Categories
ಕರಾವಳಿ ಮಂಗಳೂರು

ಆಳ್ವಾಸ್ ನಿಂದ 10 ಕೋಟಿಗೂ ಮಿಕ್ಕಿದ ವಿದ್ಯಾರ್ಥಿವೇತನ”

ಆಳ್ವಾಸ್ ನಿಂದ 10 ಕೋಟಿಗೂ ಮಿಕ್ಕಿದ ವಿದ್ಯಾರ್ಥಿವೇತನ”
– ಮಾ.31, ಎ.14ರಂದು ಆಳ್ವಾಸ್ ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ
– ಯಾರಿಗೆ ಸಿಗುತ್ತೆ ವಿದ್ಯಾರ್ಥಿ ವೇತನ ಇಲ್ಲಿದೆ ಮಾಹಿತಿ

NAMMUR EXPRESS NEWS
ಮಂಗಳೂರು: “ನಾಲ್ಕು ದಶಕಗಳಿಂದ ನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ದತ್ತು ಸ್ವೀಕಾರ, ಸಹಾಯಧನ, ಪ್ರೋತ್ಸಾಹಧನ, ವಿವಿಧ ಶಿಷ್ಯವೇತನ, ಬಹುಮಾನ, ಪುರಸ್ಕಾರಗಳನ್ನು ನೀಡುತ್ತಾ ಬಂದಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಈ ಬಾರಿ ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ವರ್ಷಕ್ಕೆ 10 ಕೋಟಿಗೂ
ಅಧಿಕ ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿ ವೇತನ ಘೋಷಿಸಿದೆ” ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

“10ನೇ ತರಗತಿಯಲ್ಲಿ ಸಿಬಿಎಸ್‌ಸಿ (ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ) ಐಸಿಎಸ್‌ಇ (ಭಾರತೀಯ ಪ್ರೌಢಶಿಕ್ಷಣದ ಪ್ರಮಾಣ ಪತ್ರ) ಹಾಗೂ ರಾಜ್ಯ ಪಠ್ಯಕ್ರಮ (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ) ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ಶೈಕ್ಷಣಿಕ ವಿದ್ಯಾರ್ಥಿ ವೇತನ ಪರೀಕ್ಷೆಯನ್ನು ಬರೆಯಬಹುದು. ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದ ವಿದ್ಯಾರ್ಥಿಗಳು ದೇಶದಲ್ಲೇ ಅತ್ಯುತ್ತಮ ಹಾಗೂ ಅನನ್ಯ ಮಾದರಿಯ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗದಲ್ಲಿ ಪದವಿಪೂರ್ವ ಶಿಕ್ಷಣ ಪಡೆಯಲು ಅರ್ಹರಾಗಿರುತ್ತಾರೆ.

ಗಣಿತ, ವಿಜ್ಞಾನ ಹಾಗೂ ಸಾಮಾನ್ಯ ಸಾಮರ್ಥ್ಯ ಕುರಿತು 100 ನಿಮಿಷಗಳ ಪರೀಕ್ಷೆಯು ಮಾರ್ಚ್ 31ರಂದು ಸಿಬಿಎಸ್‌ಸಿ ಮತ್ತು ಐಸಿಎಸ್‌ ಇ ವಿದ್ಯಾರ್ಥಿಗಳಿಗೆ ಹಾಗೂ ಏಪ್ರಿಲ್ 14ರಂದು ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಮೂಡಬಿದಿರೆಯ ವಿದ್ಯಾಗಿರಿ ಶ್ರೀಮತಿ ಸುಂದರಿ ಆಳ್ವ ಆವರಣದಲ್ಲಿನ ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷಾ ಪತ್ರಿಕೆ ಇರಲಿದೆ. ಸಿಬಿಎಸ್‌ ಸಿ ಮತ್ತು ಐಸಿಎಸ್‌ ಇ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾರ್ಚ್ 28 ಕೊನೆಯ ದಿನವಾಗಿದ್ದು, ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ಏಪ್ರಿಲ್ 10ರವರೆಗೆ ಅರ್ಜಿಯನ್ನು ಸಲ್ಲಿಸಬಹುದು” ಎಂದು ಮಾಹಿತಿ ನೀಡಿದರು.

ವಿದ್ಯಾಥಿಗಳ ಅನುಕೂಲಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು https://scholarship.alvas.org/puc/login.php ಮೂಲಕ ಅರ್ಜಿಯನ್ನು ಸಲ್ಲಿಸಬಹುಡಾಗಿದೆ.

ವಿಶೇಷ ಸೂಚನೆ:

ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆಯ ಅಂಕದ ಆಧಾರದ ಮೇಲೆ ಆಯ್ಕೆಯ ಜೊತೆಯಲ್ಲಿ ಪ್ರತ್ಯೇಕವಾಗಿ ಪ್ರತಿ ವರ್ಷದಂತೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಅಂಕವನ್ನು ಪರಿಗಣಿಸಿ, ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆಯ ಮೇಲೂ ಆಯ್ಕೆಗಳು ನಡೆಯುತ್ತವೆ. ಪರೀಕ್ಷೆಯ ದಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಪೋಷಕರ ಜೊತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸಮಾಲೋಚನೆ ನಡೆಸಲಿದ್ದಾರೆ.

ಶೈಕ್ಷಣಿಕ-ಬೋಧನ ಭಿನ್ನತೆ, ಸಾಮಾಜಿಕ ಅಸಮಾನತೆ, ಆರ್ಥಿಕ ಅಜಗಜಾಂತರ, ಪ್ರಾದೇಶಿಕ ಭೇದಭಾವ, ಲಿಂಗ ತಾರತಮ್ಯ ಎಲ್ಲವನ್ನೂ ಮೀರಿ ಅರ್ಹ ಮಕ್ಕಳಿಗೆ ಅರ್ಹತೆಯ ಆಧಾರದಲ್ಲಿ ಅತ್ಯುನ್ನತ ಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಮಹತ್ವಾಕಾಂಕ್ಷಿ ಸದಾಶಯದಂತೆ ಸಂಪೂರ್ಣ ಪಾರದರ್ಶಕವಾಗಿ ಪ್ರವೇಶ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಪ್ರವೇಶ ಪರೀಕ್ಷೆಗಳ ಅಂಕವೇ ಅಂತಿಮ
ಮಾನದಂಡವಾಗಿದೆ.

ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 8884477588/ 6366377827/
6366377823 ಸಂಪರ್ಕಿಸಬಹುದು

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

– ವಿಟ್ಲದ ಯುವಕನ ಮನೆ ಮುಂದೆ ಧರಣಿಗೆ ಕೂತ ಉತ್ತರಭಾರತದ ಯುವತಿ!
– ಉಪ್ಪಿನಂಗಡಿ : ಸರಕಾರಿ ಸಂಘಕ್ಕೆ ಲಕ್ಷಾಂತರ ರೂ ವಂಚನೆ!
– ಮದುವೆ ಮನೆಯಲ್ಲಿ ಲಕ್ಷಾಂತರ ರೂ ಮೌಲ್ಯದ ಬ್ಯಾಗ್ ಕಳವು!
– ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಅಂದರ್!

