Categories
ಹವಾಮಾನ ಸುದ್ದಿ

ಮುಂದಿನ 24 ಗಂಟೆ ಭಾರಿ ಮಳೆ

ಮುಂದಿನ 24 ಗಂಟೆ ಭಾರಿ ಮಳೆ

– ಕರಾವಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ
– ಮಲೆನಾಡಿನಲ್ಲೂ ಭಾರಿ ಮಳೆ ಸಾಧ್ಯತೆ
– 2 ದಿನದಿಂದ ಕಡಿಮೆಯಾಗಿದ್ದ ಮಳೆ

NAMMUR EXPRESS NEWS

ಬೆಂಗಳೂರು: ಕರ್ನಾಟಕದ ಕರಾವಳಿಯಲ್ಲಿ ಸಾಧಾರಣದಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಬೆಳಗಾವಿ, ಕಲಬುರಗಿ ಜಿಲ್ಲೆಗೂ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಬೆಳಗಾವಿಯಲ್ಲಿ ಪ್ರತ್ಯೇಕವಾಗಿ ಮಧ್ಯಮದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಬೀದರ್‌, ಧಾರವಾಡ, ಗದಗ, ಸೇರಿದಂತೆ ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಪ್ರತ್ಯೇಕವಾಗಿ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಸೇರಿದಂತೆ ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಕೋಲಾರದಲ್ಲಿ ಮಳೆಯಾಗುವ ನಿರೀಕ್ಷೆ ಇದೆ.

ಬೆಂಗಳೂರಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ

ರಾಜಧಾನಿ ಬೆಂಗಳೂರಿನಲ್ಲಿ ಪ್ರತ್ಯೇಕ ಸ್ಥಳದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

Categories
ಹವಾಮಾನ ಸುದ್ದಿ

ಭೀಕರ ಮಳೆ: ಮಕ್ಕಳ ಸುರಕ್ಷತೆ ಬಗ್ಗೆ ಎಚ್ಚರ..!

ಭೀಕರ ಮಳೆ: ಮಕ್ಕಳ ಸುರಕ್ಷತೆ ಬಗ್ಗೆ ಎಚ್ಚರ..!

– ಸುರಕ್ಷತೆಯಿಂದ ಶಾಲೆಗೆ ಕಳುಹಿಸುವುದು ಪ್ಲಾನ್ ಮಾಡಿ
– ವಿದ್ಯುತ್, ನೀರು, ಸೇತುವೆ, ರಸ್ತೆ ಬಗ್ಗೆ ಜಾಗೃತಿ ಇರಲಿ
– ಮಳೆ ವೇಳೆ ಮನೆಯಿಂದ ಹೊರ ಬಾರದಿರುವುದು ಸೇಫ್

