Categories
ಚಿಕ್ಕಮಗಳೂರು ಮಲ್ನಾಡ್ ಹವಾಮಾನ ಸುದ್ದಿ

ವರ್ಷದ ಮೊದಲ ಮಳೆ!

ವರ್ಷದ ಮೊದಲ ಮಳೆ!
ಕಾಫಿ ನಾಡಲ್ಲಿ ತಂಪೆರೆದ ಮಳೆ… ತಂಪಾಯಿತು ಇಳೆ
– ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣನ ಹರ್ಷ
– ಚಿಕ್ಕಮಗಳೂರಲ್ಲಿ ಭರ್ಜರಿ ಮಳೆ: 3 ಜಿಲ್ಲೆಗಳಿಗೆ ಅಲರ್ಟ್‌

NAMMUR EXPRESS NEWS
ಚಿಕ್ಕಮಗಳೂರು: ಕಾದ ಕಾವಲಿಯಂತಾಗಿದ್ದ ಭೂಮಿಗೆ ಮಳೆಯು ತಂಪೆರೆಯುತ್ತಿದೆ. ಕಾಫಿನಾಡು ಚಿಕ್ಕಮಗಳೂರಲ್ಲಿ ಗುರುವಾರ ವರ್ಷದ ಮೊದಲ ಭರ್ಜರಿ ಮಳೆ ಸುರಿದಿದೆ. ಸುಮಾರು ಒಂದೇ ಗಂಟೆ ಕಾಲ ಸುರಿದ ಮಳೆಗೆ ಹಳ್ಳಿಗರು, ಬೆಳೆಗಾರರು ಸಂತಸಗೊಂಡಿದ್ದಾರೆ. ಚಿಕ್ಕಮಗಳೂರಿನ ಮುತ್ತೋಡಿ ತಪ್ಪಲಿನ ಜಾಗರ ಹೋಬಳಿಯ ಕೊಳಗಾವೆ ಗ್ರಾಮದಲ್ಲಿ ಭಾರೀ ಮಳೆಯಾಗಿದೆ. ಕೊಳಗಾಮೆ ಜತೆಗೆ ಮೇಲಿನಹುಲುವತ್ತಿ ಭಾಗದ ಸುತ್ತಮುತ್ತ 38.5 ಮಿ.ಮೀ ಮಳೆ ಸುರಿದಿದೆ. ಮಳೆಗಾಗಿ ಆಕಾಶ ನೋಡುತ್ತಿದ್ದ ರೈತರು, ಕಾಫಿ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. ಇನ್ನೂ ಕೊಡಗಿನ ವಿರಾಜಪೇಟೆ ತಾಲೂಕಿನ ಕಾಕೋಟುಪರಂಬುನಲ್ಲಿ 3.5 ಮಿ.ಮೀ ಮಳೆಯಾಗಿದೆ.

ದಕ್ಷಿಣ ಒಳನಾಡಲ್ಲಿ ಮಳೆಯ ಸಿಂಚನ

ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ರಾಮನಗರ, ಬೆಂಗಳೂರು ನಗರ ಮತ್ತು ಮಲೆನಾಡಿನ ಹಾಸನ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ. ಕರ್ನಾಟಕದ ಉತ್ತರ ಒಳನಾಡಿನ ಪ್ರತ್ಯೇಕ ಪ್ರದೇಶಗಳಲ್ಲಿ ತಾಪಮಾನವು ದುಪ್ಪಟ್ಟಾಗಲಿದೆ. ಶಾಖದ ತರಂಗ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಕರಾವಳಿಯ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿ.ಸೆ ಹೆಚ್ಚಾಗಲಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ.

Categories
ಬೆಂಗಳೂರು ರಾಜ್ಯ ಹವಾಮಾನ ಸುದ್ದಿ

ರಾಜ್ಯದಲ್ಲಿ ಈ ವರ್ಷ ಅತೀ ಹೆಚ್ಚು ಮಳೆ!

ರಾಜ್ಯದಲ್ಲಿ ಈ ವರ್ಷ ಅತೀ ಹೆಚ್ಚು ಮಳೆ!
– ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ
– ಹವಾಮಾನ ಇಲಾಖೆ ಮುನ್ಸೂಚನೆ

NAMMUR EXPRESS NEWS
ಬೆಂಗಳೂರು: ಕಳೆದ ವರ್ಷರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದು, ಇಡೀ ರಾಜ್ಯದಲ್ಲಿ ಬರಗಾಲವನ್ನು ಆವರಿಸಿದೆ. ಈ ನಡುವೆ ಈ ಬಾರಿ ಮಳೆಯ ಭಾರತದಲ್ಲಿ ವಾಡಿಕೆಗಿಂತ ಅಧಿಕ ಮಳೆ ಎಂದು ಹವಾಮಾನ ಇಲಾಖೆ ವರದಿ ಸೂಚಿಸಿದೆ. ಹೌದು, ವಿಶೇಷವಾಗಿ ದಕ್ಷಿಣ ಭಾರತದಲ್ಲಿಅಧಿಕ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಿದೆ. ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಯ ಯುರೋಪಿಯನ್ ಕೇಂದ್ರದ ವರದಿ ಆಧರಿಸಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಈ ಬಾರಿಯ ಮುಂಗಾರು ಮುನ್ನೋಟ ಚೆನ್ನಾಗಿದ್ದು ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ, ಎಂದು ಹೇಳಿದೆ. ಈ ನಡುವೆ ದಕ್ಷಿಣ ಕರ್ನಾಟಕದ ಹಲವು ಗ್ರಾಮಗಳಲ್ಲಿ 2024ರ ಮೊದಲ ಮಳೆಯಾಗಿದೆ.

