಕ್ಷರಗಳು(26), 1 ರಿಂದ 10 ಅಂಕೆಗಳು, 27 ಪ್ರಾಣಿಗಳು, 27 ಪಕ್ಷಿಗಳು, 26 ಹಣ್ಣುಗಳು, 25 ತರಕಾರಿಗಳು, 18 ದೇಹದ ಅಂಗಗಳು, 9 ಗ್ಯಾಜೆಟ್ಸ್ 47 ದಿನ ಬಳಕೆಯ ವಸ್ತುಗಳು, 14 ಬಣ್ಣಗಳು, 10 ತಿಂಡಿಗಳು, 27 ಆಟದ ಸಾಮಗ್ರಿಗಳು, 8 ಭಾವನೆಗಳು, 27 ವಾಹನಗಳು, 20 ಹೂವುಗಳು, 33 ಕ್ರಿಯಾಪದಗಳು, 6 ಆಕಾರಗಳು ಸೇರಿದಂತೆ 350 ಕ್ಕೂ ಹೆಚ್ಚು ವಸ್ತುಗಳನ್ನು ಗುರುತಿಸುವ ಮೂಲಕ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಅಗಾಧ ಸಾಧಕರಾಗಿದ್ದಾರೆ .

Categories
ಚಿಕ್ಕಮಗಳೂರು ಯಶಸ್ಸಿನ ಕಥೆಗಳು

ವಿಶ್ವ ಮಟ್ಟದಲ್ಲಿ ರಾಜ್ಯದ ಅಂಧ ಓಟಗಾರ್ತಿ ಸಾಧನೆ!

ವಿಶ್ವ ಮಟ್ಟದಲ್ಲಿ ರಾಜ್ಯದ ಅಂಧ ಓಟಗಾರ್ತಿ ಸಾಧನೆ!
– ವಿಶ್ವ ಪ್ಯಾರಾ ಅಥ್ಲೆಟಿಕ್ಸ್: ರಕ್ಷಿತಾ ರಾಜುಗೆ 5ನೇ ಸ್ಥಾನ
– ಮಲೆನಾಡಿನ ಕೊಟ್ಟಿಗೆಹಾರದ ಆಟಗಾರ್ತಿ
– ಇನ್ನಷ್ಟು ಸೌಲಭ್ಯ ಸಿಕ್ಕರೆ ಸಾಧನೆ ಸಾಧ್ಯತೆ

NAMMUR EXPRESS NEWS
ಕೊಟ್ಟಿಗೆಹಾರ( ಮೂಡಿಗೆರೆ): ಕರ್ನಾಟಕದ ಅಂಧ ಓಟಗಾರ್ತಿ ರಕ್ಷಿತಾ ರಾಜು ಪ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಜುಲೈ6ರಿಂದ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ ನಲ್ಲಿ ಭಾರತ ಪ್ರತಿನಿಧಿಸಿ 5ನೇ ಸ್ಥಾನ ಪಡೆದಿದ್ದಾರೆ.
ಕೀನ್ಯಾ, ರಷ್ಯಾ, ಪೋಲೆಂಡ್, ಚೀನಾ, ಭಾರತ ಕ್ರೀಡಾಪಟುಗಳು ಭಾಗವಹಿಸಿದ್ದು ಜು.8 ರಂದು ಶನಿವಾರ ನಡೆದ ಮಹಿಳೆಯರ 1500ಮೀ ಕ್ರೀಡಾಕೂಟದಲ್ಲಿ ರಕ್ಷಿತಾರಾಜು ಟಿ11ವಿಭಾಗದಲ್ಲಿ ( 5:26.47ಸೆಕೆಂಡುಗಳಲ್ಲಿ )ಮೂರನೇ ಸ್ಥಾನ ಪಡೆದು ಪೈನಲ್ ಗೆ ಪ್ರವೇಶಿಸಿದ್ದರು.

ಆದರೆ ಜು10 ಸೋಮವಾರದಂದು ನಡೆದ 1500ಮೀ ಓಟದಲ್ಲಿ (5:24.95 ಸೆಕೆಂಡುಗಳಲ್ಲಿ)ರಕ್ಷಿತಾ 5 ನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಅವರ ಕೋಚ್ ರಾಹುಲ್ ಬಾಲಕೃಷ್ಣ ತಿಳಿಸಿದ್ದಾರೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ ದರ?

HOW TO APPLY : NEET-UG COUNSELLING 2023

Categories
ಯಶಸ್ಸಿನ ಕಥೆಗಳು ರಾಷ್ಟ್ರೀಯ ವಾರ್ತೆ

ಸುಧಾಮೂರ್ತಿ ಅವರಿಗೆ ದೇಶದ ಸಾಹಿತ್ಯ ಗೌರವ!