NAMMUR EXPRESS NEWS

ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಮಲೆನಾಡು, ಕರಾವಳಿ ಸೇರಿ ರಾಜ್ಯದಲ್ಲಿ ಬಹುತೇಕ ಭಾಗದಲ್ಲಿ ಅನಾಹುತ ಸೃಷ್ಟಿ ಆಗುತ್ತಿದೆ.ಮಳೆ ಸಮಯದಲ್ಲಿ ಮಕ್ಕಳು ಕಾಲು ಸಂಕಗಳಲ್ಲಿ ಬರುವ ಸಾಧ್ಯತೆ ಇದೆ, ನದಿಗಳ ದಡದಲ್ಲಿ ನಡೆದು ಬರುವ ಸಾಧ್ಯತೆ ಇರುತ್ತದೆ, ಗುಡ್ಡ ಜಾರುವ ಪ್ರದೇಶಗಳಲ್ಲಿ ಬರುವ ಸಾಧ್ಯತೆ ಇದೆ. ಆದುದರಿಂದ ಮಕ್ಕಳ ಸುರಕ್ಷತೆ ಅತಿ ಮುಖ್ಯ. ಅಂತ ಮಕ್ಕಳು ಶಾಲೆಗೆ ಬರುತ್ತಿದ್ದರೆ ಹೆಚ್ಚು ಮಳೆ ಬರುತ್ತಿರುವ ಸಂದರ್ಭದಲ್ಲಿ ಅವರನ್ನ ಶಾಲೆಗೆ ಬರಲು ಹೇಳಬೇಡಿ. ಶಾಲೆಗೆ ಬರುವಾಗ ಮತ್ತು ಹೋಗುವಾಗ ಕಡ್ಡಾಯವಾಗಿ ಸುರಕ್ಷತೆಯಿಂದ ಕಳುಹಿಸುವುದು ಪೋಷಕರ ಹಾಗೂ ಶಿಕ್ಷಕರ ಆದ್ಯ ಕರ್ತವ್ಯ ಕೂಡ ಆಗಿದೆ. ಬಾರಿ ಮಳೆ ಇದ್ದಾಗ ಶಾಲೆಗೆ ಹೋಗುವ ಮಕ್ಕಳು ಅದರಲ್ಲೂ ಗ್ರಾಮೀಣ ಭಾಗದಿಂದ ಬರುವ ಮಕ್ಕಳ ಬಗ್ಗೆ ಗಮನ ಇರಲಿ. ಮಕ್ಕಳ ಸುರಕ್ಷತೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಇನ್ನು ಪ್ರತಿಯೊಬ್ಬರೂ ಮಳೆ ವೇಳೆ ಹೊರಗೆ ಹೋಗುವಾಗ ಎಚ್ಚರ ವಹಿಸಿ. ವಿದ್ಯುತ್ ಕಂಬ ಮತ್ತು ತಂತಿಗಳ ಬಗ್ಗೆ ಗಮನ ಇರಲಿ.ಧರೆ, ರಸ್ತೆ, ಮರಗಳ ಬಳಿ ಹೋಗುವಾಗ ಎಚ್ಚರಿಕೆ ವಹಿಸಿ. ವಾಹನ ಓಡಿಸುವಾಗ ಜಾಗೃತಿ ಹಾಗೂ ಎಚ್ಚರಿಕೆ ಇರಲಿ.

ಇದು ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಕಾಳಜಿ.


Categories
ಹವಾಮಾನ ಸುದ್ದಿ

ಮಳೆ ದುರಂತ ಹೆಚ್ಚಳ!

ಮಳೆ ದುರಂತ ಹೆಚ್ಚಳ!

– ಶಿರಾಡಿ ಘಾಟ್‌ನಲ್ಲಿ ಭೂಕುಸಿತ: ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್
– ಚಲಿಸುತ್ತಿದ್ದ ಒಮ್ಮಿ ಮೇಲೆ ಬಿದ್ದ ಗುಡ್ಡ:ಚಾಲಕ, ಪ್ರಯಾಣಿಕ ಪಾರು

NAMMUR EXPRESS NEWS

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನ ದೊಡ್ಡತಪ್ಪಲು ಎಂಬಲ್ಲಿ ಗುಡ್ಡ ಕುಸಿದು ಚಲಿಸುತ್ತಿದ್ದ ಒಮ್ಮಿ ಮೇಲೆ ಬಿದ್ದ ಪರಿಣಾಮ ಒಮ್ಮಿ ಜಖಂಗೊಂಡು ಇಬ್ಬರು ಪ್ರಾಣಾಪಯದಿಂದ ಪಾರಾದ ಘಟನೆ ಜು.18ರಂದು ನಸುಕಿನ ಜಾವ ನಡೆದಿದೆ.