ಏತನ್ಮಧ್ಯೆ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಲಘು ತುಂತುರು ಮಳೆಯಾಗಿದ್ದು, ತಾಪಮಾನ ಕಡಿಮೆಯಾಗಿದೆ. ವಿರಾಜಪೇಟೆ ತಾಲ್ಲೂಕಿನ ಕಾಕೋಟ್ ಪರಂಬು ಗ್ರಾಮದಲ್ಲಿ 3.5 ಮಿ.ಮೀ ಮಳೆಯಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಶಿರಮಳ್ಳಿ (2.5 ಮಿ.ಮೀ) ಮತ್ತು ಹಗಿನವಾಳು (1 ಮಿ.ಮೀ) ಗ್ರಾಮಗಳಲ್ಲಿಯೂ ಲಘು ತುಂತುರು ಮಳೆಯಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಬಿಳಿಗಾನಹಳ್ಳಿ ಗ್ರಾಮದಲ್ಲಿ ಅತಿ ಹೆಚ್ಚು 11.5 ಮಿ.ಮೀ ಮಳೆಯಾಗಿದೆ.

Categories
ಕರಾವಳಿ ರಾಜ್ಯ ಹವಾಮಾನ ಸುದ್ದಿ

ಅಯ್ಯೋ ಹೆಚ್ಚಾಯ್ತು ಬಿಸಿಲು: ಕರಾವಳಿಯಲ್ಲಿ ಅಲರ್ಟ್!

ಅಯ್ಯೋ ಹೆಚ್ಚಾಯ್ತು ಬಿಸಿಲು: ಕರಾವಳಿಯಲ್ಲಿ ಅಲರ್ಟ್!
– ಕರಾವಳಿಯಲ್ಲಿ ಬಿಸಿ ಗಾಳಿ: ಜನತೆಗೆ ಎಚ್ಚರಿಕೆ
– ದಕ್ಷಿಣ ಕನ್ನಡ, ಉಡುಪಿ ಸೇರಿ ರಾಜ್ಯದ ಹಲವೆಡೆ ಹೆಚ್ಚಿದ ಶಕೆ
– ಅನಾರೋಗ್ಯ ಸಾಧ್ಯತೆ: ಏನೇನು ಮಾಡಬಾರದು…?

NAMMUR EXPRESS NEWS
ಕರಾವಳಿ ಸೇರಿದಂತೆ ನಾಡಿನ ಹಲವೆಡೆ ಬಿಸಿಗಾಳಿ ಬೀಸುತ್ತಿದೆ. ಇದರಿಂದ ಉಂಟಾಗುವ ಹತ್ತು ಹಲವು ಸಮಸ್ಯೆ ತೊಂದರೆಗಳನ್ನು ತಪ್ಪಿಸಿಕೊಳ್ಳಲು ಜಿಲ್ಲಾಡಳಿತ ಸಾರ್ವಜನಿಕರಿಗೆ ಕೆಲವು ಸೂಚನೆಗಳನ್ನು ನೀಡಿದೆ. ನೀಡಿದ ನಿಯಮಗಳನ್ನು ಸಾಧ್ಯವಿದ್ದಷ್ಟು ಪಾಲಿಸಿ ಬಿಸಿ ಗಾಳಿಯ ಸಮಸ್ಯೆಯಿಂದ ಪಾರಾಗುವಂತೆ ತಿಳಿಸಲಾಗಿದೆ.

ಯಾವ ಯಾವ ನಿಯಮ ಪಾಲನೆ ಕಡ್ಡಾಯ?

ಸಾಧ್ಯವಿದ್ದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯಲು ಪ್ರಯತ್ನಿಸಬೇಕು. ನೇರ ಸೂರ್ಯನ ಬೆಳಕು ಅಥವಾ ಬಿಸಿಗಾಳಿ ಮೈಗೆ ಸೋಕದಂತೆ ನೋಡಿಕೊಳ್ಳಬೇಕು. ಬಿಸಿಲಿಗೆ ಹೋಗುವಾಗ ಕೊಡ/ಛತ್ರಿ ಬಳಸಬೇಕು. ತೆಳುವಾದ ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸಬೇಕು. ಅದರಲ್ಲೂ ಬಿಳಿ ಬಣ್ಣದ ಬಟ್ಟೆಗಳು ದೇಹಕ್ಕೆ ಒಳ್ಳೆಯದು. ಹತ್ತಿಯ ಟೋಪಿ ಅಥವಾ ಟರ್ಬನ್/ಕೂಲಿಂಗ್ ಗ್ಲಾಸ್ ಧರಿಸಿದರೆ ಉತ್ತಮ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಹೊರಾಂಗಣ ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿನ ಬೇಕು. ಸಾಕಷ್ಟು ನೀರು ಕುಡಿಯಬೇಕು. ಮಜ್ಜಿಗೆ ಮತ್ತು ಗೂಕೋಸ್ ನೀರನ್ನು (ಓಆ‌ರ್.ಎಸ್) ಉಪಯೋಗಿಸಬೇಕು.ಕೊಠಡಿಯ ತಾಪಮಾನವನ್ನು ಕಡಿಮೆ ಮಾಡಲು ಸೂಕ್ತಕ್ರಮಗಳನ್ನು ತೆಗೆದುಕೊಳ್ಳ ಬೇಕು. (ಕಿಟಕಿ, ನೆರಳಿನ ವ್ಯವಸ್ಥೆ, ಫ್ಯಾನ್, ಗಾಳಿ-ಬೆಳಕು ಸಂಚರಿಸಲು ಸರಿಯಾದ ವ್ಯವಸ್ಥೆ ಇತ್ಯಾದಿ).