NAMMUR EXPRESS NEWS
ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕೇಪು ಗ್ರಾಮದ ಅಡ್ಯನಡ್ಕದ ಯುವಕನೊಬ್ಬನ ಮನೆಯ ಮುಂದೆ ಉತ್ತರ ಭಾರತ ಮೂಲದ ಜಲಂದ‌ರ್ ನ ಯುವತಿಯೊಬ್ಬಳು ಧರಣಿ ನಡೆಸಿದ ಘಟನೆ ಮಂಗಳವಾರ ವರದಿಯಾಗಿದೆ. ಈಕೆ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಸಂದರ್ಭ ಅಡ್ಯನಡ್ಕದ ಯುವಕನ ಪರಿಚಯವಾಗಿ ಪ್ರೇಮ ಬೆಳೆದು, ಹಣಕಾಸಿನ ವ್ಯವಹಾರಗಳೂ ನಡೆದಿದೆ ಎನ್ನಲಾಗಿದೆ. ಮಂಗಳವಾರ ಯುವಕನ ಮನೆಯ ಮುಂದೆ ಬಂದ ಸಂತ್ರಸ್ತ ಯುವತಿ, ಯುವಕನನ್ನು ತನಗೆ ಒಪ್ಪಿಸುವಂತೆ ಪಟ್ಟು ಹಿಡಿದಿದ್ದಾಳೆ. ಸ್ಥಳದಲ್ಲಿ ಜನರೂ ಜಮಾಯಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಯುವತಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಸ್ಥಳದಲ್ಲಿ ಎರಡು ಸಮುದಾಯದ ಜನರು ಸೇರಿದ್ದರಿಂದಾಗಿ ಪೊಲೀಸರು ಭದ್ರತೆ ಒದಗಿಸಿದರು.

– ಸರಕಾರಿ ಸಂಘಕ್ಕೆ ಲಕ್ಷಾಂತರ ರೂ ವಂಚನೆ !

ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದು ಸಹಕಾರಿ ಸಂಘಗಳಿಗೆ ಲಕ್ಷಗಟ್ಟಲೆ ರೂಪಾಯಿ ವಂಚನೆ ಎಸಗಿದ ಬಗ್ಗೆ ಇಬ್ಬರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕರು ದೂರು ನೀಡಿದ ಮೇರೆಗೆ ಈ ಪ್ರಕರಣವನ್ನು ದಾಖಲಿಸಲಾಗಿದೆ.

ಜ. 27ರಂದು ಮಧ್ಯಾಹ್ನ ಆರೋಪಿಗಳಾದ ನೆಲ್ಯಾಡಿ ಗ್ರಾಮದವರು ಎನ್ನಲಾಗಿರುವ ಕಡಬ ನಿವಾಸಿ ಸೆಬಾಸ್ಟಿಯನ್ ಮತ್ತು ಕೇರಳ ಮೂಲದ ಡಾನಿಶ್ ಎಂಬವರು ಸಂಘಕ್ಕೆ ಬಂದಿದ್ದು. ಮೇಲ್ನೋಟಕ್ಕೆ ನಕಲಿ ಎಂದು ಕಂಡು ಬಾರದಂತಹ ಒಟ್ಟು 30 ಗ್ರಾಂ ತೂಕದ 4 ನಕಲಿ ಬಳೆಗಳನ್ನು ಸಂಘದಲ್ಲಿ ಅಡಮಾನವಿರಿಸಿ, ಸಂಘದಿಂದ 1.40 ಲಕ್ಷ ರೂಪಾಯಿ ಸಾಲವಾಗಿ ಪಡೆದು ಮೋಸ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ನೆಲ್ಯಾಡಿ ಮಾತ್ರವಲ್ಲದೆ, ಕಡಬ ಮತ್ತು ಉಪ್ಪಿನಂಗಡಿಯ ಸಹಕಾರಿ ಸಂಘಗಳಿಗೂ ಇವರು ವಂಚಿಸಿ ಲಕ್ಷಗಟ್ಟಲೆ ರೂಪಾಯಿ ಪಂಗನಾಮ ಹಾಕಿರುವುದಾಗಿ ಆರೋಪಿಸಲಾಗಿದೆ. ಉಪ್ಪಿನಂಗಡಿಯ ಒಡಿಯೂರು ಸಹಕಾರಿ ಸಂಘದಲ್ಲಿ 1.70 ಲಕ್ಷ ರೂ. ಸಾಲ, ಕಡಬದ ಅಲಂಕಾರು ಒಕ್ಕಲಿಗ ಸಹಕಾರಿ ಸಂಘಗಳಲ್ಲೂ ನಕಲಿ ಚಿನ್ನ ಅಡವಿಟ್ಟು 1.35 ಲಕ್ಷ ರೂ. ಸಾಲ ಪಡೆದಿರುವುದಾಗಿ ಆರೋಪಿಸಲಾಗಿದೆ.

ವಿವಿಧ ಸಹಕಾರಿ ಸಂಘಗಳಿಂದ ದೂರುಗಳು ಬಂದಿರುವರಿಂದ ಈ ಪ್ರಕರಣದಲ್ಲಿ ಸಹಕಾರಿ ಸಂಘಗಳ ಚಿನ್ನಾಭರಣ ಪರಿಶೀಲನಾಗಾರರ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಕಡಬ,ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ವಂಚನಾ ಪ್ರಕರಣಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ಮುಂದುವರಿದಿದೆ.

– ಮದುವೆ ಮನೆಯಲ್ಲಿ ಲಕ್ಷಾಂತರ ರೂ ಮೌಲ್ಯದ ಸೊತ್ತುಯಿದ್ದ ಭ್ಯಾಗ್ ಕಳವು!

ಬ್ರಹ್ಮಾವರ : ಮದುಮಕ್ಕಳ ಜೊತೆ ಪೋಟೋ ತೆಗೆಸಿ ಬರುವದರಲ್ಲಿ ಕುರ್ಚಿಯ ಮೇಲಿಟ್ಟ ಲಕ್ಷಾಂತರ ಮೌಲ್ಯದ ಸೊತ್ತುಗಳಿದ್ದ ಬ್ಯಾಗ್ ನ್ನು ಕಳ್ಳನೊಬ್ಬ ಎಗರಿಸಿದ ಘಟನೆ ಬ್ರಹ್ಮಾವರದ ಶ್ಯಾಮಿಲಿ ಶನಾಯ ಹಾಲ್‌ನಲ್ಲಿ ನಡೆದಿದೆ. ನೀಲಾವರದ ಜಯಶ್ರೀ ಸುರೇಶ್ ಎಂಬವರ ಮಗಳ ಮದುವೆ ಆರತಕ್ಷತೆ ಸಮಾರಂಭ ಬ್ರಹ್ಮಾವರ ಶ್ಯಾಮಿಲಿ ಶನಾಯ ಹಾಲ್‌ನಲ್ಲಿ ನಡೆದಿದ್ದು, ಈ ವೇಳೆ ಜಯಶ್ರೀ ತನ್ನ ಕೈಯಲ್ಲಿದ್ದ ಬ್ಯಾಗನ್ನು ಹಾಲ್ ಕುರ್ಚಿಯ ಮೇಲೆ ಇಟ್ಟು ಮಗಳೊಂದಿಗೆ ಫೋಟೋ ತೆಗೆಸಿದ್ದರು. ಬಳಿಕ ಬಂದು ನೋಡಿದಾಗ ಬ್ಯಾಗ್ ಕಳವಾಗಿರುವುದು ಕಂಡುಬಂತು. ಬ್ಯಾಗ್‌ನಲ್ಲಿ 2,40,000 ರೂ. ಮೌಲ್ಯದ ನಗದು ಹಾಗೂ ವಸ್ತುಗಳಿದ್ದವು ಎಂದು ತಿಳಿದುಬಂದಿದೆ. ಸಿಸಿಟಿವಿ ಫೂಟೇಜ್‌ನಲ್ಲಿ ಕಪ್ಪು ಶರ್ಟ್‌ನ ಹುಡುಗ ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವುದನ್ನು ಸೆರೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ!