ಒಮ್ಮಿ ಚಾಲಕ ಬೇಲೂರು ತಾಲೂಕಿನ ಬಿಕ್ಕೊಡು ಮೂಲದ ಶರತ್ ಹಾಗೂ ಅಖಿಲೇಶ್ ಎಂಬವರು ಗಾಯಗೊಂಡು ಪ್ರಾಣಾಪಯದಿಂದ ಪಾರಾಗಿದ್ದಾರೆ. ಇವರು ಮಂಗಳೂರು ಕಡೆಯಿಂದ ಸಕಲೇಶಪುರ ಮಾರ್ಗವಾಗಿ ಹಿಂತಿರುಗಿ ಬರುವ ಸಂದರ್ಭ ನಸುಕಿನ ಜಾವ 2.30ಕ್ಕೆ ಸಕಲೇಶಪುರ ಸಮೀಪ ಶಿರಾಡಿ ಘಾಟ್‌ನ ದೊಡ್ಡತಪ್ಪಲು ಎಂಬಲ್ಲಿಗೆ ತಲುಪುತ್ತಿದ್ದಂತೆ ಗುಡ್ಡ ಕುಸಿದು ಒಮ್ಮಿ ಮೇಲೆಯೇ ಬಿದ್ದಿದೆ. ಪರಿಣಾಮ ಒಮ್ಮಿ ಕಾರು ಮಣ್ಣಿನಡಿಯಲ್ಲಿ ಹೂತುಹೋಗಿದೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಕಂಪನಿಯ ಬಿಹಾರ ಮೂಲದ ಕಾರ್ಮಿಕರು ಅಖಿಲೇಶ್, ಶರತ್ ಅವರನ್ನು ವಾಹನದಿಂದ ಹೊರ ತೆಗೆದು ಪ್ರಾಣ ಉಳಿಸಿದ್ದಾರೆ. ಅಖಿಲೇಶ್ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಶರತ್ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಭೂ ಕುಸಿತದಿಂದ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೆದ್ದಾರಿಯ ಎರಡೂ ಬದಿಯಲ್ಲೂ 5 ಕಿ.ಮೀ.ದೂರದ ತನಕ ವಾಹನಗಳು ಸಾಲುಗಟ್ಟಿ ನಿಂತಿದ್ದು ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಬದಲಿ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ.

Categories
ಹವಾಮಾನ ಸುದ್ದಿ

ಮಳೆ ಅಲರ್ಟ್: ಎಚ್ಚರ ಎಚ್ಚರ!

ಮಳೆ ಅಲರ್ಟ್: ಎಚ್ಚರ ಎಚ್ಚರ!

– ಕರಾವಳಿ, ಮಲೆನಾಡಿನಲ್ಲಿ ವರುಣಾರ್ಭಟ
– 40 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ

NAMMUR EXPRESS NEWS

ಬೆಂಗಳೂರು: ಬುಧವಾರ ಕರ್ನಾಟಕದ ಕರಾವಳಿಯಲ್ಲಿ ಮಳೆಯು ಅಬ್ಬರಿಸಲಿದ್ದು, ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನ ಪ್ರತ್ಯೇಕ ಕಡೆಗಳಲ್ಲಿ ಮಧ್ಯಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ರಾಮನಗರ, ತುಮಕೂರು, ವಿಜಯನಗರದಲ್ಲಿ ಪ್ರತ್ಯೇಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದ್ದು, ಬೀದ‌ರ್, ಕಲಬುರಗಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ವಿಜಯಪುರ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಬಾಗಲಕೋಟೆಗೆ ಯಾವುದೇ ಮಳೆ ಸೂಚನೆ ಇಲ್ಲ.

ಬೆಂಗಳೂರಿನಲ್ಲೂ ಸಾಧಾರಣ ಮಳೆ!

ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಪ್ರತ್ಯೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಹಾಗೂ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

40 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ!

ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಾಳಿ ವೇಗವು 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 35 ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರಿಗೂ ಎಚ್ಚರಿಕೆ ನೀಡಲಾಗಿದೆ.

Categories
ಕರಾವಳಿ ಹವಾಮಾನ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ: ರೆಡ್ ಅಲರ್ಟ್!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ: ರೆಡ್ ಅಲರ್ಟ್!

– ಎಲ್ಲೆಡೆ ಜಿಲ್ಲಾಡಳಿತ ಸಜ್ಜು: ಜನರಿಗೆ ಎಚ್ಚರಿಕೆ
– ವಿದ್ಯುತ್ ತಂತಿ, ಹಳ್ಳ, ನದಿ ಹತ್ತಿರ ಹೋಗಬೇಡಿ..!