ಹೀಟ್ ಸ್ಟೋಕ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಬೇಕು.ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯು ಕನಿಷ್ಟ ಬಟ್ಟೆಯನ್ನು ಹೊಂದಿರುವಂತೆ ನೋಡಿಕೊಳ್ಳ ಬೇಕು. ಹೀಟ್ ವೇವ್ ಸ್ಟೋಕ್ ನಿಂದ ಬಳಲುತ್ತಿರುವ ವ್ಯಕ್ತಿಗೆ ತಣ್ಣೀರಿನಿಂದ ಸ್ಪಾಂಜ್ ಮಾಡಬೇಕು, ಐಸ್ ಪ್ಯಾಕ್‌ಗಳನ್ನು ಉಪಯೋಗಿಸಬೇಕು. ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯನ್ನು ಐನ್ ಬ್ಲಾಕ್ಸ್‌ಗಳ ನಡುವೆ ಇಡಬೇಕು. ಹೀಟ್‌ವೇವ್ ಸ್ಟೋಕ್‌ಗೆ ಒಳಗಾದ ವ್ಯಕ್ತಿಗೆ ಯಾವುದೇ ಸುಧಾರಣೆ ಕಂಡುಬರದಿದ್ದರೆ, ಅವರನ್ನು ತಕ್ಷಣ ಕೂಲಿಂಗ್ ವ್ಯವಸ್ಥೆ ಯೊಂದಿಗೆ ಆಸ್ಪತ್ರೆಗೆ ಸ್ಥಳಾಂತರಿಸ ಬೇಕು. ಬೇಸಿಗೆಯಲ್ಲಿ ಹೊರಗಿನಿಂದ ಬಂದ ತಕ್ಷಣ ನೀರು/ಒಆರ್‌ಎಸ್/ಮಜ್ಜಿಗೆ ಯಂತಹ ಪಾನೀಯ ಕುಡಿಯಬಹುದು.

ಏನು ಮಾಡಬಾರದು?

ಬೇಸಿಗೆ ಕಾಲದಲ್ಲಿ ಕಪ್ಪು ಮತ್ತು ಸಿಂಥೆಟಿಕ್, ದಪ್ಪ ಬಟ್ಟೆಗಳನ್ನು ಬಳಕೆ ಮಾಡುವುದು. ಛತ್ರಿ, ಟೋಪಿ ಇಲ್ಲದೇ ಬಿಸಿಲಿನಲ್ಲಿ ಓಡಾಡುವುದು.ಸೂರ್ಯನ ಬಿಸಿಲಿನಲ್ಲಿ ಶ್ರಮದಾಯಕ ದೈಹಿಕ ಚಟುವಟಿಕೆಗೆ ಮಾಡುವುದು. ಕಾರ್ಬೊನೇಟೆಡ್ ಪಾನೀಯಗಳು / ಮಾಂಸ / ಮದ್ಯ / ಚಹಾ / ಶಾಪಿ ಇತ್ಯಾದಿ ಬಳಸುವುದು, ಗಾಳಿ ಬಿಸಿಯಾಗಿರುವ ಕೋಣೆಯಲ್ಲಿ ಇರುವುದು.
ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯನ್ನು ತಂಪಾದ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ವಿಳಂಬ ಮಾಡುವುದು. ಹೀಟ್ ಸ್ಟೋಕ್‌ನಿಂದ ಬಳಲುತ್ತಿರುವ ವ್ಯಕ್ತಿ ದಪ್ಪ ಬಟ್ಟೆಯನ್ನು ಧರಿಸಿರುವುದು.
ಇಂಥ ವ್ಯಕ್ತಿಗೆ ಬಿಸಿನೀರಿನಿಂದ ಸ್ಪಾಂಜ್ ಮಾಡುವುದು, ಬಿಸಿಗಾಳಿಗೆ ಒಡ್ಡುವುದು.
ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಮನರಂಜನೆ/ಪ್ರವಾಸ/ಪಿಕ್ನಿಕ್ ಇತ್ಯಾದಿ ಚಟುವಟಿಕೆ ಮಾಡುವುದು.
ಹೊರಗಿನಿಂದ ಬಂದ ತಕ್ಷಣ ಟೀ/ಕಾಫಿ/ ಕಾರ್ಬೋನೇಟೆಡ್ ಪಾನೀಯಗಳನ್ನು ಕುಡಿಯುವುದು

Categories
ಬೆಂಗಳೂರು ಹವಾಮಾನ ಸುದ್ದಿ

ಹವಾಮಾನ ವರದಿ..!