ಮಂಗಳೂರು: ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಕೇಂದ್ರ ಉಪ- ವಿಭಾಗ ಆ್ಯಂಟಿ ಡ್ರಗ್ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅತ್ತಾವರದ ಆದಿತ್ಯ ಕೆ (29), ಅಡ್ಯಾರ್ ಪದವು ನಿವಾಸಿ ರೋಹನ್ ಸಿಲ್ವೇರಾ ಬಂಧಿತರು. ಬಂಧಿತರಿಂದ ಸುಮಾರು ರೂ 50,000 ಮೌಲ್ಯದ 27 ಗ್ರಾಂ ಹೈಡೋವೀಡ್ ಗಾಂಜಾ, ಸುಮಾರು ರೂ 1,00,000 ಮೌಲ್ಯದ 2 ಕೆಜಿ 95 ಗ್ರಾಂನ ಗಾಂಜಾ, ರೂ. 8000 ಮೌಲ್ಯದ ಗಾಂಜಾ ಆಪ್ ಆಯಿಲ್, ರೂ,16,800 ಮೌಲ್ಯದ ಎಲ್.ಎಸ್.ಡಿ ಸ್ಟಾಂಫ್. ಡಿಜಿಟಲ್ ತೂಕ ಮಾಪನಗಳು-2, ಕೃತ್ಯಕ್ಕೆ ಬಳಸಿದ ರೂ 90,000 ಮೌಲ್ಯದ ಎರಡು ಮೊಬೈಲ್ ಫೋನ್ ಮತ್ತು ರೂ 20 ಲಕ್ಷ ಮೌಲ್ಯದ ಕಪ್ಪು ಬಣ್ಣದ ಹುಂಡೈ ಕಂಪೆನಿಯ ವರ್ನ ಮಾಡೆಲ್ ನ ಕಾರು- 1 ಮತ್ತು ಇತರ ಸೊತ್ತುಗಳನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿ ಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ.

– ಪುತ್ತೂರು: ನವವಿವಾಹಿತೆ ನೇಣಿಗೆ ಶರಣು!

ಪುತ್ತೂರು: ನವವಿವಾಹಿತೆಯೊಬ್ಬರು ನೇಣು ಬಿಗಿದು ಪತಿಯ ಮನೆಯಲ್ಲಿ ಆತ್ಯಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಕುರಿಯ ಗಡಾಜೆ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಕ್ಕಾಜೆ ರಾಮ್ಮಣ್ಣ ಗೌಡ ಮತ್ತು ಪುಷ್ಪ ದಂಪತಿ ಪುತ್ರಿ ಶೋಭಾ (26) ನೇಣಿಗೆ ಶರಣಾದವರು. ಶೋಭಾ ಅವರನ್ನು ಕಳೆದ ಒಂದೂವರೆ ತಿಂಗಳ ಹಿಂದೆ ಪುತ್ತೂರು ಕುರಿಯ ಗಡಾಜೆ ರೋಹಿತ್ ರವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ಕಾರಣ ತನಿಖೆಯಿಂದ ತಿಳಿಯಬೇಕಾಗಿದೆ.

Categories
ಕರಾವಳಿ ಕಾರ್ಕಳ ಯಶಸ್ಸಿನ ಕಥೆಗಳು ರಾಜ್ಯ

ಒಂದು ವರ್ಷದ ಮಗುವಿನ ಸಾಧನೆ

ಒಂದು ವರ್ಷದ ಮಗುವಿನ ಸಾಧನೆ
– ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆ.
– ಒಂದನೇ ವರ್ಷದಲ್ಲೆ ದಾಖಲೆ ನಿರ್ಮಿಸಿದ ಕಾರ್ಕಳದ ಮಗು!

NAMMUR EXPRESS NEWS
ಕಾರ್ಕಳ : ಇಂಡಿಯ ಬುಕ್ ಆಫ್ ರೆಕಾರ್ಡ್ಸ್ನಲ್ಲಿ 1 ವರ್ಷ 7 ತಿಂಗಳ ಮಗು ಆರುಷ್ ಧೀರಜ್ ದಾಖಲೆ ನಿರ್ಮಿಸಿದ್ದಾರೆ. ಆರುಷ್ ಉಡುಪಿ ಪಂದುಬೆಟ್ಟುವಿನ ಅಕ್ಷಿತ ಮತ್ತು ಧೀರಜ್ ಅವರ ಪುತ್ರ. ಆರುಷ್‌, ಇಂಗ್ಲಿಷ್ ಅಕ್ಷರಗಳು(26), 1 ರಿಂದ 10 ಅಂಕೆಗಳು, 27 ಪ್ರಾಣಿಗಳು, 27 ಪಕ್ಷಿಗಳು, 26 ಹಣ್ಣುಗಳು, 25 ತರಕಾರಿಗಳು, 18 ದೇಹದ ಅಂಗಗಳು, 9 ಗ್ಯಾಜೆಟ್ಸ್ 47 ದಿನ ಬಳಕೆಯ ವಸ್ತುಗಳು, 14 ಬಣ್ಣಗಳು, 10 ತಿಂಡಿಗಳು, 27 ಆಟದ ಸಾಮಗ್ರಿಗಳು, 8 ಭಾವನೆಗಳು, 27 ವಾಹನಗಳು, 20 ಹೂವುಗಳು, 33 ಕ್ರಿಯಾಪದಗಳು, 6 ಆಕಾರಗಳು ಸೇರಿದಂತೆ 350 ಕ್ಕೂ ಹೆಚ್ಚು ವಸ್ತುಗಳನ್ನು ಗುರುತಿಸುವ ಮೂಲಕ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಅಗಾಧ ಸಾಧಕರಾಗಿದ್ದಾರೆ .

Categories
ಕರಾವಳಿ ಮಂಗಳೂರು

ವಿಮಾನದಲ್ಲಿ ಬಂತು ವಿದೇಶಿ ಅಡಿಕೆ!

ವಿಮಾನದಲ್ಲಿ ಬಂತು ವಿದೇಶಿ ಅಡಿಕೆ!
– ದೇಶದೊಳಕ್ಕೆ ಬರುತ್ತಿದೆ ವಿದೇಶಿ ಅಡಿಕೆ.. ಇಲ್ಲಿ ಅಡಿಕೆ ಏನಾಗುತ್ತೆ?
– ಕಳ್ಳ ಸಾಗಾಣಿಕೆ ತಡೆ ಮಾಡದಿದ್ರೆ ದರ ಇಳಿಕೆ?
– ಅಗರ್ತಲಾದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಶಿವಮೊಗ್ಗಕ್ಕೆ ಅಡಕೆ ರವಾನೆ

NAMMUR EXPRESS NEWS
ಮಂಗಳೂರು: ಇತ್ತೀಚೆಗೆ ವಿದೇಶಿ ಅಡಕೆ ಬೇರೆ ಬೇರೆ ವಿಧಗಳಲ್ಲಿ ಮತ್ತು ಬೇರೆ ಬೇರೆ ಮಾರ್ಗಗಳಲ್ಲಿ ಕಳ್ಳ ಸಾಗಾಣಿಕೆಯ ಮೂಲಕ ದೇಶದೊಳಕ್ಕೆ ಅವ್ಯಾಹತವಾಗಿ ಬರುತ್ತಿದ್ದು, ಸರಕಾರದ ಖಜಾನೆಗೆ ಕನ್ನ ಹಾಕುವ ಕೆಲಸ ನಿರಾತಂಕವಾಗಿ ನಡೆಯುತ್ತಿರುವುದರ ಬಗ್ಗೆ ಕ್ಯಾಂಪ್ಕೊ ಆತಂಕ ವ್ಯಕ್ತಪಡಿಸಿದ್ದು, ಸರಕಾರ ಇದನ್ನು ತಡೆಗಟ್ಟಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ. ಇತ್ತೀಚೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್‌ ಮೂಲಕ ನಾನಾ ಭಾಗಗಳಿಂದ ಅಡಕೆ ಮಂಗಳೂರಿಗೆ ಬಂದು, ಇಲ್ಲಿಂದಲೇ ಬೇರೆ ಬೇರೆ ಪ್ರದೇಶಗಳಿಗೆ ರವಾನೆಯಾಗುತ್ತಿದೆ.