NAMMUR EXPRESS NEWS
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಮುಂದುವರಿದಿದ್ದು, ದಿನಾಂಕ: 28-06-2024 ರಂದು ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಕ್ರಮಗಳನ್ನು ಕೈಗೊಂಡಿರುತ್ತದೆ.

1) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ದಿನಾಂಕ: 28-06-2024 ರಂದು ರಜೆಯನ್ನು ಘೋಷಿಸಲಾಗಿದೆ.
2) ಸಂಭಾವ್ಯ ಪ್ರವಾಹ/ಭೂಕುಸಿತ ಪ್ರದೇಶಗಳನ್ನು ಗುರುತಿಸಿ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
3) ನೀರು ಇರುವ ತಗ್ಗು ಪ್ರದೇಶ. ಕೆರೆ, ನದಿ ತೀರ ಸಮುದ್ರ ತೀರಕ್ಕೆ ಸಾರ್ವಜನಿಕರು/ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸುವುದು.
4) ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.
5) ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ನದಿಗಳ/ತೋಡುಗಳ ಮತ್ತು ವಿದ್ಯುತ್ ಕಂಬ/ತಂತಿ ಸಮೀಪ ಹೋಗದಂತೆ ಎಚ್ಚರಿಕೆ ವಹಿಸುವುದು.
6) ಸಂಭಾವ್ಯ ಹಾನಿಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಸಾರ್ವಜನಿಕರು ಅಪಾಯಕಾರಿ ಸನ್ನಿವೇಶಗಳಿಂದ ದೂರವಿದ್ದು, ಜಿಲ್ಲಾಡಳಿತದ ಸಲಹೆ/ಸೂಚನೆಗಳನ್ನು ಪಾಲಿಸುವುದು.
7) ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಘಟನೆಗಳು ಸಂಭವಿಸಿದಲ್ಲಿ ಅಥವಾ ಸಂಭವಿಸಬಹುದಾದ ಸೂಚನೆ ಇದ್ದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪಂಚಾಯತ್/ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿಯನ್ನು ನೀಡುವುದು.

ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಈ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸುವುದು. ಜಿಲ್ಲಾ ತುರ್ತು ಸೇವೆಗೆ ಟೋಲ್ ಫ್ರೀ ಸಂ. 24*7 ಕಂಟ್ರೋಲ್ ರೂಂ – 1077 / 0824-2442590 ಇದಕ್ಕೆ ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Categories
ಹವಾಮಾನ ಸುದ್ದಿ

ಮುಂಗಾರು ಮಳೆಯೇ ಏನು ನಿನ್ನ ಲೀಲೆ..!’

ಮುಂಗಾರು ಮಳೆಯೇ ಏನು ನಿನ್ನ ಲೀಲೆ..!’

– ರಾಜ್ಯದಲ್ಲಿ5 ದಿನ ಭಾರೀ ಮಳೆ ಅಲರ್ಟ್!
– ಕೃಷಿ ಚಟುವಟಿಕೆ ಚುರುಕು: ತುಂಬಿದ ನದಿಗಳು
– ಉತ್ತಮ ಮಳೆ, ಜಲಾಶಯಗಳಿಗೆ ಜೀವಕಳೆ

NAMMUR EXPRESS NEWS
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದೆ. ವ್ಯಾಪಕ ಮಳೆಯಿಂದಾಗಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ.
ಇನ್ನು ಕಳೆದ ವರ್ಷ ತೀವ್ರ ಮಳೆಯ ಕೊರತೆಯಿಂದ ಬತ್ತಿ ಹೋಗಿದ್ದ ಜಲಾಶಯಗಳು, ಈ ವರ್ಷ ಸುರಿಯುತ್ತಿರುವ ಮಳೆಗೆ ಮೈದುಂಬಿವೆ. ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಜೂನ್ 2ರಂದು ರಾಜ್ಯಕ್ಕೆ ಮುಂಗಾರು ಆಗಮಿಸಿದ್ದು, 145 ಮಿ.ಮೀ ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆಗಿಂತ ಶೇ 6ರಷ್ಟು ಅಧಿಕ ಮಳೆ ಬಿದ್ದಿದೆ. ಇದರಿಂದ ರಾಜ್ಯದ ಪ್ರಮುಖ 14 ಜಲಾಶಯಗಳಲ್ಲಿ 16 ಟಿಎಂಸಿ ನೀರು ಸಂಗ್ರಹವಾಗಿದೆ.