ಹವಾಮಾನ ವರದಿ..!
– ಬೆಂಗಳೂರಲ್ಲಿಂದು ಮೋಡ ಕವಿದ ವಾತಾವರಣ.!
– ಉತ್ತರ ಕರ್ನಾಟಕ ಹಾಗೂ ಮಲೆನಾಡಿನಲ್ಲಿ ಬಿಸಿಲ ತಾಪ
– ಕರಾವಳಿಯಲ್ಲೂ ಗರಿಷ್ಠ ತಪಮಾನ

NAMMUR EXPRESS NEWS
ಬೆಂಗಳೂರು: ರಾಜ್ಯಾದ್ಯಂತ ಇನ್ನೊಂದು ವಾರವೂ ಒಣ ಹವೆ ಇರುವ ಸಾಧ್ಯತೆ ಇದೆ. ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಲ್ಲಿ ಗರಿಷ್ಠ ತಾಪಮಾನವು 38-40 ಡಿ.ಸೆ ತಲುಪುವ ಸಾಧ್ಯತೆ ಇದೆ ಎಚ್ಚರಿಕೆ ನೀಡಲಾಗಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಗರಿಷ್ಠ ತಾಪಮಾನವು 35-36 ಡಿ.ಸೆ ವರೆಗೆ ತಲುಪಲಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲೂ ಬಿಸಿಲ ವಾತಾವರಣ ಇರಲಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದ‌ರ್, ಧಾರವಾಡ, ಗದಗ ಹಾಗೂ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ವಿಜಯನಗರ, ಚಾಮರಾಜನಗರ, ತುಮಕೂರು, ಚಿತ್ರದುರ್ಗದ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನ 2 ಡಿ.ಸೆ ಏರಿಕೆ ಆಗಲಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

Categories
ಮಾಹಿತಿ ಹವಾಮಾನ ಸುದ್ದಿ

ವಸಂತ ಕಾಲ ಬಂದಾಗ..!

ವಸಂತ ಕಾಲ ಬಂದಾಗ..!
– ಮತ್ತೆ ಬಂದಿದೆ ಋತುಗಳ ರಾಜ ವಸಂತ
– ಹಸಿರಿನಿಂದ ಕಂಗೊಳಿಸುತ್ತಿರುವ ಪರಿಸರ
– ಮಾವು, ಹಲಸು ಫಸಲು: ಗಿಡ ಮರಗಳಲ್ಲಿ ಹಸಿರು

NAMMUR EXPRESS NEWS
ಕುಹೂ ಕುಹೂ ಎಂದು ಕೂಗುವ ಕೋಗಿಲೆ. ಫಸಲು ಬಿಡುತ್ತಿರುವ ಮಾವು, ಹಲಸು. ಗಿಡ ಮರಗಳಲ್ಲಿ ನವ ಚೈತನ್ಯ, ಹೊಸ ಚಿಗುರು ಕಾಣುತ್ತಿದೆ. ವಸಂತ ಮಾಸದಲ್ಲಿ ಮರಗಳಲ್ಲಿ ಒಣಗಿದ ಎಲೆಗಳು ಉದುರುತ್ತಿದೆ, ಹಚ್ಚ ಹಸಿರಾದ ಹೊಸ ಎಲೆಗಳಿಂದ ಗಿಡಮರಗಳು ನಳನಳಿಸುತ್ತಿವೆ. ಪ್ರಕೃತಿ ಮಾತೆ ಹಳೆಯದೆಲ್ಲ ಕಳಚಿ ಹೊಸ ರೂಪ ಪಡೆಯುತ್ತಿದ್ದಾಳೆ. ಹಸಿರಿನಿಂದ ಪರಿಸರವೆಲ್ಲ ಕಂಗೊಳಿಸುತ್ತಿದೆ. ಋತುಗಳ ರಾಜ ವಸಂತನ ಪುನರಾಗಮನವಾಗಿದೆ. ವಸಂತ ಋತುವಿನ ಆಗಮನವಾಗುತ್ತಲೇ, ಪ್ರಕೃತಿಯ ಎಲ್ಲಾ ತತ್ವಗಳಾದ ಮಾನವ, ಪಶು, ಪಕ್ಷಿ, ಗಿಡ ಮರಗಳಲೆಲ್ಲ ಉತ್ಸಾಹ ಉಕ್ಕಿ ಹರಿಯುತ್ತದೆ.

ವಸಂತ ಬರುತಲೆ ಚಳಿಗಾಲ ಮುಕ್ತಾಯವಾಗುತ್ತದೆ. ವಸಂತ ನಮ್ಮ ಆಂತರಿಕ ಕಲ್ಪನೆಗಳ ಮೊಗ್ಗು ಅರಳಿಸಲು ಬರುತ್ತಾನೆ. ಒಣ ಭೂಮಿಯಂತಿರುವ ನಮ್ಮ ಮನದಲ್ಲಿ ಹೊಸ ಉತ್ಸಾಹ ಚಿಗುರುಡೆಯುತ್ತಾನೆ. ವಸಂತ ಹೊಸತನದ ಆರಂಭ, ಆತ ಪ್ರಕೃತಿಯ ಶೃಂಗಾರ ಮತ್ತು ಸೌಂದರ್ಯದ ಉತ್ಸಾಹವನ್ನು ಹೊತ್ತು ತರುತ್ತಾನೆ. ವಸಂತ ಪಂಚಮಿಯ ನಂತರ ಹಳೆಯದೆಲ್ಲ ಉದುರಿ ಬೀಳುತ್ತದೆ. ಮಂಜು ಕರಗಿ ಹೋಗುತ್ತದೆ, ಮೊಗ್ಗುಗಳು ಅರಳಿ ತೂಗುಯ್ಯಾಲೆ ಆಡದೊಡಗುತ್ತವೆ. ಕೋಗಿಲೆ ಹಾಡುತ್ತದೆ, ಚಳಿಗಾಲದಲ್ಲಿ ತಟಸ್ಥವಾಗಿದ್ದ ಗಿಡ ಮರಗಳು ಮೈಚಳಿ ಬಿಟ್ಟು ಅಲುಗಾಡ ತೊಡಗುತ್ತವೆ. ನಾವು ಕೂಡ ವಸಂತನನ್ನು ಸ್ವಾಗತಿಸೋಣ, ಪ್ರಕೃತಿಯಂತೆ ಹೊಸದನ್ನು ಅಳವಡಿಸಿಕೊಳ್ಳೋಣ. ಹಳೆಯದೆಲ್ಲವನ್ನು ಮರೆತು ಬಿಡೋಣ, ಹೊಸದನ್ನೇನಾದರೂ ಸಾದಿಸೋಣ.