ಅಡಕೆ ಬೆಳೆಯ ಪಾರಂಪರಿಕ ಕ್ಷೇತ್ರಗಳಾದ ಕರಾವಳಿ ಮತ್ತು ಮಲೆನಾಡಿಗೂ ಕಳ್ಳ ಸಾಗಾಣಿಕೆಯ ಕಬಂಧಬಾಹು ಚಾಚಿರುವ ಬಗ್ಗೆ ಕ್ಯಾಂಪ್ಕೊ ತೀವ್ರ ಕಳವಳ ವ್ಯಕ್ತಪಡಿಸಿದೆ. ಬರುತ್ತಿರುವ ಅಡಕೆ ಬೆಳೆಯ ಮೂಲ, ಅದರ ದರ ಮತ್ತು ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸಿ ಸರಕಾರಕ್ಕೆ ತೆರಿಗೆ ಪಾವತಿಯಲ್ಲಾಗುವ ವಂಚನೆ ಬಗ್ಗೆ ತನಿಖೆ ನಡೆಸುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಕ್ಯಾಂಪ್ಕೊ ಅಧ್ಯಕ್ಷ ತಿಳಿಸಿದ್ದಾರೆ.

ಅಗರ್ತಲಾದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಶಿವಮೊಗ್ಗಕ್ಕೆ ಅಡಕೆ ರವಾನೆ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎ)ವು ಜನವರಿ ಆರಂಭದಲ್ಲಿ ತನ್ನ ಇಂಟಿಗ್ರೇಟೆಡ್‌ ಕಾರ್ಗೋ ಟರ್ಮಿನಲ್‌ (ಐಸಿಟಿ)ನಲ್ಲಿ ಉಷ್ಣವಲಯದ ಬೆಳೆಯಾದ ಅಡಕೆ ನಿರ್ವಹಣೆಗೆ ಅನುಕೂಲ ಮಾಡಿಕೊಟ್ಟಿದೆ. 1,519 ಕೆಜಿ ತೂಕದ ಕೆಂಪು ತಳಿಯ ಅಡಕೆಯನ್ನು 60 ಮೂಟೆಗಳಲ್ಲಿ ಬೈಲಿ ಏರ್‌ ಕಾರ್ಗೋ ಮೂಲಕ ಅಗರ್ತಲಾದಿಂದ ಕರಾವಳಿ ಪಟ್ಟಣಕ್ಕೆ ತರಲಾಗಿದೆ. ಕಳೆದ ಮೇ ತಿಂಗಳಲ್ಲಿ ದೇಶೀಯ ಸರಕು ಕಾರ್ಯಾಚರಣೆ ಪ್ರಾರಂಭಿಸಿದಾಗಿನಿಂದ ಇಂಟಿಗ್ರೇಟೆಡ್‌ ಕಾರ್ಗೊ ಟರ್ಮಿನಲ್‌ ನಿರ್ವಹಿಸಿದ ಅತಿ ಹೆಚ್ಚಿನ ಪ್ರಮಾಣದ ಬೆಳೆ ಇದಾಗಿದೆ.

ಶಿವಮೊಗ್ಗ ಮೂಲದ ಅಡಕೆ ವ್ಯಾಪಾರ ಕಂಪನಿ ಈ ಅಡಿಕೆ ಖರೀದಿಸಿದೆ. ಒಂದು ದಿನದಲ್ಲಿ ನಿರ್ವಹಿಸಿದ ಅತಿ ಹೆಚ್ಚಿನ ಪ್ರಮಾಣದ ಆಮದು ಸರಕು ಆಗಿದೆ. ಈ ಹಿಂದೆ ಐಸಿಟಿ ಅಡಕೆಯ ಒಳಬರುವ ಸಣ್ಣ ಪ್ರಮಾಣದ ಪಾರ್ಸೆಲ್‌ಗಳನ್ನು ನಿರ್ವಹಿಸುತ್ತಿತ್ತು. ಕಂಪನಿ ಪ್ರತಿನಿಧಿಗಳು ಪಾರ್ಸೆಲ್‌ ಸ್ವೀಕರಿಸಿ ನಂತರ ಹೆಚ್ಚಿನ ಸಂಸ್ಕರಣೆಗಾಗಿ ರಸ್ತೆಯ ಮೂಲಕ ಶಿವಮೊಗ್ಗಕ್ಕೆ ಬೆಳೆಯನ್ನು ಸಾಗಿಸಿದ್ದಾರೆ. ಅಗರ್ತಲಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ರಸ್ತೆ ಮೂಲಕ ನಿಯಮಿತವಾಗಿ ಅಡಕೆಯನ್ನು ಪಡೆಯುತ್ತಿದ್ದ ಕಂಪನಿ ಇದೇ ಮೊದಲ ಬಾರಿಗೆ ಏರ್ಲಿಫ್ಟ್‌ ಮಾಡುವ ಮೂಲಕ ಪಡೆದುಕೊಂಡಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

– ಚಾಲಕನ ನಿರ್ಲಕ್ಷ್ಯದಿಂದ ಪಾದಾಚಾರಿ ಸಾವು!
– ಕೆಲಸ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚನೆ!
– ಶಾಲೆಯಲ್ಲಿ ಸಾವಿರಾರು ಮೌಲ್ಯದ ವಸ್ತುಗಳು ಕಳವು!

NAMMUR EXPRESS NEWS
ಮಂಗಳೂರು: ಪಡೀಲ್ ಪೊಲೀಸ್ ಚೆಕ್‌ಪೋಸ್ಟ್ ಬಳಿ ಸೋಮವಾರ ರಾತ್ರಿ ಕಾರು ಢಿಕ್ಕಿಯಾಗಿ ಪಾದಚಾರಿ ಮೃತಪಟ್ಟು, ಪೊಲೀಸ್ ಗಾಯಗೊಂಡ ಘಟನೆ ನಡೆದಿದೆ. ಮೃತ ಪಟ್ಟ ವ್ಯಕ್ತಿ ಒರಿಸ್ಸಾ ಮೂಲದ ದಂಡಸಿ ಮಾಲಿಕ್ ಎಂದು ಗುರುತಿಸಲಾಗಿದೆ. ಅಲ್ಲದೆ ಈ ಅಪಘಾತದಿಂದ ಚೆಕ್‌ಪೋಸ್ಟ್ ಬಳಿ ಕರ್ತವ್ಯದಲ್ಲಿದ್ದ ಪೊಲೀಸ್ ಹರೀಶ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅಪಘಾತ ಸಂಭವಿಸಿದೆ.

ಕೆಲಸ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚನೆ!

ಬಂಟ್ವಾಳ : ಕೆಲಸ ಕೊಡಿಸುವುದಾಗಿ ಪೆರ್ನೆಯ ಇಂಜಿನಿಯರಿಂಗ್‌ ವಿದ್ಯಾರ್ಥಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ತಾಲೂಕಿನ ಪೆರ್ನೆ ನಿವಾಸಿ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ. ಪೆರ್ನೆ ನಿವಾಸಿ ಭವಿತ್ ಕೆ ಎನ್ ವಂಚನೆಗೊಳಗಾದ ಮೆರೈನ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಾಗಿದ್ದು, ಆರೋಪಿಯನ್ನು ಪ್ರಜ್ವಲ್ ಎಂದು ಹೆಸರಿಸಲಾಗಿದೆ. ಭವಿತ್ ಅವರಿಗೆ ಪ್ರಜ್ವಲ್ ಎಂಬಾತ ಸಾಮಾಜಿಕ ಜಾಲತಣವಾದ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದು, ಆತನನ್ನು ಕಳೆದ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಭೇಟಿಯಾಗಿರುತ್ತಾನೆ.