ಸುಧಾಮೂರ್ತಿ ಅವರಿಗೆ ದೇಶದ ಸಾಹಿತ್ಯ ಗೌರವ!
– ಇನ್ಫೋಸಿಸ್ ಸುಧಾಮೂರ್ತಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ
– ಇಂಗ್ಲಿಷ್‌ನಲ್ಲಿ ಬರೆದಿರುವ ಗ್ರ್ಯಾಂಡ್‌ ಪೇರೆಂಟ್ಸ್‌ ಬ್ಯಾಗ್‌ ಸ್ಟೋರೀಸ್‌ಗೆ ಪ್ರಶಸ್ತಿ
– ವಿಜಯಶ್ರೀ ಹಾಲಾಡಿ, ಮಂಜು ನಾಯಕ್‌ ಚೆಲ್ಲೂರು ಅವರಿಗೂ ಪ್ರಶಸ್ತಿ

NAMMUR EXPRESS NEWS
ನವ ದೆಹಲಿ: 2023ನೇ ಸಾಲಿನ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಗೊಂಡಿದ್ದು, ಕನ್ನಡದಲ್ಲಿ ಬಾಲ ಸಾಹಿತ್ಯ ಪುರಸ್ಕಾರಕ್ಕೆ ವಿಜಯಶ್ರೀ ಹಾಲಾಡಿ ಹಾಗೂ ಯುವಸಾಹಿತ್ಯ ಪುರಸ್ಕಾರಕ್ಕೆ ಮಂಜು ನಾಯಕ್‌ ಚೆಲ್ಲೂರು ಅವರು ಭಾಜನರಾಗಿದ್ದಾರೆ.

ಇನ್ಫೋಸಿಸ್‌ ಫೌಂಡೇಶನ್‌ ಸಂಸ್ಥಾಪಕಿ ಸುಧಾ ಮೂರ್ತಿ ಅವರು ಇಂಗ್ಲಿಷ್‌ನಲ್ಲಿ ಬರೆದಿರುವ ಗ್ರ್ಯಾಂಡ್‌ ಪೇರೆಂಟ್ಸ್‌ ಬ್ಯಾಗ್‌ ಸ್ಟೋರೀಸ್‌ಗೆ ಬಾಲ ಸಾಹಿತ್ಯ ಪುರಸ್ಕಾರ ಸಿಕ್ಕಿದೆ. ವಿಜಯಶ್ರೀ ಅವರ “ಸೂರಕ್ಕಿ ಗೇಟ್‌” ಕಾದಂಬರಿಗೆ ಪ್ರಶಸ್ತಿ ದೊರೆತ್ತಿದ್ದರೆ, ಮಂಜು ನಾಯಕ್‌ ಚೆಲ್ಲೂರು ಅವರ “ಪೂ ಮತ್ತು ಇತರೆ ಕಥೆಗಳು’ ಎನ್ನುವ ಸಣ್ಣ ಕಥಾಸಂಗ್ರಹಕ್ಕೆ ಪುರಸ್ಕಾರ ದೊರೆತಿದೆ. ಬಾಲಸಾಹಿತ್ಯ ಪುರಸ್ಕಾರದ ಕನ್ನಡ ವಿಭಾಗದ ತೀರ್ಪುಗಾರರಾಗಿ ಡಾ| ಜಯಶ್ರೀ ಸಿ. ಕಂಬಾರ್‌, ಡಾ| ಆನಂದ್‌ ವಿ.ಪಾಟೀಲ್‌ ಹಾಗೂ ಡಾ| ಮೂಡ್ನಾಕೂಡು ಚಿನ್ನಸ್ವಾಮಿ ಅವರು ಭಾಗವಹಿಸಿದ್ದರು. ಇನ್ನು ಯುವ ಪುರಸ್ಕಾರ ಕನ್ನಡ ವಿಭಾಗದ ತೀರ್ಪುಗಾರರಾಗಿ ಡಾ| ಎಚ್‌.ಎಸ್‌.ರಾಘವೇಂದ್ರ ರಾವ್‌, ಡಾ| ಕೆ.ಮರುಳಸಿದ್ದಪ್ಪ ಹಾಗೂ ಶ್ರೀಮತಿ ಎಂ.ಆರ್‌.ಕಮಲಾ ಅವರು ಭಾಗವಹಿಸಿದ್ದರು.

ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!

HOW TO APPLY : NEET-UG COUNSELLING 2023

Tunga college thirthahalli

Categories
ಯಶಸ್ಸಿನ ಕಥೆಗಳು

ಸುಣ್ಣದ ಡಬ್ಬಿ ನುಂಗಿದ ನಾಗರಹಾವಿಗೆ ಆಪರೇಷನ್!

ಸುಣ್ಣದ ಡಬ್ಬಿ ನುಂಗಿದ ನಾಗರಹಾವಿಗೆ ಆಪರೇಷನ್!
– 15 ದಿನಗಳ ಕಾಲ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟ ವೈದ್ಯರು
– ನಾಗರ ಹಾವಿಗೆ ಮರು ಜೀವ ಕೊಟ್ಟ ಡಾಕ್ಟರ್!
– ಬೀದಿ ನಾಯಿ ದಾಳಿ ಮಾಡಿ 25 ಕುರಿ ಕೊಂದವು!