ಇನ್ನು 5 ದಿನ ಬಾರಿ ಮಳೆ ಎಚ್ಚರಿಕೆ.!

ರಾಜ್ಯದ ಎಲ್ಲಾ ಭಾಗಗಳಲ್ಲೂ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ ಐದು ದಿನಗಳ ಕಾಲ ನಿರಂತರ ಮಳೆಯಾಗಲಿದ್ದು, ಎಚ್ಚರದಿಂದ ಇರುವಂತೆ ಸೂಚಿಸಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಉತ್ತರ ಒಳನಾಡು ಪ್ರದೇಶಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

Categories
ಕೃಷಿ ಹವಾಮಾನ ಸುದ್ದಿ

ಹೆಚ್ಚಾಗಲಿದೆ ಮುಂಗಾರು ಮಳೆ

ಹೆಚ್ಚಾಗಲಿದೆ ಮುಂಗಾರು ಮಳೆ

– ವಾರದಿಂದ ಹೆಚ್ಚಾಗಲಿದೆ ಮಳೆ ಅಬ್ಬರ: ಹವಾಮಾನ ಇಲಾಖೆ
– ರೈತರ ಮೊಗದಲ್ಲಿ ಖುಷಿ: ಕೃಷಿ ಚಟುವಟಿಕೆ ಶುರು

NAMMUR EXPRESS NEWS
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಹಲವು ಸ್ಥಳಗಳಲ್ಲಿ ಸಾಧಾರಣ ಮಳೆಯೊಂದಿಗೆ ಗುಡುಗು-ಗಾಳಿ ಸಾಥ್ ನೀಡಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದ‌ರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು ಹಾಗೂ ಕೊಪ್ಪಳ, ಯಾದಗಿರಿ, ವಿಜಯಪುರ ಪ್ರತ್ಯೇಕ ಸ್ಥಳದಲ್ಲಿ ಹಗುರವಾದ ಮಳೆಯಾಗುವ ನಿರೀಕ್ಷೆ ಇದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು, ಬೆಂ. ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ರಾಮನಗರ, ತುಮಕೂರು ವಿಜಯನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೃಷಿ ಚುರುಕು: ರೈತರ ಮೊಗದಲ್ಲಿ ಸಂತಸ!

ರಾಜ್ಯದ ಎಲ್ಲೆಡೆ ಮಳೆ ಚುರುಕುಗೊಂಡಿದ್ದು, ಎಲ್ಲೆಡೆ ಕೃಷಿ ಚುರುಕುಗೊಂಡಿದೆ. ಕೃಷಿ ಚಟುವಟಿಕೆ ಗರಿಗೆದರಿದೆ. ಮಳೆ ನಿರೀಕ್ಷೆಯಲ್ಲಿದ್ದ ಕೃಷಿಕರು ಈಗ ಭೂಮಿ ಹದಗೊಳಿಸುವ ಕಾರ್ಯದಲ್ಲಿದ್ದಾರೆ.

Categories
ಮಲ್ನಾಡ್ ಹವಾಮಾನ ಸುದ್ದಿ

ಮಲೆನಾಡಿನಲ್ಲಿ ಮುಂಗಾರು ಮಳೆ ವೈಭವ.!

ಮಲೆನಾಡಿನಲ್ಲಿ ಮುಂಗಾರು ಮಳೆ ವೈಭವ.!