ಭೇಟಿ ವೇಳೆ ಮಾತುಕತೆ ನಡೆದು ಮೆರೈನ್ ಕೆಲಸಕ್ಕಾಗಿ 3 ಲಕ್ಷ ಖರ್ಚು ಇದೆ ಎಂದು ಹೇಳಿದಂತೆ ಭವಿತ್ ಅವರು ಜೂನ್ 16 ರಿಂದ ಆಗಸ್ಟ್ 28ರ ಅವಧಿಯಲ್ಲಿ ಹಂತ ಹಂತವಾಗಿ ಪ್ರಜ್ವಲ್ ಖಾತೆಗೆ ಒಟ್ಟು 2.10 ಲಕ್ಷ ರೂಪಾಯಿ ಪಾವತಿಸಿದ್ದಾನೆ. ಬಳಿಕ ಪ್ರಜ್ವಲ್ ನಿಮಗೆ ಕೆಲಸ ಕೊಡಲು ಅಗುವುದಿಲ್ಲ. 10 ದಿನಗಳಲ್ಲಿ ನಿಮ್ಮ ಹಣ ವಾಪಾಸು ನೀಡುತ್ತೇನೆ ಎಂದು ಹೇಳಿ ನಂಬಿಸಿದ್ದು ಇದುವರೆಗೆ ಭವಿತ್ ಅವರಿಗೆ ಕೆಲಸವೂ ನೀಡದೆ ಹಣವನ್ನೂ ವಾಪಾಸು ನೀಡದೆ ವಂಚಿಸಿರುತ್ತಾನೆ ಎಂಬುದಾಗಿ ನೀಡಿದ ದೂರಿನಂತೆ ಇದೀಗ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶಾಲೆಯಲ್ಲಿ ಸಾವಿರಾರು ಮೌಲ್ಯದ ವಸ್ತುಗಳು ಕಳವು!

ಪುತ್ತೂರು :ಶಾಲಾ ಕೊಠಡಿಯ ಬೀಗ ಮುರಿದು ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆ ಕೊಳ್ತಿಗೆ ಗ್ರಾಮದ ಸಿದ್ಧಮೂಲೆ ಷಣ್ಮುಖದೇವ ಪ್ರೌಢಶಾಲೆಯಲ್ಲಿ ನಡೆದಿದೆ. ಈ ಬಗ್ಗೆ ಶಾಲಾ ಪ್ರಭಾರ ಮುಖ್ಯ ಶಿಕ್ಷರಾದ ಕೃಷ್ಣವೇಣಿ ಎಸ್ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದು, ಶನಿವಾರ ಸಂಜೆ ಶಾಲೆಗೆ ಬೀಗ ಹಾಕಿ ತೆರಳಿದ್ದು, ಭಾನುವಾರ ಹಾಗೂ ಸೋಮವಾರ ಶಾಲೆಗೆ ರಜೆ ಇತ್ತು. ಮಂಗಳವಾರ ಬೆಳಿಗ್ಗೆ ಶಿಕ್ಷಕರಾದ ಅನಿರುದ್ಧ ಹಾಗೂ ವೀಣಾ ಕುಮಾರಿ ಶಾಲೆಗೆ ಬಂದಾಗ ಶಾಲಾ ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದಿರುವುದು ಕಂಡು ಬಂದಿದೆ.

ಈ ಬಗ್ಗೆ ಮುಖ್ಯಶಿಕ್ಷಕರಿಗೆ ಮಾಹಿತಿ ನೀಡಿದಂತೆ ಅವರು ಬಂದು ಪರಿಶೀಲಿಸಿದ್ದಾಗ ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದು ಒಳಪ್ರವೇಶಿಸಿದ ಅಪರಿಚಿತ ಕಳ್ಳರು ಅಲ್ಲಿದ್ದ 46 ಸಾವಿರ ರೂಪಾಯಿ ಮೌಲ್ಯದ ಕಂಪ್ಯೂಟ‌ರ್ ಹಾಗೂ ಮಾನಿಟರ್, 2 ಕಪಾಟುಗಳಲ್ಲಿದ್ದ 14,500/- ರೂಪಾಯಿ ನಗದು ಹಣ, 1500/- ರೂಪಾಯಿ ಮೌಲ್ಯದ ಚಾರ್ಜರ್ ಲೈಟ್, 6 ಸಾವಿರ ರೂಪಾಯಿ ಮೌಲ್ಯದ 2 ಕಾರ್ಡ್ ಲೆಸ್ ಮೈಕ್, 5 ಸಾವಿರ ರೂಪಾಯಿ ಮೌಲ್ಯದ ಸ್ಪೀಕರ್ ಕಳವುಗೈಯ್ಯಲಾಗಿದೆ. ಕಳವಾಗಿರುವ ಒಟ್ಟು ಸೊತ್ತುಗಳ ಮೌಲ್ಯ 73 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಶಾಲಾ ವಿದ್ಯುತ್ ಏರಿಳಿತ ಕಾರಣಕ್ಕಾಗಿ ಶಾಲೆಗೆ ಬೀಗ ಹಾಕಿ ತೆರಳುವಾಗ ಶಿಕ್ಷಕರು ಸೀಸಿ ಕ್ಯಾಮೆರಾ ಆಫ್ ಮಾಡಿ ತೆರಳಿದ್ದರಿಂದ ಕಳ್ಳರ ಸೀಸಿ ಕ್ಯಾಮೆರಾ ಫೂಟೇಜ್ ಲಭ್ಯವಾಗಿಲ್ಲ. .

Categories
ಕರಾವಳಿ ಮಂಗಳೂರು

ಸ್ವದೇಶಿ ಅಡಿಕೆಗೆ ಕಂಟಕಾ!?

ಸ್ವದೇಶಿ ಅಡಿಕೆಗೆ ಕಂಟಕಾ!?
– ವಿದೇಶದಿಂದ ಬರುತ್ತಿದೆ ಅಡಿಕೆ!
– ಕಳ್ಳ ಸಾಗಾಣಿಕೆ ತಡೆಗೆ ಕ್ಯಾಂಪ್ಕೊ ಆಗ್ರಹ!
– ಸರಕಾರ ಇದನ್ನು ತಡೆಗಟ್ಟಲು ಸೂಕ್ತ ಕ್ರಮ!
– ಅಗರ್ತಲಾದಿಂದ ವಿಮಾನದ ಮೂಲಕ ಶಿವಮೊಗ್ಗಕ್ಕೆ ಅಡಕೆ ರವಾನೆ!

NAMMUR EXPRESS NEWS
ಮಂಗಳೂರು: ಇತ್ತೀಚೆಗೆ ವಿದೇಶಿ ಅಡಕೆ ಬೇರೆ ಬೇರೆ ವಿಧಗಳಲ್ಲಿ ಮತ್ತು ಬೇರೆ ಬೇರೆ ಮಾರ್ಗಗಳಲ್ಲಿ ಕಳ್ಳ ಸಾಗಾಣಿಕೆಯ ಮೂಲಕ ದೇಶದೊಳಕ್ಕೆ ಅವ್ಯಾಹತವಾಗಿ ಬರುತ್ತಿದ್ದು, ಸರಕಾರದ ಖಜಾನೆಗೆ ಕನ್ನ ಹಾಕುವ ಕೆಲಸ ನಿರಾತಂಕವಾಗಿ ನಡೆಯುತ್ತಿರುವುದರ ಬಗ್ಗೆ ಕ್ಯಾಂಪ್ಕೊ ಆತಂಕ ವ್ಯಕ್ತಪಡಿಸಿದ್ದು, ಸರಕಾರ ಇದನ್ನು ತಡೆಗಟ್ಟಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.