NAMMUR EXPRESS NEWS
ಬಂಟ್ವಾಳ: ಸುಣ್ಣದ ಡಬ್ಬಿ ನುಂಗಿದ್ದ ನಾಗರ ಹಾವಿಗೆ ಯಶಸ್ವಿ ಚಿಕಿತ್ಸೆ ಮಾಡಿ ಕಾಡಿಗೆ ಬಿಟ್ಟ ಅಪರೂಪದ ಘಟನೆ ಬಂಟ್ವಾಳ ತಾಲೂಕಿನ ವಗ್ಗ ಸಮೀಪದಲ್ಲಿ ನಡೆದಿದೆ.
ಅಲಂಪುರಿ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಸಮೀಪದ ಮನೆಯೊಂದರ ಬಳಿ ಗಾಯಗೊಂಡು ಪತ್ತೆಯಾಗಿದ್ದ ನಾಗರ ಹಾವೊಂದನ್ನು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಣಮುಖಗೊಳಿಸಿ ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.

ಏನಿದು ಘಟನೆ?:

ಅಲಂಪುರಿ ನಿವಾಸಿ ವಸಂತಿ ಅವರ ಮನೆ ಬಳಿಯ ಬಿಲವೊಂದರಲ್ಲಿ ಜೂ.6ರಂದು ನಾಗರ ಹಾವೊಂದು ಪತ್ತೆಯಾಗಿದ್ದು, ಹೊರಗೆ ಬರಲು ಸಾಧ್ಯವಾಗದೆ ಒದ್ದಾಡುತ್ತಿತ್ತು. ಅವರು ಉರಗ ಪ್ರೇಮಿ ಸ್ನೇಕ್ ಕಿರಣ್ ಗೆ ತಿಳಿಸಿದ್ದರು. ಬಳಿಕ ಅವರು ಹಾವನ್ನು ಬಿಲದಿಂದ ಹೊರಗೆ ತೆಗೆದಿದ್ದು, ಆದರೆ ಅದರ ಹೊಟ್ಟೆ ಹಾಗೂ ಕುತ್ತಿಗೆಗೆ ಗಾಯವಾಗಿತ್ತು. ಕಿರಣ್ ಅವರು ಅದನ್ನು ಮಂಗಳೂರಿಗೆ ಕೊಂಡು ಹೋಗಿ ಪಶುವೈದ್ಯ ಡಾ.ಯಶಸ್ವಿ ಅವರ ಬಳಿ ತೋರಿಸಿದರು.ಪರೀಕ್ಷಿಸಿದ ವೈದ್ಯರು ಪ್ರಾರಂಭದಲ್ಲಿ ಹರಿದ ಚರ್ಮಕ್ಕೆ ಹೊಲಿಗೆ ಹಾಕಿದ್ದು, ಆದರೂ ಅದರ ಹೊಟ್ಟೆಯಲ್ಲಿ ಏನೋ ಇದೆ ಎಂದು ಸಂಶಯಗೊಂಡು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಗ ಹೊಟ್ಟೆಯೊಳಗೆ ಸುಣ್ಣ ತುಂಬುವ ಪ್ಲಾಸ್ಟಿಕ್ ಪತ್ತೆಯಾಗಿದ್ದು, ಅದನ್ನು ಯಶಸ್ವಿಯಾಗಿ ಹೊರಗೆ ತೆಗೆಯಲಾಗಿದೆ.

ಡಾ.ಯಶಸ್ವಿಯವರು ಹಾವನ್ನು ಸುಮಾರು 15 ದಿನಗಳ ಕಾಲ ಚಿಕಿತ್ಸೆ ನೀಡಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಹಾಗೂ ರಕ್ಷಕ ಮನೋಜ್ ಅವರ ನೆರವಿನಿಂದ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.

ಬೀದಿ ನಾಯಿಗಳ ದಾಳಿಗೆ 25 ಕುರಿಗಳು ಬಲಿ!

ಹೊಸನಗರ ತಾಲೂಕು ರಿಪ್ಪಿನಪೇಟೆ ಅರಸಾಳು ಸಮೀಪ ಮಾಣಿಕೆರೆ ಗ್ರಾಮದಲ್ಲಿ ಬುಧವಾರ ಬೀದಿನಾಯಿಗಳ ದಾಳಿಗೆ ವೇಲಾಯದನ್ ಅವರಿಗೆ ಸೇರಿದ ಸುಮಾರು 25 ಕುರಿಗಳು ಬಲಿಯಾಗಿವೆ. ಮನೆಯ ಕೊಟ್ಟಿಗೆಯಲ್ಲಿದ್ದ ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಬೀದಿ ನಾಯಿಗಳ ಹಿಂಡು ಸಿಕ್ಕ ಸಿಕ್ಕ ಕುರಿಗಳನ್ನು ಕಚ್ಚಲು ಆರಂಭಿಸಿವೆ. ವಿಷಯ ತಿಳಿದು ಸ್ಥಳಕ್ಕೆ ಹೋಗುವ ವೇಳೆಗೆ ನಾಯಿಗಳು ಓಡಿ ಹೋಗಿವೆ. ಆದರೆ ಅಷ್ಟರಲ್ಲಾಗಲೇ ನಾಯಿಗಳು ಸುಮಾರು 25 ಕುರಿಗಳನ್ನು ಕಚ್ಚಿ ಸಾಯಿಸಿವೆ.

ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!

HOW TO APPLY : NEET-UG COUNSELLING 2023

Tunga college thirthahalli

Categories
ಪ್ರತಿಭೆಗಳು ಬೆಂಗಳೂರು ಯಶಸ್ಸಿನ ಕಥೆಗಳು

ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡಕ್ಕೆ ರೇಸಿಂಗ್ ಚಾಂಪಿಯನ್ ಶಿಪ್!

ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡಕ್ಕೆ
ರೇಸಿಂಗ್ ಚಾಂಪಿಯನ್ ಶಿಪ್!
– ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ “ಟೀಮ್ ಎಲೆಕ್ಟ್ರಿಮೋ”
– 12 ಮಂದಿ ವಿದ್ಯಾರ್ಥಿಗಳ ನಾವೀನ್ಯತೆಯ ಹೆಜ್ಜೆ

NAMMUR EXPRESS NEWS
ಪುಣೆ: ಇತ್ತೀಚೆಗೆ ಪುಣೆಯಲ್ಲಿ ನಡೆದ ನ್ಯಾಷನಲ್ ಲೆವೆಲ್ ಆಟೋ ಇಂಡಿಯಾ ರೇಸಿಂಗ್ ಚಾಂಪಿಯನ್ ಶಿಪ್ (AIRC)ನಲ್ಲಿ ಭಾಗವಹಿಸಿದ ಬೆಂಗಳೂರಿನ ಯಲಹಂಕದಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಎಲೆಕ್ಟ್ರಿಕಲ್ ವಿಭಾಗದಿಂದ ಪ್ರತಿನಿಧಿಸಿದ “ಟೀಮ್ ಎಲೆಕ್ಟ್ರಿಮೋ” Team Electrimo ತಂಡದ 6ನೇ ಸೆಮ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು electrical Go kart car ತಯಾರಿಸಿದ್ದು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಹಲವಾರು ರಾಜ್ಯಗಳಿಂದ ಸುಮಾರು 40 ತಂಡಗಳು ಭಾಗವಹಿಸಿದ್ದು E kart ವಿಭಾಗದಲ್ಲಿ Team Electrimo ತಂಡ ಚಾಂಪಿಯನ್ಸ್ ಆಗಿದ್ದಾರೆ. ಈ ತಂಡಕ್ಕೆ ತೀರ್ಥಹಳ್ಳಿಯ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಇವರು ಪ್ರೋತ್ಸಾಹಿಸಿ ವಿದ್ಯಾರ್ಥಿಗಳಿಗೆ ಬೆಂಬಲಿಸಿದ್ದಾರೆ. ಯುವ ಪ್ರತಿಭೆಗಳಿಗೆ ಅನೇಕ ಸಂಘಟನೆಗಳು, ಜನತೆ ಅಭಿನಂದಿಸಿದ್ದಾರೆ. 30 ವಿದ್ಯಾರ್ಥಿಗಳ ತಂಡದಲ್ಲಿ 12 ಮಂದಿ ಭಾಗವಹಿಸಿದ್ದರು.

12 ಮಂದಿ ತಂಡದಲ್ಲಿ ಯಾರ್ಯಾರು?

ಡ್ರೈವರ್ ಪುನೀತ್ ಎಂ ಆರ್ ಬೆಂಗಳೂರು, ಎರಡನೇ ಡ್ರೈವರ್ ಪ್ರತೀಕ್ ಡಿ ತೀರ್ಥಹಳ್ಳಿ, ತಂಡದ ಕ್ಯಾಪ್ಶನ್ ಮನು ಪಾಟೀಲ್ ಬಾಗಲಕೋಟೆ, ಮ್ಯಾನೇಜರ್ ಆದ ಧನುಷ್ ಆರ್ ತರೀಕೆರೆ, ವೈಭವಿ ಡಿ ತಾಂಡೆಲ್ ಬೆಂಗಳೂರು, ಇಂದುಮತಿ ಕೆ ಹಿರೇಮಠ್ ಶಿರಾಳಕೊಪ್ಪ, ಸರಸ್ವತಿ ಶಿರೂರು ಗುಳೇದಗುಡ್ಡ, ಸುಹಾಸ್ ಆರ್ ಕೆ ಬೆಂಗಳೂರು, ಸುಮಿತ್ ಎಚ್ ವಿ ಶಿಕಾರಿಪುರ, ಸಚಿನ್ ಎಸ್ ಕೆ ಹಿರೇಕೆರೂರು, ನಿಖಿಲ್ ಮಹೇಶ್ ಪಾಟೀಲ್ ಪುಣೆ, ಸ್ಫೂರ್ತಿ ಸೀತಾನದಿ ಹೆಬ್ರಿ ಇವರು ತಂಡದಲ್ಲಿದ್ದರು.
ಡಾ. ಮಹೇಶ್ ಕೆ ಅವರ ನೇತೃತ್ವದಲ್ಲಿ ತಂಡ ಭಾಗವಹಿಸಿತ್ತು.