Categories
ಬೆಂಗಳೂರು ರಾಜ್ಯ ಹವಾಮಾನ ಸುದ್ದಿ

ಅಯ್ಯೋ…ರಾಜ್ಯದಲ್ಲಿ ಬಿಸಿಗಾಳಿ..!

ಅಯ್ಯೋ…ರಾಜ್ಯದಲ್ಲಿ ಬಿಸಿಗಾಳಿ..!
– ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
– ಮಕ್ಕಳು, ವೃದ್ಧರು, ರೋಗಿಗಳಿಗೆ ಡೇಂಜರ್!

NAMMUR EXPRESS NEWS
ಬೆಂಗಳೂರು: ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯದಲ್ಲಿ ಬಿಸಿಗಾಳಿ ಹೆಚ್ಚಾಗಿದ್ದು ಸಾರ್ವಜನಿಕ ಆರೋಗ್ಯ ಸಲಹೆಯನ್ನು ನೀಡಿದೆ. ಸಾಮಾನ್ಯ ಜನಸಂಖ್ಯೆಯ ಹೊರತಾಗಿ, ಶಿಶುಗಳು ಮತ್ತು ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ಮಾಡುವ ಜನರು, ಮಾನಸಿಕ ಮತ್ತು ದೈಹಿಕ ಕಾಯಿಲೆಗಳು, ವಿಶೇಷವಾಗಿ ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ಜನರು ಮತ್ತು ತಂಪಾದ ವಾತಾವರಣದಿಂದ ಬಿಸಿ ವಾತಾವರಣಕ್ಕೆ ಬರುವ ಜನರು ಸೇರಿದಂತೆ ದುರ್ಬಲ ಜನಸಂಖ್ಯೆಯು ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಜನರನ್ನು ಹೈಡೇಟೆಡ್ ಆಗಿರಲು, ಮೌಖಿಕ ಪುನರ್ಜಲೀಕರಣ ಪರಿಹಾರಗಳನ್ನು ಬಳಸಿ, ನಿಂಬೆ ನೀರು, ಮಜ್ಜಿಗೆ ಅಥವಾ ಲಸ್ಸಿ ಮತ್ತು ಹಣ್ಣಿನ ರಸವನ್ನು ಸ್ವಲ್ಪ ಉಪ್ಪು ಸೇರಿಸಿ ಸೇವಿಸಲು ಮತ್ತು ಹೆಚ್ಚಿನ ನೀರಿನ ಅಂಶವಿರುವ ಕಾಲೋಚಿತ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಸಲಹೆ ನೀಡುತ್ತದೆ.

ತಿಳಿ-ಬಣ್ಣದ ಸಡಿಲವಾದ ಹತ್ತಿ ಉಡುಪುಗಳನ್ನು ಧರಿಸುವುದರ ಜೊತೆಗೆ, ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಸಮಯದಲ್ಲಿ ಜನರು ತಮ್ಮ ತಲೆಯನ್ನು ಮುಚ್ಚಿಕೊಳ್ಳಲು ಮತ್ತು ಗಾಳಿಯಾಡುವ ಪಾದರಕ್ಷೆಗಳನ್ನು ಧರಿಸಲು ಸಲಹೆ ನೀಡಿದೆ. ಸಾಮಾನ್ಯವಾಗಿ, ನೇರ ಸೂರ್ಯನ ಬೆಳಕನ್ನು ನಿರ್ಬಂಧಿಸುವ ಮೂಲಕ ಮತ್ತು ಹಗಲಿನ ಹೊರಾಂಗಣ ಚಟುವಟಿಕೆಗಳನ್ನು ಸೀಮಿತಗೊಳಿಸುವ ಮೂಲಕ ಜನರು ಒಳಾಂಗಣದಲ್ಲಿ ಮತ್ತು ಚೆನ್ನಾಗಿ ಗಾಳಿ, ತಂಪಾದ ಸ್ಥಳಗಳಲ್ಲಿ ಉಳಿಯಲು ಕೇಳಿಕೊಳ್ಳುತ್ತದೆ. ಒಂಟಿಯಾಗಿ ವಾಸಿಸುವ ವೃದ್ಧರು ಅಥವಾ ಅನಾರೋಗ್ಯ ಪೀಡಿತರನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಅವರ ಆರೋಗ್ಯವನ್ನು ಪ್ರತಿದಿನವೂ ಮೇಲ್ವಿಚಾರಣೆ ಮಾಡಬೇಕು ಎಂದು ಇಲಾಖೆ ತಿಳಿಸಿದೆ.

Categories
ಬೆಂಗಳೂರು ರಾಜ್ಯ ಹವಾಮಾನ ಸುದ್ದಿ

ತಾಪಮಾನ ವಿಪರೀತ ಹೆಚ್ಚಳ!