ಇತ್ತೀಚೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್‌ ಮೂಲಕ ನಾನಾ ಭಾಗಗಳಿಂದ ಅಡಕೆ ಮಂಗಳೂರಿಗೆ ಬಂದು, ಇಲ್ಲಿಂದಲೇ ಬೇರೆ ಬೇರೆ ಪ್ರದೇಶಗಳಿಗೆ ರವಾನೆಯಾಗುತ್ತಿದೆ. ಅಡಕೆ ಬೆಳೆಯ ಪಾರಂಪರಿಕ ಕ್ಷೇತ್ರಗಳಾದ ಕರಾವಳಿ ಮತ್ತು ಮಲೆನಾಡಿಗೂ ಕಳ್ಳ ಸಾಗಾಣಿಕೆಯ ಕಬಂಧಬಾಹು ಚಾಚಿರುವ ಬಗ್ಗೆ ಕ್ಯಾಂಪ್ಕೊ ತೀವ್ರ ಕಳವಳ ವ್ಯಕ್ತಪಡಿಸಿದೆ. ಬರುತ್ತಿರುವ ಅಡಕೆ ಬೆಳೆಯ ಮೂಲ, ಅದರ ದರ ಮತ್ತು ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸಿ ಸರಕಾರಕ್ಕೆ ತೆರಿಗೆ ಪಾವತಿಯಲ್ಲಾಗುವ ವಂಚನೆ ಬಗ್ಗೆ ತನಿಖೆ ನಡೆಸುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಕ್ಯಾಂಪ್ಕೊ ಅಧ್ಯಕ್ಷ ತಿಳಿಸಿದ್ದಾರೆ.

ಅಗರ್ತಲಾದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಶಿವಮೊಗ್ಗಕ್ಕೆ ಅಡಕೆ ರವಾನೆ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎ)ವು ಜನವರಿ ಆರಂಭದಲ್ಲಿ ತನ್ನ ಇಂಟಿಗ್ರೇಟೆಡ್‌ ಕಾರ್ಗೋ ಟರ್ಮಿನಲ್‌ (ಐಸಿಟಿ)ನಲ್ಲಿ ಉಷ್ಣವಲಯದ ಬೆಳೆಯಾದ ಅಡಕೆ ನಿರ್ವಹಣೆಗೆ ಅನುಕೂಲ ಮಾಡಿಕೊಟ್ಟಿದೆ. 1,519 ಕೆಜಿ ತೂಕದ ಕೆಂಪು ತಳಿಯ ಅಡಕೆಯನ್ನು 60 ಮೂಟೆಗಳಲ್ಲಿ ಬೈಲಿ ಏರ್‌ ಕಾರ್ಗೋ ಮೂಲಕ ಅಗರ್ತಲಾದಿಂದ ಕರಾವಳಿ ಪಟ್ಟಣಕ್ಕೆ ತರಲಾಗಿದೆ. ಕಳೆದ ಮೇ ತಿಂಗಳಲ್ಲಿ ದೇಶೀಯ ಸರಕು ಕಾರ್ಯಾಚರಣೆ ಪ್ರಾರಂಭಿಸಿದಾಗಿನಿಂದ ಇಂಟಿಗ್ರೇಟೆಡ್‌ ಕಾರ್ಗೊ ಟರ್ಮಿನಲ್‌ ನಿರ್ವಹಿಸಿದ ಅತಿ ಹೆಚ್ಚಿನ ಪ್ರಮಾಣದ ಬೆಳೆ ಇದಾಗಿದೆ. ಶಿವಮೊಗ್ಗ ಮೂಲದ ಅಡಕೆ ವ್ಯಾಪಾರ ಕಂಪನಿ ಶ್ರೀನಿವಾಸ್‌ ಸುಪಾರಿ ಟ್ರೇಡರ್ಸ್‌ ಈ ಅಡಕೆಯನ್ನು ಖರೀದಿಸಿದೆ.

ಇದು 2023ರ ಮೇ 1ರ ಬಳಿಕ ಐಸಿಟಿಯು ಒಂದು ದಿನದಲ್ಲಿ ನಿರ್ವಹಿಸಿದ ಅತಿ ಹೆಚ್ಚಿನ ಪ್ರಮಾಣದ ಆಮದು ಸರಕು ಆಗಿದೆ. ಈ ಹಿಂದೆ ಐಸಿಟಿ ಅಡಕೆಯ ಒಳಬರುವ ಸಣ್ಣ ಪ್ರಮಾಣದ ಪಾರ್ಸೆಲ್‌ಗಳನ್ನು ನಿರ್ವಹಿಸುತ್ತಿತ್ತು. ಕಂಪನಿ ಪ್ರತಿನಿಧಿಗಳು ಪಾರ್ಸೆಲ್‌ ಸ್ವೀಕರಿಸಿ ನಂತರ ಹೆಚ್ಚಿನ ಸಂಸ್ಕರಣೆಗಾಗಿ ರಸ್ತೆಯ ಮೂಲಕ ಶಿವಮೊಗ್ಗಕ್ಕೆ ಬೆಳೆಯನ್ನು ಸಾಗಿಸಿದ್ದಾರೆ. ಅಗರ್ತಲಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ರಸ್ತೆ ಮೂಲಕ ನಿಯಮಿತವಾಗಿ ಅಡಕೆಯನ್ನು ಪಡೆಯುತ್ತಿದ್ದ ಕಂಪನಿ ಇದೇ ಮೊದಲ ಬಾರಿಗೆ ಏರ್ಲಿಫ್ಟ್‌ ಮಾಡುವ ಮೂಲಕ ಪಡೆದುಕೊಂಡಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

Categories
ಉಡುಪಿ ಕರಾವಳಿ

ಕರಾವಳಿಯಲ್ಲಿ ಮುಗಿಲು ಮುಟ್ಟಿದ ರಾಮೋತ್ಸವದ ಸಡಗರ

ಕರಾವಳಿಯಲ್ಲಿ ಮುಗಿಲು ಮುಟ್ಟಿದ ರಾಮೋತ್ಸವದ ಸಡಗರ
– ದೇವಸ್ಥಾನಗಳಲ್ಲಿ ರಾಮನ ನೆನೆದು ವಿಶೇಷ ಅಲಂಕಾರ
– ಎಲ್ಲೆಲ್ಲೂ ರಾಮ, ರಾಮ ಕೀರ್ತನೆ
– ಗಣ್ಯರಿಂದ ಆರತಿ, ಪೂಜೆ, ರಾಮ ಭಜನೆ

NAMMUR EXPRESS NEWS
ಮಂಗಳೂರು: ಅಯೋಧ್ಯಾ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಪುಣ್ಯ ಘಳಿಗೆಯನ್ನು ಕರಾವಳಿಯಾದ್ಯಂತವೂ ಜನ‌ ಕಣ್ತುಂಬಿಕೊಂಡಿದ್ದಾರೆ. ಎಲ್ಲ ಕಡೆ ಹಬ್ಬದ ಸಂಭ್ರಮ, ಸಡಗರ ಕಂಡುಬಂದಿದ್ದು ಶ್ರೀ ಕ್ಷೇತ್ರ ಕಟೀಲು, ಪೊಳಲಿ, ಕದ್ರಿ, ಮಂಗಳಾದೇವಿ, ಮರೋಳಿ, ಕುದ್ರೋಳಿ, ಪಾಂಡೇಶ್ವರ ಸಹಿತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿದೆ. ಮುಜರಾಯಿ ದೇವಾಲಯಗಳಲ್ಲಿಯೂ ವಿಶೇಷ ಪೂಜೆ ಆಯೋಜನೆಗೊಂಡಿದ್ದು, ಬೆಳಗ್ಗಿನಿಂದಲೇ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದು, ವಿಶೇಷ ಪೂಜೆ, ರಾಮತಾರಕ ಯಜ್ಞ, ಭಜನೆ ಇತ್ಯಾದಿ ಕಾರ್ಯಕ್ರಮಗಳು ನಡೆದವು.  ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಪುಣ್ಯ ಕ್ಷಣವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಲು ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಹಾಗೂ ಸಂಘ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲೂ ಎಲ್‌ಇಡಿ ಮೂಲಕ ವ್ಯವಸ್ಥೆ ಮಾಡಲಾಗಿತ್ತು.