7 ವಿಶೇಷ ಪ್ರಶಸ್ತಿಗಳನ್ನು ಪಡೆದ ತಂಡ!

ಡಾ. ಮಹೇಶ್ ಅವರಿಗೆ ದ್ರೋಣಾಚಾರ್ಯ ಅವಾರ್ಡ್( ಪ್ಯಾಕಲ್ಟಿ ಅಡ್ವವೈಸರ್)
ಸೋಷಿಯಲ್ ಮೀಡಿಯಾ ಅವಾರ್ಡ್
ಕಾಸ್ಟ್ ಅಂಡ್ ಬಿಸಿನೆಸ್ ಪ್ಲಾನ್ ಅವಾರ್ಡ್
ಡಿಸೈನ್ ಅಂಡ್ ಕೇರ್ ಅವಾರ್ಡ್
ಇನ್ನೋವೆಷನ್ ಅವಾರ್ಡ್
ಬೆಸ್ಟ್ ಡ್ರೈವರ್ ಅವಾರ್ಡ್
ಸೇಫ್ಟಿ ಅವಾರ್ಡ್

ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಪ್ರೋತ್ಸಾಹ

ತೀರ್ಥಹಳ್ಳಿಯ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಯ ಪ್ರಮುಖರಾದ ಅಬ್ದುಲ್ ಕಲಾಂ ಅವರು ಈ ತಂಡವನ್ನು ಪ್ರೋತ್ಸಾಹಿಸಿ ವಿದ್ಯಾರ್ಥಿಗಳಿ

Categories
ಯಶಸ್ಸಿನ ಕಥೆಗಳು

ಪ್ರಜಾವಾಣಿ ಹಿರಿಯ ವರದಿಗಾರ ಸುಬ್ರಮಣ್ಯ ವಿ.ಎಸ್ ಅವರಿಗೆ ರಾಜ್ಯ ಪ್ರಶಸ್ತಿ

  • ರಾಜ್ಯ ಸರ್ಕಾರದ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ
  • ಬೆಂಗಳೂರಲ್ಲಿ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಸ್ವೀಕಾರ

NAMMUR EXPRESS NEWS
ಬೆಂಗಳೂರು: ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಸುಬ್ರಮಣ್ಯ ವಿ.ಎಸ್. ವಾರಳಿ ಕುಂದಾಗ್ರಾಮ ,ತೀರ್ಥಹಳ್ಳಿ ಇವರಿಗೆ ರಾಜ್ಯ ಸರ್ಕಾರದ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಜಾವಾಣಿ ಪತ್ರಿಕೆ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಸುಬ್ರಮಣ್ಯ ಅವರು ನೇರಾನಿಷ್ಠುರ ನಡೆಯಿಂದ ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ರಾಜ್ಯಸರಕಾರದಿಂದ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಗಣ್ಯರು ಅವರನ್ನು ಸನ್ಮಾನಿಸಿದರು.

Categories
ಕೊಪ್ಪ ಚಿಕ್ಕಮಗಳೂರು ಯಶಸ್ಸಿನ ಕಥೆಗಳು

ಸರ್ಕಾರಿ ಶಾಲೆಯನ್ನೇ ಉಳಿಸಿದ ಅಂಟಿಗೆ ಪಂಟಿಗೆ!

  • ಕೊಪ್ಪ ತಾಲೂಕು ಭಂಡಿಗಡಿ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ
  • ಶಾಲಾ ಅಭಿವೃದ್ಧಿಗೆ ಊರವರೇ ಅಂಟಿಗೆ ಪಂಟಿಗೆ ಕಟ್ಟಿ ಹಣ ಕೊಟ್ಟರು!
  • 60ಕ್ಕೂ ಹೆಚ್ಚು ಅಂಟಿಗೆ ಪಂಟಿಗೆ ಹಾಡುಗಾರರಿಗೆ ಸನ್ಮಾನ
  • ಕ್ರಿಯೇಟಿವ್ ಮೀಡಿಯಾದಿಂದ ಪುಸ್ತಕ, ನಮ್ಮ ಭಂಡಿಗಡಿ ಡಾಕ್ಯುಮೆಂಟ್ರಿ ಬಿಡುಗಡೆ