ತಾಪಮಾನ ವಿಪರೀತ ಹೆಚ್ಚಳ!
– ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಹಾವುಗಳು!
– ಸಾರ್ವಜನಿಕರೇ ಎಚ್ಚರ.!

NAMMUR EXPRESS NEWS
ಬಿಸಿಲಿನ ತಾಪ ಹೆಚ್ಚುತ್ತಿದ್ದು ಹಾವುಗಳು ತಮ್ಮ ಗೂಡನ್ನು ಬಿಟ್ಟು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಮಲಗುವ ಮುನ್ನ ಮನೆಯ ಒಳ ಹೊರಭಾಗವನ್ನು ಚೆನ್ನಾಗಿ ಗಮನಿಸಿ ಬಾಗಿಲು ಕಿಟಕಿಗಳನ್ನು ಭದ್ರವಾಗಿ ಮುಚ್ಚಿ. ರಾತ್ರಿ ವೇಳೆ ಹೊರಗೆ ಹೋಗುವಾಗ ಮನೆಯ ಹೊರಗೆ ಲೈಟ್ ಹಾಕಿ, ಕೈಯಲ್ಲಿ ಟಾರ್ಚ್ ಲೈಟ್ ಹಿಡಿದುಕೊಂಡು ನಡೆಯುವಾಗ ಅಕ್ಕ ಪಕ್ಕ ನೋಡಿಕೊಂಡು ನಡೆಯಿರಿ. ನಿಲುಗಡೆ ಮಾಡಿದ ವಾಹನವನ್ನು ಹತ್ತುವ ಮೊದಲು ವಾಹನದ ಒಳಗೆ ಚೆನ್ನಾಗಿ ನೋಡಿ, ನಿಮ್ಮ ವಾಹನಗಳನ್ನು ಗಿಡಗಂಟಿಗಳು ಅಥವಾ ಹುಲ್ಲುಗಾವಲಿನಲ್ಲಿ ನಿಲ್ಲಿಸಬೇಡಿ. ಸಂಪೂರ್ಣ ತಪಾಸಣೆಯ ನಂತರ ಹೆಲ್ಮೆಟ್ ಜಾಕೆಟ್ ಮತ್ತು ಬೂಟುಗಳನ್ನು ಧರಿಸಿ. ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಅಪಾಯವನ್ನು ತಡೆಯಿರಿ.

Categories
ಬೆಂಗಳೂರು ರಾಜ್ಯ ಹವಾಮಾನ ಸುದ್ದಿ

ರಾಜ್ಯದಲ್ಲಿ ತಾಪಮಾನ ಹೆಚ್ಚಳ..!

ರಾಜ್ಯದಲ್ಲಿ ತಾಪಮಾನ ಹೆಚ್ಚಳ..!
– ಜನರಲ್ಲಿ ಹೆಚ್ಚುತ್ತಿದೆ ಅಲರ್ಜಿ!
– ವಿಟಮಿನ್ ಡಿ ಕೊರತೆ ಸಮಸ್ಯೆ!
– ಚರ್ಮರೋಗಗಳ ಬಗ್ಗೆ ಎಚ್ಚರಿಕೆ ಅಗತ್ಯ

NAMMUR EXPRESS NEWS
ಬೆಂಗಳೂರು: ಮೈ ಮೇಲೆ ಬಿಸಿಲು ಬಿದ್ದರೆ, ರೋಗಗಳು ದೂರಾಗುತ್ತವೆ ಎಂದು ಹೇಳಲಾಗುತ್ತದೆ. ಆದರೀಗ ಇತ್ತೀಚಿನ ದಿನಗಳಲ್ಲಿನ ಅತಿಯಾದ ತಾಪಮಾನ ಜನರಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರು ಮಾಡುತ್ತಿದ್ದು, ಇದು ಕಳವಳವನ್ನು ಸೃಷ್ಟಿಸಿದೆ. ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಇದರ ಬೆನ್ನಲ್ಲೇ ಜನರಲ್ಲಿ ಅಲರ್ಜಿ ಹಾಗೂ ವಿಟಮಿನ್ ಡಿ ಕೊರತೆ ಸಮಸ್ಯೆಗಳು ಹೆಚ್ಚಾಗತೊಡಗಿದೆ. ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಅಲರ್ಜಿ ಹಾಗೂ ವಿಟಮಿನ್ ಡಿ ಕೊರತೆ ಸಮಸ್ಯೆಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೂರ್ಯನ ಕಿರಣಗಳಿಗೆ 5-10 ನಿಮಿಷಗಳಿಗಿಂತ ಹೆಚ್ಚು ಒಡ್ಡಿಕೊಳ್ಳದಂತೆ, ಸನ್ ಸ್ಟ್ರೀನ್ ಗಳ ಬಳಸುವಂತೆ ಸಲಹೆ ನೀಡಲಾಗುತ್ತಿದೆ ಎಂದು ಚರ್ಮರೋಗ ತಜ್ಞ ವೈದ್ಯ ಡಾ.ಅನಘಾ ಸುಮಂತ್ ಅವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಶೇ.95ರಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಬೆಳಿಗ್ಗೆ 8 ಗಂಟೆಗೂ ಮೊದಲು ಮಧ್ಯಾಹ್ನ 3.30ರಿಂದ 5 ಗಂಟೆಯ ನಡುವೆ ಬಿಸಿಲಿಗೆ ಮೈಯೊಡ್ಡುವಂತೆ ಸಲಹೆ ನೀಡಲಾಗುತ್ತಿದೆ. ಈ ಸಮಯದಲ್ಲಿ ಸೂರ್ಯನ ಕಿರಣಗಳು ತೀವ್ರವಾಗಿರುವುದಿಲ್ಲ ಎಂದು ದಯಾನಂದ ಸಾಗರ್ ವಿಶ್ವವಿದ್ಯಾಲಯದ ಮೂಳೆ ತಜ್ಞ ಮತ್ತು ಪ್ರಾಧ್ಯಾಪಕ ಡಾ.ಅವಿನಾಶ್ ಸಿಕೆ ಅವರು ಹೇಳಿದ್ದಾರೆ. ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಚರ್ಮದ ಸಮಸ್ಯೆ, ದದ್ದುಗಳು, ಕಿರಿಕಿರಿ, ಪಿಗ್ಮೆಂಟೇಷನ್ ಹಾಗೂ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಪ್ರತಿ 6 ತಿಂಗಳಿಗೊಮ್ಮೆ ನಿಯಮಿತವಾಗಿ ಚರ್ಮ ಹಾಗೂ ವಿಟಮಿನ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬೇಸಿಗೆಯಲ್ಲಿ ಸನ್ ಸ್ಟ್ರೀನ್ (SPF 30 ಮತ್ತು UV-A ಮತ್ತು UV-B ಕಿರಣಗಳಿಂದ ರಕ್ಷಿಸುವ ಸಾಮರ್ಥ್ಯ ಇರುವ ಕ್ರೀಮ್)ಗಳನ್ನು ಬಳಕೆ ಮಾಡಬೇಕು.