ಎಲ್ಲಿ ನೋಡಿದರಲ್ಲಿ ಕೇಸರಿಯ ರಂಗು :

ಕರಾವಳಿಯ ವಿವಿಧ ಭಾಗಗಳಲ್ಲಿ ಕೇಸರಿ ಧ್ವಜ ತೋರಣ ಕಂಗೊಳಿಸಿದ್ದು, ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ಶ್ರೀರಾಮನ ಕಟೌಟ್, ಶುಭ ಕೋರುವ ಬ್ಯಾನರ್‌ಗಳು, ಪ್ರವೇಶ ದ್ವಾರಗಳು, ಪತಾಕೆಗಳು ರಾರಾಜಿಸಿದವು. ಕೆಲವು ಬಸ್, ಆಟೋ, ಟ್ಯಾಕ್ಸಿ ನಿಲ್ದಾಣಗಳೂ ಕೇಸರಿಮಯವಾಗಿದ್ದವು. ವಾಹನಗಳಲ್ಲೂ ಶ್ರೀರಾಮ, ರಾಮ ಮಂದಿರದ ಸ್ಟಿಕ್ಕರ್‌ಗಳಿವೆ. ವಿಶೇಷವಾಗಿ ಕೆಲವು ಮನೆಗಳಲ್ಲಿ ಕೇಸರಿ ಬಾವುಟ, ಜೈ ಶ್ರೀರಾಮ್ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ. ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ|ಡಿ.ವೀರೇಂದ್ರ ಹೆಗ್ಗಡೆ, ಆರ್‌ಎಸ್‌ಎಸ್ ಮುಖಂಡ ಡಾ|ಕಲ್ಲಡ್ಕ ಪ್ರಭಾಕರ ಭಟ್, ಗುರುಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಮಹರ್ಷಿ ಓಂಶ್ರೀ ವಿದ್ಯಾನಂದ ಸರಸ್ವತಿ ಹಾಗೂ ಮಾತಾಶ್ರೀ ಶಿವಜ್ಞಾನಮಯಿ ಸರಸ್ವತಿ, ಬಂಟ್ವಾಳ ಕಾಣಿಯೂರಿನ ಶ್ರೀ ಮಹಾಬಲ ಸರಸ್ವತಿ ಸ್ವಾಮೀಜಿ, ವಿಹಿಂಪ ಮುಖಂಡ ಪ್ರೊ|ಎಂ.ಬಿ. ಪುರಾಣಿಕ್, ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ವಿಶಾಲ್ ಹೆಗ್ಡೆ, ಉದ್ಯಮಿ ಜಿತೇಂದ್ರ ಕೊಟ್ಟಾರಿ ಅವರು ಅಯೋಧ್ಯೆಗೆ ತೆರಳಿದ್ದು, ಪ್ರಾಣ ಪ್ರತಿಷ್ಠೆಯ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಉಡುಪಿಯಲ್ಲಿ ಸಡಗರದ ವಾತಾವರಣ :

ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಸೋಮವಾರ ಬೆಳಗ್ಗೆಯಿಂದ ನಡೆಯಲಿರುವ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮದ ಲೈವ್ ವೀಕ್ಷಣೆಗೆ ಉಡುಪಿ ಜಿಲ್ಲೆಯ ಎಲ್ಲ ದೇವಸ್ಥಾನ ಗಳಲ್ಲೂ ಎಲ್ ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ರಾಮ ತಾರಕ ಜಪ ಯಜ್ಞ, ಹೋಮ, ಹವನ ಇತ್ಯಾದಿಗಳ ಜತೆಗೆ ವಿವಿಧ ಭಜನ ಮಂಡಳಿಗಳಿಂದ ಭಜನೆ ನೆರವೇರದೆ. ಶ್ರೀ ರಾಮೋತ್ಸವದ ಹೆಸರಿನಲ್ಲಿ ದಿನವಿಡಿ ವಿವಿಧ ಕಾರ್ಯಕ್ರಮ ನಡೆಸಲು ಆಯಾ ದೇವಸ್ಥಾನದ ಆಡಳಿತ ಮಂಡಳಿಗಳು ಸಿದ್ಧತೆ ಮಾಡಿಕೊಂಡಿವೆ.

ದೇವರಿಗೆ ವಿಶೇಷ ಪೂಜೆ, ರಂಗಪೂಜೆ, ಶ್ರೀರಾಮ ಪಟ್ಟಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆಯ ಜತೆಗೆ ಮಧ್ಯಾಹ್ನದ ಅನ್ನದಾನದ ವ್ಯವಸ್ಥೆಯನ್ನು ದೇವಸ್ಥಾನಗಳಲ್ಲಿ ಮಾಡಲಾಗಿದೆ. ಜಿಲ್ಲೆಯಾದ್ಯಂತ ಎಲ್ಲ ಮನೆಗಳಿಗೂ ಸಂಘ ಪರಿವಾರ ಸಂಘಟನೆಗಳು ಅಕ್ಷತೆ ವಿತರಣೆ ಮಾಡಿದ್ದು, ವಿಶ್ವ ಹಿಂದೂ ಪರಿಷತ್ ಕರೆಯಂತೆ ಜಿಲ್ಲಾದ್ಯಂತ ದೇವಸ್ಥಾನಗಳು ಮತ್ತು ಭಜನ ಮಂದಿರ ಸಹಿತ ಧಾರ್ಮಿಕ ಕೇಂದ್ರಗಳಲ್ಲಿ ಮಾತ್ರ ರಾಮೋತ್ಸವ, ಪೂಜೆ ಇತ್ಯಾದಿ ನಡೆಸಲಾಯಿತು. ಸಂಜೆ ದೇವಸ್ಥಾನ ಹಾಗೂ ಪ್ರತೀ ಮನೆಯಲ್ಲಿ ದೀಪೋತ್ಸವ ಆಚರಣೆಯಾಗಿದೆ. ಪ್ರತೀ ಮನೆಯಲ್ಲೂ ಕನಿಷ್ಠ 5 ದೀಪ ಹಚ್ಚಿದ್ದು ಕೆಲವು ದೇವಸ್ಥಾನಗಳಲ್ಲಿ ಉತ್ಸವ, ರಥೋತ್ಸವ ನಡೆದವು.

ಕಾರ್ಕಳದಲ್ಲಿ ಸ್ವಯಂ ಪ್ರೇರಣೆಯಿಂದ ಅಂಗಡಿಯನ್ನು ಬಂದ್ ಮಾಡಿದ ವ್ಯಾಪಾರಸ್ಥರು :

ತಾಲೂಕಿನಾದ್ಯಂತ ಸೋಮವಾರ ರಾಮನಾಮ ಸಂಕೀರ್ತನೆ, ರಾಮಭಜನೆ ಸಹಿತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬಜಗೋಳಿ ದಿಡಿಂಬಿರಿಯ ಅಯ್ಯಪ್ಪ ಮಂದಿರದಲ್ಲಿ ದಿನಪೂರ್ತಿ ರಾಮೋತ್ಸವ, ಕುಣಿತ ಭಜನೆ, 1,008 ರಾಮಭಕ್ತರಿಂದ ಹನುಮಾನ್ ಚಾಲೀಸ ಪಠಣ, ಶ್ರೀರಾಮ ತಾರಕ ಮಂತ್ರ ಪಂಯಾಗ,ಶ್ರೀ ರಾಮ ಕರಸೇವಕರಿಗೆ ವಿಶೇಷ ಪ್ರಸಾದ ನೀಡಿ ಗೌರವಾರ್ಪಣೆ ನಡೆಯಿತು. ನಗರದ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ, ದೇವಸ್ಥಾನಗಳಲ್ಲಿ ಸೇರುವಂತೆ ನಗರದಲ್ಲಿ ಸ್ವಯಂ ಸೇವಕರು ಕರಪತ್ರ ಹಂಚಿ ಮನವಿ ಮಾಡಿದ್ದಾರೆ.