NAMMUR EXPRESS NEWS
ಕೊಪ್ಪ: ಆ ಪುಟ್ಟ ಹಳ್ಳಿಯ ಸರ್ಕಾರಿ ಪ್ರೌಢ ಶಾಲೆ. ಸುಮಾರು 30 ವರ್ಷಗಳ ದೀರ್ಘ ಪಯಣದಲ್ಲಿ 15 ವರ್ಷದ ಬಳಿಕ ಸರ್ಕಾರದ ಅನುದಾನ, ಸೌಲಭ್ಯ ಪಡೆಯಿತು. 15 ವರ್ಷ ಗ್ರಾಮಸ್ಥರು ಅಂಟಿಗೆ ಪಂಟಿಗೆ ಕಟ್ಟಿ ಹಣ ಸಂಗ್ರಹಿಸಿ ಶಾಲೆ ನಡೆಸಿದ್ದರು, ಶಿಕ್ಷಕರು ಬಿಡಿಗಾಸು ಪಡೆಯದೇ ಸೇವೆ ಮಾಡಿದ್ದರು. ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದರು.
ಸರ್ಕಾರಿ ಶಾಲೆ ಉಳಿಸಲು ಅಂಟಿಗೆ ಪಂಟಿಗೆ ಕಟ್ಟಿ ಊರೂರು ಹಾಡು ಹೇಳಿ ಹಣ ಸಂಗ್ರಹಿಸಿದ ಕೊಪ್ಪ ತಾಲೂಕು ಭಂಡಿಗಡಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಇಂದು ಎಲ್ಲದರಲ್ಲೂ ಮುಂದಿದೆ.
ಶಾಲಾ ಮುಖ್ಯ ಉಪಾಧ್ಯಾಯ ಎನ್.ಎಸ್. ಸುರೇಂದ್ರ ಹಾಗೂ ಎಲ್ಲಾ ಶಿಕ್ಷಕರ ಶ್ರಮ, ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಶಾಲೆ ಎಲ್ಲರ ಗಮನ ಸೆಳೆದಿದೆ.
ಸುರೇಂದ್ರ ಎನ್.ಎಸ್, ಸುಬ್ರಮಣ್ಯ ಸಿ. ಎಸ್, ಜೆ.ಪಿ ಹರೀಶ್, ರಮೇಶ್ ಉಪಾದ್ಯಾಯ ಜಿ ರುದ್ರಪ್ಪ ಸೀತಾದೇವಿ ಮತ್ತು ಸಹ ಶಿಕ್ಷಕರು ಶಾಲೆಯ ಅಭಿವೃದ್ಧಿಗೆ ಅವಿರತ ಶ್ರಮಿಸಿದ್ದಾರೆ.
ಮಾ.6ರಂದು ಶಾಲೆಯಲ್ಲಿ ವಾರ್ಷಿಕ ಸಂಭ್ರಮ 2023 ಕಾರ್ಯಕ್ರಮ ನಡೆದಿದ್ದು ಈ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿಗೆ ಅಂಟಿಗೆ ಪಂಟಿಗೆ ಕಟ್ಟಿ ಸಹಾಯ ಮಾಡಿದ 60ಕ್ಕೂ ಹೆಚ್ಚು ಮಂದಿಯನ್ನು ಹಾಗೂ ಸಹಕಾರ ಮಾಡಿದ ಗ್ರಾಮಸ್ಥರನ್ನು ಗೌರವಿಸಲಾಯಿತು. ಜೊತೆಗೆ ಅಂಟಿಗೆ ಪಂಟಿಗೆ ಕುರಿತು ಕಾಲೇಜಿನ ಹಳೆಯ ವಿದ್ಯಾರ್ಥಿ, ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕರಲ್ಲಿ ಒಬ್ಬರಾದ ಅಶ್ವಥ್ ಎಸ್.ಎಲ್ ಅವರ ನೇತೃತ್ವದಲ್ಲಿ ತಯಾರಾದ ಅಂಟಿಗೆ ಪಂಟಿಗೆ ಕೃತಿ ಹಾಗೂ ಅಂಟಿಗೆ ಪಂಟಿಗೆ ಕುರಿತ ಎಲ್ಲಾ ಪ್ರಕಾರಗಳ ಹಾಡು ಇರುವ ಕ್ರಿಯೇಟಿವ್ ಮೀಡಿಯಾ ಅರ್ಪಣೆಯ ವಿಶೇಷ ಡಾಕ್ಯುಮೆಂಟರಿ ಚಾನೆಲ್ ಬಿಡುಗಡೆಗೊಳಿಸಲಾಯಿತು.
ಇದೇ ವೇಳೆ ರಾಜ್ಯಮಟ್ಟದ ಕಲೋತ್ಸವದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು.

Antige pintige in Durgaparameshawari Highschool Bandigadi

ತನ್ನ ಶಾಲೆಗೆ ಮಿಡಿದ ಕ್ರಿಯೇಟಿವ್ ಮೀಡಿಯಾ!