– ಮಳೆ ಇಲ್ಲದೆ ಬತ್ತಿದ್ದ ನದಿಗಳಿಗೆ ಜೀವಕಳೆ
– ಮಲೆನಾಡು ಕೃಷಿಗೆ ಮಳೆ ಆಸರೆ

NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಮುಂಗಾರು ಮಳೆ ಆರಂಭಗೊಂಡಿದ್ದು, ಮಲೆನಾಡಿನಲ್ಲಿ ಮುಂಗಾರು ಮಳೆಯ ವೈಭವ ಮರುಕಳಿಸಿದೆ.

ಬೀಸುವ ಥಂಡಿ ಗಾಳಿ, ನಿರಂತರವಾಗಿ ಸುರಿಯುವ ತುಂತುರು ಮಳೆ, ಕೈಯಲ್ಲಿ ಕೊಡೆ ಇಲ್ಲದೇ ಹೊರಗೆ ಹೋಗಲಾರದಂತಹ ಚಿತ್ರಣ ಮಲೆನಾಡಿನಲ್ಲಿ ಕಾಣಿಸಿಕೊಂಡಿದೆ.

ಮಳೆ ಬಾರದೆ ಬರಿದಾಗಿದ್ದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಮುಂಗಾರು ಮಳೆಯಿಂದಾಗಿ ಹರಿಯಲು ಆರಂಭಿಸಿದೆ. ಇದರಿಂದ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಮುಂಗಾರು ಮಳೆಗೆ ನಿಸರ್ಗದ ನಡುವಿನ ಇಲ್ಲಿನ ಜಲಪಾತಗಳು ನಿಧಾನವಾಗಿ ಭೋರ್ಗರೆಯತೊಡಗುತ್ತವೆ. ಹಳ್ಳ ಕೊಳ್ಳಗಳು ಮನಸ್ಸಿಗೆ ಮುದ ನೀಡುತ್ತವೆ. ಅವು ಒಂದು ರೀತಿಯಲ್ಲಿ ಹಿತಾನುಭವದ ಕೊಂಡಿಯೂ ಹೌದು. ಇಡೀ ಪರಿಸರ ತಂಪಾಗಿ ಮೈಯೆಲ್ಲಾ ಬೆಚ್ಚಗೆ ಹಂಬಲಿಸುವ ಸಂದರ್ಭವದು. ಮನೆಯಿಂದ ಹೊರಬೀಳುವುದೆಂದರೆ ಕೈ ಕೈ ಹಿಸುಕಿಕೊಳ್ಳುವ ಸಮಯವದು. ಕಂಬಳಿ ಹೊದ್ದು ಮಲಗಿ ಬಿಡಬೇಕೇ ಎಂಬಂತಹ ವಾತಾವರಣ ಸೃಷ್ಟಿಯಾಗಿ ಬಿಟ್ಟಿರುತ್ತದೆ.

ಬಿಸಲಿನ ಝಳಕ್ಕೆ ಬೆಂಡಾಗಿದ್ದ ದಟ್ಟ ಕಾಡು ಮಲೆನಾಡಿನ ಮರ, ಗಿಡ, ಹೂ, ಬಳ್ಳಿಗಳು ಹೀಗೆ ಸಹ್ಯಾದ್ರಿ, ಪಶ್ಚಿಮ ಘಟ್ಟಗಳ ಸಾಲುಗಳು ಮಳೆಯ ಹನಿಗಳು ಇಳೆಗೆ ಇಳಿಯಲಾರಂಭಿಸಿದ ಕೂಡಲೇ ತಮ್ಮ ನೈಜ ರೂಪ, ಸೌಂದರ್ಯವನ್ನು ತೋರ್ಪಡಿಸಿ ಹಸಿರಾದ ಪರಿಸರ ಸಾಲುಗಳು ನೋಡುಗರನ್ನು ಆಕರ್ಷಿಸುತ್ತವಲ್ಲದೇ ಚಕಿತಗೊಳಿಸುವಂತಿರುತ್ತದೆ.

ಮಲೆನಾಡು ಕಷಿಕರ ಸೆರಗು.!