ಬೆಳ್ತಂಗಡಿಯಲ್ಲಿ ವಿಶೇಷ ರಂಗ ಪೂಜೆ :

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ನೆರವೇರಿದೆ. ಅಮೃತವರ್ಷಿಣಿ ಸಭಾಭವನದಲ್ಲಿ ಬೆಳಗ್ಗೆ 11ರಿಂದ ಭಜನೆ ಸತ್ಸಂಗ ನಡೆದಿದ್ದು ಹೇಮಾವತಿ ವೀ. ಹೆಗ್ಗಡೆ ಚಾಲನೆ ನೀಡಿದ್ದಾರೆ. ಕನ್ಯಾಡಿ ನಿತ್ಯಾನಂದನಗರದ ಶ್ರೀ ರಾಮಕ್ಷೇತ್ರದಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಭಜನೆ ಸತ್ಸಂಗ ನಡೆದಿದ್ದು ಮದ್ಯಾಹ್ನ 11ರಿಂದ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಪೂರ್ಣಗೊಳ್ಳುವವರೆಗೆ ಕ್ಷೇತ್ರದಲ್ಲಿ ಸೀತಾರಾಮ ಪರಿವಾರ ದೇವರಿಗೆ ವಿಶೇಷ ಪೂಜೆ, ಬಳಿಕ ಅನ್ನಸಂತರ್ಪಣೆ ನೆರವೇರಿಸಲಾಯಿತು. ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಸೀಯಾಳಾಭಿಷೇಕಯುಕ್ತ ಮಹಾಪೂಜೆ, 120 ಅಗಲು ರಂಗಪೂಜೆ ನೆರವೇರಿದೆ. ಉಜಿರೆ ಜನಾರ್ದನ ದೇವಸ್ಥಾನ, ಸೂರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮಗಳು ನೆರವೇರಿದವು.

Categories
ಕರಾವಳಿ

ಯಕ್ಷ ರಂಗದ ರಾಜ ಇನ್ನಿಲ್ಲ!

ಯಕ್ಷ ರಂಗದ ರಾಜ ಇನ್ನಿಲ್ಲ!
– ಪೆರುವಾಯಿ ನಾರಾಯಣ ಶೆಟ್ಟಿ ಇಹಲೋಕ ತ್ಯಜಿಸಿದ್ದಾರೆ!
– ಕಟೀಲು ಮೇಳದ ಕಲಾವಿದರಾಗಿದ್ದರು.

NAMMUR EXPRESS NEWS
ಕರಾವಳಿ: ಯಕ್ಷರಂಗದ ರಾಜ” ಎಂದೇ ಖ್ಯಾತರಾದ, ಹೆಸರಾಂತ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ತೆಂಕುತಿಟ್ಟಿನ ಯಕ್ಷರಂಗದಲ್ಲಿ ತನ್ನದೇ ಛಾಪನ್ನು ನಿರ್ಮಿಸಿದ ಕನ್ನಡ -ತುಳು ಭಾಷೆಯ ಪ್ರಸಂಗಗಳಲ್ಲಿ ಏಕಪ್ರಕಾರ ಮಿಂಚಿದ ಪೆರುವಾಯಿ ನಾರಾಯಣ ಶೆಟ್ಟರು, ಕಂಚಿನ ಧ್ವನಿ, ಶ್ರುತಿಬದ್ಧ ಮಾತು ಹಾಗೂ ಅರ್ಥಪೂರ್ಣ ಸಂಭಾಷಣೆಗೆ ಹೆಸರಾಗಿದ್ದರು. ಬಂಟ್ವಾಳ ತಾಲೂಕು ಪೆರುವಾಯಿ ಇವರ ಹುಟ್ಟೂರು. ಮದನಪ್ಪ ಶೆಟ್ಟಿ ಮತ್ತು ಅಬ್ಬಕ್ಕ ದಂಪತಿಗಳ ಸುಪುತ್ರರಾಗಿದ್ದ ಇವರು, 12ನೇ ವಯಸ್ಸಿನಲ್ಲೇ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದರು. ಮಡಾವು, ಧರ್ಮಸ್ಥಳ, ಕರ್ನಾಟಕ, ಪೊಳಲಿ ರಾಜರಾಜೇಶ್ವರಿ ಮೇಳ, ಕದ್ರಿ, ಕುಂಬಳೆ, ಕುಂಟಾರು, ಕಟೀಲು ಹೀಗೆ ವಿವಿಧ ಯಕ್ಷಗಾನ ಮಂಡಳಿಗಳಲ್ಲಿ ತಿರುಗಾಟ ಮಾಡಿದ ಪೆರುವಾಯಿ ನಾರಾಯಣ ಶೆಟ್ಟಿ ಅವರದು ಬಹುದೊಡ್ಡ ಸಾಧನೆ.

ಅವರು ಸುಮಾರು 52 ವರ್ಷ ಗಳ ಕಾಲ ನಿರಂತರ ತಿರುಗಾಟ ನಡೆಸಿದ್ದರು. ಬಳಿಕ ಅನಾರೋಗ್ಯದಿಂದಾಗಿ ಯಕ್ಷರಂಗದಿಂದ ನಿವೃತ್ತಪಡೆದಿದ್ದರು . ಕಟೀಲುಮೇಳದ ಕಲಾವಿದರಾಗಿದ್ದ ಅವರು ನಿರ್ವಹಿಸುತ್ತಿದ್ದಾಗ ರಕ್ತಬೀಜ , ಹಿರಣ್ಯಕಷ್ಯಪು, ಕಂಸ, ಸುಂದರರಾವಣ, ಋತುಪರ್ಣ, ಹನುಮಂತ, ಜಾಬಾಲಿ, ಅರುಣಾಸುರ, ಹಿರಣ್ಯಾಕ್ಷ, ಶಿಶುಪಾಲ ಮುಂತಾದ ಹಲವು ಪಾತ್ರಗಳನ್ನು ಬಹಳ ಪರಿಣಾಮಕಾರಿಯಾಗಿ ರಂಗದಲ್ಲಿ ಬಿಂಬಿಸಿ ಖ್ಯಾತರಾದವರು. ಕೋಟಿ ಚೆನ್ನಯದ ಕೋಟಿ ಮೊದಲಾದ ವೇಷಗಳ ನಿರ್ವಹಣೆಯಲ್ಲಿ “ಪೆರುವಾಯಿ ಶೈಲಿ’ ಎಂಬ ಹೊಸ ಹಾದಿಯನ್ನು ನಿರ್ಮಿಸಿದ ಕೀರ್ತಿವಂತ. 2016ನೇ ಸಾಲಿನ ಚೊಚ್ಚಲ “ಯಕ್ಷಧ್ರುವ ಪಟ್ಲ ಪ್ರಶಸ್ತಿ” ಸೇರಿದಂತೆ ಹಲವು ಸನ್ಮಾನ ಇವರಿಗೆ ಸಂದಿದೆ.