ಭಂಡಿಗಡಿ ಶ್ರೀ ದುರ್ಗಾಪರಮೇಶ್ವರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿ ಬಳಿಕ ಉನ್ನತ ವ್ಯಾಸಂಗ ಮಾಡಿ ರಾಜ್ಯಕ್ಕೆ ಮಾದರಿ ಎಂಬಂತೆ ಶಿಕ್ಷಣ ಸಂಸ್ಥೆ ಕಟ್ಟಿರುವ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ಸಂಸ್ಥಾಪಕ, ಶಾಲೆಯ ಹಳೆಯ ವಿದ್ಯಾರ್ಥಿ ಅಶ್ವಥ್ ಎಸ್ ಎಲ್ ತಮ್ಮ ಶಾಲೆಯ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಾ ಜಾನಪದ ಬೆಳವಣಿಗೆಗೂ ಕೈ ಜೋಡಿಸಿದ್ದಾರೆ.
ತಮ್ಮ ಸಂಸ್ಥೆಯ ಕ್ರಿಯೇಟಿವ್ ಮೀಡಿಯಾ ಮೂಲಕ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಅಂಟಿಗೆ ಪಂಟಿಗೆ ಕಲಾವಿದರು, ಕಲಾ ಪ್ರಕಾರ, ಮಲೆನಾಡಿನ ಅಂಟಿಗೆ ಪಂಟಿಗೆ ಕಲೆಯ ಬಗ್ಗೆ ಕೃತಿ ಜೊತೆಗೆ ನಮ್ಮ ಮಲೆನಾಡಿನ ಜಾನಪದ ಕಲೆಯನ್ನು ಒಂದು ಡಾಕ್ಯುಮೆಂಟರಿಯಾಗಿ ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಅಂಟಿಗೆ ಪಂಟಿಗೆಯ ಎಲ್ಲಾ ಹಾಡುಗಳ ಪ್ರಕಾರ ದಾಖಲು ಮಾಡಲಾಗಿದೆ.

2000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಜ್ಞಾನ ದೇಗುಲ!

ಮೊದಲ 15 ವರ್ಷ ಶಿಕ್ಷಕರಿಗೆ ಬಿಡಿಗಾಸು ಬಂದಿರಲಿಲ್ಲ, ಆಗ ಅಂಟಿಗೆ ಪಂಟಿಗೆ ಮಾಡಿ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ಸಹಕರಿಸಿದ್ದರು. ಅಂದಿನ ಶಿಕ್ಷಕರು ನಿಸ್ವಾರ್ಥ ಸೇವೆ ಮಾಡಿದ್ದರು. ಬಳಿಕ ಸರ್ಕಾರದ ಅನುದಾನಿತ ಶಾಲೆಯಾಗಿ ಈ ಶಾಲೆ ಪರಿವರ್ತನೆ ಆಯಿತು.
ಸರ್ಕಾರ ಶಿಕ್ಷಕರಿಗೆ ಸಂಬಳ ಹಾಗೂ ಶಾಲೆಗೆ ಸೌಲಭ್ಯ ನೀಡಿತು. ಹೆಚ್ಚೇನೂ ಸೌಲಭ್ಯವಿಲ್ಲದ ಭಂಡಿಗಡಿ ಶಾಲೆಗೆ ಶಕಟಪುರಂ ಮಠ ಕಟ್ಟಡ ನಿರ್ಮಾಣಕ್ಕೆ ಕೈ ಜೋಡಿಸಿತು. ಸರ್ಕಾರದಿಂದ ಹಾಸ್ಟೆಲ್ ಮಂಜೂರಾಯಿತು. ಈಗ ಶಾಲೆ ಅಭಿವೃದ್ಧಿ ಆಗುತ್ತಿದೆ.
30 ವರ್ಷದಲ್ಲಿ ಸುಮಾರು 2000 ಅಧಿಕ ವಿದ್ಯಾರ್ಥಿಗಳು ಇಲ್ಲಿ ಓದಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅದರಲ್ಲಿ ಅನೇಕರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಅನೇಕರು ಹಳ್ಳಿಯಲ್ಲೇ ಅನೇಕ ಕ್ಷೇತ್ರದಲ್ಲಿದ್ದಾರೆ. ಹಳೆ ವಿದ್ಯಾರ್ಥಿ ಸಂಘವನ್ನು ಕಟ್ಟಿ ಅವರೂ ಶಾಲೆ ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದಾರೆ.