ಮಲೆನಾಡು ಅಂದರೆ ಸಾಕು ಥಟ್ಟನೆ ನೆನಪಿಗೆ ಬರುವುದು ಮುಖ್ಯವಾಗಿ ಅಡಕೆ, ಭತ್ತ ಬೆಳೆ. ಇದೊಂದು ಕಷಿಕರ ಸೆರಗು. ಇಲ್ಲಿ ಆರಂಭದ ಮಳೆಗೆ ಕಷಿಕರು ಮೈ ಕೊಡವಿ ಮೇಲೆದ್ದು ಬಿಡುತ್ತಾರೆ. ಕಷಿ ಚಟುವಟಿಕೆಗೆ ಅಣಿಯಾಗಲು ಸಿದ್ಧರಾಗುತ್ತಾರೆ. ಮಲೆನಾಡು, ಹೆಚ್ಚಾಗಿ ಅರೆಮಲೆನಾಡು ಭಾಗದಲ್ಲಿ ಭತ್ತ ಬಿತ್ತನೆಯ ಕಾರ್ಯ ಗರಿಗೆದರುತ್ತದೆ. ಇನ್ನು ಮಹಿಳೆಯರಿಗಂತೂ ಮನೆಯ ಮುಂದಿನ ತೋಟದಲ್ಲಿ ತರಕಾರಿ ಬೀಜಗಳ ಬಿತ್ತುವ, ಹೂ ಗಿಡಗಳನ್ನು ನೆಡುವ ಕಾಯಕ. ಒಟ್ಟಾರೆ ಮುಂಗಾರು ಮಳೆಯ ಮಲೆನಾಡಿನ ಕಷಿ ಚಟುವಟಿಕೆ ಉಲ್ಲಾಸದ ವಾತಾವರಣ ಬಿಂಬಿಸುತ್ತದೆ.

Categories
ಆರೋಗ್ಯ ತೀರ್ಥಹಳ್ಳಿ ಶಿಕ್ಷಣ ಹವಾಮಾನ ಸುದ್ದಿ

ಮಳೆಗಾಲ: ಆಡಳಿತ ಅಲರ್ಟ್!

ಮಳೆಗಾಲ: ಆಡಳಿತ ಅಲರ್ಟ್!

– ಚುನಾವಣೆಗೆ ಸಮಯ ವ್ಯರ್ಥವಾಗಿದೆ: ಇನ್ನಾದ್ರೂ ಕೆಲಸ ಮಾಡೋಣ
– ಸರ್ಕಾರಿ ಆಸ್ಪತ್ರೆ ಸಮಸ್ಯೆಗಳ ಬಗ್ಗೆ ಚರ್ಚೆ!: ಏನೇನ್ ಚರ್ಚೆ ಆಯ್ತು
– ಶಿಕ್ಷಕರ ಕೊರತೆ, ಗಾಂಜಾ ದಂಧೆ ವಿರುದ್ಧ ಸಭೆಯಲ್ಲಿ ದನಿ