ಇದು ಸನ್ ಬರ್ನ್ ಆಗದಂತೆ ನೋಡಿಕೊಳ್ಳಲಿದ್ದು, ಚರ್ಮಕ್ಕೆ ರಕ್ಷಣೆಯನ್ನೂ ನೀಡುತ್ತದೆ. ಚರ್ಮಕ್ಕಾಗುವ ಹಾನಿಯು ಕ್ಯಾನ್ಸರ್ ಗೂ ಕಾರಣವಾಗಲಿದೆ. ಹೀಗಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಬಿಸಿಲಿಗೆ ಒಡ್ಡಿಕೊಳ್ಳದಂತೆ ಸಲಹೆ ನೀಡಲಾಗುತ್ತಿದೆ ಎಂದು ಸ್ಪರ್ಶ ಆಸ್ಪತ್ರೆಯ ಆಂಕೊಲಾಜಿಸ್ಟ್ ಡಾ ನಾರಾಯಣ ಸುಬ್ರಮಣ್ಯಂ ಹೇಳಿದ್ದಾರೆ.

Categories
ಬೆಂಗಳೂರು ಹವಾಮಾನ ಸುದ್ದಿ

ರಾಜ್ಯದಲ್ಲಿ ರಣ ಬಿಸಿಲು!

ರಾಜ್ಯದಲ್ಲಿ ರಣ ಬಿಸಿಲು!
– ಬಿಸಿಲಿಂದ ಮನೆಯಿಂದ ಹೊರ ಹೋಗಲು ಆಗುತ್ತಿಲ್ಲ
– ಕರೆಂಟ್ ಇರಲ್ಲ, ನೀರು ಸಿಗುತ್ತಿಲ್ಲ: ಮುಂದೆ ಕಷ್ಟ ಕಷ್ಟ!

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬಿಸಿಲಿನ ಜಳಕ್ಕೆ ಜನರು ತತ್ತರಿಸಿದ್ದಾರೆ. ಈ ನಡುವೆ ರಾಜ್ಯದಲ್ಲಿ ಈ ವರ್ಷ ಬರೋಬ್ಬರಿ ನಾಲ್ಕು ತಿಂಗಳು ರಣಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಬಿಸಿಲಿನ ಕಾವು ಹೆಚ್ಚಿದ್ದು, ವಾಡಿಕೆಗಿಂತ ಮುನ್ನವೇ ರಾಜ್ಯದಲ್ಲಿ ಬಿಸಿಲಿನ ಕಾವು ಹೆಚ್ಚಿದೆ.
ಸಾಮಾನ್ಯವಾಗಿ ಮಾರ್ಚ್ ನಿಂದ ಮೇ ತಿಂಗಳವರೆಗೆ ಬೇಸಿಗೆ ಇರುತ್ತದೆ. ಆದರೆ ಈ ಬಾರಿ ವಾಡಿಕೆಗಿಂತ ಮುನ್ನವೇ ಬೇಸಿಗೆ ಶುರುವಾಗುಂತಾಗಿದ್ದು, ನಾಲ್ಕು ತಿಂಗಳು ಬೇಸಿಗೆ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ತಾಪಮಾನ ಹೆಚ್ಚಳವಾಗಿದ್ದು, ಉಷ್ಣತೆ ಹೆಚ್ಚಳ, ಬಿಸಿಗಾಳಿಯ ಆತಂಕ ಎದುರಾಗಿದ್ದು, ಏಪ್ರಿಲ್ ಮತ್ತು ಮೇ ನಲ್ಲಿ ಶಾಖಾ ತರಂಗ ಬೀಸಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಮಲೆನಾಡು, ಕರಾವಳಿಯಲ್ಲಿ ಕೃಷಿಗೆ ಹೊಡೆತ