ವಾರ್ಷಿಕೋತ್ಸವದ ಸಂಭ್ರಮ: ಮಕ್ಕಳಿಗೆ ಗೌರವ

Antige pintige in Durgaparameshawari Highschool Bandigadi


ಪ್ರೌಢಶಾಲೆಯ ಶೈಕ್ಷಣಿಕ ಸಮಿತಿ ಅಧ್ಯಕ್ಷರಾದ ಕೆ.ಕೆ ಸಾಯಿನಾಥ್ ಉದ್ಘಾಟಿಸಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗಶ್ರೀ ಟೈಲರಿಂಗ್ ತರಬೇತಿಯನ್ನು ಉದ್ಘಾಟಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಚ್ ಪಿ ಮಹೇಂದ್ರ ಹೊಸೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿನೇಶ್ ಇರ್ವತ್ತೂರು ಕ್ರಿಯೇಟಿವ್ ಮೀಡಿಯಾ ಕಾರ್ಕಳ ನಿರ್ಮಿತ ‘ನಮ್ಮ ಭಂಡಿಗಡಿ’ ಯೂಟ್ಯೂಬ್ ಚಾನೆಲ್ ಉದ್ಘಾಟಿಸಿದರು. ಆಂಟಿಗೆ ಪಂಟಿಗೆಪದಗಳ ಸಂಗ್ರಹ ಕೃತಿ ಸಾಂಕೇತಿಕ ಬಿಡುಗಡೆಯನ್ನು ಕ್ರಿಯೇಟಿವ್ ಪಿಯು ಕಾಲೇಜಿನ ಸಂಸ್ಥಾಪಕ ನಿರ್ದೇಶಕರಾದ ಅಶ್ವತ್ ಎಸ್ ಎಲ್ ನಡೆಸಲಿದ್ದಾರೆ. ಶ್ರೀ ಕ್ಷೇತ್ರ ಶಕಟಪುರಂ ವ್ಯವಸ್ಥಾಪಕರಾದ ರಾಘವನ್ ಅಂಟಿಗೆ ಪಂಟಿಗೆ ಕಲಾವಿದರಿಗೆ ಗೌರವಾರ್ಪಣೆ ಮಾಡಿದರು
ರಾಜ್ಯಮಟ್ಟದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಕೊಪ್ಪ ಪಿಸಿಎಆರ್ಡಿ ಬ್ಯಾಂಕ್ ಅಧ್ಯಕ್ಷರಾದ ಎಚ್.ಎಸ್ ಇನೇಶ್ ನೆರವೇರಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಪ್ರೌಢಶಾಲೆ ಕಟ್ಟಡ ಅಭಿವೃದ್ಧಿ ಸಮಿತಿಯ ಖಜಾಂಚಿ ಬಿ ಎನ್ ಭಿಷೇಜ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಎಚ್.ಎಂ ರವಿಕಾಂತ್ ಅಭಿನಂದನಾ ಭಾಷಣ ಮಾಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಮ್ಮದ್ ಹುಸೇನ್ ಗಣಿತ ಮಾದರಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಹರಿಹರಪುರ ಕಸಾಪ ಅಧ್ಯಕ್ಷರಾದ ವೈದ್ಯ ಬಿ ಆರ್ ಅಂಬರೀಶ್ ವಿಜ್ಞಾನ ಮಾದರಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ರಮೇಶ್ ಇ.ಜಿ ದತ್ತ ನಿಧಿ ವಿತರಣೆ ಮಾಡಿದರು.ಮುಖ್ಯ ಅತಿಥಿಗಳಾಗಿ ಎಸ್ಪಿಎಂಸಿ ಸದಸ್ಯರಾದ ಅನ್ನಪೂರ್ಣ ಮಹೇಶ್, ಗ್ರಾಮ ಪಂಚಾಯತ್ ಸದಸ್ಯರಾದ ಮಮತಾ, ಶ್ರೀಧರ್, ಚಂದಮ್ಮ, ರಮೇಶ್, ಜ್ಯೋತಿ, ಎಪಿಎಂ ಸಿ ನಿರ್ದೇಶಕರಾದ ವಿ ಸಿ ರಾಘವೇಂದ್ರ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರೇಮ್ ಕುಮಾರ್, ರಾಜ್ಯಮಟ್ಟದ ಖೋ ಖೋ ಕ್ರೀಡಾಪಟು ಸತ್ಯನಾರಾಯಣ ಎಸ್ ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಎಸ್ಡಿ ಎಂ ಸಿ ಸದಸ್ಯರಾದ ಉಮೇಶ್, ಪ್ರಕಾಶ್, ವನಿತಾ, ಸರಸ್ವತಿ, ರವಿ, ರಾಜಶೇಖರ್, ಚಂದ್ರಹಾಂಡ , ಎಸ್ ಡಿ ಎಂ ಸಿ ನಾಮನಿರ್ದೇಶಿತರಾದ ದಿನೇಶ್ ಈ ಎನ್, ಗೀತಾ, ರಜನಿ, ಶಿಕ್ಷಕರು, ಗ್ರಾಮಸ್ಥರು, ಪೋಷಕರು ಇತರರು ಇದ್ದರು. ಶಾಲೆಯ ಸಾಧಕ ಹಳೆಯ ವಿದ್ಯಾರ್ಥಿಗಳಾದ ರೇಖಾ ಎಸ್ ಎಲ್, ಸುಬ್ರಮಣ್ಯ ಇವರು ಉಪಸ್ಥಿತರಿದ್ದರು.