NAMMUR EXPRESS NEWS
ತೀರ್ಥಹಳ್ಳಿ: ಮಳೆ ಮುಂಜಾಗ್ರತಾ ಕೆಲಸಗಳು, ಕೃಷಿ ಪೂರ್ವ ಕೆಲಸಗಳು, ಗ್ರಾಮೀಣ ರಸ್ತೆಗಳ ನಿರ್ವಹಣೆ, ಶುದ್ದ ಕುಡಿಯುವ ನೀರಿನ ಸರಬರಾಜು ಹೀಗೆ ಬಹಳಷ್ಟು ಕೆಲಸಗಳು ವ್ಯವಸ್ಥಿತ ರೀತಿಯಲ್ಲಿ ಆಗಲೇ ಬೇಕಿದೆ. ಚುನಾವಣೆಗಾಗಿ ಇಡೀ ಆಡಳಿತ ಯಂತ್ರ 3-4 ತಿಂಗಳು ವ್ಯಯಿ ಸಲ್ಪಟ್ಟಿವೆ. ಈಗ ಕ್ಷೇತ್ರದ ಜನರಿಗೆ, ರೈತರಿಗೆ ಬರಲಿರುವ ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಕಡಿಮೆ ಅವಧಿಯಲ್ಲಿ ಹೆಚ್ಚುಕೆಲಸ ಮಾಡಲೇಬೇಕಾದ ಹೊಣೆ ನಿಮ್ಮದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರ ಅಭಿವೃದ್ಧಿ ಹಾಗೂ ಜನಸಾಮಾನ್ಯರ ಕೆಲಸ ಕಾರ್ಯಗಳು ನಿಲ್ಲಬಾರದು. ಅಧಿಕಾರಿ ವರ್ಗಕ್ಕೆ ಏನೇ ಅಗತ್ಯಗಳು ಬೇಕಿದ್ದಲ್ಲಿ ನಾನು ಅದನ್ನು ಕಲ್ಪಿಸಿಕೊಡುತ್ತೇನೆ. ನೀವು ಜನಸ್ಪಂದನೆಯ ಕರ್ತವ್ಯ ನಿರ್ವಹಿಸಬೇಕು. ನಾಗರೀಕರ ಮೂಲಭೂತ ಸೌಕರ್ಯಗಳಿಗೆ ತೊಂದರೆ ಆಗಬಾರದು. ರೈತರ ಕೃಷಿ ಚಟುವಟಿಕೆಗಳಿಗೆ ಏನೆಲ್ಲಾ ವ್ಯವಸ್ಥೆಗಳು ಬೇಕೋ ಅದು ಆಗಬೇಕು ಎಂದು ಜೂನ್ 11 ರಂದು ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಮಾರ್ಗದರ್ಶನ ಗೈದರು.

Categories
ತೀರ್ಥಹಳ್ಳಿ ಹವಾಮಾನ ಸುದ್ದಿ

ತೀರ್ಥಹಳ್ಳಿಯಲ್ಲಿ ಭಾರೀ ಮಳೆ: ಹಲವೆಡೆ ಹಾನಿ

ತೀರ್ಥಹಳ್ಳಿಯಲ್ಲಿ ಭಾರೀ ಮಳೆ: ಹಲವೆಡೆ ಹಾನಿ

– ಉಂಟೂರು ಕಟ್ಟೆ ಕೈಮರ ಬಳಿ ಮನೆಗೆ ಬಿದ್ದ ಮರ
– ವಿದ್ಯುತ್, ನೆಟ್ವರ್ಕ್ ಹಲವೆಡೆ ಇಲ್ಲ..

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಭಾರೀ ಮಳೆಯಾಗುತ್ತಿದೆ. ಎಲ್ಲೆಡೆ ಹಾನಿ ಸಂಭವಿಸಿದೆ. ಅನೇಕ ಕಡೆ ವಿದ್ಯುತ್ ಕಂಬ, ಮರಗಳು ಬಿದ್ದಿವೆ.

ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಂಟುರು ಕಟ್ಟೆ ಕೈಮರ ಹಸಿರುಮನೆ ಎಂಬಲ್ಲಿ ತಿಮ್ಮಪ್ಪ ನಾಯಕ್ ಅವರ ಮನೆಯ ಕೊಟ್ಟಿಗೆ ಹಾಗೂ ಮನೆ ಹಿಂಭಾಗಕ್ಕೆ ಮರ ಬಿದ್ದು ಭಾರೀ ಹಾನಿಯಾಗಿದೆ.

ತಿಮ್ಮಪ್ಪ ನಾಯ್ಕ ಕೂಲಿ ಕಾರ್ಮಿಕ ಎಂಬುವರ ಮನೆ ಹಾನಿಯಾಗಿದ್ದು, ಲಕ್ಷಾಂತರ ನಷ್ಟವಾಗಿದೆ.

ಭಾರೀ ಮಳೆ : ಮಲೆನಾಡಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಎಲ್ಲಾ ಕಡೆ ಮಳೆಯಾಗುತ್ತಿದೆ.