ಮಳೆ ಮುಗಿಯುವ ಮುನ್ನ ಬಿಸಿಲ ಝಳ ಹೆಚ್ಚಳದಿಂದ ಅಡಿಕೆ ಗಿಡಗಳು ಒಣಗುತ್ತಿರುವ ದೃಶ್ಯಗಳು ಎಲ್ಲೆಡೆ ಕಾಣುತ್ತಿದೆ. ಅದರ ಜೊತೆಗೆ ವಿದ್ಯುತ್ ಕಟ್ ನಿಂದಾಗಿ ಅಡಿಕೆ ತೋಟಗಳು ಹಾಗೂ ಇತರೆ ಕೃಷಿ ಚಟುವಟಿಕೆಗೆ ನೀರಿಲ್ಲದಂತಾಗಿದೆ. ಹೀಗಾಗಿ ಜನ ಕೂಡ ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ಒಂದು ಕಡೆ ವಿದ್ಯುತ್ ಫ್ರೀ ಕೊಟ್ಟು, ಇನ್ನೊಂದು ಕಡೆ ವಿದ್ಯುತ್ ಕಡಿತಗೊಳಿಸುವುದರಿಂದ ಕೃಷಿ ಚಟುವಟಿಕೆ ಕುಂಠಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಪ್ರತಿದಿನ ಲೋಡ್ ಶೆಡ್ಡಿಂಗ್ ಯಿಂದಾಗಿ ವಿದ್ಯುತ್ ಇರುವುದಿಲ್ಲ. ಜೊತೆಗೆ ಬಿಸಿಲೆ ಜಲ ಹೆಚ್ಚಾಗಿರುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಂದರೆ ಆಗಿದೆ.

ಕಾಯಿಲೆಗಳು ಉಲ್ಬಣ!

ರಾಜ್ಯದಲ್ಲಿ ಬಿಸಿಲು ಬೇಗೆ ಹೆಚ್ಚುತ್ತಿದ್ದಂತೆ ಋುತುಮಾನದ ಕಾಯಿಲೆಗಳಾದ ಕಾಲರಾ, ವಿಷಮಶೀತ ಜ್ವರ, ಕಣ್ಣಿನ ತೊಂದರೆ, ವೈರಲ್ ಸೋಂಕು, ನಿರ್ಜಲೀಕರಣ, ಹೊಟ್ಟೆ ನೋವು, ಡೆಂಗೆ, ಚಿಕನ್ ಫಾಕ್ಸ್ ಬಿಸಿನಿಲಿಂದ ತಲೆ ಸುತ್ತು, ಮೂಗಿನಲ್ಲಿ ರಕ್ತ ಸುರಿಯುವುದು, ಅತಿಯಾದ ಸೂರ್ಯಕಿರಣಗಳಿಂದ ಚರ್ಮ ಸಮಸ್ಯೆಗಳು ಹೆಚ್ಚಾಗಿ ಜನರನ್ನು ಕಾಡುತ್ತಿವೆ. ಇದಕ್ಕೆ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯು ಹೆಚ್ಚಾಗಿ ಆಸ್ಪತ್ರೆ ಫುಲ್ ರಶ್ ಆಗಿದೆ.

Categories
ಆರೋಗ್ಯ ತೀರ್ಥಹಳ್ಳಿ ಹವಾಮಾನ ಸುದ್ದಿ

ಚಳಿಗಾಲ ಜೋರು: ಕಾಯಿಲೆಗಳು ಉಲ್ಬಣ..!

ಚಳಿಗಾಲ ಜೋರು: ಕಾಯಿಲೆಗಳು ಉಲ್ಬಣ..!
– ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ
– ಆರೋಗ್ಯದ ಮೇಲೆ ಇರಲಿ ಎಚ್ಚರ!

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದಲ್ಲಿ ಚಳಿಗಾಲ ಆರಂಭವಾಗಿ ಒಂದು ತಿಂಗಳಗಳೇ ಕಳೆದಿದೆ. ಆಗಲೇ ಜನರು ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದೀಗ ಕಳೆದೊಂದು ವಾರದಿಂದ ಚಳಿ ಹೆಚ್ಚಾಗಿದೆ. ಶೀತ, ಜ್ವರ, ಚರ್ಮದ ಕಾಯಿಲೆ, ಅಸ್ತಮಾ, ಸಂದಿವಾತ, ವೈರಸ್ ಸೋಂಕಿನ ಬಾಧೆ ಜನರನ್ನು ಕಾಡುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಕಳೆದ 1 ತಿಂಗಳಿನಿಂದ ವೈರಾಣು ಸೋಂಕಿಗೆ ಚಿಕಿತ್ಸೆ ಪಡೆದವರ ಸಂಖ್ಯೆ ಹೆಚ್ಚಾಗಿದೆ. ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಮ್‌ಗಳಲ್ಲೂ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಹೆಚ್ಚಾಗಿದೆ. ಜತೆಗೆ ಶ್ವಾಸಕೋಶ ಸೋಂಕು, ತೀವ್ರ ಗಂಟಲಿನ ಸೋಂಕು ಹೆಚ್ಚಾಗಿರುವುದು ವರದಿಯಾಗುತ್ತಿದೆ.ವಾತಾವರಣದಲ್ಲಿ ಶುಷ್ಕ ಗಾಳಿಯಿಂದ ಜ್ವರ, ಗಂಟಲು ಕೆರೆತ ಹಾಗೂ ಕೆಮ್ಮು ಸಾಮಾನ್ಯವಾಗಿದೆ. ಮಾಮೂಲಿ ದಿನಗಳಿಗಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಯ ರೋಗಿಗಳು ಬರುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸಂಖ್ಯೆ ಅಧಿವಾಗಿದೆ